Home
ಸುದ್ದಿಜಾಲ

ಹಾಯ್ ಗೂಗಲ್ ಹೇಳಿ, ವಾಟ್ಸ್ ಆಪ್ ಕಾಲ್ ಮಾಡಿ!

By Gizbot Bureau

ಇದು ಗೂಗಲ್ ಅಸಿಸ್ಟೆಂಟ್ ಹವಾ ಇರುವ ಯುಗ. ಹೇ ಗೂಗಲ್ ಅಂದರೆ ಸಾಕು ಆಕಾಶವೇ ಅಂಗೈಯಲ್ಲಿರುತ್ತದೆ ಅಲ್ಲವೇ? ಹೌದು. ಇದೀಗ ಪ್ರತಿಯೊಂದು ಆಪ್ ಗಳು ಕೂಡ ಗೂಗಲ್ ಅಸಿಸ್ಟೆಂಟ್ ನ ವ್ಯಾಪ್ತಿಗೆ ಒಳಪಡಲು ಪ್ರಾರಂಭವಾಗುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಹೌದು ಜಸ್ಟ್ ಮಾತಾಡಿ ನಿಮ್ಮ ಮೊಬೈಲಿನ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಕಾಲ್ ಮಾಡುವುದಕ್ಕೆ, ವೀಡಿಯೋ ಕಾಲ್ ಮಾಡುವುದಕ್ಕೆ ನೀವು ಬಟನ್ ಒತ್ತುತ್ತಾ ಕೂರುವ ಅಗತ್ಯವಿಲ್ಲ. ಹಾಗಾದ್ರೆ ಏನು ಮಾಡಬೇಕು ಕೇಳುತ್ತಿದ್ದೀರಾ? ಮುಂದೆ ಓದಿ.

ಹಾಯ್ ಗೂಗಲ್ ಹೇಳಿ, ವಾಟ್ಸ್ ಆಪ್ ಕಾಲ್ ಮಾಡಿ!

ಇತ್ತೀಚೆಗಷ್ಟೇ ಗೂಗಲ್ ಬಳಕೆದಾರರಿಗೆ ತಮ್ಮ ಧ್ವನಿಯನ್ನುಬಳಸಿ ವಾಟ್ಸ್ ಆಪ್ ವೀಡಿಯೋ ಕಾಲ್ ಮತ್ತು ವಾಯ್ಸ್ ಕಾಲ್ ಮಾಡುವುದಕ್ಕೆ ಅವಕಾಶ ನೀಡುವ ವಿಶೇಷ ಫೀಚರ್ ನ್ನು ತನ್ನ ಗೂಗಲ್ ಅಸಿಸ್ಟೆಂಟ್ ಗೆ ಸೇರಿಸಿದೆ. ಅದರೆ ವಾಯ್ಸ್ ಕಮಾಂಡ್ ಗಳನ್ನು ಬಳಸಿ ಬಳಕೆದಾರರು ತಮ್ಮ ವಾಟ್ಸ್ ಆಪ್ ಕರೆಗಳನ್ನು ಇದರಿಂದ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ ಟೈಪ್ ಮಾಡುತ್ತಾ ಕೂರುವ ಅಥವಾ ಕಾಂಟ್ಯಾಕ್ಸ್ ಹುಡುಕಾಡುವುದಕ್ಕೆ ಒದ್ದಾಡುವ ಪರಿಸ್ಥಿತಿ ಇರುವುದಿಲ್ಲ.

ಇದು ವರೆಗೂ ಗೂಗಲ್ ಅಸಿಸ್ಟೆಂಟ್ ಕೇವಲ ನೆಟ್ ವರ್ಕ್ ಕರೆಗಳನ್ನು ತನ್ನ ಡುಯೋ ಮತ್ತು ಹ್ಯಾಂಗ್ಸ್ ಔಟ್ ಅಪ್ಲಿಕೇಷನ್ ಗಳಲ್ಲಿ ಮಾತ್ರ ಮಾಡುವುದಕ್ಕೆ ಅವಕಾಶ ನೀಡುತ್ತಿತ್ತು. ಇದು ಮನೆಯಿಂದಲೇ ಕೆಲಸ ಮಾಡುವವರಿಗೆ ಮತ್ತು ಸಂಬಂಧಿಕರೊಂದಿಗೆ, ಸ್ನೇಹಿತರೊಂದಿಗೆ ಸಂಪರ್ಕ ಹೊಂದುವವರಿಗೆ ಬಹಳ ಸುಲಭವಾಗಿತ್ತು.

ಹಾಗಾದ್ರೆ ವಾಯ್ಸ್ ಆಪ್ ಕರೆಗಳನ್ನು ಗೂಗಲ್ ಅಸಿಸ್ಟೆಂಟ್ ಬಳಸಿ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ. ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಅಗತ್ಯತೆಗಳು:

. ಆಂಡ್ರಾಯ್ಡ್ 5.0 ಮತ್ತು ಅದಕ್ಕಿಂತ ಮೇಲಿನ ವರ್ಷನ್

.ಗೂಗಲ್ ಆಪ್ ವರ್ಷನ್ 6.13 ಅದಕ್ಕಿಂತ ಮೇಲಿನ ವರ್ಷನ್

.ಗೂಗಲ್ ಪ್ಲೇ ಸರ್ವೀಸ್

.720ಪಿ ಅಥವಾ ಅದಕ್ಕಿಂತ ಮೇಲಿನ ಸ್ಕ್ರೀನ್ ರೆಸಲ್ಯೂಷನ್

ಗೂಗಲ್ ಅಸಿಸ್ಟೆಂಟ್ ಬಳಸಿ ವಾಟ್ಸ್ ಆಪ್ ಕರೆಗಳನ್ನು ಮಾಡುವ ಹಂತಗಳು.

1.ವೇಕ್ ಅಪ್ ವರ್ಡ್ ಅಥವಾ ನಿರ್ಧಿಷ್ಟ ಬಟನ್ ಬಳಸಿ ಗೂಗಲ್ ಅಸಿಸ್ಟೆಂಟ್ ನ್ನು ತೆರೆಯಿರಿ.( ವೇಕ್ ಅಪ್ ವರ್ಡ್ ಹೇ ಗೂಗಲ್ ಅಥವಾ ಓಕೆ ಗೂಗಲ್ ಆಗಿರುತ್ತದೆ.)

2.ಇದೀಗ ನೀವು ಮಾಡಬೇಕಾಗಿರುವುದು ವಾಟ್ಸ್ ಆಪ್ ನಲ್ಲಿ ಗೂಗಲ್ ಅಸಿಸ್ಟೆಂಟ್ ಬಳಸಿ ಕರೆ ಮಾಡುವುದು.

ವಾಯ್ಸ್ ಕಾಲ್ ಮಾಡುವುದಕ್ಕಾಗಿ ಹೀಗೆ ಹೇಳಿ “ಮೇಕ್ ಎ ವಾಟ್ಸ್ ಆಪ್ ಕಾಲ್ ಟು ಡ್ಯಾಡ್”( ಇಲ್ಲಿ ಡ್ಯಾಡ್ ವಾಟ್ಸ್ ಆಪ್ ಕಾಂಟ್ಯಾಕ್ಟ್ ನಲ್ಲಿ ಸೇವ್ ಆಗಿರುವ ತಂದೆಯ ನಂಬರ್ ಆಗಿರುತ್ತದೆ)

3.ನಂತರ ಇದು ನಿಮ್ಮ ಕರೆಗೆ ಪ್ರತಿಕ್ರಿಯಿಸಿ ನಿಮ್ಮ ಡ್ಯಾಡ್ ಗೆ ಕರೆ ಮಾಡುತ್ತದೆ.

ಆದರೆ ನೆನಪಿರಲಿ ನೀವು ವಾಟ್ಸ್ ಆಪ್ ಕರೆ ಮಾಡುವಾಗ ನೀವು ಹೇಳುವ ಕಾಂಟ್ಯಾಕ್ಟ್ ನಿಮ್ಮ ವಾಟ್ಸ್ ಆಪ್ ಕಾಂಟ್ಯಾಕ್ಟ್ ನಲ್ಲಿ ಸೇವ್ ಆಗಿರಬೇಕು. ಆಗ ಮಾತ್ರ ಕರೆ ಮಾಡುವುದಕ್ಕೆ ಸಾಧ್ಯವಾಗುತ್ತದೆ.

Best Mobiles in India

English summary
Use Google Assistant To Make WhatsApp Video, Voice Calls
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+