ಪ್ರೇಮಿಗಳ ದಿನಕ್ಕೆ ಗೂಗಲ್ ಡೂಡಲ್

Posted By: Staff
ಪ್ರೇಮಿಗಳ ದಿನಕ್ಕೆ ಗೂಗಲ್ ಡೂಡಲ್


ಗೂಗಲ್ ತನ್ನ ಸರ್ಚ್ ಪೇಜ್ ನಲ್ಲಿ ಪ್ರತಿಯೊಂದು ಸಂಧರ್ಭಕ್ಕೂ ಒಂದೊಂದು ಡೂಡಲ್ (ಅನಿಮೇಶನ್ ವೀಡಿಯೊ) ಅನ್ನು ಪ್ರಕಟಿಸುತ್ತದೆ. ಪ್ರೇಮಿಗಳ ದಿನಕ್ಕೆ ಏನು ವಿಶೇಷ ಇರಬಹುದೆಂದು ಕಾಯುತ್ತಿದ್ದ ಗೂಗಲ್ ಅಭಿಮಾನಿಗಳು ಸಿಂಪಲ್ ಹಾಗು ಕ್ಯೂಟ್ ಆದ ದೂಡಲ್ ಅನ್ನು ನೋಡಿ ಖುಷಿ ಪಡಬಹುದು.

ಒಬ್ಬ ಹುಡುಗ ವ್ಯಾಲೆಂಟೈನ್ ಹಿಡಿದುಕೊಂಡಿರುವ ಚಿತ್ರ, ಅವನ ಹಿಂದೆ ಗೂಗಲ್ ನ ಲೋಗೋ ಕಾಣುತ್ತದೆ. ಹುಡುಗನ ಮೇಲೆ ಕ್ಲಿಕ್ ಮಾಡಿದೊಡನೆ ಕೋಲ್ಡ್ ಕೋಲ್ಡ್ ಹಾರ್ಟ್ ಹಾಡಿನ ಜೊತೆ ಬರುವ ಹಿನ್ನೆಲೆ ಸಂಗೀತದಲ್ಲಿ ಆ ಹುಡುಗ ಗೂಗಲ್ ನಲ್ಲಿ ಹುಡುಕಿ ಸ್ಕಿಪ್ಪಿಂಗ್ ಆಡುತ್ತಿರುವ ಹುಡುಗಿಗೆ ಹೂವು ಕೊಟ್ಟು ಪ್ರೇಮ ನಿವೇದಿಸುತ್ತಾನೆ. ಆಕೆ ಪ್ರತಿಕ್ರಯಿಸುವುದಿಲ್ಲ. ಮತ್ತೆ ಗೂಗಲ್ ಹುಡುಕಿ ಅನೇಕ ಗಿಫ್ಟ್ ಕೊಟ್ಟು ಪ್ರಯತ್ನಿಸುತ್ತಾನೆ. ಆದರೂ ಪ್ರಯೋಜನವಾಗುವುದಿಲ್ಲ. ಕೊನೆಗೆ ಯಾವ ಗಿಫ್ಟ್ ಕೂಡ ಇಲ್ಲದೆ ಬೇಜಾರಿನಲ್ಲಿ ಹುಡುಗಿಯ ಮುಂದೆ ನಿಲ್ಲುತ್ತಾನೆ. ಆ ಹುಡುಗಿ, ಪ್ರೀತಿಗೆ ಕಾರಣ ಬೇಕಿಲ್ಲ, ಒಲವಿನ ಉಡುಗೋರೆಯೂ ಬೇಡ, ಪ್ರೀತಿಸುವ ಹೃದಯ ಒಂದಿದ್ದರೆ ಸಾಕು ಎಂಬಂತೆ ಅವನನ್ನು ತಬ್ಬಿಕೊಳ್ಳುತ್ತಾಳೆ. ಇಬ್ಬರೂ ಒಟ್ಟಿಗೆ ಖುಷಿಯಿಂದ ಸ್ಕಿಪ್ಪಿಂಗ್ ಆಡುತ್ತಿರುವ ಹಾಗೆಯೇ ಅನಿಮೇಶನ್ ಮುಗಿಯುತ್ತದೆ.

ಅರ್ಥಗರ್ಭಿತ ಸಂದೇಶ ಸಾರುವ ದೂಡಲ್ ಉಡುಗೊರೆ ಕೊಟ್ಟ ಗೂಗಲ್ ಗೆ ಒಂದು ಥ್ಯಾಂಕ್ಸ್ ಹೇಳಿ ಈಗಲೇ ಗೂಗಲ್ ಮಾಡಿ ನೋಡಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot