Subscribe to Gizbot

ಪ್ರತಿ ಕಿ.ಮೀ ಕ್ಯಾಬ್ ವೆಚ್ಚ 10 ರೂ. ಆದರೆ ಮಂಗಳಯಾನ ವೆಚ್ಚ 7 ರೂ!..ಪ್ರಧಾನಿ ಮೋದಿ!!

Written By:

ತಂತ್ರಜ್ಞಾನವನ್ನು ಮಾನವಕುಲದ ಅಭಿವೃದ್ಧಿಗೆ ಬಳಸಬೇಕೆ ಹೊರತು ವಿನಾಶಕ್ಕಲ್ಲ. ತಂತ್ರಜ್ಞಾನದ ದುರ್ಬಳಕೆಯ ಬಗ್ಗೆ ಸರ್ಕಾರ ನಿಗಾ ವಹಿಸದಿದ್ದರೆ ಅಭಿವೃದ್ಧಿ ಬದಲು ವಿನಾಶ ಹೊಂದಬೇಕಾಗುತ್ತದೆ. ಮುಂದೊಂದು ದಿನ ಇದಕ್ಕಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಚ್ಚರಿಸಿದ್ದಾರೆ.!!

ಭಾನುವಾರ ಅಬುದಾಬಿಯಲ್ಲಿ ನಡೆದ ಜಾಗತಿಕ ಸರ್ಕಾರಿ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ ಅವರು ತಂತ್ರಜ್ಞಾನ ಪ್ರಪಂಚದ ಸಾಧನೆಗಳ ಸಾಧನೆ ಮತ್ತು ತಂತ್ರಜ್ಞಾನದಿಂದ ಆಗಬಹುದಾದ ತೊಂದರೆಗಳ ಬಗ್ಗೆ ಮಾತನಾಡಿ, ಜಗತ್ತಿನ ಸೈಬರ್ ಕ್ರೈಂ ಉಪಟಳದ ಬಗ್ಗೆ ಹೆಚ್ಚು ಆತಂಕ ವ್ಯಕ್ತಪಡಿಸಿದ್ದಾರೆ.!

ಪ್ರತಿ ಕಿ.ಮೀ ಕ್ಯಾಬ್ ವೆಚ್ಚ 10 ರೂ. ಆದರೆ ಮಂಗಳಯಾನ ವೆಚ್ಚ 7 ರೂ!..ಪ್ರಧಾನಿ ಮೋದಿ

ಇನ್ನು ಭಾರತ ತಂತ್ರಜ್ಞಾನದಲ್ಲಿ ಹೇಗೆ ಬೆಳೆಯುತ್ತಿದೆ ಎಂಬುದರ ಬಗ್ಗೆಯೂ ಮಾತನಾಡಿದ ಮೋದಿ ಅವರು ಮಂಗಳಯಾನ ಯೋಜನೆಗೆ ಪ್ರತಿ ಕಿಲೊ ಮೀಟರ್‌ಗೆ ಕೇವಲ 7 ರೂಪಾಯಿ ವೆಚ್ಚವಾಗಿದೆ ಎಂದು ತಿಳಿಸಿದ್ದಾರೆ.! ಹಾಗಾದರೆ, ತಂತ್ರಜ್ಞಾನ ಪ್ರಪಂಚದ ಬಗ್ಗೆ ಮೋದಿ ಅವರು ಹೇಳಿದ ವಿಷಯಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಸಮಾನ ಅವಕಾಶ ನಿರ್ಮಿಸಿದೆ.!!

ತಂತ್ರಜ್ಞಾನ ಸಮಾನ ಅವಕಾಶ ನಿರ್ಮಿಸಿದೆ.!!

ತಂತ್ರಜ್ಞಾನ ನಮ್ಮ ಆಲೋಚನಾ ಕ್ರಮ ಮತ್ತು ವೇಗವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇಂದು ತಂತ್ರಜ್ಞಾನ ಜಾಗತಿಕ ಬದಲಾವಣೆಯ ಪ್ರಮುಖ ಸಾಧನವಾಗಿದೆ. ಜನಸಾಮಾನ್ಯರು ಮತ್ತು ಶ್ರೀಮಂತರು ಎಂಬ ಭೇದಭಾವ ಇಲ್ಲದೆ ಎಲ್ಲರಿಗೂ ಸಮಾನ ಅವಕಾಶ ನಿರ್ಮಿಸಿದೆ' ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.!!

ಮಂಗಳಯಾನದ ಬಗ್ಗೆ ಹೆಮ್ಮೆ!!

ಮಂಗಳಯಾನದ ಬಗ್ಗೆ ಹೆಮ್ಮೆ!!

ಭಾರತದಲ್ಲಿ ಕ್ಯಾಬ್‌ನಲ್ಲಿ ಪ್ರಯಾಣಿಸಿದರೆ ಪ್ರತಿ ಕಿಲೊ ಮೀಟರ್‌ಗೆ 10 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಆದರೆ, ನಮ್ಮ ಮಂಗಳಯಾನ ಯೋಜನೆಗೆ ಪ್ರತಿ ಕಿಲೊ ಮೀಟರ್‌ಗೆ ಕೇವಲ 7 ರೂಪಾಯಿ ವೆಚ್ಚವಾಗಿದೆ ಇದು ಭಾರತೀಯರಿಗೆ ಅತ್ಯಂತ ಆನಂದದ ಸಮಯ ಎಂದು ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.!!

ತಂತ್ರಜ್ಞಾನ ಅಭಿವೃದ್ಧಿಗೆ ಹೊರತು ವಿನಾಶಕ್ಕಲ್ಲ!

ತಂತ್ರಜ್ಞಾನ ಅಭಿವೃದ್ಧಿಗೆ ಹೊರತು ವಿನಾಶಕ್ಕಲ್ಲ!

ತಂತ್ರಜ್ಞಾನವು ಯೋಚನೆಗಳನ್ನು ವೇಗವಾಗಿ ಬದಲಿಸುತ್ತದೆ. ಆದರೆ ಜಾಗತಿಕವಾಗಿ ಇಂದು ತಂತ್ರಜ್ಞಾನವನ್ನು ಕ್ಷಿಪಣಿ ಮತ್ತು ಬಾಂಬ್‌ ತಯಾರಿಕೆಗೆ ಹೂಡಿಕೆ ಮಾಡಿ ವಿನಾಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ತಂತ್ರಜ್ಞಾನವನ್ನು ಬಳಸಿಸಿಕೊಂಡೇ ಸೈಬರ್ ಕ್ರೈಂ ಉಪಟಳ ಕೂಡ ಹೆಚ್ಚಾಗಿದೆ ಎಂದು ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ.!

ದುಬೈ ಹೊಗಳಿದರು ಮೋದಿ!!

ದುಬೈ ಹೊಗಳಿದರು ಮೋದಿ!!

ತಂತ್ರಜ್ಞಾನದಿಂದ ಮರುಭೂಮಿಯನ್ನು ಕೂಡ ಬದಲಿಸಬಹುದು ಎನ್ನುವುದಕ್ಕೆ ದುಬೈ ಸೂಕ್ತ ಉದಾಹರಣೆಯಾಗಿದೆ. ಒಂದು ಕಾಲದಲ್ಲಿ ಏನನ್ನೂ ಹೊಂದಿರದ ದುಬೈ ತಂತ್ರಜ್ಞಾನ ಸಹಾಯದಿಂದಲೇ ಈ ಪರಿ ಅಭಿವೃದ್ದಿಯಾಗಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.!!

ಇ ಗವರ್ನೆಸ್ ಎಂದರೇನು?

ಇ ಗವರ್ನೆಸ್ ಎಂದರೇನು?

ಇ ಗವರ್ನೆಸ್ ಎಂದರೆ ಎಫೆಕ್ಟೀವ್ (ಪರಿಣಾಮಕಾರಿ), ಎಫಿಷಿಯಂಟ್ (ದಕ್ಷ), ಈಸಿ(ಸುಲಭ), ಎಂಪವರ್ (ಅಧಿಕಾರ) ಮತ್ತು ಈಕ್ವಿಟಿಯಾಗಿದೆ ಎಂದು ತನ್ನದೇ ಶೈಲಿ ಮೋದಿ ಅವರು ಇ ಗವರ್ನೆಸ್ ಅನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.!!

ಅಪೌಷ್ಠಿಕತೆ, ನಿರುದ್ಯೋಗ ಸವಾಲುಗಳು!!

ಅಪೌಷ್ಠಿಕತೆ, ನಿರುದ್ಯೋಗ ಸವಾಲುಗಳು!!

ಕ್ಷಿಪಣಿ, ಬಾಂಬ್‌ಗಳ ಮೇಲೆ ನಾವು ಕೋಟ್ಯಂತರ ರೂಪಾಯಿ ಸುರಿಯುತ್ತಿದ್ದೇವೆ. ತಾಂತ್ರಿಕವಾಗಿ ನಾವು ಇಷ್ಟೆಲ್ಲ ಅಭಿವೃದ್ಧಿ ಸಾಧಿಸಿದರೂ ಸಹ ಬಡತನ, ಅಪೌಷ್ಠಿಕತೆ, ನಿರುದ್ಯೋಗನಂತಹ ಸವಾಲುಗಳನ್ನು ನಿವಾರಿಸಲು ಇನ್ನೂ ನಮ್ಮಿಂದ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.!!

ಓದಿರಿ:ಜಗತ್ತಿನ ಟಾಪ್ 15 ಶ್ರೀಮಂತ ನಗರಗಳ ಪಟ್ಟಿ ಬಿಡುಗಡೆ!!..ಭಾರತದ ಯಾವ ನಗರಕ್ಕೆ ಸ್ಥಾನ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Modi underlined the need to use technology to ensure inclusive growth and development. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot