ಭಾರತೀಯರಿಗೆ ಮತ್ತೆ ಶಾಕ್ ನೀಡಿದ ಟ್ರಂಪ್ ಸರ್ಕಾರ!..ಐಟಿ ಉದ್ಯೋಗಿಗಳಿಗೆ ಸಂಕಷ್ಟ!!

  ಈಗಷ್ಟೇ ಸ್ವಲ್ಪ ನಿರಾಳವಾಗಿದ್ದ ಭಾರತೀಯ ಅಮೆರಿಕಾದ ಐಟಿ ಉದ್ಯೋಗಿಗಳಿಗೆ ಅಮೆರಿಕಾ ಮತ್ತೆ ಶಾಕ್ ನೀಡಿದೆ. ವೃತ್ತಿಪರರಿಗೆ ಅಮೆರಿಕಾ ನೀಡುವ ಎಚ್‌1ಬಿ ವೀಸಾ ನೀಡುವ ಪ್ರಕ್ರಿಯೆಯನ್ನು ಕಠಿಣಗೊಳಿಸುವ ಹೊಸ ನೀತಿಯನ್ನು ಅಮೆರಿಕ ಸರ್ಕಾರ ಪ್ರಕಟಿಸಿದೆ. ಇದರಿಂದ ಭಾರತದ ಮಾಹಿತಿ ತಂತ್ರಜ್ಞಾನ (ಐ.ಟಿ.) ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.!!

  ಅಮೆರಿಕಾದ ವಸ್ತುಗಳನ್ನೇ ಖರೀದಿಸಿ, ಅಮೆರಿಕನ್ನರನ್ನೇ ಕೆಲಸಕ್ಕೆ ನೇಮಿಸಿ' ಎಂಬ ಸರ್ಕಾರಿ ಆದೇಶಕ್ಕೆ ಅನುಗುಣವಾಗಿ ಈ ನೀತಿಯನ್ನು ರೂಪಿಸಲಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಇನ್ನು ಒಂದಕ್ಕಿಂತ ಹೆಚ್ಚು ಕಡೆ ಹೊರಗುತ್ತಿಗೆ ರೀತಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಎಚ್‌1ಬಿ ವೀಸಾ ಪಡೆಯವುದು ಹೊಸ ನೀತಿಯಿಂದಾಗಿ ಕಷ್ಟವಾಗಲಿದೆ.!!

  ಭಾರತೀಯರಿಗೆ ಮತ್ತೆ ಶಾಕ್ ನೀಡಿದ ಟ್ರಂಪ್ ಸರ್ಕಾರ!..ಐಟಿ ಉದ್ಯೋಗಿಗಳಿಗೆ ಸಂಕಷ್ಟ!!

  ತಮಗೆ ವೃತ್ತಿಪರ ಪರಿಣತಿಯ ಅಗತ್ಯ ಇರುವ ಕೆಲಸ ಇದೆ ಎಂಬುದನ್ನು ವೀಸಾ ಪಡೆಯುವ ಕಂಪನಿಯು ಸಾಬೀತು ಮಾಡಬೇಕು ಎಂದು ಹೊಸ ನೀತಿ ಹೇಳುತ್ತಿರುವುದರಿಂದ ಭಾರತೀಯ ಐಟಿ ಕ್ಷೇತ್ರದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಐಟಿ ಉದ್ಯೋಗಿಳಿಗೆ ಎದುರಾದ ಸಂಕಷ್ಟವೇನು ಎಂಬ ಪೂರ್ಣ ಮಾಹಿತಿಯನ್ನು ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಎಚ್‌1ಬಿ ವೀಸಾ ಎಂದರೇನು?

  ಬೇರೆ ದೇಶದವರು ಅಮೆರಿಕದಲ್ಲಿ ಕೆಲಸ ಮಾಡುವುದಕ್ಕೆ ನೀಡಲಾಗುವ ತಾತ್ಕಾಲಿಕ ವೀಸಾವನ್ನು ಎಚ್‌1ಬಿ ವೀಸಾ ಎಂದು ಕರೆಯಲಾಗುತ್ತದೆ.! ಈ ಮೊದಲು ಐಟಿ ಕಂಪೆನಿಗಳು ಈ ಮೊದಲು ಈ ವಿಸಾವನ್ನು ತನ್ನ ಉದ್ಯೋಗಿಗಳಿಗೆ ಒದಗಿಸುವಲ್ಲಿ ಸಫಲವಾಗದುತ್ತಿದ್ದವು. ಆದರೆ, ಅಮೆರಿಕದಲ್ಲಿ ಈ ಕೆಲಸಗಳನ್ನು ಮಾಡಬಲ್ಲವರ ಕೊರತೆ ಇದ್ದರೆ ಮಾತ್ರ ವೀಸಾ ನೀಡಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ.!!

  ಎಚ್‌1ಬಿ ವೀಸಾ ಮೇಲೆ ಕಠಿಣ ನಿಯಮಗಳೇಕೆ?

  ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಅಮೆರಿಕನ್ನರನ್ನೇ ಕೆಲಸಕ್ಕೆ ನೇಮಿಸಿ' ಎಂಬ ಸರ್ಕಾರಿ ಆದೇಶಕ್ಕೆ ಅನುಗುಣವಾಗಿ ಈ ನೀತಿಯನ್ನು ರೂಪಿಸಲಾಗಿದೆ. ಇದು ಅಮೆರಿಕದ ಕೆಲಸಗಾರರು ಮತ್ತು ವೃತ್ತಿಪರರ ಹಿತರಕ್ಷಣೆಗಾಗಿ ರೂಪಿಸಿದ ನೀತಿ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವಾ ಇಲಾಖೆಯು (ಯುಎಸ್‌ಸಿಐಎಸ್‌) ಹೇಳಿದೆ.!!

  ಭಾರತದ ಐಟಿ ಕ್ಷೇತ್ರಕ್ಕೆ ಪೆಟ್ಟು!!

  ಅಮೆರಿಕಾ ನೀಡುವ ಎಚ್‌1ಬಿ ವೀಸಾ ವ್ಯವಸ್ಥೆಯಿಂದ ಭಾರತದ ಐ.ಟಿ. ಕಂಪನಿಗಳು ಅತಿ ಹೆಚ್ಚು ಪ್ರಯೋಜನ ಪಡೆಯುತ್ತಿವೆ. ಅಮೆರಿಕದ ಬ್ಯಾಂಕ್‌ಗಳು, ಟ್ರಾವೆಲ್ ಏಜೆನ್ಸಿಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಐ.ಟಿ. ವೃತ್ತಿಪರರು ನಿಯೋಜಿತರಾಗಿದ್ದಾರೆ. ಹಾಗಾಗಿ, ಇದು ದು ಭಾರತದ ಮಾಹಿತಿ ತಂತ್ರಜ್ಞಾನ (ಐ.ಟಿ.) ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.!!

  ಎಚ್‌1ಬಿ ವೀಸಾ ವಿಸ್ತರಣೆಯೂ ಕಷ್ಟ!!

  ಅಮೆರಿಕನ್ನರನ್ನೇ ಕೆಲಸಕ್ಕೆ ನೇಮಿಸಿ ಎಂಬ ಹೊಸ ನೀತಿಯು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಯುಎಸ್‌ಸಿಐಎಸ್‌ ತಿಳಿಸಿದೆ. ಹಾಗಾಗಿ, ಎಚ್‌1ಬಿ ವೀಸಾ ವಿಸ್ತರಣೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲಾಗಿದ್ದು, ಉದ್ಯೋಗಿಗೆ ಕೆಲಸ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದ್ದರೆ ಅಂಥವರ ವೀಸಾ ವಿಸ್ತರಣೆ ಕೂಡ ಬಹಳ ಕಷ್ಟವಾಗಲಿದೆ.!!

  Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!
  ಸಮಗ್ರ ಮಾಹಿತಿ ಕಡ್ಡಾಯ!!

  ಸಮಗ್ರ ಮಾಹಿತಿ ಕಡ್ಡಾಯ!!

  ಎಚ್‌1ಬಿ ವೀಸಾ ಅರ್ಜಿ ಸಲ್ಲಿಸುವಾಗ ಸಮಗ್ರ ಮಾಹಿತಿಯನ್ನು ಸಲ್ಲಿಸುವುದನ್ನು ಕಡ್ಡಾಯವಾಗಿದೆ. ಉದ್ಯೋಗಿಗೆ ಗುತ್ತಿಗೆ ಅವಧಿಯಲ್ಲಿ ಅವರಿಗೆ ದೊರೆಯುವ ವೇತನ ಮತ್ತು ಇತರ ಪ್ರಯೋಜನಗಳು, ವಾರಕ್ಕೆ ಎಷ್ಟು ಗಂಟೆ ಕೆಲಸ, ವಿಶೇಷ ಪರಿಣತಿಯ ವ್ಯಕ್ತಿಯು ನಿರ್ವಹಿಸುವ ಕೆಲಸಗಳೇನು ಮತ್ತು ಅವರ ಅರ್ಹತೆ ಏನು ಎಂಬೆಲ್ಲಾ ಮಾಹಿತಿಗಳನ್ನು ಇನ್ಮುಂದೆ ನೀಡಬೇಕಿದೆ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Trump administration has also made the process of extension of H-1B visas more difficult.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more