Home
ಸುದ್ದಿಜಾಲ

Urbn ನ್ಯಾನೋ ಪವರ್‌ ಬ್ಯಾಂಕ್‌ ಬಿಡುಗಡೆ!..ಪಾಸ್-ಥ್ರೂ ಚಾರ್ಜಿಂಗ್ ವಿಶೇಷ!

ಪವರ್‌ಬ್ಯಾಂಕ್‌ ವಲಯದಲ್ಲಿ Urbn ಬ್ರ್ಯಾಂಡ್‌ ತನ್ನದೇ ಆದ ಜನಪ್ರಿಯತೆಯನ್ನು ಹೊಂದಿದೆ. ವಿಭಿನ್ನ ಬ್ಯಾಟರಿ ಸಾಮರ್ಥ್ಯದ ಪವರ್‌ಬ್ಯಾಂಕ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಮೇಡ್‌ ಇನ್‌ ಇಂಡಿಯಾ ಬ್ರಾಂಡ್‌ ಆಗಿರುವ Urbn ಹೊಸ Urbn ನ್ಯಾನೋ ಪವರ್‌ ಬ್ಯಾಂಕ್‌ ಅನ್ನು ಬಿಡುಗಡೆ ಮಾಡಿದೆ. ಇದು ಅಲಟ್ರಾ ಕಂಪ್ಯಾಕ್ಟ್‌ ಡಿವೈಸ್‌ ಆಗಿದ್ದು, ಹೆಚ್ಚು ಪೋರ್ಟಬಲ್‌ ಮಾಡಲಿದೆ.

ಹೌದು, Urbn ನ್ಯಾನೋ ಪವರ್‌ ಬ್ಯಾಂಕ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಇದು 20W ಚಾರ್ಜಿಂಗ್‌ ಅನ್ನು ಬೆಂಬಲಿಸಲಿದ್ದು, ಡ್ಯುಯಲ್‌ ಪೋರ್ಟ್‌ಗಳೊಂದಿಗೆ ಬರಲಿದೆ. ಈ ಪವರ್‌ ಬ್ಯಾಂಕ್‌ 10,000mAh ಸಾಮರ್ಥ್ಯವನ್ನು ಹೊಂದಿದೆ. ಇದು ಬಹು ಸಾಧನಗಳ ಏಕಕಾಲಿಕ ಚಾರ್ಜಿಂಗ್ ಅನ್ನು ಸಕ್ರಿಯಗೊಳಿಸುತ್ತದೆ, ಜೊತೆಗೆ "ಪಾಸ್-ಥ್ರೂ" ಚಾರ್ಜಿಂಗ್ ಅನ್ನು ಒದಗಿಸುತ್ತದೆ. ಹಾಗಾದ್ರೆ ಈ ಪವರ್‌ ಬ್ಯಾಂಕ್‌ ಏನೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Urbn ನ್ಯಾನೋ ಪವರ್‌ ಬ್ಯಾಂಕ್‌ ಬಿಡುಗಡೆ!..ಪಾಸ್-ಥ್ರೂ ಚಾರ್ಜಿಂಗ್ ವಿಶೇಷ!

Urbn ನ್ಯಾನೋ ಪವರ್‌ ಬ್ಯಾಂಕ್‌ ಫೀಚರ್ಸ್‌ ಹೇಗಿದೆ?
Urbn ನ್ಯಾನೋ ಎರಡು ವಿಭಿನ್ನ ಸಾಮರ್ಥ್ಯದ ಆಯ್ಕೆಗಳಲ್ಲಿ ಬಂದಿದೆ. ಇದರಲ್ಲಿ ಮೊದಲನೆಯ ಪವರ್‌ ಬ್ಯಾಂಕ್‌ 10,000mAh ಸಾಮರ್ಥ್ಯವನ್ನು ಹೊಂದಿದ್ದು, 20W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಡ್ಯುಯಲ್ ಪೋರ್ಟ್‌ಗಳೊಂದಿಗೆ ಬರುತ್ತದೆ, ಇದರಲ್ಲಿ ಒಂದು USB-A ಮತ್ತು ಮತ್ತೊಂದು USB ಟೈಪ್-C ಆಗಿದೆ. ಇನ್ನು ಈ ಪವರ್‌ ಬ್ಯಾಂಕ್‌ ಅನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡುವುದಕ್ಕೆ 3.5 ಗಂಟೆಗಳ ಅವಶ್ಯಕತೆಯಿದೆ.

ಇನ್ನು Urbn ನ್ಯಾನೋ 20,000mAh ಪವರ್ ಬ್ಯಾಂಕ್ 22.5W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಒಂದು USB-A ಮತ್ತು ಎರಡು USB ಟೈಪ್-C ಸೇರಿದಂತೆ ಟ್ರಿಪಲ್ ಚಾರ್ಜಿಂಗ್ ಪೋರ್ಟ್‌ಗಳನ್ನು ನೀಡುತ್ತದೆ. ಇದರಿಂದ ಮಲ್ಟಿ ಡಿವೈಸ್‌ಗಳನ್ನು ಏಕಕಾಲಿಕ ಚಾರ್ಜಿಂಗ್ ಅನ್ನು ಸಕ್ರಿಯಗೊಳಿಸಬಹುದು. ಅಲ್ಲದೆ "ಪಾಸ್-ಥ್ರೂ" ಚಾರ್ಜಿಂಗ್ ಅನ್ನು ಒದಗಿಸಲಿದ್ದು, ಫೋನ್ ಚಾರ್ಜ್ ಆಗುತ್ತಿರುವಾಗ ಪವರ್ ಬ್ಯಾಂಕ್ ಚಾರ್ಜ್ ಮಾಡಲು ಅವಕಾಶ ನೀಡಲಿದೆ.

Urbn ನ್ಯಾನೋ ಪವರ್‌ ಬ್ಯಾಂಕ್‌ ಬಿಡುಗಡೆ!..ಪಾಸ್-ಥ್ರೂ ಚಾರ್ಜಿಂಗ್ ವಿಶೇಷ!

ಇದಲ್ಲದೆ, ಈ ಪವರ್‌ ಬ್ಯಾಂಕ್‌ ಸದಾ ಪ್ರಯಾನದಲ್ಲಿರುವವರಿಗೆ ಸೂಕ್ತವಾಗಿದೆ. ಪ್ರಯಾಣದಲ್ಲಿರುವ ಬಳಕೆದಾರರಿಗೆ ದ್ವಿಮುಖ ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್ ಮಾಡಲು ಸುಮಾರು ಏಳು ಗಂಟೆ ತೆಗೆದುಕೊಳ್ಳುತ್ತದೆ. ಇದು BIS-ಪ್ರಮಾಣೀಕೃತ ಡಿವೈಸ್‌ 12-ಲೇಯರ್ ಸರ್ಕ್ಯೂಟ್ ಪ್ರೊಟೆಕ್ಷನ್ ಸಿಸ್ಟಮ್‌ ಹೊಂದಿದ್ದು, ಹೆಚ್ಚಿನ ಸುರಕ್ಷತೆ ನೀಡಲಿದೆ.

Urbn ನ್ಯಾನೋ ಬೆಲೆ ಮತ್ತು ಲಭ್ಯತೆ
Urbn ನ್ಯಾನೋ 10,000mAh ಪವರ್‌ ಬ್ಯಾಂಕ್‌ ಭಾರತದಲ್ಲಿ 1,699ರೂ ಬೆಲೆಯನ್ನು ಹೊಂದಿದೆ. ಇದರ 20,000mAh ಸಾಮರ್ಥ್ಯದ ಪವರ್‌ ಬ್ಯಾಂಕ್‌ 2,499 ರೂ. ಬೆಲೆಯಲ್ಲಿ ಬರಲಿದೆ. ಇನ್ನು ಈ ಎರಡೂ ಪವರ್ ಬ್ಯಾಂಕ್‌ಗಳು ಅಮೆಜಾನ್, ಕ್ರೋಮಾ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇವುಗಳನ್ನು ಕಪ್ಪು, ಕ್ಯಾಮೊ ಮತ್ತು ಪರ್ಪಲ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

Urbn ನ್ಯಾನೋ ಪವರ್‌ ಬ್ಯಾಂಕ್‌ ಬಿಡುಗಡೆ!..ಪಾಸ್-ಥ್ರೂ ಚಾರ್ಜಿಂಗ್ ವಿಶೇಷ!

ಇನ್ನು ಹೆಚ್ಚಿನ ಮಂದಿ ಪವರ್‌ ಬ್ಯಾಂಕ್‌ಗಳ ಮೂಲಕ ಸ್ಮಾರ್ಟ್ ಫೋನ್ ಗಳನ್ನು ಚಾರ್ಜ್ ಮಾಡುವ ಸಂದರ್ಭದಲ್ಲಿ ಪ್ಯಾಂಟ್ ಜೇಬಿನಲ್ಲಿ ಇಲ್ಲವೇ ಶರ್ಟ್ ಜೇಬಿನಲ್ಲಿ ಇಟ್ಟು ಚಾರ್ಜ್ ಮಾಡುವುದು ಉತ್ತಮವಲ್ಲ. ಅಲ್ಲದೇ ತೇವಾಂಶ ಇರುವ ಜಾಗದಲ್ಲಿ ಇಡಬೇಡಿ. ಇದರಿಂದ ಪವರ್‌ ಬ್ಯಾಂಕ್‌ಗಳು ಬ್ಲ್ಯಾಸ್ಟ್‌ ಆಗುವುದನ್ನು ತಪ್ಪಿಸಬಹುದಾಗಿದೆ. ಇನ್ನು ಪವರ್ ಬ್ಯಾಂಕ್ ಖರೀದಿಸುವ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ರೀಚಾರ್ಚ್ ಬ್ಯಾಟರಿಗಳ ಹೊಂದಿರುವ ಪವರ್ ಬ್ಯಾಂಕ್ ಅನ್ನು ಖರೀಸುವುದು ಅಗತ್ಯ. ಉತ್ತಮ ಗುಣಮಟ್ಟದ ಮತ್ತು ಬ್ರಾಂಡ್ ಕಂಪನಿಗಳು ಬಿಡುಗಡೆ ಮಾಡುವ ಪವರ್ ಬ್ಯಾಂಕ್ ಖರೀದಿಸುವುದು ಉತ್ತಮ.

Best Mobiles in India

English summary
Urbn Nano Power Bank With 20,000mAh Capacity Launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+