Home
ಸುದ್ದಿಜಾಲ

ಕಳ್ಳರು ನಿಮ್ಮ ಪಾಸ್‌ವರ್ಡ್ ಕದ್ದರೆ ಈ 'ಕ್ರೋಮ್ ಪ್ಲಗ್‌ಇನ್' ನಿಮಗೆ ತಿಳಿಸುತ್ತದೆ!

By Sushma Charhra

ಕಳ್ಳರಿಂದ ನಿಮ್ಮ ಪಾಸ್ ವರ್ಡ್ ನ್ನು ರಕ್ಷಿಸಿಕೊಳ್ಳಬೇಕು ಎಂದರೆ ಸ್ಟ್ರಾಂಗ್ ಆಗಿರುವ ಪಾಸ್ ವರ್ಡ್ ನೀಡಬೇಕು ಎಂಬ ವಿಚಾರ ಪ್ರತಿಯೊಬ್ಬ ಬಳಕೆದಾರರಿಗೂ ತಿಳಿದಿರುವಂತದ್ದೇ. ಅತೀ ಕಠಿಣ ಪಾಸ್ ವರ್ಡ್ ಗಳನ್ನು ಇಟ್ಟುಕೊಳ್ಳುವುದು ಕೂಡ ಒಂದು ಸವಾಲೇ ಸರಿ ಮತ್ತು ತೊಂದರೆದಾಯಕವೂ ಹೌದು. ಸೈಬರ್ ಕ್ರೈಮ್ ಗಳಿಗೆ ಕಾರಣವಾಗುವ ಪ್ರಮುಖ ಅಂಶವೇ ಪಾಸ್ ವರ್ಡ್ ಗಳು. ಪಾಸ್ ವರ್ಡ್ ಕಳ್ಳರು ನಿಮ್ಮ ಪಾಸ್ ವರ್ಡ್ ಗಳನ್ನು ಕದಿಯಲು ಯಾವ ಹಾದಿಯನ್ನು ಬೇಕಿದ್ದರೂ ಹಿಡಿಯಬಹುದು.

ಕಳ್ಳರು ನಿಮ್ಮ ಪಾಸ್‌ವರ್ಡ್ ಕದ್ದರೆ ಈ 'ಕ್ರೋಮ್ ಪ್ಲಗ್‌ಇನ್' ನಿಮಗೆ ತಿಳಿಸುತ್ತದೆ!


ಉದಾಹರಣೆಗೆ 2016 ರಲ್ಲಿ , ವ್ಯಕ್ತಿಯೊಬ್ಬ 272 ಮಿಲಿಯನ್ ಪಾಸ್ ವರ್ಡ್ ಗಳನ್ನು ಕದ್ದಿದ್ದ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ತನಗೆ ಬೇಕಾದ ವಿಚಾರಕ್ಕೆ ಲೈಕ್ಸ್ ಗಳನ್ನು ಕೊಡುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದ. ಇದಾದ ನಂತರ ತಿಳಿದು ಬಂದ ವಿಚಾರವೇನೆಂದರೆ ಪಾಸ್ ವರ್ಡ್ ಗಳನ್ನು ಇತ್ತೀಚೆಗಿನ ಡಾಟಾಗಳಿಂದ ಕದಿಯುವುದಲ್ಲ ಬದಲಾಗಿ ಭೂತಕಾಲದ ಡಾಟಾಗಳನ್ನು ಅಂದರೆ ಹಿಂದಿನ ಡಾಟಾಗಳಿಂದಲೂ ಪಾಸ್ ವರ್ಡ್ ಗಳನ್ನು ಕದಿಯುತ್ತಿದ್ದಾರೆ ಎಂಬ ಅಂಶವು ಬೆಳಕಿಗೆ ಬಂತು.

ಇದರಿಂದ ತಿಳಿದಿರುವುದೇನೆಂದರೆ ಕದ್ದಿರುವ ಪಾಸ್ ವರ್ಡ್ ಗಳು ಅಂತರ್ಜಾಲದಲ್ಲಿ ಎಲ್ಲಿ ಬೇಕಾದರೂ ಓಡಾಡಲು ಸುಲಭವಾಗಿದೆ. ಕಳ್ಳರು ಆ ಪಾಸ್ ವರ್ಡ್ ಗಳ ಮೇಲೆ ತಮ್ಮದೇ ಛಾಪು ಮೂಡಿಸಿಕೊಂಡಿರುತ್ತಾರೆ ಮತ್ತು ಅಂತರ್ಜಾಲದ ಬೇರೆ ಅಕೌಂಟ್ಸ್ ಗಳಲ್ಲಿ ಅದನ್ನು ಬಳಕೆ ಮಾಡುತ್ತಾರೆ. ನಿಮ್ಮ ಪಾಸ್ ವರ್ಡ್ ಉದ್ದಕಿದ್ದು, ಎಷ್ಟೇ ಕಷ್ಟದ್ದೇ ಆಗಿದ್ದರೂ ಕೂಡ ನಿಮ್ಮ ಡಾಟಾ ಬ್ರೀಚ್ ನಿಂದ ಅದು ಕದಿಯಲ್ಪಟ್ಟಿದೆ ಎಂದರೆ ಅದು ನಿಷ್ಪ್ರಯೋಜಕವೇ ಸರಿ. ಹಾಗಾಗಿ ಅದನ್ನು ಎಂದಿಗೂ ಬಳಸಬೇಡಿ ಕೂಡಲೇ ನಿಮ್ಮ ಪಾಸ್ ವರ್ಡ್ ಬದಲಿಸಿ.

ಹಾಗಾದ್ರೆ ನಿಮ್ಮ ಪಾಸ್ ವರ್ಡ್ ಕದಿಯಲ್ಪಟ್ಟಿದೆಯಾ ಅಥವಾ ಇಲ್ಲವಾ ತಿಳಿಯೋದು ಹೇಗೆ ಎಂಬ ಗೊಂದಲ ನಿಮ್ಮನ್ನು ಕಾಡುತ್ತಿದೆಯಾ? ಎಸ್, ಚಿಂತಿಸಬೇಡಿ. ನಿಮ್ಮ ಈ ಸಮಸ್ಯೆಗೆ ಪರಿಹಾರವಿದೆ.ಓಕ್ತಾ( Okta) ಎಂಬ ಲಾಗಿನ್ ಮ್ಯಾನೇಜ್ ಮೆಂಟ್ ಕಂಪೆನಿಯೊಂದು ಬ್ರೌಸರ್ ಪ್ಲಗ್ ಇನ್ ನ್ನು ಹೊರತಂದಿದ್ದು, ಈ ಸಮಸ್ಯೆಯ ಪರಿಹಾರಕ್ಕೆ ಮುಂದಾಗಿದೆ. ಅದರ ಹೆಸರು ಪಾಸ್ ಪ್ರೊಟೆಕ್ಟ್. ಈ ಪ್ಲಗ್ ಇನ್ ನಿಮ್ಮ ಪಾಸ್ ವರ್ಡ್ ಎಷ್ಟು ಬಾರಿ ತೆರೆದುಕೊಂಡಿದೆ ಎಂಬ ಮಾಹಿತಿಯನ್ನು ನೀಡಲಿದೆ.

ಈ ಪ್ಲಗ್ ಇನ್ ಹೇಗೆ ಕೆಲಸ ನಿರ್ವಹಿಸುತ್ತೆ?

ಮೊದಲನೆಯದಾಗಿ, ನಿಮ್ಮ ಪ್ರೀತಿಯ ವೆಬ್ ಸೈಟ್ ನ ಲಾಗಿನ್ ಪೇಜ್ ಗೆ ಹೋಗಿ ಪಾಸ್ ವರ್ಡ್ ಬರೆದು, ಎಂಟರ್ ಒತ್ತಿ. ಆಗ ನಿಮಗೊಂದು ವಿಂಡೋ ಪಾಪ್ ಅಪ್ ತೆರೆದುಕೊಳ್ಳಲಿದ್ದು ನಿಮಗೆ ಎಚ್ಚರಿಕೆ ನೀಡಲಿದೆ” "The password you just entered has been found in 26 data breaches. This password is not safe to use.” ಎಂದು ತಿಳಿಸುತ್ತೆ. ಅಂದರೆ ನೀವು ಈಗ ತಾನೆ ಬರೆದ ಪಾಸ್ ವರ್ಡ್ 26 ಬಾರಿ ಡಾಟಾ ಬ್ರೀಚ್ ನಲ್ಲಿ ಗೋಚರಿಸಿದೆ. ಹಾಗಾಗಿ ಈ ಪಾಸ್ ವರ್ಡ್ ಬಳಸುವುದು ನಿಮಗೆ ಹಿತವಲ್ಲ ಎಂಬ ಸಂದೇಶ ನೀಡುತ್ತೆ. ನೀವು ಈ ಮೆಸೇಜ್ ನ್ನು ಡಿಸ್ ಮಿಸ್ ಮಾಡಿದ ಕೂಡಲೇ, ನೀವು ಪಾಸ್ ವರ್ಡ್ ಬದಲಿಸಲು ಇಚ್ಛಿಸುತ್ತೀರೋ ಅಥವಾ ಇಲ್ಲವೋ ಎಂಬ ಪ್ರಶ್ನೆಯನ್ನು ಕೇಳಲಾಗುತ್ತೆ. ಆದರೆ ಇದೇ ಎಚ್ಚರಿಕೆಯನ್ನು ನೀವು ಪದೇ ಪದೇ ಒಂದೇ ವೆಬ್ ಸೈಟ್ ನಲ್ಲಿ ಪ್ರಶ್ನಿಸುತ್ತಲೇ ಇರುವುದಿಲ್ಲ.

ಕಂಪೆನಿಯು ಹೇಳಿಕೆಯಂತೆ , ಈ ಪ್ಲಗ್ ಇನ್ ತನ್ನ “Have I Been Pwned" ಡಾಟಾಬೇಸ್ ಮೂಲಕ ಚಿತ್ರಿಸಲಾಗಿದ್ದು, ಇದು ಕದ್ದಿರುವ ಎಲ್ಲಾ ಪಾಸ್ ವರ್ಡ್ ಗಳ ಮಾಹಿತಿಯನ್ನು ಕಲೆಹಾಕಿರುತ್ತೆ. ನೀವು ನೇರವಾಗಿ ಆ ವೆಬ್ ಸೈಟ್ ಗೆ ಹೋಗಿ ನಿಮ್ಮ ಪಾಸ್ ವರ್ಡ್ ಗಳನ್ನು ಬೇಕಿದ್ದರೆ ಪರೀಕ್ಷಿಸಿಕೊಳ್ಳಬಹುದು.

ಸದ್ಯ, ಪಾಸ್ ಪ್ರೊಟೆಕ್ಟ್ ಕೇವಲ ಕ್ರೋಮ್ ನಲ್ಲಿ ಮಾತ್ರ ಕೆಲಸ ಮಾಡುತ್ತೆ. ಆದರೆ ಕಂಪೆನಿಯು ಇದನ್ನು ಫೈಯರ್ ಫಾಕ್ಸ್ ನಲ್ಲೂ ತರುವ ಬಗ್ಗೆ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲ ಈ ಪ್ಲಗ್ ಇನ್ ಕೇವಲ ನಿಮ್ಮ ಪಾಸ್ ವರ್ಡ್ ಗಳನ್ನುಮಾತ್ರ ಪರೀಕ್ಷಿಸುತ್ತೇ ವಿನಃ ನಿಮ್ಮ ಯ್ಯೂಸರ್ ನೇಮ್ ಗಳನ್ನು ಪರೀಕ್ಷೆಗೆ ಒಳಪಡಿಸುವುದಿಲ್ಲ. ಆದರೆ ಭವಿಷ್ಯದಲ್ಲಿ ಈ ವೈಶಿಷ್ಟ್ಯವನ್ನೂ ಸೇರಿಸಲು ಕಂಪೆನಿಯು ಚಿಂತನೆ ನಡೆಸಿದೆ.

Best Mobiles in India

English summary
Use this Chrome plug-in to find out if hackers know your password
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+