Home
ಸುದ್ದಿಜಾಲ

ಅಮೆರಿಕ ಅಧ್ಯಕ್ಷರ ಐಫೋನ್‌ ಬಗ್ಗೆ ನಿಮಗೆಷ್ಟು ತಿಳಿದಿದೆ? ಹಿಂಬದಿಯ ಸೀಲ್‌ನಲ್ಲಿದೆ ರೋಚಕ ರಹಸ್ಯ!

ಭಾರತದ ನವದೆಹಲಿಯಲ್ಲಿ ಸೆಪ್ಟೆಂಬರ್ 9-10 ರವರೆಗೆ G20 ಶೃಂಗಸಭೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸುವುದಕ್ಕೆ ವಿಶ್ವ ನಾಯಕರೆಲ್ಲಾ ನವದೆಹಲಿಗೆ ಬರುತ್ತಿದ್ದಾರೆ. ಇದಕ್ಕೆ ಅಮೆರಿಕದ ಅಧ್ಯಕ್ಷ ಜೋ ಬಿಡನ್‌ ಕೂಡ ಬರಲಿದ್ದು, ಭಾರತದಲ್ಲಿ ಮೂರು ದಿನಗಳ ಕಾಲ ಪ್ರಮುಖ ಸಭೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಹೌದು, ಅಮೆರಿಕದ ಅಧ್ಯಕ್ಷ ಜೋ ಬಿಡನ್‌ G20 ಶೃಂಗ ಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬರುತ್ತಿದ್ದಾರೆ. ಇದೇ ಸಮಯದಲ್ಲಿ ಜೋ ಬಿಡನ್‌ ಅವರ ವಿಶೇಷ ಐಫೋನ್‌ ಬಗ್ಗೆ ಕುತೂಹಲಕರ ಮಾಹಿತಿ ಹೊರಬಿದ್ದಿದೆ. ಅಮೆರಿಕ ಅಧ್ಯಕ್ಷರ ಐಫೋನ್‌ ಹೇಗಿದೆ? ಅದರ ವಿವರಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆರಿಕ ಅಧ್ಯಕ್ಷರ ಐಫೋನ್‌ ಬಗ್ಗೆ ನಿಮಗೆಷ್ಟು ತಿಳಿದಿದೆ? ರೋಚಕ ರಹಸ್ಯ!

ಅಮೆರಿಕ ಅಧ್ಯಕ್ಷರ ವಿಶೇಷ ಐಫೋನ್ ವಿವರ ಇಲ್ಲಿದೆ
ಅಮೆರಿಕ ಅಧ್ಯಕ್ಷರ ಐಫೋನ್‌ ಸಾಕಷ್ಟು ವಿಶೇಷವಾಗಿದೆ. ಅಮರಿಕ ಅಧ್ಯಕ್ಷರ ಫೋನ್‌ ವಿಚಾರದಲ್ಲಿಯೂ ಕೂಡ ಸಾಕಷ್ಟು ಸುರಕ್ಷತೆಗೆ ಅಧ್ಯತೆಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ವಿಶ್ವ ನಾಯಕರೊಂದಿಗಿನ ಪ್ರಮುಖ ಕರೆಗಳನ್ನು ಸುರಕ್ಷಿತವಾಗಿ ಮಾಡಲಾಗುತ್ತದೆ. ಇದರಿಂದ ಕರೆಯ ಇನ್ನೊಂದು ತುದಿಯಲ್ಲಿ ಯಾರಿದ್ದಾರೆ ಎಂಬುದರ ಬಗ್ಗೆ ಯಾರಿಗೂ ಕೂಡ ಮಾಹಿತಿ ಇರುವುದಿಲ್ಲ. ಸದ್ಯ ಅಮೆರಿಕ ಅಧ್ಯಕ್ಷರ ಐಫೋನ್‌ ಹಿಂಭಾಗದಲ್ಲಿ ವಿಶೇಷ ಚಿನ್ನದ ಅಧ್ಯಕ್ಷೀಯ ಮುದ್ರೆಯಿದೆ. ಈ ಸೀಲ್‌ನಲ್ಲಿ 'ಸೀಲ್ ಆಫ್ ದಿ ಪ್ರೆಸಿಡೆಂಟ್ ಆಫ್ ಅಮೇರಿಕಾ' ಎಂದು ಬರೆಯಲಾಗಿದೆ.

ಈ ಸೀಲ್‌ ಅನ್ನು ಕೇವಲ ಲುಕ್‌ಗಾಗಿ ಅಳವಡಿಸಿರಬಹುದು. ಆದರೆ ನಿರ್ದಿಷ್ಟ ಡಿವೈಸ್‌ POTUS ಬಳಸುವ ಅಗತ್ಯ ಭದ್ರತಾ ಮಾನದಂಡಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಏಕೆಂದರೆ ಡೌಗ್ ಎಂಹಾಫ್, ಉಪಾಧ್ಯಕ್ಷ (ವಿಪಿ) ಹ್ಯಾರಿಸ್ ಅವರ ಪತಿ ಭದ್ರತಾ ಕಾರಣಗಳಿಂದಾಗಿ ಅವನ ಹೆಂಡತಿಗೆ ಕೂಡ ಸಂದೇಶಗಳನ್ನು ಕಳುಹಿಸುವುದನ್ನು ತಡೆಯುತ್ತದೆ ಎಂದು ಹೇಳಲಾಗಿದೆ. ಅಂದರೆ ಸರ್ಕಾರವು ಸಂವಹನವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು.

ಭಾರತಕ್ಕೆ ಬಂದಿಳಿದ ಅಮೆರಿಕ ಅಧ್ಯಕ್ಷರ ಕಾರು
ಭಾರತದಲ್ಲಿ ನಡೆಯುತ್ತಿರುವ G20 ಶೃಂಗಸಭೆಗೆ ಅಮೆರಿಕ ಅಧ್ಯಕ ಜೋ ಬಿಡೆನ್‌ ಶುಕ್ರವಾರ ಆಗಮಿಸುತ್ತಿದ್ದಾರೆ. ಆದರೆ ಅಮೆರಿಕ ಅಧ್ಯಕರು ಬಳಸುವ ಕಾರು 'ಬೀಸ್ಟ್' ಭಾರತಕ್ಕೆ ಎಂಟ್ರಿ ನೀಡಿದೆ. ಇದು ಯುಎಸ್ ಅಧ್ಯಕ್ಷರ ಅಧಿಕೃತ ಕಾರಾಗಿದ್ದು, US ನಿಂದ ಭಾರತಕ್ಕೆ ಬೋಯಿಂಗ್ C-17 Globemaster III ಎಂಬ ಮಿಲಿಟರಿ ಸಾರಿಗೆ ವಿಮಾನದಲ್ಲಿ ಬಂದಿದೆ.

ಇನ್ನು ಜೋ ಬಿಡೆನ್ ಅವರ ದೆಹಲಿ ಭೇಟಿಗೆ ಮೂರು ಹಂತದ ಭದ್ರತೆಯನ್ನು ಏರ್ಪಡಿಸಲಾಗಿದೆ. ಮೊದಲನೆಯದ್ದು ಹೊರಗೆ ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೆ, ಎರಡು ಭಾರತದ ವಿಶೇಷ ರಕ್ಷಣಾ ಗುಂಪಿನ ಕಮಾಂಡೋಗಳನ್ನು ಮತ್ತು ಮೂರು ಒಳಗೆ ರಹಸ್ಯ ಸೇವಾ ಏಜೆಂಟ್‌ಗಳ ಭದ್ರತೆಯನ್ನು ಹೊಂದಿರುತ್ತಾರೆ.

Best Mobiles in India

English summary
US president joe biden iPhone specialty? Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+