Home
ಸುದ್ದಿಜಾಲ

ಎಚ್ಚರ..! ನಿಮ್ಮ ವಾಟ್ಸಪ್ ಹ್ಯಾಕ್ ಆಗಬಹುದು : ಈ ಟಿಪ್ಸ್‌ ಫಾಲೋ ಮಾಡಿದ್ರೆ ನೀವು ಫುಲ್ ಸೇಫ್!

ಎಚ್ಚರ..! ನಿಮ್ಮ ವಾಟ್ಸಪ್ (WhatsApp) ಹ್ಯಾಕ್ ಆಗಬಹುದು! ವಾಟ್ಸಪ್ ಅತ್ಯಂತ ಜನಪ್ರಿಯ ಸಂದೇಶ (Whatsapp Message) ಕಳುಹಿಸುವ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ಸ್ಮಾರ್ಟ್‌ಫೋನ್ (Smartphone) ಬಳಕೆದಾರರೂ ಸಹ ವಾಟ್ಸಪ್‌ ಅನ್ನು ಬಳಸುತ್ತಾರೆ. ನೀವೂ ಸಹ ವಾಟ್ಸಾಪ್ ಬಳಕೆದಾರರಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ.

ನೀವು ವಾಟ್ಸಪ್‌ನ ಬಹುತೇಕ ಆಯ್ಕೆಗಳನ್ನು ಬಳಸುತ್ತಿದ್ದರೂ, ಅದರ ಸಾಧ್ಯತೆ ಮತ್ತು ಫಿಚರ್ಸ್‌ಗಳು ಮತ್ತು ಅದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಅರಿವಿಲ್ಲದಿರಬಹುದು. ವಾಟ್ಸಪ್‌ನಲ್ಲಿ ನೀವು ಮಾಡುವ ಖಾಸಗಿ ಚಾಟ್‌ ಸೇಫ್‌ ಇಡುವುದು ಅಗತ್ಯ. ಹೀಗಾಗಿ, ಎಲ್ಲಾ ವಾಟ್ಸಪ್ ಬಳಕೆದಾರರು ಎಚ್ಚರಿಕೆಯಿಂದ ಕೆಲವು ಸೂಚನೆ ಪಾಲಿಸಬೇಕಿದೆ. ನಿಮ್ಮ ಚಾಟ್ ಅನ್ನು ಸೇಫ್‌ ಆಗಿರಿಸಲು ಕೆಲವು ಸಲಹೆ ಪಾಲಿಸಬೇಕು. ಅಂತಹ 5 ಸುಲಭ ಟಿಪ್ಸ್‌ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ.

WhatsApp Hack : ಎಚ್ಚರ.. ನಿಮ್ಮ ವಾಟ್ಸಪ್ ಹ್ಯಾಕ್ ಆಗಬಹುದು!

ನಿಮ್ಮ ವಾಟ್ಸಪ್ ರಿಜಿಸ್ಟರ್ ಕೋಡ್‌ ಅಥವಾ ಎರಡು ಹಂತದ ಪರಿಶೀಲನೆ ಪಿನ್ ಅನ್ನು ಬೇರೆಯವರೊಂದಿಗೆ ಶೇರ್ ಮಾಡಿಕೊಳ್ಳಬೇಡಿ. ಒಂದುವೇಳೆ ನೀವು ಪಿನ್ ಅನ್ನು ಮರೆತರೆ ಇಮೇಲ್ ವಿಳಾಸವನ್ನು ನೀಡಿ. ನಿಮ್ಮ ಮೊಬೈಲ್‌ನಲ್ಲಿ ವಾಯ್ಸ್‌ ಪಾಸ್‌ವರ್ಡ್‌ ಅನ್ನು ಇಡಿ. ಇದರಿಂದ ಬೇರೆಯವರು ನಿಮ್ಮ ವಾಟ್ಸಪ್ ಬಳಸುವುದನ್ನು ತಡೆಯುತ್ತದೆ. ಇದರ ಜೊತೆಗೆ ಈ ಕೆಳಗೆ ನಾವು ತಿಳಿಸಿರುವ ಟ್ರಿಕ್ಸ್‌ಗಳನ್ನು ಫಾಲೋ ಮಾಡಿ.

ಚಾಟ್ ಲಾಕ್ ಆನ್ ಮಾಡಿ

ಖಾಸಗಿ ಚಾಟ್‌ಗಳನ್ನು ಹೆಚ್ಚು ಸುರಕ್ಷಿತವಾಗಿಡಲು, ಚಾಟ್ ಲಾಕ್ ಫೀಚರ್ಸ್‌ ಬಳಸಬಹುದು. ಲಾಕ್ ಮಾಡಲು ಬಯಸುವ ಚಾಟ್ ಅನ್ನು ಆಯ್ಕೆ ಮಾಡಿ ಲಾಕ್ ಚಾಟ್ ಆಪ್ಷನ್‌ ಅನ್ನು ಆಯ್ಕೆ ಮಾಡಿಕೊಳ್ಳಿ. ಇದಾದ ಬಳಿಕ, ನೀವು ಆಯ್ಕೆ ಮಾಡಿದ ಚಾಟ್ ಲಾಕ್ ಆಗುತ್ತದೆ.

Disappearing Messages ಆನ್ ಮಾಡಿ

WhatsAppನ Disappearing Messages ಫೀಚರ್‌ ಅನ್ನು ಬಳಸುವುದು ಉತ್ತಮ. ಇದರಿಂದ ಒಂದು ದಿನ, 7 ದಿನಗಳು ಅಥವಾ 90 ದಿನಗಳ ನಂತರ ಸ್ವಯಂಚಾಲಿತವಾಗಿ ಮೆಸೇಜ್‌ಗಳನ್ನು ಡಿಲೀಟ್‌ ಮಾಡಲು ಟೈಮರ್ ಅನ್ನು ಹೊಂದಿಸಬಹುದು. ಈ ಫೀಚರ್‌ ಚಾಟ್‌ನಲ್ಲಿ ಶೇರ್‌ ಮಾಡಿಕೊಳ್ಳಲಾದ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳಿಗೆ ಅನ್ವಯವಾಗುತ್ತದೆ.

ಕಾಲ್ ರಿಲೇ ಫೀಚರ್ ಬಳಸಿ

ಹ್ಯಾಕರ್‌ಗಳು ತುಂಬಾ ಜಾಣರಿದ್ದಾರೆ. ಹಾಗಾಗಿ, ನಿಮ್ಮನ್ನು ಟ್ರ್ಯಾಕ್ ಮಾಡಲು ಹ್ಯಾಕರ್‌ಗಳಿಗೆ ಕಷ್ಟವಾಗುವಂತೆ ಮಾಡುವುದು ನಿಮ್ಮ ಕೆಲಸ. ಅದಕ್ಕೆ ನೀವು, Protect IP Address in Calls ಫೀಚರ್‌ ಅನ್ನು ಬಳಕೆ ಮಾಡಬಹುದು. ಇದನ್ನು ಸಕ್ರಿಯಗೊಳಿಸಲು, ಸೆಟ್ಟಿಂಗ್‌ಗಳು > ಪ್ರೈವಸಿ > ಕಾಲ್ಸ್‌ಗೆ ಹೋಗಿ ಮತ್ತು ಈ ಆಯ್ಕೆಯನ್ನು ಆನ್ ಮಾಡಿ.

Silence Unknown Callers ಫೀಚರ್

ಸ್ಪ್ಯಾಮ್ ಮತ್ತು ಅಜ್ಞಾತ ಕರೆಗಳನ್ನು ತಪ್ಪಿಸಲು Silence Unknown Callers ಫೀಚರ್ ಸಹಾಯ ಮಾಡುತ್ತದೆ. ಈ ಫೀಚರ್‌ ಅನ್ನು ನೀವು ಸಕ್ರಿಯಗೊಳಿಸಲು, ಸೆಟ್ಟಿಂಗ್‌ಗಳು > ಪ್ರೈವಸಿ > ಕಾಲ್ಸ್‌ಗೆ ಹೋಗಿ ಈ ಆಯ್ಕೆಯನ್ನು ಆನ್ ಮಾಡಿ.

ಚಾಟ್‌ ಹ್ಯಾಕ್ ತಪ್ಪಿಸಲು ಹೀಗೆ ಮಾಡಿ

ನೀವು iCloud ಅಥವಾ Google ಡ್ರೈವ್‌ನಲ್ಲಿ ನಿಮ್ಮ ಚಾಟ್‌ಗಳನ್ನು ಬ್ಯಾಕಪ್ ಮಾಡಿದರೂ, ಅವುಗಳನ್ನು ಹ್ಯಾಕ್ ಮಾಡಬಹುದು. ಹೀಗಾಗಿ, ಬ್ಯಾಕ್‌ಅಪ್‌ಗಳಿಗಾಗಿ ವಾಟ್ಸಪ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆನ್ ಮಾಡಿ. ಇದು ನಿಮ್ಮ ಮೆಸೇಜ್‌ಗಳನ್ನು ಸುರಕ್ಷಿತವಾಗಿರಿಸಲು ಉತ್ತಮ ಮಾರ್ಗವಾಗಿದೆ. ಕ್ಲೌಡ್ ಸ್ಟೋರೇಜ್ ಕಂಪನಿಗಳು ಸಹ ನೀವು ಬ್ಯಾಕಪ್ ಮಾಡಿದ ಚಾಟ್‌ಗಳನ್ನು ನೋಡಲು ಸಾಧ್ಯವಾಗುವುದಿಲ್ಲ.

ನಾವು ಎಷ್ಟೇ ಸುರಕ್ಷಿತವಾಗಿದ್ದರೂ ಹ್ಯಾಕರ್‌ಗಳು ನಮ್ಮನ್ನು ಯಾಮಾರಿಸುತ್ತಾರೆ. ಹೀಗಾಗಿ, ನಿಮ್ಮ ವಾಟ್ಸಪ್ ಖಾತೆ ಹ್ಯಾಕ್ ಮಾಡಲಾಗಿದೆಯೇ? ಅಥವಾ ಅಪರಿಚಿತರು ನಿಮ್ಮ ವಾಟ್ಸಾಪ್ ಸಂದೇಶಗಳನ್ನೂ ಕದ್ದು ಓದುತ್ತಿದ್ದಾರೆಯೇ? ಎಂಬುವುದನ್ನೂ ಖಚಿತಪಡಿಸಿಕೊಳ್ಳಿ. ಜೊತೆಗೆ, ನಾವು ಈ ಮೇಲಿನಂತೆ ತಿಳಿಸಿರುವ ಸಲಹೆಗಳನ್ನು ಪಾಲಿಸಿ. ನಿಮ್ಮ ವಾಟ್ಸಪ್‌ ಹಾಗೂ ಖಾಸಗಿ ಚಾಟ್‌ಗಳನ್ನು ಯಾರೂ ಹ್ಯಾಕ್‌ ಮಾಡುವುದಿಲ್ಲ. ನಿಮ್ಮ ವಾಟ್ಸಪ್‌ ಕೂಡ ಸುರಕ್ಷಿತವಾಗಿರುತ್ತದೆ.

Best Mobiles in India

English summary
WhatsApp is an instant messaging platform used by millions of people. follow these tips To better secure your WhatsApp account and prevent whatsapp from getting hacked
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+