UPI ಡೇಟಾ ಆಧರಿಸಿ GST ನೊಟೀಸ್: ತಿಳಿಯಲೇಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ!
ಬೇಕರಿ, ಟೀ ಶಾಪ್, ಕಾಂಡಿಮೆಂಟ್ಸ್ ನಂತಹ ಬಹುತೇಕ ಸ್ಥಳೀಯ ವ್ಯಾಪಾರಿಗಳು ತಮ್ಮ ವ್ಯಾಪಾರಕ್ಕೆ ಸಂಬಂಧಿಸಿದಂತೆ 30-40 ಲಕ್ಷ ರೂಪಾಯಿ ಮೌಲ್ಯದ ವಹಿವಾಟುಗಳನ್ನು ನಡೆಸಿದ್ದಾರೆಂಬ ಆಧಾರದ ಮೇಲೆ ಜಿಎಸ್‌ಟಿ (GST) ಪಾವತಿಸಬೇಕೆಂದು ನೋಟಿಸ್‌ಗಳನ್ನು ಪಡೆದುಕೊಂಡಿದ್ದಾರೆ. ಇದು ಇತ್ತೀಚೆಗೆ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆ ಹುಟ್ಟಿಸಿರುವ ಸುದ್ದಿಯಾಗಿದೆ ಮತ್ತು ಬಹುತೇಕರಲ್ಲಿ ಆಂತಕ ಮೂಡಿಸಿದೆ.
ಈ ನೋಟಿಸ್‌ಗಳು ಯುಪಿಐ (UPI) ಪಾವತಿಗಳ ಡೇಟಾ ಆಧರಿಸಿ ಕಳುಹಿಸಲ್ಪಟ್ಟಿದ್ದು, ವ್ಯಾಪಾರಿಗಳಲ್ಲಿ ಗೊಂದಲ ಮತ್ತು ಆತಂಕ ಉಂಟುಮಾಡಿದೆ. ಮತ್ತು ಫೋನ್‌ಪೇ ಮತ್ತು ಗೂಗಲ್ ಬಳಕೆಯ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ, ಇಂದಿನ ಲೇಖನದಲ್ಲಿ UPI ಡೇಟಾ ಆಧರಿಸಿ GST ನೊಟೀಸ್ ಪಡೆದಿರುವ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
ವಿವಾದ ಯಾಕೆ?
ಇತ್ತೀಚಿನ ಆನ್‌ಲೈನ್ ಪಾವತಿಗಳ ಯುಗದಲ್ಲಿ ಜನರು ಹೆಚ್ಚಿನವಾಗಿ ಯುಪಿಐ ಬಳಸುತ್ತಾರೆ. ಇದರಿಂದಾಗಿ ವ್ಯಾಪಾರಿಗಳ ವಹಿವಾಟುಗಳು ಸರಕಾರದ ಗಮನಕ್ಕೆ ಸುಲಭವಾಗಿ ಬರುತ್ತವೆ. ಅದನ್ನೇ ಆಧಾರವಾಗಿಸಿಕೊಂಡು ತೆರಿಗೆ ಇಲಾಖೆ ಯುಪಿಐ ಪಾವತಿಗಳ ಡೇಟಾವನ್ನು ಪರಿಶೀಲಿಸಿ, 40 ಲಕ್ಷ ರೂಪಾಯಿಗೂ ಹೆಚ್ಚು ಹಣದ ವಹಿವಾಟು ನಡೆದಿರುವವರಿಗೆ ನೋಟಿಸ್‌ಗಳನ್ನು ಕಳುಹಿಸುತ್ತಿದೆ. ಅದು ಕೂಡ ಹಲವು ವರ್ಷಗಳ ಡೇಟಾವನ್ನು ಮುಂದಿಟ್ಟುಕೊಂಡು ಲಕ್ಷಾಂತರ ರೂ. GST ಪಾವತಿಗೆ ಕೇಳುತ್ತಿರುವುದು ವಿವಾದಕ್ಕೆ ಕಾರವಾಗುತ್ತಿದೆ.
ತೆರಿಗೆ ಇಲಾಖೆಯ ಸ್ಪಷ್ಟನೆ
ತೆರಿಗೆ ಇಲಾಖೆಯ ಸ್ಪಷ್ಟನೆ ಪ್ರಕಾರ, ಜಿಎಸ್‌ಟಿ ಕಾಯ್ದೆಯ ಪ್ರಕಾರ ಸರಕು ಮಾರಾಟದ ವಾರ್ಷಿಕ ಮಿತಿ 40 ಲಕ್ಷ ರೂಪಾಯಿ ಮತ್ತು ಸೇವೆಗಳಿಗಾಗಿ 20 ಲಕ್ಷ ರೂಪಾಯಿಗಳಷ್ಟು ವಹಿವಾಟು ನಡೆಸಿದವರೇ ಜಿಎಸ್‌ಟಿ ಕಾಯ್ದೆಗೆ ಒಳಪಡುತ್ತಾರೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ,
ಈ ಮೊತ್ತ ಮೀರಿದರೆ ಮಾತ್ರ ನೊಂದಾವಣೆ ಮತ್ತು ತೆರಿಗೆ ಪಾವತಿ ಅಗತ್ಯವಾಗುತ್ತದೆ. ಅಲ್ಲದೆ, ಕೆಲವು ಸರಕುಗಳು, ಉದಾಹರಣೆಗೆ ಬ್ರೆಡ್ ಜಿಎಸ್‌ಟಿಯಿಂದ ವಿನಾಯಿತಿಯಾಗಿದ್ದು, ಪ್ಯಾಕ್ ಮಾಡಲಾದ ಸ್ನ್ಯಾಕ್ಸ್‌ಗಳಂತಹ ಕೆಲವು ವಸ್ತುಗಳಿಗೆ ಮಾತ್ರ ಶೇ. 5ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಫೋನ್‌ಪೇ ಬಳಸುವುದಿಲ್ಲ!
2021-22ರಿಂದ 2024-25ರವರೆಗೆ, ಯುಪಿಐ ಮೂಲಕ ಕೆಲವರು ನಗದು ಬಿಟ್ಟುಕೊಂಡು ಹೆಚ್ಚು ವಹಿವಾಟುಗಳನ್ನು ನಡೆಸಿದ್ದಾರೆ ಎಂಬ ಮಾಹಿತಿಯನ್ನು ಇಲಾಖೆಯು ತೋರುತ್ತದೆ. ಇದನ್ನು ಆಧಾರವಿಟ್ಟು ಹಲವಾರು ವ್ಯಾಪಾರಿಗಳಿಗೆ ನೋಟಿಸ್‌ಗಳು ಕಳುಹಿಸಲಾಗಿದೆ. ಇದರಿಂದಾಗಿ ಅನೇಕ ರೀಟೇಲ್ ಅಂಗಡಿಗಳ ಮಾಲೀಕರು ಹೆದರಿದ್ದು, "ಫೋನ್‌ಪೇ" ಅಥವಾ "ಗೂಗಲ್ ಪೇ" ಬಳಸುವುದಿಲ್ಲ ಎಂಬ ಬೋರ್ಡ್‌ಗಳನ್ನು ಹಾಕುವಂತೆ ಮಾಡಿದ್ದಾರೆ.
ದೊಡ್ಡ ವ್ಯಾಪಾರ ನಮ್ಮದಲ್ಲ
ಅನೇಕ ವ್ಯಾಪಾರಿಗಳು ಪ್ರತಿದಿನ 10,000 ರೂಪಾಯಿ ವ್ಯಾಪಾರವಾದರೂ, ಖರ್ಚುಗಳ ನಂತರ ಲಾಭ 200 ರೂಪಾಯಿಗೂ ಕಡಿಮೆಯಿದೆ ಎನ್ನುತ್ತಿದ್ದಾರೆ. ಜಿಎಸ್‌ಟಿ ಪಾವತಿಸುವಷ್ಟು ದೊಡ್ಡ ವ್ಯಾಪಾರ ನಮ್ಮದಲ್ಲ ಎಂದು ಅವರು ಅಭಿಪ್ರಾಯಪಡುತ್ತಿದ್ದಾರೆ. ಈ ಕಾರಣಗಳಿಂದ ಯುಪಿಐ ಬಳಕೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಂದು ವೇಳೆ ಇದೆ ರೀತಿಯಲ್ಲಿ ಮುಂದುವರೆದರೆ, ಫೋನ್‌ಪೇ ಮತ್ತು ಗೂಗಲ್ ಪೇ ಬಳಕೆಯು ಸಂಪೂರ್ಣವಾಗಿ ಇಳಿಮುಖವಾಗುವ ಸಾಧ್ಯತೆ ಇದೆ. ಏಕೆಂದರೆ, ಇಂತಹ ಅಪ್ಲಿಕೇಶನ್‌ಗಳ ಬಳಕೆಯುವ ಹೆಚ್ಚಿರುವುದು ಸ್ಥಳೀಯ ವ್ಯಾಪಾರಿಗಳಿಂದಲೇ.
ನೋಟಿಸ್ ಪಡೆದವರು ಗಾಬರಿ ಬೀಳಬೇಕಾದ ಅಗತ್ಯವಿಲ್ಲ.
GSTನೋಟಿಸ್ ಪಡೆದವರು ಗಾಬರಿ ಬೀಳಬೇಕಾದ ಅಗತ್ಯವಿಲ್ಲ. ವಾರ್ಷಿಕ 40 ಲಕ್ಷ ರೂಪಾಯಿಗೂ ಕಡಿಮೆ ವಹಿವಾಟು ಮಾಡಿದವರು ಯಾವುದೇ ತೆರಿಗೆಯ ಜವಾಬ್ದಾರಿ ಹೊಂದಿರುವುದಿಲ್ಲ. ಇದಕ್ಕಿಂತ ಹೆಚ್ಚು ವಹಿವಾಟು ನಡೆದಿದ್ದರೆ ಮಾತ್ರ ನೋಟಿಸ್ ಬರುತ್ತದೆ.
ನೋಟಿಸ್ ಬಂದರೆ, ಸರಿಯಾದ ದಾಖಲೆಗಳನ್ನು ತೋರಿಸಿ ಸ್ಪಷ್ಟನೆ ನೀಡಿದರೆ ಸಾಕು. ಇದರಿಂದ ಯಾವುದೇ ತೊಂದರೆಯಾಗದು. ಏಕೆಂದರೆ, ಸಣ್ಣ ವ್ಯಾಪಾರಿಗಳನ್ನು ಕಾಯ್ದುಕೊಳ್ಳುವ GST ಕಂಪೊಸಿಶನ್ ಸ್ಕೀಮ್ ಇದೆ. ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.
GST ಕಂಪೊಸಿಶನ್ ಯೋಜನೆಯಡಿಯಲ್ಲಿ ವರ್ಷಕ್ಕೆ 1.5 ಕೋಟಿ ರೂಪಾಯಿ ವಹಿವಾಟು ನಡೆಸುವ ವ್ಯಾಪಾರಿಗಳು ಕೇವಲ ಶೇಕಡಾ 1%ರಿಂದ 6%ರ ವರೆಗೆ ಸರಳವಾದ ಜಿಎಸ್‌ಟಿ ಪಾವತಿಸಬಹುದಾಗಿದೆ. ಇದರಿಂದ ಸಣ್ಣ ವ್ಯಾಪಾರಿಗಳಿಗೆ ಹೆಚ್ಚು ಸುಲಭವಾಗುತ್ತದೆ.
ಆದರೆ ಅನೇಕರು ಈ ಸೌಲಭ್ಯಗಳ ಬಗ್ಗೆ ಎಚ್ಚರವಾಗಿಲ್ಲ, ಇದರಿಂದ ಅವರು ನೋಟಿಸ್‌ಗಳು ಬಂದಾಗ ಆತಂಕಿತರಾಗುತ್ತಿದ್ದಾರೆ. ಅವರ ವಾಸ್ತವಿಕ ವ್ಯವಹಾರಗಳ ದಾಖಲೆಗಳನ್ನು ತೋರಿಸಿ ನ್ಯಾಯಸಮ್ಮತ ಸ್ಪಷ್ಟನೆ ನೀಡಿದರೆ, ಸಮಸ್ಯೆಯು ನಿವಾರಣೆಯಾದಂತೆ. (ಹೆಚ್ಚಿನ ಮಾಹಿತಿಗಾಗಿ ಹಣಕಾಸು ತಜ್ಷರನ್ನು ಭೇಟಿ ಮಾಡಿ)


Click it and Unblock the Notifications








