ಕೊರೊನಾ ವ್ಯಾಕ್ಸಿನ್‌ ಪಡೆಯೋಕೆ ಅಮೆಜಾನ್‌ ಅಲೆಕ್ಸಾ ಮಾತು ಕೇಳಿ!

|

ಅಮೆಜಾನ್‌ ಅಲೆಕ್ಸಾ ಜನಪ್ರಿಯ ಸ್ಮಾರ್ಟ್‌ಹೋಮ್‌ ಅಸಿಸ್ಟೆಂಟ್‌ ಆಗಿ ಗುರುತಿಸಿಕೊಂಡಿದೆ. ಇನ್ನು ಇದು ಅಮೆಜಾನ್‌ ಪರಿಚಯಿಸಿರುವ ವಾಯ್ಸ್‌ ಅಸಿಸ್ಟೆಂಟ್‌ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಸದ್ಯ ಇದೀಗ ಭಾರತೀಯ ಬಳಕೆದಾರರಿಗೆ ಇತ್ತೀಚಿನ COVID-19 ಸಂಬಂಧಿತ ವಿಚಾರಗಳನ್ನು ತಿಳಿಸುವ ಹೊಸ ಫೀಚರ್ಸ್‌ಗಳನ್ನು ಅಪ್ಡೇಟ್‌ ಮಾಡಲಾಗಿದೆ. ಅಲೆಕ್ಸಾ ಈಗ ಬಳಕೆದಾರರಿಗೆ ಕೋವಿಡ್ -19 ಪರೀಕ್ಷೆ ಮತ್ತು ಲಸಿಕೆ ಕೇಂದ್ರಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ, ಜೊತೆಗೆ ಲಸಿಕೆ ಲಭ್ಯತೆಯ ಮಾಹಿತಿಯನ್ನು ಸಹ ತಿಳಿಸಲಿದೆ.

ಸ್ಮಾರ್ಟ್‌ಹೋಮ್‌

ಹೌದು, ಜನಪ್ರಿಯ ಸ್ಮಾರ್ಟ್‌ಹೋಮ್‌ ಅಸಿಸ್ಟೆಂಟ್‌ ಅಮೆಜಾನ್‌ ಅಲೆಕ್ಸಾ ಇದೀಗ ಕೋವಿಡ್‌ ಲಸಿಕೆ ಕೇಂದ್ರ ಪತ್ತೆ ಹಚ್ಚಲು ಸಹಾಯ ಮಾಡಲಿದೆ. ಇದಕ್ಕಾಗಿ ಕೋವಿನ್‌ ಪೋರ್ಟಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್‌ಸೈಟ್ ಮತ್ತು ಮ್ಯಾಪ್ಮಿ ಇಂಡಿಯಾ ಸೇರಿದಂತೆ ಅಧಿಕೃತ ಮೂಲಗಳಿಂದ ಮಾಹಿತಿಯನ್ನು ಪಡೆಯಲಾಗುತ್ತದೆ ಎಂದು ಅಮೆಜಾನ್ ಹೇಳಿದೆ. ಹಾಗಾದ್ರೆ ಅಮೆಜಾನ್‌ ಅಲೆಕ್ಸಾ ಮೂಲಕ ಕೋರೊನಾ ಸಂಬಂದಿತ ವಿಚಾರಗಳನ್ನು ತಿಳಿಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್

ಅಮೆಜಾನ್ ಹೇಳುವಂತೆ ಅಮೆಜಾನ್‌ ಅಲೆಕ್ಸಾ ಮೂಲಕ ಹತ್ತಿರದ ಕೋವಿಡ್ -19 ಪರೀಕ್ಷಾ ಕೇಂದ್ರವನ್ನು ಪತ್ತೆ ಹಚ್ಚಬಹುದು. ಇದಕ್ಕಾಗಿ ನವದೆಹಲಿ ಮೂಲದ ಮ್ಯಾಪ್ಮಿಇಂಡಿಯಾ ಸಹಾಯ ಮಾಡಲಿದೆ. ಇನ್ನು ಬಳಕೆದಾರರು "ಅಲೆಕ್ಸಾ ಎಲ್ಲಿ ನಾನು COVID-19 ಪರೀಕ್ಷೆಯನ್ನು ಮಾಡಿಸಬಹುದು?" ಎನ್ನುವ ಪ್ರಶ್ನೆಗಳನ್ನು ಕೇಳುವ ಮೂಲಕ ಪ್ರಾರಂಭಿಸಬಹುದು. ನಂತರ ಅಲೆಕ್ಸಾ ತಮ್ಮ ಸಾಧನದ ನೋಂದಣಿಯಿಂದ ಬಳಕೆದಾರರ ಸ್ಥಳವನ್ನು ಗುರುತಿಸುತ್ತದೆ. ಮತ್ತು ಅವರ ಹತ್ತಿರ ಇರುವ ಲಸಿಕೆ ಕೇಂದ್ರಗಳ ಪಟ್ಟಿಯನ್ನು ಒದಗಿಸುತ್ತದೆ ಎಂದು ಅಮೆಜಾನ್ ವಿವರಿಸಿದೆ.

ಕೋಡ್

ಇನ್ನು ಪಿನ್ ಕೋಡ್ ಮತ್ತು ವಯಸ್ಸನ್ನು ಲಸಿಕೆ ಮಾಹಿತಿ ಅಲೆಕ್ಸಾ ಕೌಶಲ್ಯಕ್ಕೆ ನಮೂದಿಸುವ ಮೂಲಕ, ಬಳಕೆದಾರರು ಯಾರಿಗಾದರೂ ಲಸಿಕೆ ಕೇಂದ್ರಗಳನ್ನು ಹುಡುಕಲು ಅಲೆಕ್ಸಾವನ್ನು ಬಳಸಬಹುದು. ಬಳಕೆದಾರರು ತಮ್ಮ ಸ್ನೇಹಿತರು ಅಥವಾ ಕುಟುಂಬಕ್ಕೆ ಬೇರೆ ಭೌಗೋಳಿಕ ಸ್ಥಳದಲ್ಲಿ ಲಸಿಕೆ ಲಭ್ಯತೆಯನ್ನು ಪರೀಕ್ಷಿಸಲು ಬಯಸಿದರೆ ಈ ಫೀಚರ್ಸ್‌ ಸೂಕ್ತವಾಗಿದೆ. ನೀವು ಪರಿಶೀಲಿಸುವ ಸಮಯದಲ್ಲಿ ಲಸಿಕೆಗಳು ಲಭ್ಯವಿಲ್ಲದಿದ್ದರೆ, ನಂತರ ಅದರ ಲಭ್ಯತೆಯನ್ನು ಪರೀಕ್ಷಿಸಲು ರಿಮೈಂಡರ್‌ ಅನ್ನು ಸಹ ಸೆಟ್‌ ಮಾಡಬಹುದು.

ಲಸಿಕೆ

ಇದರ ಹೊರತಾಗಿ, ಭಾರತದಲ್ಲಿ ಲಸಿಕೆ ದೊರೆಯುವ ದರಗಳ ಬಗ್ಗೆ ಅಪ್‌ಡೇಟ್‌ಗಳನ್ನು ನೀಡುವಂತೆ ಹಾಗೂ ಬಳಕೆದಾರರು ಹೊಂದಿರುವ ಲಸಿಕೆಯ ಸುರಕ್ಷತೆ, ನೋಂದಣಿ ಪ್ರಕ್ರಿಯೆ ಮತ್ತು ಕೋವಿಡ್ -19 ಲಸಿಕೆ ಸಂಬಂಧಿತ ಅನುಮಾನಗಳನ್ನು ನಿವಾರಿಸಲು ಅಲೆಕ್ಸಾ ಹತ್ತಿರ ಕೇಳಬಹುದು. ಇದಲ್ಲದೆ ಭಾರತದಲ್ಲಿ COVID-19 ದೇಣಿಗೆ ನೀಡುವ ಆಯ್ಕೆಯನ್ನು ಅಲೆಕ್ಸಾ ಬಳಕೆದಾರರಿಗೆ ನೀಡುತ್ತದೆ. ಇದರಿಂದ ಕೋವಿಡ್‌ ನಿರ್ವಹಣೆಗೆ ಹಣಕಾಸು ಸಹಾಯ ಮಾಡಬಹುದಾಗಿದೆ.

ಅಮೆಜಾನ್

ಇನ್ನು ಅಮೆಜಾನ್ ಭಾರತೀಯ NGOಗಳಾದ ಅಕ್ಷಯ ಪಾತ್ರ, ಗಿವ್ ಇಂಡಿಯಾ ಮತ್ತು ಗೂಂಗ್ ಜೊತೆ ಪಾಲುದಾರಿಕೆ ಹೊಂದಿದೆ. "ಅಲೆಕ್ಸಾ, ಈಗಲೇ ದೇಣಿಗೆ ನೀಡಿ" ಎಂದು ಹೇಳುವ ಮೂಲಕ, ಬಳಕೆದಾರರು ತಮ್ಮ ಆದ್ಯತೆಯ NGO ಗೆ ದಾನ ಮಾಡಲು ಲಿಂಕ್ ಅಧಿಸೂಚನೆ ಮತ್ತು SMS ಅನ್ನು ಸ್ವೀಕರಿಸುತ್ತಾರೆ. ಅಮೆಜಾನ್ ಹೇಳುವಂತೆ ಅಲೆಕ್ಸಾ ಕಳೆದ ವರ್ಷ COVID-19 ಗೆ ಸಂಬಂಧಿಸಿದ ಹತ್ತಾರು ಮಿಲಿಯನ್ ಪ್ರಶ್ನೆಗಳಿಗೆ ಉತ್ತರಿಸಿದೆ. 85 ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಲಭ್ಯತೆ ಮತ್ತು ಅರ್ಹತೆ ಅಗತ್ಯತೆಗಳ ಕುರಿತು ಅಲೆಕ್ಸಾ ಪ್ರಶ್ನೆಗಳಿಗೆ ಉತ್ತರಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

Best Mobiles in India

English summary
Alexa commands can help you locate the nearest COVID-19 testing centre and tell you how far it is.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X