ಅಸಲಿಯ ತಲೆಮೇಲೆ ಹೊಡೆಯುವ ನಕಲಿ ಫೋನ್‌ಗಳು: ನೋಡಿ ಬೆಚ್ಚಿಬಿದ್ದ ಪೊಲೀಸರು!!
ಆನ್‌ಲೈನ್‌ನಲ್ಲಿ ಕೊಂಚ ಅಗ್ಗದ ಬೆಲೆಗೆ ಸ್ಮಾರ್ಟ್‌ಫೋನ್ ಸಿಕ್ಕಿದೆ ಎಂದು ಖರೀದಿಸಿ ಖುಷಿಪಡುತ್ತಿದ್ದರೆ, ಈ ಶಾಕಿಂಗ್ ಸ್ಟೋರಿ ನಿಮಗೆ ಆಘಾತ ಉಂಟುಮಾಡಬಹುದು.ಯಾಕೆಂದರೆ, ಪ್ರಸಿದ್ಧ ಕಂಪನಿಗಳ ಮೊಬೈಲ್‌ಗಳ ನಕಲು ತಯಾರಿಸಿ, ಅದನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿ ವಂಚಿಸುತ್ತಿದ್ದ ಜಾಲವೊಂದನ್ನು ಗುಜರಾತ್‌ನ ವಡೋದರಾ ಪೊಲೀಸರು ಬಂಧಿಸಿದ್ದಾರೆ.
ಹೌದು, ಐಫೋನ್ ಮತ್ತು ಪ್ರೀಮಿಯಂ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಿ ಮೋಸ ಮಾಡುತ್ತಿರುವ ಹೈಟೆಕ್ ಕ್ರಿಮಿನಲ್‌ಗಳ ತಂಡವೊಂದು ಎಲ್ಲೆಡೆ ಬೀಡುಬಿಟ್ಟಿದೆ. ಅಸಲಿ ಬ್ರಾಂಡೆಡ್ ಸ್ಮಾರ್ಟ್‌ಪೋನ್‌ಗಳ ತಲೆಮೇಲೆ ಹೊಡೆದಂತಿದ್ದ ಪ್ರೀಮಿಯಮ್ ನಕಲಿ ಫೋನ್‌ಗಳನ್ನು ನೋಡಿ ವಡೋದರಾ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಪ್ರಖ್ಯಾತ ಕಂಪನಿಗಳ ಪ್ರಸಿದ್ಧ ಮಾಡೆಲ್ ಸ್ಮಾರ್ಟ್‌ಫೋನ್‌ಗಳ ನಕಲಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ನಂತರ ವಡೋದರಾ ಪೊಲೀಸರು ಎಚ್ಚೆತ್ತಿದ್ದು, 24 ಲಕ್ಷ ರೂ. ಮೌಲ್ಯದ ನಕಲಿ ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ಮೊಬೈಲ್‌ಗಳ ಬೆಲೆ 50 ಸಾವಿರ ರೂ.ಗಿಂತ ಅಧಿಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೀನಾದಿಂದ ಆಮದು ಮಾಡಿಕೊಂಡಿರುವ ಇಂತಹ ನಕಲಿ ಸ್ಮಾರ್ಟ್‌ಫೋನ್‌ಗಳು ದೇಶದ ಮೂಲೆಮೂಲೆಯ ಗ್ರಾಹಕರಿಗೂ ಮೊಬೈಲ್ ಮಾರಾಟ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಮೊಬೈಲ್ ಖರೀದಿಸಲು ಬಯಸುವ ಗ್ರಾಹಕರನ್ನೇ ಗುರಿಯಾಗಿಸಿಕೊಂಡಿರುವ ಕ್ರಿಮಿನಲ್‌ಗಳು ನಕಲಿ ಸ್ಮಾರ್ಟ್‌ಫೋನ್‌ಗಳನ್ನು ನೀಡಿ ವಂಚಿಸುತ್ತಿದ್ದಾರೆ.

ಅಸಲಿಯೋ ನಕಲಿಯೋ ಪರೀಕ್ಷೆ?
ನಿಮ್ಮ ಸ್ಮಾರ್ಟ್‌ಪೋನ್ ಅಸಲಿಯೋ ನಕಲಿಯೋ ಎಂಬುದನ್ನು ನೀವು ಹಲವು ರೀತಿಯಲ್ಲಿ ಪರೀಕ್ಷಿಸಿಕೊಳ್ಳಬಹುದಾಗಿದೆ. ಪ್ರತಿಯೋರ್ವರು ಬಳಸುವ ಪ್ರತಿ ಮೊಬೈಲ್ ಸಾಚಾತನವನ್ನು ನಾವು ತಿಳಿಯಬಹುದಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಆಪಲ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಅಸಲಿಯೋ ನಕಲಿಯೋ ಪರೀಕ್ಷಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ಐಫೋನ್ VS ನಕಲಿ ಐಫೋನ್
ಚೀನಾದಲ್ಲಿ ತಯಾರಾಗುತ್ತಿರುವ ಐಫೋನ್ ರೀತಿಯಲ್ಲಿಯೇ ಇರುವ ಈ ಫೋನ್‌ಗಳು ಸಹ ಐಫೋನ್ ತಂದ್ರೂಪಿಯಂತೆ ಇರುವುದರಿಂದ ಜನರು ಸಹ ಅವರ ಬಲೆಗೆ ಬೀಳುತ್ತಿದ್ದಾರೆ. ಹಾಗಾಗಿ, ಐಫೋನ್‌ಗಳಿಗೂ ಮತ್ತು ನಕಲಿ ಐಫೋನ್‌ಗಳಿಗೂ ಇರುವ ವ್ಯತ್ಯಾಸವೇನು? ನಿಜವಾದ ಐಫೋನ್ ಕಂಡುಹಿಡಿಯುವುದು ಹೇಗೆ? ಎಂಬುದನ್ನು ಈ ಕೆಳಗೆ ತಿಳಿಯಿರಿ

ಸೀರಿಯಲ್ ಸಂಖ್ಯೆ ಪರಿಶೀಲಿಸಿ
ಐಫೋನ್ ಪಡೆದುಕೊಂಡ ನಂತರ ಸೆಟ್ಟಿಂಗ್‌ಗೆ ತೆರಯಿರಿ, ಜನರಲ್‌ಗೆ ಹೋಗಿ ಮತ್ತು ಅಬೌಟ್ ಬಟನ್ ಸ್ಪರ್ಶಿಸಿ. ಇದೀಗ ನಿಮಗೆ ಸ್ಕ್ರಾಲ್ ಡೌನ್ ಮಾಡಬಹುದು ಇಲ್ಲಿ ಡಿವೈಸ್‌ನ 11 ಡಿಜಿಟ್ ಸೀರಿಯಲ್ ಸಂಖ್ಯೆ ನೋಡಬಹುದು. AABCCDDDEEF ಈ ಸ್ವರೂಪದಲ್ಲಿ ನಿಮಗೆ ದೊರೆಯುತ್ತದೆ.

ನಕಲಿ ಫೋನ್ ಮೆಮೊರಿ ಕಾರ್ಡ್
ಮೆಮೊರಿ ಸಾಮರ್ಥ್ಯ ಮೂಲ ಐಫೋನ್ ಮೆಮೊರಿ ಸಾಮರ್ಥ್ಯ 16ಜಿಬಿ/32ಜಿಬಿ ಅಥವಾ 64ಜಿಬಿ ಇರುತ್ತದೆ. ಆದರೆ ನಕಲಿ ಫೋನ್ ಮೆಮೊರಿ ಕಾರ್ಡ್ ವಿಸ್ತರಿಸಲು ಎಸ್‌ಡಿ ಕಾರ್ಡ್ ಇರುತ್ತದೆ. ಇದರಿಂದ ನಿಮ್ಮ ಐಫೋನ್ ನಕಲಿ ಎಂಬುದು ಗೊತ್ತಾಗಿಬಿಡುತ್ತದೆ.

ಲೋಗೋವನ್ನು ಪರಿಶೀಲಿಸಿ!
ನಿಮ್ಮ ಐಫೋನ್ ಪವರ್ ಆನ್ ಮಾಡಿದಾಗ ಲೋಗೋ ಕಾಣದಿದ್ದರೆ ಅದು ನಕಲಿ ಐಫೋನ್ ಆಗಿರುತ್ತದೆ. ಜೊತೆಗೆ ನಕಲಿ ಐಫೋನ್ ಡಿಜಿಟಲ್ ದೃಢೀಕರಣ ಹೊಂದಿರುವುದಿಲ್ಲ. ಸಿರಿ ಆಪ್ ಇನ್‌ಸ್ಟಾಲ್ ಮಾಡಿ ಸಿರಿ ಅಪ್ಲಿಕೇಶನ್ ಅನ್ನು ಪಡೆದುಕೊಳ್ಳಲು ಪ್ರಯತ್ನಿಸಿ. ಸಿರಿ ಅಪ್ಲಿಕೇಶನ್ ಪ್ರವೇಶಿಸಲು ಸಾಧ್ಯವಾಗದಿದ್ದಲ್ಲಿ ನೀವು ನಕಲಿ ಐಫೋನ್ ಬಳಸುತ್ತಿದ್ದೀರಿ.

ಐಓಎಸ್ ಆಪರೇಟಿಂಗ್ ಸಿಸ್ಟಮ್
ನೈಜ ಐಫೋನ್ ಐಓಎಸ್ ಆಪರೇಟಿಂಗ್ ಸಿಸ್ಟಮ್ ಪರಿಶೀಲಿಸಿ. ನಕಲಿ ಐಫೋನ್‌ಗಳು ಬಹುತೇಕ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸುತ್ತಿರುತ್ತವೆ. ನೈಜ ಐಫೋನ್ ಐಓಎಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರುತ್ತದೆ. ಐಓಎಸ್ ಅಲ್ಲದೆ ಬೇರೆ ಓಎಸ್ ನಿಮಗೆ ಕಂಡುಬಂದಲ್ಲಿ ನಿಮ್ಮ ಐಫೋನ್ ನಕಲಿ ಎಂದರ್ಥ.

ಅಪ್ಲಿಕೇಶನ್ಸ್!
ಇನ್‌ಬಿಲ್ಟ್ ಅಪ್ಲಿಕೇಶನ್ಸ್ ಪರಿಶೀಲಿಸಿ ಕೆಲವೊಂದು ಸಾಮಾನ್ಯ ಅಪ್ಲಿಕೇಶನ್‌ಗಳಾದ ಕಾಂಪ್ಯಾಕ್ಟ್, ಕಂಪಾಸ್, ಸೆಟ್ಟಿಂಗ್ಸ್, ಕ್ಯಾಲ್ಕುಲೇಟರ್, ಮ್ಯೂಸಿಕ್ ಮತ್ತು ಫೋಟೋಗಳನ್ನು ನೈಜ ಐಫೋನ್ ಹೊಂದಿರುತ್ತದೆ. ಯಾವುದೇ ಅಪ್ಲಿಕೇಶನ್ ಮಿಸ್ ಆಗಿದ್ದಲ್ಲಿ ಇದು ನಕಲಿ ಎಂಬುದು ಖಾತ್ರಿಯಾಗುತ್ತದೆ.

ದೃಢೀಕೃತ ಟೂಲ್!
ಐಫೋನ್ ಸ್ಟೋರ್ ನೀವು ಖರೀದಿಸಿರುವ ಐಫೋನ್ ಅಸಲಿಯೇ ನಕಲಿಯೇ ಎಂಬುದನ್ನು ಈ ಸ್ಟೋರ್‌ಗೆ ತೆಗೆದುಕೊಂಡು ಹೋಗಿ ಪರಿಶೀಲಿಸಿಕೊಳ್ಳಿ. ಐಫೋನ್ ಪರಿಣಿತರಲ್ಲಿ ನಿಮ್ಮ ಫೋನ್ ಅನ್ನು ನೀಡಿ ಅದನ್ನು ದೃಢೀಕೃತ ಟೂಲ್ ಬಳಸಿ ಪರಿಶೀಲಿಸಲು ತಿಳಿಸಿ. ಇದರಿಂದ ಕೂಡ ನಿಮ್ಮ ಐಫೋನ್ ಚಾಸಾತನ ಬಯಲಾಗಿಬಿಡುತ್ತದೆ.

ಆಂಡ್ರಾಯ್ಡ್ VS ನಕಲಿ ಆಂಡ್ರಾಯ್ಡ್
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ಅಸಲಿಯೋ ನಕಲಿಯೋ ಎಂಬುದನ್ನು ಸುಲಭವಾಗಿ ತಿಳಿಯಬಹುದಾಗಿದೆ. ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ *#06# ಎಂದು ನಿಮ್ಮ ಮೊಬೈಲ್‌ನಲ್ಲಿ ಐಎಂಇಐ ಸಂಖ್ಯೆ ಕಾಣಿಸುತ್ತದೆ. ಆಯಾ ಕಂಪನಿಯ ವೆಬ್‌ಸೈಟ್‌ಗೆ ಹೋಗಿ ಇದನ್ನು ನಮೂದಿಸಿದರೆ ಸಾಕು ಅದರ ಸಾಚಾತನ ಬಯಲಾಗುತ್ತದೆ.

ಬಣ್ಣ ಮತ್ತು ಆಕಾರ
ಫೋನ್‌ನ ಲಾಂಚ್ ಅನ್ನು ಯಾವ ಬಣ್ಣದಲ್ಲಿ ಮಾಡಲಾಗಿದೆ ಎಂಬುದನ್ನು ಅರಿತುಕೊಳ್ಳಿ. ಲಾಂಚ್ ಆಗಿರುವ ಫೋನ್‌ನ ಆಕಾರ, ಬಣ್ಣ ಮತ್ತು ಸ್ಟೈಲ್ ಅನ್ನು ನೀವು ಖರೀದಿಸಿರುವ ಫೋನ್ ಹೊಂದಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಫೋನ್‌ನ ವೆಬ್‌ಸೈಟ್‌ಗೆ ಹೋಗಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.

ಹಾರ್ಡ್‌ವೇರ್ ಬಟನ್
ಅಸಲಿ ಮತ್ತು ನಕಲಿ ಫೋನ್‌ನಲ್ಲಿ ಹಾರ್ಡ್‌ವೇರ್ ಬಟನ್‌ನಲ್ಲಿ ಕೂಡ ವ್ಯತ್ಯಾಸಗಳನ್ನು ನಿಮಗೆ ಕಾಣಬಹುದು. ಚಿತ್ರದಲ್ಲಿ ಅಸಲಿ ಫೋನ್ ಹೊಂದಿರುವಲ್ಲಿಯೇ ಹಾರ್ಡ್‌ವೇರ್ ಬಟನ್ ಇದೆಯೇ ಎಂಬುದನ್ನು ಪರಿಶೀಲಿಸಿ.

ಲೋಗೋ ಅಥವಾ ಪ್ಯಾಕೇಜ್
ಫೋನ್ ಖರೀದಿಯ ಮುನ್ನ ಕಂಪೆನಿಯ ಲೋಗೋ, ಮಾಡೆಲ್ ಹೆಸರು ಮತ್ತು ಪ್ಯಾಕೇಜಿಂಗ್ ನೋಡಿಕೊಳ್ಳಿ. ಅಸಲಿ ಫೋನ್‌ನ ಪ್ಯಾಕೇಜಿಂಗ್ ಉತ್ತಮ ಮಟ್ಟದಲ್ಲಿದ್ದು ನಕಲಿ ಫೋನ್ ಪ್ಯಾಕೇಜಿಂಗ್ ಕಳಪೆ ಮಾದರಿಯಲ್ಲಿರುತ್ತದೆ.

ಭಾರ
ಆನ್‌ಲೈನ್ ಮಳಿಗೆಗಳಲ್ಲಿ ನೀವು ಖರೀದಿಸುವ ಫೋನ್‌ನ ತೂಕವನ್ನು ಅರಿಯಲಾಗುವುದಿಲ್ಲ. ಆದರೆ ಆಫ್‌ಲೈನ್ ಮಳಿಗೆಗಳಲ್ಲಿ ಫೋನ್‌ನ ತೂಕವನ್ನು ಪತ್ತೆಹಚ್ಚಬಹುದಾಗಿದೆ. ಇದರಿಂದ ಫೋನ್‌ನ ಗುಣಮಟ್ಟವನ್ನು ನಿಮಗೆ ಅರಿತುಕೊಳ್ಳಬಹುದು.

ದರ ಕಡಿತ ಮಾರಾಟ
ಯಾವುದೇ ಆನ್‌ಲೈನ್ ರೀಟೈಲ್ ತಾಣಗಳು ದರಕಡಿತ ಆಫರ್ ಅನ್ನು ನೀಡುತ್ತಿವೆ ಎಂದಾದಲ್ಲಿ ಪರಿಶೀಲನೆ ಅತ್ಯಗತ್ಯವಾದುದು. ಬೇರೆ ಸೈಟ್‌ನಲ್ಲಿ ಕೂಡ ಬೆಲೆಯನ್ನು ಖಾತ್ರಿಪಡಿಸಿಕೊಳ್ಳಿ.

ಫೀಚರ್ಸ್ ಪರಿಶೀಲಿಸಿ
ನೀವು ಯಾವ ಫೋನ್ ಅನ್ನು ಖರೀದಿಸುತ್ತಿದ್ದೀರೋ ಅದರ ಫೀಚರ್ಸ್ ಅನ್ನು ಪರಿಶೀಲಿಸಿಕೊಳ್ಳಿ. ಕಂಪೆನಿ ಪ್ರಸ್ತುತಪಡಿಸಿರುವ ಎಲ್ಲಾ ಫೀಚರ್ಸ್‌ಗಳು ಫೋನ್‌ನಲ್ಲಿವೆಯೇ ಎಂಬುದನ್ನು ಪರಿಶೀಲಿಸಿ.


Click it and Unblock the Notifications








