ಜಗತ್ತಿಗೆ ಹೊಸ ದಾರಿ ತೋರಿದ ಹಾರುವ ತಟ್ಟೆಗಳು
ಸಿನಿ ಕ್ಷೇತ್ರದಲ್ಲಿ ಒಂದಿಲ್ಲೊಂದು ಸಾಧನೆ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಸಿನಿ ಪ್ರೇಮಿಗಳ ಆಸಕ್ತಿಗೆ ಅನುಗುಣವಾಗಿ ಈ ಚಿತ್ರಗಳು ರೂಪುಗೊಳ್ಳುತ್ತಿದ್ದು ಅಸಾಮಾನ್ಯ ಕಲ್ಪನೆಗಳನ್ನು ಈ ಚಿತ್ರದಲ್ಲಿ ಹೆಣೆದಿರುವುದನ್ನು ನಮಗೆ ಕಾಣಬಹುದು.
ಹಾಲಿವುಡ್ ಜಗತ್ತಿನಲ್ಲಿ ಪ್ರತಿಯೊಂದು ಅಂಶವೂ ಗಮನಾರ್ಹವಾಗುವುದು ವಿಭಿನ್ನ ಕಥೆ ಮತ್ತು ಅನೂಹ್ಯ ಪಾತ್ರಕ್ಕಾಗಿ. ಇಂತಹುದೇ ಏಲಿಯನ್ ಆಧಾರಿತ ಚಿತ್ರಗಳ ಕುರಿತ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ಹೆಚ್ಚು ಜನಪ್ರಿಯಗೊಂಡಿರುವ ಈ ಏಲಿಯನ್ ಚಿತ್ರಗಳು ನಿಜಕ್ಕೂ ನಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವಂತಿದೆ.

ವಾರ್ ಆಫ್ ದ ವರ್ಲ್ಡ್ಸ್
ಏಲಿಯನ್‌ಗಳಿಂದ ತನ್ನ ಮಕ್ಕಳನ್ನು ಕಾಪಾಡುವ ಸಾಮಾನ್ಯ ಮನುಷ್ಯನ ಕಥೆಯನ್ನು ಈ ಚಿತ್ರ ಹೊಂದಿದೆ.

ಮೆನ್ ಇನ್ ಬ್ಲ್ಯಾಕ್
ಕಥೆಯ ನಾಯಕನೇ ಏಲಿಯನ್ ಆಗಿ ಇಲ್ಲಿ ಬದಲಾಗುತ್ತಾನೆ

ಗ್ಯಾಲಕ್ಸಿ ಕ್ವೆಸ್ಟ್
ಸಂಶೋಧನೆಯನ್ನು ನಡೆಸುವುದಕ್ಕಾಗಿ ಒಂದು ತಂಡವು ಗ್ಯಾಲಕ್ಸಿಯನ್ನು ತಲುಪುವ ಕಥೆ ಈ ಚಿತ್ರದಲ್ಲಿದೆ.

ಇನ್‌ವೇಶನ್ ಆಫ್ ದ ಬಾಡಿ ಸ್ನೇಚರ್ಸ್
ವಿಜ್ಞಾನ ಕಥಾ ಹಂದರವನ್ನು ಒಳಗೊಂಡಿರುವ ಈ ಚಿತ್ರ ಕಡಿಮೆ ಬಜೆಟ್‌ನ ಸಸ್ಪೆನ್ಸ್ ಚಿತ್ರ ಎಂದೆನಿಸಿದೆ.

ಕ್ಲೋಸ್ ಎನ್‌ಕೌಂಟರ್ಸ್ ಆಫ್ ದ ಥರ್ಡ್ ಕೈಂಡ್
ಒಬ್ಬ ಇಲೆಕ್ಟ್ರಿಕಲ್ ಲೈನ್‌ಮ್ಯಾನ್ ಏಲಿಯನ್ ಅನ್ನು ಕಾಣುವ ವಿಶಿಷ್ಟ ಕಥಾಹಂದರ ಈ ಚಿತ್ರದಲ್ಲಿದೆ.

ಸೈನ್ಸ್
ಏಲಿಯನ್ ಪಾತ್ರಗಳನ್ನು ಹೊಂದಿರುವ ಈ ಚಿತ್ರ ಹೆಚ್ಚು ಆಸಕ್ತಿಕರವಾಗಿದೆ.

ಇಂಡಿಪೆಂಡೆನ್ಸ್ ಡೇ
ಏಲಿಯನ್ ಸಮುದಾಯ ಭೂಮಿಗೆ ಬರುವ ಕಥೆಯನ್ನು ಹೊಂದಿರುವ ಈ ಚಿತ್ರ ಜಗತ್ತಿನ ಶೋಷಣೆಗೆ ಒಳಪಡುತ್ತದೆ.

ಮಾರ್ಸ್ ಅಟ್ಯಾಕ್ಸ್
ಮಾರ್ಸ್ ಅಟ್ಯಾಕ್ಸ್‌ನಲ್ಲಿ ಪ್ರಧಾನಿಯ ಅಂಗರಕ್ಷಕರಾಗಿ ಏಲಿಯನ್‌ಗಳು ನಟಿಸುವ ಕಥೆಯನ್ನು ಹೊಂದಿದೆ.

ದ ಎಕ್ಸ್ಟ್ರಾ ಟೆರಿಸ್ಟಿರಿಯಲ್
ಏಕಾಂಗಿ ವ್ಯಕ್ತಿಗೆ ಏಲಿಯನ್ ಜೊತೆ ಗೆಳೆತನವಾಗುವ ವಿಭಿನ್ನ ಕಥಾ ಹಂದರ ಈ ಚಿತ್ರದಲ್ಲಿದೆ.

ಏಲಿಯನ್
ಏಲಿಯನ್ ಕಥಾ ಹಂದರವನ್ನೊಳಗೊಂಡಿರು ಏಲಿಯನ್ ಚಿತ್ರ ಹಾಲಿವುಡ್ ಜಗತ್ತಿನಲ್ಲೇ ಅತಿ ವಿಶೇಷ ಎಂದೆನಿಸುವುದು ಗಂಭೀರ ಆಸಕ್ತಿಕರ ಪಾತ್ರಗಳಿಂದಾಗಿದೆ.


Click it and Unblock the Notifications








