Home
ಸುದ್ದಿಜಾಲ

'ವಿವೋ ವಿ50ಇ 5ಜಿ' ಖರೀದಿಸುವ ಗ್ರಾಹಕರಿಗೆ ʻವಿʼ ನಿಂದ ಭರ್ಜರಿ ಆಫರ್!

ಪ್ರಮುಖ ಟೆಲಿಕಾಂ ಆಪರೇಟರ್ ʻವಿʼ (ವೊಡಾಫೊನ್ ಐಡಿಯಾ) ಮತ್ತು ʻವಿವೋ ಇಂಡಿಯಾʼ, ಇತ್ತೀಚೆಗೆ ಬಿಡುಗಡೆಯಾಗಿರುವ 'ವಿವೋ ವಿ50ಇ 5ಜಿʼ ಸ್ಮಾರ್ಟ್‌ಫೋನ್‌ ಸಂಬಂಧಿಸಿದಂತೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಪಾಲುದಾರಿಕೆಯು ʻವಿʼ ಬಳಕೆದಾರರಿಗೆ ವಿಶೇಷವಾದ ಕೊಡುಗೆಗಳ ಯೋಜನೆಯನ್ನು ನೀಡಲಿದೆ. ಈ ಯೋಜನೆಯು ʻವಿʼನ ಹೈಸ್ಪೀಡ್ 5ಜಿ ಸಂಪರ್ಕ ಮತ್ತು ʻವಿ ಮೂವೀಸ್ ಮತ್ತು ಟಿವಿʼಯ 12 ತಿಂಗಳ ಚಂದಾದಾರಿಕೆಯನ್ನು ಒಟ್ಟುಗೂಡಿಸುತ್ತದೆ, ಗ್ರಾಹಕರಿಗೆ ತಡೆರಹಿತ ಡಿಜಿಟಲ್ ಮತ್ತು ಮನರಂಜನಾ ಅನುಭವವನ್ನು ನೀಡುತ್ತದೆ.

ಈ ಜಂಟಿ ಯೋಜನೆಯು ಜೂನ್ 30, 2025 ರವರೆಗೆ ʻವಿವೋ ವಿ50ಇ 5ಜಿʼ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರಿಗೆ ಲಭ್ಯವಿದೆ. ಬಳಕೆದಾರರು ʻವಿʼ ಪ್ರಿಪೇಯ್ಡ್ ಸಿಮ್ ಅನ್ನು ಸಾಧನಕ್ಕೆ ಸೇರಿಸುವ ಮೂಲಕ ಮತ್ತು ವಿಶೇಷವಾಗಿ ಕ್ಯುರೇಟೆಡ್ 1,197 ರೂ.ಗಳ ಯೋಜನೆಯೊಂದಿಗೆ ರೀಚಾರ್ಜ್ ಮಾಡುವ ಮೂಲಕ ಈ ಕೊಡುಗೆಯನ್ನು ಸಕ್ರಿಯಗೊಳಿಸಬಹುದು, ಈ ಯೋಜನೆಯು 84 ದಿನಗಳವರೆಗೆ ಮಾನ್ಯವಾಗಿರುತ್ತದೆ. ಮತ್ತು ಕೊಡುಗೆಯು ಇವುಗಳನ್ನು ಒಳಗೊಂಡಿದೆ:

  • 12 ತಿಂಗಳ ʻವಿ ಮೂವೀಸ್ & ಟಿವಿʼ ಚಂದಾದಾರಿಕೆ
  • ಜಿಯೋ ಹಾಟ್‌ಸ್ಟಾರ್, ಝೀ5, ಸೋನಿ ಲಿವ್‌, ಲಯನ್ಸ್‌ಗೇಟ್‌ ಪ್ಲೇ, ಫ್ಯಾನ್‌ಕೋಡ್ ಸೇರಿದಂತೆ 17 ಒಟಿಟಿ ವೇದಿಕೆಗಳಿಗೆ ಪ್ರವೇಶ
  • 350 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು
  • 3 ಜಿಬಿ ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಸ್

ಭಾರತದಾದ್ಯಂತ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ 5ಜಿ ಮತ್ತು ಪ್ರೀಮಿಯಂ ಮನರಂಜನೆಯನ್ನು ಹೆಚ್ಚು ಲಭ್ಯವಾಗಿಸಲು ಮತ್ತು ಕೈಗೆಟುಕುವಂತೆ ಮಾಡಲು ಈ ಪಾಲುದಾರಿಕೆಯನ್ನು ವಿನ್ಯಾಸಗೊಳಿಸಲಾಗಿದೆ. ʻವಿವೋ ಇಂಡಿಯಾʼದ ಸುಧಾರಿತ ತಂತ್ರಜ್ಞಾನವನ್ನು ʻವಿʼನ ವಿಸ್ತರಿಸುತ್ತಿರುವ 5ಜಿ ಹೆಜ್ಜೆಗುರುತಿನೊಂದಿಗೆ ಇದು ಸಂಯೋಜಿಸುತ್ತದೆ ಎಂದು ಕಂಮಪೆನಿಯು ಹೇಳಿಕೊಂಡಿದೆ. ಹಾಗೂ ಈ ಚಂದಾದಾರಿಕೆ ಸಕ್ರಿಯಗೊಳಿಸುವ ಮಾರ್ಗವನ್ನು ಸಹ ತಿಳಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಈ ಕೆಳಕಂಡಂತಿದ.

ಚಂದಾದಾರಿಕೆ ಸಕ್ರಿಯಗೊಳಿಸುವಿಕೆ ಬಗ್ಗೆ ವಿವರಗಳು:
ಮೊದಲ 1,197 ರೂ.ಗಳ ರೀಚಾರ್ಜ್ ನಂತರ ʻವಿ ಮೂವೀಸ್ ಮತ್ತು ಟಿವಿʼಯ ಮೊದಲ 3 ತಿಂಗಳು ಪ್ಲಾನ್‌ ಸಕ್ರಿಯಗೊಳ್ಳುತ್ತದೆ.
1,197 ರೂ.ಗಳ ಎರಡನೇ, ಮೂರನೇ ಮತ್ತು ನಾಲ್ಕನೇ ರೀಚಾರ್ಜ್‌ಗಳ ನಂತರ (ಖರೀದಿಸಿದ ಒಂದು ವರ್ಷದೊಳಗೆ) ಉಳಿದ 9 ತಿಂಗಳುಗಳನ್ನು ಮೂರು ಸಮಾನ ಕಂತುಗಳಲ್ಲಿ ಜಮಾ ಮಾಡಲಾಗುತ್ತದೆ.

'ವಿವೋ ವಿ50ಇ 5ಜಿ' ಖರೀದಿಸುವ ಗ್ರಾಹಕರಿಗೆ ʻವಿʼ ನಿಂದ ಭರ್ಜರಿ ಆಫರ್!

ಬಂಡಲ್ ಪ್ರಯೋಜನಗಳನ್ನು ಆನಂದಿಸುವುದನ್ನು ಮುಂದುವರಿಸಲು, ಬಳಕೆದಾರರು ತಮ್ಮ ʻವಿʼ ಸಿಮ್ ʻವಿವೋ ವಿ50ಇʼ ಸ್ಮಾರ್ಟ್‌ಫೋನ್‌ನಲ್ಲಿ ಸಕ್ರಿಯವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಮತ್ತು ಅರ್ಹ ಯೋಜನೆಯೊಂದಿಗೆ ಪ್ರತಿ 84 ದಿನಗಳಿಗೊಮ್ಮೆ ರೀಚಾರ್ಜ್ ಮಾಡಬೇಕು. ಅಸ್ತಿತ್ವದಲ್ಲಿರುವ ʻವಿʼ ಬಳಕೆದಾರರು ಮತ್ತು ಹೊಸ ʻವಿʼ ಬಳಕೆದಾರರು ಈ ವಿಶೇಷ ಕೊಡುಗೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಕೊಡುಗೆಯು ವಾರ್ಷಿಕವಾಗಿ 3,000 ರೂ.ಗಳವರೆಗೆ ಉಳಿತಾಯ ಒದಗಿಸುತ್ತದೆ, ಇದು ಹೆಚ್ಚು ಸಂಯೋಜಿತ ಡಿಜಿಟಲ್ ಅನುಭವವನ್ನು ಬಯಸುವ ಬಳಕೆದಾರರಿಗೆ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಕಂಪೆನಿಯು ಹೇಳಿಕೊಂಡಿದೆ..

ʻವಿ ಮೂವಿಸ್ ಮತ್ತು ಟಿವಿʼ ವೇದಿಕೆಗೆ ಪ್ರವೇಶಿಸುವುದು ಹೇಗೆ:
ಮೊಬೈಲ್ ನಲ್ಲಿ
1. Google Play Store ನಿಂದ ʻವಿ ಮೂವೀಸ್ & ಟಿವಿʼ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
2. ʻವಿವೋ ವಿ50ಇʼ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ʻವಿʼ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗ್ ಇನ್ ಆಗಿರಿ.
3. ಸ್ಟ್ರೀಮಿಂಗ್ ಪ್ರಾರಂಭಿಸಿ.

ನಿಮ್ಮ ʻವಿವೋ ವಿ50ಇʼ ಮೊಬೈಲ್‌ನಲ್ಲಿ ಚಂದಾದಾರಿಕೆಯನ್ನು ಸಕ್ರಿಯಗೊಳಿಸಿದ ನಂತರ, ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಮಾರ್ಟ್ ಟಿವಿಯಲ್ಲಿ ಅದೇ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ ಬಳಸಿ ನೀವು ಲಾಗಿನ್ ಮಾಡಬಹುದು:

1. ʻವಿ ಮೂವೀಸ್ & ಟಿವಿ ಅಪ್ಲಿಕೇಶನ್ʼ ಡೌನ್‌ಲೋಡ್ ಮಾಡಿ.
2. ಅದೇ ಮೊಬೈಲ್ ಸಂಖ್ಯೆಯೊಂದಿಗೆ ಲಾಗ್ ಇನ್ ಆಗಿರಿ.
3. ದೊಡ್ಡ ಪರದೆಯಲ್ಲಿ ಕಂಟೆಂಟ್‌ ಅನ್ನು ಆನಂದಿಸಿರಿ.

ದೇಶದ ಪ್ರಮುಖ ನಗರಗಳಲ್ಲಿ ʻವಿʼನ 5ಜಿ ಸೇವೆ ಆರಂಭದೊಂದಿಗೆ ಈ ಸಹಭಾಗಿತ್ವನ್ನು ಜಾರಿಗೊಳಿಸಲಾಗಿದೆ. ಆಗಸ್ಟ್ 2025ರ ವೇಳೆಗೆ ಎಲ್ಲಾ 17 ವಲಯಗಳಿಗೆ ಈ ಸಹಭಾಗಿತ್ವವನ್ನು ವಿಸ್ತರಿಸುವ ಯೊಜನೆಯನ್ನು ಹೊಂದಲಾಗಿದೆ. ಮುಂದಿನ ತಲೆಮಾರಿನ ಸ್ಮಾರ್ಟ್‌ಫೋನ್‌ ನಾವೀನ್ಯತೆ ಮತ್ತು ವೈವಿಧ್ಯಮಯ ಕಂಟೆಂಟ್‌ ಪ್ರವೇಶವನ್ನು ಸಂಯೋಜಿಸುವ ಮೂಲಕ, ʻವಿʼ ಮತ್ತು ʻವಿವೋ ಇಂಡಿಯಾʼ ಹೆಚ್ಚು ಸಂಪರ್ಕಿತ, ಸಮೃದ್ಧ ಮೊಬೈಲ್ ಅನುಭವದೊಂದಿಗೆ ಗ್ರಾಹಕರನ್ನು ಸಬಲೀಕರಣಗೊಳಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ. ʻವಿ ಮೂವೀಸ್ & ಟಿವಿ ʼ ಎಲ್ಲಾ ʻವಿʼ ಚಂದಾದಾರರಿಗೆ ಒಂದೇ ಸೂರಿನಡಿಯ ಮನರಂಜನಾ ತಾಣವಾಗಿದೆ. ʻವಿ ಮೂವೀಸ್ & ಟಿವಿʼ ತನ್ನ ಬಳಕೆದಾರರಿಗೆ ವ್ಯಾಪಕ ಶ್ರೇಣಿಯ ಮನರಂಜನೆಯನ್ನು ಒದಗಿಸುತ್ತದೆ, ಅನೇಕ ಒಟಿಟಿ ಅಪ್ಲಿಕೇಶನ್‌ಗಳು, ಲೈವ್ ಟಿವಿ ಚಾನೆಲ್‌ಗಳು ಮತ್ತು ಹಲವಾರು ಕಂಟೆಂಟ್‌ ಲೈಬ್ರೆರಿಗಳಿಗೆ ಉಚಿತ ಕಾಂಪ್ಲಿಮೆಂಟರಿ ಪ್ರವೇಶವನ್ನು ಒಂದೇ ಅಪ್ಲಿಕೇಶನ್ ಅಡಿಯಲ್ಲಿ ಒದಗಿಸುತ್ತದೆ. ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್‌ನಲ್ಲಿ ಚಿಂತನಶೀಲವಾಗಿ ವಿನ್ಯಾಸಗೊಳಿಸಲಾದ ಪ್ಯಾಕ್‌ಗಳ ಮೂಲಕ ಈ ಸೇವೆಗಳನ್ನು ʻವಿʼ ಒದಗಿಸುತ್ತದೆ ಕಂಪೆನಿ ಹೇಳಿಕೊಂಡಿದೆ. ಇನ್ನು ಏಪ್ರಿಲ್ 17 ಮತ್ತು ಜೂನ್ 30, 2025ರ ನಡುವೆ ʻವಿವೋ ವಿ50ಇ 5ಜಿʼ ಸ್ಮಾರ್ಟ್‌ಫೋನ್‌ ಖರೀದಿಗೆ ಈ ಬಂಡಲ್ ಯೋಜನೆ ಅನ್ವಯಿಸುತ್ತದೆ.

Best Mobiles in India

English summary
Vi and Vivo Collaborate to Provide Exclusive 5G Bundled Plans for Vivo V50e Buyers in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+