ಅಬ್ಬಬ್ಬಾ ಎಷ್ಟು ಚಳಿ, ಮನೆಗೊಂದು ಗೀಸರ್ ಬೇಕು ಅನ್ಕೊಂಡಿದ್ದೀರಾ? ಖರೀದಿಸುವ ಮುನ್ನ ಈ ಅಂಶಗಳನ್ನು ನೋಡಿ!
ಚಳಿಗಾಲದಲ್ಲಿ ತಣ್ಣೀರಿನ ಸಹವಾಸವೇ ಬೇಡಪ್ಪಾ ಬೇಡ ಎನಿಸಿಬಿಡುತ್ತದೆ. ಪ್ರತಿಯೊಂದಕ್ಕೂ ಕೂಡ ಬಿಸಿನೀರು ಇರಬೇಕು ಅನ್ನೋದು ಸಾಮಾನ್ಯವಾಗಿಬಿಟ್ಟಿದೆ. ಸ್ನಾನ ಮಾಡುವುದಕ್ಕೆ ಮಾತ್ರವಲ್ಲ ಪಾತ್ರೆಗಳನ್ನು ತೊಳೆಯುವುದಕ್ಕೂ ಕೂಡ ಬಿಸಿನೀರು ಇದ್ದರೆ ಬೆಸ್ಟ್ ಎನ್ನುವವರಿದ್ದಾರೆ. ಇದೇ ಕಾರಣಕ್ಕೆ ಚಳಿಗಾಲದ ಸಮಯದಲ್ಲಿ ಮನೆಯಲ್ಲೊಂದು ಗೀಸರ್ ಹೊಂದುವುದಕ್ಕೆ ಪ್ರತಿಯೊಬ್ಬರು ಬಯಸುತ್ತಾರೆ.
ಹೌದು, ಚಳಿಗಾಲದ ಸಮಯದಲ್ಲಿ ಮನೆಯಲ್ಲೊಂದು ಗೀಸರ್ ಇದ್ದರೆ ಯಾವಾಗ ಬೇಕಿದ್ದರೂ ಬಿಸಿನೀರಿಗೆ ಕೊರತೆಯಾಗುವುದಿಲ್ಲ. ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡ್‌ಗಳ ವಿಭಿನ್ನ ಶ್ರೇಣಿಯ ಗೀಸರ್‌ಗಳು ಲಭ್ಯವಿದೆ. ಆದರೆ ನಿಮ್ಮ ಮನೆಗೆ ಯಾವ ಗೀಸರ್ ಸೂಕ್ತವಾಗಿದೆ ಅಂತಾ ಆಯ್ಕೆ ಮಾಡುವುದಕ್ಕೆ ನೀವು ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. ಹಾಗಾದ್ರೆ ಗೀಸರ್ ಖರೀದಿಸುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಚಾರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೀಸರ್ ಆಯ್ಕೆ ಮಾಡುವಾಗ ಇರಲಿ ಎಚ್ಚರ
ಗೀಸರ್‌ಗಳಲ್ಲಿ ಸ್ಟೋರೇಜ್ ಗೀಸರ್ ಮತ್ತು ಇನ್ಸ್‌ಟಂಟ್ ಗೀಸರ್ ಎಂದು ಎರದು ವಿಧಗಳಿವೆ. ಇದರಲ್ಲಿ ಸ್ಟೋರೇಜ್ ಗೀಸರ್‌ಗಳು ನೀರನ್ನು ಟ್ಯಾಂಕ್‌ನಲ್ಲಿ ಬಿಸಿ ಮಾಡುತ್ತವೆ. ಅಲ್ಲದೆ ಟ್ಯಾಂಕ್‌ನಲ್ಲಿ ಬಿಸಿ ನೀರನ್ನು ಸ್ಟೋರ್ ಮಾಡಲಿವೆ. ಆದರೆ ಇನ್ಸ್‌ಟಂಟ್ ಗೀಸರ್ ನೀರನ್ನು ನಿಮಗೆ ಅಗತ್ಯವಿದ್ದಾಗ ಬಿಸಿ ಮಾಡಲಿದೆ. ಅಂದರೆ ಸ್ಟೋರೇಜ್ ಟೀಸರ್‌ಗಿಂತ ವೇಗವಾಗಿ ನೀರನ್ನು ಬಿಸಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಈ ಗೀಸರ್‌ಗಳು ಹೆಚ್ಚಿನ ಸಂಖ್ಯೆಯ ಜನರು ಇರುವ ಕುಟುಂಬಗಳಿಗೆ ಸೂಕ್ತವಾಗಿರುವುದಿಲ್ಲ.
ಎಷ್ಟು ಬಿಸಿ ನೀರು ಬೇಕು ಅನ್ನೊದನ್ನ ಗಮನಿಸಿ
ನಿಮಗೆ ಎಷ್ಟು ಬಿಸಿನೀರು ಬೇಕು ಎಂಬುದರ ಮೇಲೆ ಗೀಸರ್ ಖರೀದಿಸುವುದು ಸೂಕ್ತ. ನಿಮ್ಮ ಕುಟುಂಬದ ಗಾತ್ರಕ್ಕೆ ಅನುಗುಣವಾಗಿ ಗೀಸರ್ ಅನ್ನು ಪರಿಗಣಿಸಬೇಕು. ಅಂದರೆ ನೀವು ದೊಡ್ಡ ಗಾತ್ರದ ಕುಟುಂಬವನ್ನು ಹೊಂದಿದ್ದರೆ ಅಥವಾ ಸಾಕಷ್ಟು ಬಿಸಿನೀರನ್ನು ಬಳಸಿದರೆ, ನಿಮಗೆ ದೊಡ್ಡ ಸಾಮರ್ಥ್ಯದ ಗೀಸರ್ ಅಗತ್ಯವಿರುತ್ತದೆ. ನಿಮ್ಮ ಅಗತ್ಯಗಳನ್ನು ಪರಿಗಣಿಸುವುದಾದರೆ,
2 ರಿಂದ 3 ಸದಸ್ಯರಿರುವ ಕುಟುಂಬಗಳಿಗೆ: 6 ಲೀಟರ್ ವರೆಗೆ
4 ರಿಂದ 8 ಸದಸ್ಯರಿರುವ ಕುಟುಂಬಗಳಿಗೆ: 35 ಲೀಟರ್ ವರೆಗೆ ಸಾಮರ್ಥ್ಯ ಹೊಂದಿರುವ ಗೀಸರ್ ಅನ್ನು ಖರೀದಿಸಬೇಕಾಗುತ್ತದೆ.

ಗೀಸರ್ ಇಡುವ ಜಾಗಕ್ಕೆ ಸೂಕ್ತವಾದ ವಿನ್ಯಾಸವನ್ನು ಆಯ್ಕೆ ಮಾಡಿ
ಗೀಸರ್‌ಗಳು ವಿವಿಧ ಆಕಾರಗಳು ಮತ್ತು ಗಾತ್ರದ ಆಯ್ಕೆಗಳಲ್ಲಿ ಬರುತ್ತವೆ. ಇವುಗಳಲ್ಲಿ ಹೆಚ್ಚಿನವು ಸಿಲಿಂಡರ್ ಆಕಾರ ಹೊಂದಿರುತ್ತವೆ. ಆದರಿಂದ ನಿಮ್ಮ ಆಯ್ಕೆಯು ನಿಮ್ಮ ಸ್ನಾನಗೃಹ ಅಥವಾ ಅಡುಗೆಮನೆಯಲ್ಲಿ ಲಭ್ಯವಿರುವ ಸ್ಥಳದ ಆದಾರ ಮೇಲೆ ನೀವು ಗೀಸರ್ ವಿನ್ಯಾಸವನ್ನು ಆಯ್ಕೆ ಮಾಡಿ. ಅಂದರೆ ಸೀಮಿತವಾದ ಸಮತಲ ಸ್ಥಳವಿದ್ದರೆ ಸಿಲಿಂಡರ್ ಆಕಾರದ ವಿನ್ಯಾಸವು ಉತ್ತಮವಾಗಿರುತ್ತದೆ. ಕಡಿಮೆ ಸೀಲಿಂಗ್ ಎಚ್ಚರವಿರುವ ಜಾಗವಾದರೆ ಆಯತಾಕಾರದ ವಿನ್ಯಾಸದ ಗೀಸರ್ ಆಯ್ಕೆ ಮಾಡಿರಿ.
ಸ್ಟಾರ್ ರೇಟಿಂಗ್ ನೋಡಿ ಉತ್ತಮವಾದುದ್ದನ್ನು ಆಯ್ಕೆ ಮಾಡಿ
ಹವಾನಿಯಂತ್ರಣಗಳು ಮತ್ತು ಇತರ ವಿದ್ಯುತ್ ಉಪಕರಣಗಳಂತೆ, ಗೀಸರ್‌ಗಳು ಕೂಡ ಗಮನಾರ್ಹ ಪ್ರಮಾಣದ ವಿದ್ಯುತ್ ಅನ್ನು ಬಳಸುತ್ತವೆ. ಆದರಿಂದ ನೀವು ನಿರ್ವಹಣಾ ವೆಚ್ಚವನ್ನು ಉಳಿಸುವುದಕ್ಕೆ ಕನಿಷ್ಠ 4-ಸ್ಟಾರ್ ಪವರ್ ದಕ್ಷತೆಯ ರೇಟಿಂಗ್ ಹೊಂದಿರುವ ಗೀಸರ್‌ಗಳನ್ನು ಆಯ್ಕೆಮಾಡಿ.

ಸರಿಯಾದ ವ್ಯಾಟ್ ಅನ್ನು ಆಯ್ಕೆಮಾಡಿ
ಗೀಸರ್‌ಗಳು ವಿಭಿನ್ನ ವ್ಯಾಟೇಜ್ ರೇಟಿಂಗ್‌ಗಳೊಂದಿಗೆ ಬರುತ್ತವೆ. ನಿಮ್ಮ ಟ್ಯಾಂಕ್ ಸಾಮರ್ಥ್ಯ ಮತ್ತು ತಾಪನ ವೇಗದ ಅವಶ್ಯಕತೆಗಳನ್ನು ಪರಿಗಣಿಸಿ ಆಯ್ಕೆ ಮಾಡಿ. ಅಂದರೆ ಹೆಚ್ಚಿನ ವ್ಯಾಟೇಜ್ ಗೀಸರ್‌ಗಳು ನೀರನ್ನು ವೇಗವಾಗಿ ಬಿಸಿಮಾಡುತ್ತವೆ ಆದರೆ ಹೆಚ್ಚು ವಿದ್ಯುತ್ ಬಳಸುತ್ತವೆ. ಇದೆಲ್ಲವನ್ನು ಸೂಕ್ತವಾಗಿ ಪರಿಗಣಿಸಿ ನಿಮ್ಮ ಅಗತ್ಯಕ್ಕೆ ಅನುಗುಣವಾದ ಗೀಸರ್ ಆಯ್ಕೆ ಮಾಡಿರಿ.


Click it and Unblock the Notifications








