Home
ಸುದ್ದಿಜಾಲ

ಹಾಯ್, ಹಲೋ ಎನ್ನುವ ವ್ಯಾಕ್ಯುಮ್ ಕ್ಲೀನರ್

By Super
ಹಾಯ್, ಹಲೋ ಎನ್ನುವ ವ್ಯಾಕ್ಯುಮ್ ಕ್ಲೀನರ್

ಮನೆಯಲ್ಲಿ ಗೃಹಿಣಿಯರು ಒಂದು ಕೆಲಸ ಶುರು ಮಾಡಿದರೆ ಅದರ ಜೊತೆ multi tasking ಮಾಡುತ್ತಲೇ ಬೇರೆ ಕೆಲಸಗಳನ್ನೂ ಮಾಡುತ್ತಾರೆ. ಅದು ಟಿವಿ ನೋಡಿಕೊಂಡು ಅಡುಗೆ ಮಾಡುವುದು ಇರಬಹುದು, FM ಕೇಳಿಕೊಂಡು ಮಕ್ಕಳಿಗೆ ಟಿಫನ್ ಬಾಕ್ಸ್ ರೆಡಿ ಮಾಡುವುದು ಇರಬಹುದು, ಇಲ್ಲವೆ ಟಿವಿ ನೋಡುತ್ತಾ ಫೋನಿನಲ್ಲಿ ಮಾತಾಡುವುದು ಇರಬಹುದು. ಇದನ್ನು ಅರಿತೇ ಹೆಂಗಸರು ಕಸ ಗುಡಿಸುವಾಗ ಬೋರ್ ಆಗಬಾರದು ಎಂದು ಜಪಾನಿನ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದಕ ಶಾರ್ಪ್, ಮನೆಯಲ್ಲಿ ಮಾತಾಡುವ ರೊಬೋಟ್ ವ್ಯಾಕ್ಯುಮ್ ಕ್ಲೀನರ್ ಒಂದನ್ನು ಬಿಡುಗಡೆ ಮಾಡಿದೆ.

"ಕೊಕೊರೊಬೋ" ಎಂಬ ಹೆಸರಿನ ಈ ರೊಬೋಟ್ ವ್ಯಾಕ್ಯೂಮ್ ಕ್ಲೀನರ್ ನ ಜೊತೆ ನೀವು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಬಹುದು. ಹಾಯ್, ಹಲೋ, ಹೌ ಆರ್ ಯೂ, ಈ ರೀತಿ ಸುಮಾರು 30 ನುಡಿಗಟ್ಟುಗಳನ್ನ ಇದಕ್ಕೆ ಫೀಡ್ ಮಾಡಲಾಗಿದ್ದು ಐಫೋನ್ ಅನ್ನು ಉಪಯೋಗಿಸಿಕೊಂಡು ಇದನ್ನು ನಿಯಂತ್ರಿಸಬಹುದಾಗಿದೆ. ಇದರ ಮತ್ತೊಂದು ವಿಶೇಷವೇನೆಂದರೆ, ಈ ರೊಬೋಟ್ ತಾನು ಕ್ಲೀನ್ ಮಾಡುತ್ತಲೇ ಅದರ ಫೋಟೋ ಹಾಗು ವೀಡಿಯೋವನ್ನೂ ಕೂಡಾ ಕಳಿಸಬಲ್ಲದಾಗಿದೆ.

ನೀವು ಬೇಕಿದ್ದರೆ ಆಫೀಸಿನಲ್ಲಿ ಇದ್ದುಕೊಂಡು ನಿಮ್ಮ ಐಫೋನ್ ಮೂಲಕ ಹೇಗೆ ಬೇಕೋ ಹಾಗೆ ನಿಯಂತ್ರಣ ಮಾಡಿಕೊಂಡು ಕೆಲಸ ಮಾಡಿಸಿಕೊಳ್ಳಬಹುದು. ಇನ್ಫ್ರಾರೆಡ್ ಸೆನ್ಸರ್ ಇದಕ್ಕೆ ಅಳವಡಿಸಲಾಗಿದ್ದು, ಕ್ಲೀನ್ ಮಾಡುವಾಗ ಮನೆಯಲ್ಲಿ ಇರುವ ವಸ್ತುಗಳ ಜೊತೆ ಡಿಕ್ಕಿ ಹೊಡೆಯದಂತೆ ತಡೆಯುತ್ತದೆ. ಕೆಲಸ ಮಾಡಿ ಸುಸ್ತಾದರೆ ಒಂದು ಕಡೆ ಮಲಗಿಕೊಳ್ಳುತ್ತದೆಯಂತೆ, ಈ ರೊಬೋಟ್!

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+