ಅಂತರಿಕ್ಷದಿಂದ ಭೂಮಿಯನ್ನು ಲೈವ್‌ ಸ್ಟ್ರೀಮ್‌ನಲ್ಲಿ ನೋಡಿ!

Posted By:

ಇಂಟರ್‌ನೆಟ್‌ನಲ್ಲಿ ಟೀವಿಯನ್ನು ಲೈವ್‌ ಸ್ಟ್ರೀಮ್‌ ಮೂಲಕ ನೋಡಿರಬಹುದು.ಆದರೆ ಇನ್ನು ಮುಂದೆ ಅಂತರಿಕ್ಷದಿಂದಲೇ ಭೂಮಿಯ ಪ್ರತಿಕ್ಷಣದ ದೃಶ್ಯವನ್ನು ಲೈವ್‌ ಸ್ಟ್ರೀಮ್‌ನಲ್ಲಿ ವೀಕ್ಷಿಸಬಹುದು.

ಹೌದು.ಪ್ರಪ್ರಥಮ ಭಾರಿಗೆ ಭೂಮಿಯಲ್ಲಿ ನಡೆಯುವ ಪ್ರತಿಕ್ಷಣದ ದೃಶ್ಯವನ್ನು ಅಂತರಿಕ್ಷದಿಂದಲೇ ಸೆರೆಹಿಡಿದು ಭೂಮಿಗೆ ಕಳುಹಿಸುವ ಹೊಸ ಸಂಶೋಧನಗೆ ಸಂಶೋಧಕರು ಕೈ ಹಾಕಿದ್ದು, ಈ ಸಂಬಂಧ ಭೂಮಿಯ ದೃಶ್ಯವನ್ನು ಸೆರೆಹಿಡಿಯಲು ಎರಡು ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಲಾದ ಕ್ಯಾಮೆರಾವನ್ನು ಅಂತರಿಕ್ಷಕ್ಕೆ ರವಾನಿಸಲಾಗಿದೆ.

ರಷ್ಯಾದ ಕಜಕ್‌ಸ್ತಾನದಲ್ಲಿರುವ ಬೈಕೊನುರ್ ಕೊಸ್ಮೊಡ್ರೊಮ್‌ನಿಂದ ಸೊಯುಜ್ ರಾಕೆಟ್‌ನಲ್ಲಿ ಈ ಅತ್ಯಾಧುನಿಕ ಕ್ಯಾಮೆರಾಗಳನ್ನುಇಂದು ರವಾನಿಸಲಾಗಿದ್ದು, ಈ ಪ್ರಯತ್ನ ಯಶಸ್ವಿಯಾದಲ್ಲಿ ಡಿಸೆಂಬರ್‌ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ ಕುಳಿತ ಸ್ಥಳದಿಂದಲೇ ಭೂಮಿಯ ದೃಶ್ಯವನ್ನು ಇಂಟರ್‌ನೆಟ್‌ನಲ್ಲಿ ಲೈವ್‌ ಸ್ಟ್ರೀಮ್‌ ಮೂಲಕ ವೀಕ್ಷಿಸಬಹುದು.

ಹೀಗಾಗಿ ಮುಂದಿನ ಪುಟದಲ್ಲಿ ಈ ಕ್ಯಾಮೆರಾದ ವಿಶೇಷತೆ ಏನು? ಯಾವ ಕಂಪೆನಿ ತಯಾರಿಸಿದ್ದು?ತಯಾರಿಸಿದ ಉದ್ದೇಶವೇನು ಎಂಬಿತ್ಯಾದಿ ಮಾಹಿತಿ ಮತ್ತು ಈ ಕ್ಯಾಮೆರಾ ಹೇಗೆ ಭೂಮಿಯ ಚಿತ್ರವನ್ನು ಸೆರೆಹಿಡಿಯಲಿದೆ ಎಂಬುದನ್ನು ತೋರಿಸುವ ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಯಾವ ಕಂಪೆನಿ?

ಯಾವ ಕಂಪೆನಿ?

ಅಂತರಿಕ್ಷದಿಂದ ಭೂಮಿಯನ್ನು ಲೈವ್‌ ಸ್ಟ್ರೀಮ್‌ನಲ್ಲಿ ನೋಡಿ!


ಕೆನಡಾ ಮೂಲದ ಅರ್ಥೆಕಾಸ್ಟ್‌(UrtheCast) ಕಂಪೆನಿ ಅಂತರಿಕ್ಷದಿಂದಲೇ ಭೂಮಿಯ ಚಿತ್ರ ಮತ್ತು ವಿಡಿಯೋವನ್ನು ಸೆರೆಹಿಡಿಯಲು ಎರಡು ಕ್ಯಾಮೆರಾವನ್ನು ತಯಾರಿಸಿದೆ. ಐದು ಮೀಟರ್‌ ರೆಸೂಲೂಶನ್‌ ಹೊಂದಿರುವ ಒಂದು ಕ್ಯಾಮೆರಾ ಚಿತ್ರಗಳನ್ನುಸೆರೆ ಹಿಡಿದರೆ,ಒಂದು ಮೀಟರ್‌ ರೆಸೂಲೂಶನ್‌ ಹೊಂದಿರುವ ಇನ್ನೊಂದು ಕ್ಯಾಮೆರಾ ವಿಡಿಯೋ ದೃಶ್ಯಗಳನ್ನು ಸೆರೆಹಿಡಿಯಲಿದೆ.

40 ಕಿ.ಮೀ ವ್ಯಾಪ್ತಿ:

40 ಕಿ.ಮೀ ವ್ಯಾಪ್ತಿ:

ಅಂತರಿಕ್ಷದಿಂದ ಭೂಮಿಯನ್ನು ಲೈವ್‌ ಸ್ಟ್ರೀಮ್‌ನಲ್ಲಿ ನೋಡಿ!


ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ 40 ಕಿ.ಮೀ ವ್ಯಾಪ್ತಿಯಲ್ಲಿರುವ ದೃಶ್ಯವನ್ನು ಸೆರೆ ಹಿಡಿಯುವ ಸಾಮರ್ಥ್ಯ ಐದು ಮೀಟರ್‌ ರೆಸೂಲೂಶನ್‌ ಹೊಂದಿರುವ ಕ್ಯಾಮೆರಾಕ್ಕಿದೆ.

 ನಿರಂತರವಾಗಿ ದೃಶ್ಯ ಸೆರೆ:

ನಿರಂತರವಾಗಿ ದೃಶ್ಯ ಸೆರೆ:

ಅಂತರಿಕ್ಷದಿಂದ ಭೂಮಿಯನ್ನು ಲೈವ್‌ ಸ್ಟ್ರೀಮ್‌ನಲ್ಲಿ ನೋಡಿ!


ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ದಿನಕ್ಕೆ 16 ಸಲ ಸುತ್ತು ಹಾಕುತ್ತಿರುತ್ತದೆ. ಈ ಸಂದರ್ಭದಲ್ಲಿ ಈ ಕ್ಯಾಮೆರಾ ಸಹ ನಿರಂತರವಾಗಿ ಭೂಮಿಯ ದೃಶ್ಯವನ್ನು ಸೆರೆಹಿಡಿಯಲಿದೆ.

 90 ಸೆಕೆಂಡ್‌ ವಿಡಿಯೋ:

90 ಸೆಕೆಂಡ್‌ ವಿಡಿಯೋ:

ಅಂತರಿಕ್ಷದಿಂದ ಭೂಮಿಯನ್ನು ಲೈವ್‌ ಸ್ಟ್ರೀಮ್‌ನಲ್ಲಿ ನೋಡಿ!


ಒಂದು ಮೀಟರ್‌ ರೆಸೂಲೂಶನ್‌ ಕ್ಯಾಮೆರಾ ಪ್ರತಿದಿನ 4ಕೆ(ಆಲ್ಟ್ರಾ ಎಚ್‌ಡಿ)ಗುಣಮಟ್ಟದಲ್ಲಿ 150 ವಿಡಿಯೋಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಒಂದು ವಿಡಿಯೋ ನಿರಂತರವಾಗಿ 90 ಸೆಕೆಂಡ್‌ ಕಾಲ ರೆಕಾರ್ಡ್‌‌ ಆಗುವಂತೆ ಇದನ್ನು ಅಭಿವೃದ್ಧಿ ಪಡಿಸಲಾಗಿದೆ.

 ಉದ್ದೇಶ:

ಉದ್ದೇಶ:

ಅಂತರಿಕ್ಷದಿಂದ ಭೂಮಿಯನ್ನು ಲೈವ್‌ ಸ್ಟ್ರೀಮ್‌ನಲ್ಲಿ ನೋಡಿ!


ಭೂಮಿ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಸಂಶೋಧಕರಿಗೆ, ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸುಲಭವಾಗಿ ಭೂಮಿಯ ಬಗ್ಗೆ ತಿಳಿಯುವಂತಾಗಲು ಈ ಹೊಸ ಅಂತರಿಕ್ಷ ಲೈವ್‌ ಸ್ಟ್ರೀಮ್‌ನ್ನು ಆರಂಭಿಸಲು ಮುಂದಾಗಿದ್ದೇವೆ ಎಂದು ಅರ್ಥೆಕಾಸ್ಟ್‌ ಹೇಳಿದೆ.

 ವೀಕ್ಷಣೆ ಹೇಗೆ?

ವೀಕ್ಷಣೆ ಹೇಗೆ?

ಅಂತರಿಕ್ಷದಿಂದ ಭೂಮಿಯನ್ನು ಲೈವ್‌ ಸ್ಟ್ರೀಮ್‌ನಲ್ಲಿ ನೋಡಿ!


ಆಸಕ್ತರು UrtheCast ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಇಂಟರ್‌ನೆಟ್‌ನಲ್ಲಿ ಉಚಿತವಾಗಿ ಫೋಟೋ ವಿಡಿಯೋ ನೋಡಬಹುದು. ಜೊತೆಗೆ ಹಣ ನೀಡಿ ವಿಡಿಯೋ ಫೋಟೋ ವೀಕ್ಷಿಸುವ ಆಫರ್‌ನ್ನು ಕಂಪೆನಿಪ್ರಕಟಿಸಿದೆ.

ಎಂದಿನಿಂದ ವೀಕ್ಷಣೆ?

ಎಂದಿನಿಂದ ವೀಕ್ಷಣೆ?

ಅಂತರಿಕ್ಷದಿಂದ ಭೂಮಿಯನ್ನು ಲೈವ್‌ ಸ್ಟ್ರೀಮ್‌ನಲ್ಲಿ ನೋಡಿ!

ಇಂದು ಉಡಾವಣೆಯಾದ ರಾಕೆಟ್‌ ನ.29ಕ್ಕೆ ಅಂತರಿಕ್ಷ ಕೇಂದ್ರಕ್ಕೆ ತಲುಪಲಿದೆ.ನಂತರ ಅಂತರಿಕ್ಷ ಕೇಂದ್ರದಲ್ಲಿರುವ ಯಾನಿಗಳು ರಾಕೆಟ್‌ನಲ್ಲಿರುವ ಕ್ಯಾಮೆರಾವನ್ನು ಅಂತರಿಕ್ಷ ಕೇಂದ್ರಕ್ಕೆ ಜೋಡಿಸಲಿದ್ದಾರೆ.ಡಿಸೆಂಬರ್‌ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ ವೆಬ್‌ಸೈಟ್‌ ತನ್ನ ಲೈವ್‌ ಸ್ಟ್ರೀಮ್‌ ಸೇವೆ ಆರಂಭಿಸುವ ಸಾಧ್ಯತೆ ಇದೆ.

ಅಂತರಿಕ್ಷದಿಂದ ಭೂಮಿಯನ್ನು ಲೈವ್‌ ಸ್ಟ್ರೀಮ್‌ನಲ್ಲಿ ನೋಡಿ!

ಅಂತರಿಕ್ಷದಿಂದ ಭೂಮಿಯನ್ನು ಲೈವ್‌ ಸ್ಟ್ರೀಮ್‌ನಲ್ಲಿ ನೋಡಿ!

ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot