ಆರೋಗ್ಯ ಸೇತು ಆಪ್‌ನಲ್ಲಿ ಬಳಕೆದಾರರ ಮಾಹಿತಿ ಸುರಕ್ಷಿತ!

|

ಮಾರಕ ವೈರಸ್‌ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಸರ್ಕಾರ ಸಕಲ ಪ್ರಯತ್ನವನ್ನು ಮಾಡುತ್ತಿದೆ. ಕೊರೋನಾ ಸೊಂಕಿತರನ್ನ ಪತ್ತೆ ಹಚ್ಚುವ ಹಾಗೂ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಕೆಲಸವನ್ನ ಯುದ್ಓಪಾದಿಯಲ್ಲಿ ಮಾಡುತ್ತಿದೆ. ಜೊತೆಗೆ ಕೊರೋನಾ ವೈರಸ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಇದಲ್ಲದೆ ಸೊಂಕಿತರ ಪ್ರಮಾಣ ಹೆಚ್ಚಾಗದಂತೆ ತಡೆಯುವ ನಿಟ್ಟಿನಲ್ಲಿ ಇಡೀ ರಾಷ್ಟ್ರವನ್ನೇ ಲಾಕ್‌ಡೌನ್‌ ಮಾಡಿ ಆದೇಶಿಸಲಾಗಿದೆ. ಇದರ ನಡುವೆ ಜನರಿಗೆ ಅಗತ್ಯ ಮಾಹಿತಿ ನೀಡುವ ಹಾಗೂ ಕೊರೋನಾ ಸೊಂಕಿತರನ್ನ ಪತ್ತೆ ಹಚ್ಚುವ ಸಲುವಾಗಿ ಆರೋಗ್ಯ ಸೇತು ಆಪ್‌ ಅನ್ನು ಸಹ ಪರಿಚಯಿಸಲಾಗಿದೆ.

ಹೌದು

ಹೌದು, ಭಾರತದಲ್ಲಿ ಜನರಿಗೆ ಕೊರೋನಾ ವೈರಸ್‌ ಕುರಿತು ಅಗತ್ಯ ಮಾಹಿತಿ ನೀಡುವ ಹಾಗೂ ಸೊಂಕಿತರು ಪತ್ತೆ ಆದ ಸುತ್ತಮುತ್ತಲಿನ ಜನರಲ್ಲಿ ಎಚ್ಚರಿಕೆ ವಹಿಸಲು ಮಾಹಿತಿ ನಿಡುವುದಕ್ಕಾಗಿ ಆರೋಗ್ಯ ಸೇತು ಅಪ್ಲಿಕೇಶನ್‌ ಅನ್ನು ಪರಿಚಯಿಸಲಾಗಿತ್ತು. ಸದ್ಯ ಈ ಆಪ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ದೇಶದ ಜನತೆ ಡೌನ್‌ಲೋಡ್‌ ಮಾಡಿಕೊಂಡು ಅಗತ್ಯ ಮಾಹಿತಿಯನ್ನ ಪಡೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಈ ಆಪ್‌ನಲ್ಲಿ ನಿಡಿರುವ ಮಾಹಿತಿ ಸೋರಿಕೆ ಆಗುತ್ತದೆ ಎಂಬ ಆತಂಕವೂ ಕಾಡುತ್ತಿತ್ತು. ಆದರೆ ಇದಕ್ಕೆ ಆರೋಗ್ಯ ಸೇತು ಅಪ್ಲಿಕೇಶನ್‌ ವಿನ್ಯಾಸಗೊಳಿಸಿದ ಸಂಸ್ಥೆಯ ಸಿಇಒ ಅಭಿಷೇಕ್‌ ಸಿಂಗ್‌ ಯಾವುದೇ ರೀತಿಯಲ್ಲೂ ಬಳಕೆದಾರರ ಗೌಪ್ಯ ಮಾಹಿತಿ ಸೋರಿಕೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಹಾಗಾದ್ರೆ ಸಿಂಗ್‌ ಅವರು ನಿಡಿರುವ ಮಾಹಿತಿ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ವೈರಸ್‌

ಕೊರೋನಾ ವೈರಸ್‌ ವಿರುದ್ದ ಹೋರಾಟಕ್ಕೆ ಜನರಲ್ಲಿ ಜಾಗೃತಿ ಅಗತ್ಯ, ಅದರಲ್ಲು ಶತಕೋಟಿಗೂ ಅಧಿಕ ಜನರು ಇರುವ ಭಾರತದಲ್ಲಿ ಇದು ಅತ್ಯಗತ್ಯ ಅನ್ನೊದು ಎಲ್ಲರಿಗೂ ಗೊತ್ತಿರುವಂತಹದ್ದೆ. ಇದೇ ಕಾರಣಕ್ಕೆ ಭಾರತ ಸರ್ಕಾರ ಆರೋಗ್ಯ ಸೇತು ಆಪ್‌ ಅನ್ನು ಪರಿಚಯಿಸಿತ್ತು. ಸದ್ಯ ಈ ಅಪ್ಲಿಕೇಶನ್ ಅನ್ನು ಮೈಗೊ ಇಂಡಿಯಾ ವಿನ್ಯಾಸಗೊಳಿಸಿದ್ದು, ಜನರ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸುವುದು ಮತ್ತು ಸೋಂಕಿತ ವ್ಯಕ್ತಿಯು ಸುತ್ತಮುತ್ತಲ ಪ್ರದೇಶದಲ್ಲಿದ್ದರೆ ಬಳಕೆದಾರರಿಗೆ ಎಚ್ಚರಿಕೆ ನಿಡುವ ಕಾರ್ಯವನ್ನ ಮಾಡುವಂತೆ ಆ ಅಪ್ಲಿಕೇಶನ್‌ ಅನ್ನು ವಿನ್ಯಾಸಗೊಳಿಸಲಾಗಿತ್ತು. ಇದಕ್ಕಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಕೋವಿಡ್ -19 ಪರೀಕ್ಷೆಗಳ ಡೇಟಾಬೇಸ್‌ನ ಜೊತೆ ಇದನ್ನ ಲಿಂಕ್‌ ಮಾಡಿ ಅಪ್ಲಿಕೇಶನ್ ಅನ್ನು ಏಪ್ರಿಲ್ 2 ರಂದು ಪ್ರಾರಂಭಿಸಲಾಗಿತ್ತು.

ಆರೋಗ್ಯ

ಆದರೆ ಆರೋಗ್ಯ ಸೇತುದಲ್ಲಿನ ಬಳಕೆದಾರರ ಡೇಟಾ ಸುರಕ್ಷತೆಯ ಬಗ್ಗೆ ಅಪಸ್ವರ ಎದ್ದಿತ್ತು. ಏಕೆಂದರೆ ಈ ಅಪ್ಲಿಕೇಶನ್ ಅಲ್ಲಿ ಬಳಕೆದಾರರು ಮುಂದುವರೆಯಬೇಕಾದರೆ ಗೌಪ್ಯತೆ ಮಾನದಂಡಗಳ ಬಗ್ಗೆ ಮಾಹಿತಿ ನೀಡಬೇಕು ಬಳಕೆದಾರರ ಹೆಸರು, ಲಿಂಗ, ವೃತ್ತಿ, ಮತ್ತು ಕಳೆದ 30 ದಿನಗಳಲ್ಲಿ ಎಲ್ಲಿಗೆ ಬೇಟಿ ನಿಡಿದ್ದೀರಾ ಹಾಗೂ ಯಾವ ದೇಶಕ್ಕೆ ಬೇಟಿ ನಿಡಿದ್ದೀರಾ ಎಲ್ಲಾ ಮಾಹಿತಿಯನ್ನ ತುಂಬಬೇಕು. ಇಂತಹ ಬಳಕೆದಾರರ ಗೌಪ್ಯ ಮಾಹಿತಿ ಸೋರಿಕೆ ಆಗಲಿದೆ. ಇದರಿಂದ ದೇಶದ ಭದ್ರತೆಗೆ ದಕ್ಕೆ ಆಗಲಿದೆ ಅನ್ನೊ ಸುದ್ದಿ ಹರಿದಾಡಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಮೈಗೊಇಂಡಿಯಾ ಸಿಇಒ ಬಳಕೆದಾರರ ಡೇಟಾವನ್ನು ವೈದ್ಯಕೀಯ ತುರ್ತು ಪರಿಸ್ಥಿತಿಗಳಂತಹ ನಿರ್ಣಾಯಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುವುದು. ಅಲ್ಲದೆ ಈ ಅಪ್ಲಿಕೇಶನ್ ಕೋವಿಡ್ ರೋಗಿಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆರೋಗ್ಯಾ ಸೇತು ಮೊಬೈಲ್ ಅಪ್ಲಿಕೇಶನ್ ಅನ್ನು ಜನರ ಡೇಟಾವನ್ನು "ಕದಿಯಲು" ಆಗುವುದಿಲ್ಲ. ನೂರಕ್ಕೆ ನೂರರಷ್ಟು ಬಳಕೆದಾರರ ಡೇಟಾ ಸುರಕ್ಷತೆಯಿಂದ ಕೂಡಿದೆ ಎಂದು ಹೇಳಿದ್ದಾರೆ.

ಆಪ್ಲಿಕೇಶನ್‌

ಅಲ್ಲದೆ ಈ ಆಪ್ಲಿಕೇಶನ್‌ ಅಲ್ಲಿ ಗೌಪ್ಯ ಮಾಹಿತಿಯನ್ನ ಸಾಮಾನ್ಯ ಜನರು ಆಗಿದ್ದರೆ 30 ದಿನಗಳ ನಂತರ ಸರ್ವರ್‌ನಿಂದ ಡೇಟಾವನ್ನು ಅಳಿಸುತ್ತೇವೆ. ಕರೋನಾ-ಸೋಂಕಿತ ರೋಗಿ ಆಗಿದ್ದರೆ ಆತನ ಡೇಟಾವನ್ನು 60 ದಿನಗಳ ಮಿತಿಯಲ್ಲಿ ತೆಗೆದುಹಾಕಲಾಗುತ್ತದೆ ಎಂದಿದ್ದಾರೆ. ಇದಲ್ಲದೆ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದ ಸಿಂಗ್, ಬಳಕೆದಾರರು ಯಾವುದೇ ಕರೋನವೈರಸ್ ಪೀಡಿತ ವಲಯಗಳಿಗೆ ಪ್ರವೇಶಿಸಿದ ತಕ್ಷಣ ಅಥವಾ ಕರೋನವೈರಸ್-ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ತಕ್ಷಣ, ಅವರು ಆಲರ್ಟ್‌ ನೊಟೀಫೀಕೇಶನ್‌ ಅನ್ನು ಸ್ವೀಕರಿಸುತ್ತಾರೆ ಎಂದಿದ್ದಾರೆ.

ಕೊರೋನಾ

ಸದ್ಯ ಕೊರೋನಾ ಎಂಬ ಮಾರಕ ವೈರಸ್‌ ದೇಶದಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಇಂತಹ ಆರೋಪಗಳನ್ನು ಲೇಬಲ್ ಮಾಡುವುದು ಅತ್ಯಂತ ಅರ್ಥಹೀನ ಎಂದು ಅಭಿಷೇಕ್ ಸಿಂಗ್ ಹೇಳಿದ್ದಾರೆ. ಇನ್ನು ಮೈಗೊ ಇಂಡಿಯಾ ಆನ್‌ಲೈನ್ ವೇದಿಕೆಯಾಗಿದ್ದು ಅದು ನಾಗರಿಕರನ್ನು ಸರ್ಕಾರದ ಜೊತೆ ನೇರವಾಗಿ ಕನೆಕ್ಟ್‌ ಮಾಡುವ ಗುರಿಯನ್ನು ಹೊಂದಿದೆ. ಸದ್ಯ ಆರೋಗ್ಯಾ ಸೇತುವನ್ನು ಆಕ್ರಮಣಕಾರಿಯಾಗಿ ಅಳವಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸಹ ಬಳಸುವಂತೆ ಕರೆ ನಿಡಿದ್ದಾರೆ. ಇದು ದೇಶಾದ್ಯಂತ ಇದುವರೆಗೆ 8.2 ಕೋಟಿ ಡೌನ್‌ಲೋಡ್‌ಗಳನ್ನು ಪಡೆದುಕೊಂಡಿದೆ ಎಂದು ಸಿಂಗ್ ಹೇಳಿದ್ದಾರೆ.

Most Read Articles
Best Mobiles in India

English summary
Abhishek Singh, CEO of MyGovIndia that developed Aarogya Setu, says data will be used only for critical purposes such as medical emergencies, app won't share Covid patient info.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more