Home
ಸುದ್ದಿಜಾಲ

Vi ಆಡ್-ಆನ್ ಫೀಚರ್: ಇನ್ನು ₹299 ಕ್ಕೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿ!

ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ಸಂಸ್ಥೆ ವಿ (Vi), ತನ್ನ ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಪ್ಲಾನ್‌ಗಳಿಗೆ ಅತ್ಯಾಕರ್ಷಕ ಹೊಸ ಆಡ್-ಆನ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯದ ಮೂಲಕ, Vi ಗ್ರಾಹಕರು ಈಗ ತಮ್ಮ ಅಸ್ತಿತ್ವದಲ್ಲಿರುವ ಫ್ಯಾಮಿಲಿ ಪ್ಲಾನ್‌ಗಳಿಗೆ ಪ್ರತಿ ಸದಸ್ಯರಿಗೆ ಕೇವಲ ₹299 ಪಾವತಿಸುವ ಮೂಲಕ ಒಟ್ಟು 8 ಸೆಕೆಂಡರಿ ಸದಸ್ಯರನ್ನು ಸೇರಿಸಿಕೊಳ್ಳಬಹುದು. Vi ಅಪ್ಲಿಕೇಶನ್ ಮೂಲಕ ಕುಟುಂಬ ಸದಸ್ಯರನ್ನು ಸುಲಭವಾಗಿ ಸೇರಿಸಬಹುದಾಗಿದೆ, ಇದು ಎಲ್ಲರಿಗೂ ಉತ್ತಮ ಪ್ರಯೋಜನಗಳನ್ನು ಖಾತ್ರಿಪಡಿಸುತ್ತದೆ. ಈ ಹೊಸ ಆಡ್-ಆನ್ ವೈಶಿಷ್ಟ್ಯವು ಸೇರ್ಪಡೆಗೊಳ್ಳುವ ಪ್ರತಿ ಸದಸ್ಯರಿಗೆ ತಿಂಗಳಿಗೆ 40 GB ಹೈ-ಸ್ಪೀಡ್ ಡೇಟಾವನ್ನು ಒದಗಿಸುತ್ತದೆ ಎಂದು ಕಂಪೆನಿಯು ತಿಳಿಸಿದೆ. ವಿ ಪರಿಚಯಿಸಿರುವ ಆಡ್-ಆನ್ ವೈಶಿಷ್ಟ್ಯದ ಪ್ರಯೋಜನಗಳು ಹಿಗಿವೆ,

ಪ್ರತಿ ಹೊಸ ಸದಸ್ಯರಿಗೆ ₹299 ನಿಗದಿಪಡಿಸಲಾಗಿರುವ ಈ ದರವು ಮಾರುಕಟ್ಟೆಯಲ್ಲಿ ಅತ್ಯಂತ ಸ್ಪರ್ಧಾತ್ಮಕವಾಗಿದೆ, ಇದು ಗ್ರಾಹಕರಿಗೆ ಅತ್ಯುತ್ತಮ ಮೌಲ್ಯ ಮತ್ತು ಪ್ರಯೋಜನವನ್ನು ನೀಡುತ್ತದೆ. ಈ ಪ್ಲಾನ್ Vi ಯ ಪ್ರಸ್ತುತ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಶ್ರೇಣಿಗೆ ಪೂರಕವಾಗಿದ್ದು, ಇದರಲ್ಲಿ 2 ರಿಂದ 5 ಸದಸ್ಯರಿಗೆ ಡೇಟಾ, OTT, ವಾಯ್ಸ್ ಮತ್ತು SMS ಪ್ರಯೋಜನಗಳು ದೊರೆಯುತ್ತವೆ. ಈ ಪ್ಲಾನ್‌ಗಳು ₹701 ರಿಂದ ಆರಂಭವಾಗುತ್ತವೆ. ₹299 ಆಡ್-ಆನ್ ವೈಶಿಷ್ಟ್ಯದ ಪರಿಚಯದೊಂದಿಗೆ, Vi ಗ್ರಾಹಕರು ಈಗ ತಮ್ಮ ಖಾತೆಗೆ 8 ಸೆಕೆಂಡರಿ ಸದಸ್ಯರನ್ನು ಸೇರಿಸಿಕೊಳ್ಳಬಹುದು, ಈ ಮೂಲಕ ಹೆಚ್ಚಿನ ಮೊತ್ತದ ಪ್ಲಾನ್‌ಗೆ ಅಪ್‌ಗ್ರೇಡ್ ಮಾಡದೆಯೇ ಹೆಚ್ಚಿನ ಸೌಲಭ್ಯವನ್ನು ಪಡೆಯಬಹುದಾಗಿದೆ.ಉದಾಹರಣೆಗೆ, Vi ಮ್ಯಾಕ್ಸ್ ಫ್ಯಾಮಿಲಿ ₹701 ಪ್ಲಾನ್ ಈಗ 2 ಕನೆಕ್ಷನ್‌ಗಳನ್ನು (1 ಪ್ರಾಥಮಿಕ ಮತ್ತು 1 ಸೆಕೆಂಡರಿ) ಹೊಂದಬಹುದು. ಈ ಹೊಸ ಆಡ್-ಆನ್ ವೈಶಿಷ್ಟ್ಯದ ಮೂಲಕ, ₹701 ಪ್ಲಾನ್‌ನ ಗ್ರಾಹಕರು ಪ್ರತಿ ಹೊಸ ಸದಸ್ಯರಿಗೆ ತಲಾ ₹299 ನೀಡಿ ಹೆಚ್ಚುವರಿ 7 ಸೆಕೆಂಡರಿ ಸದಸ್ಯರನ್ನು ಸೇರಿಸಿಕೊಳ್ಳಬಹುದು. ವಿ ಪರಿಚಯಿಸಿರುವ ಸಂಪೂರ್ಣ ಪ್ಲಾನ್ ವಿವರಗಳು ಹೀಗಿವೆ.

Vi ಮ್ಯಾಕ್ಸ್ ಫ್ಯಾಮಿಲಿ 701:
* ಸದಸ್ಯರು: 1 ಮೂಲ + 1 ಸೆಕೆಂಡರಿ. 7 ಹೆಚ್ಚುವರಿ ಸದಸ್ಯರನ್ನು ಸೇರಿಸಿಕೊಳ್ಳಬಹುದು.
* ಮೂಲ ಸದಸ್ಯರ ಪ್ರಯೋಜನಗಳು: 70GB + ರಾತ್ರಿ ಅನಿಯಮಿತ ಡೇಟಾ (ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆ) + 200GB ರೋಲ್‌ಓವರ್ ಡೇಟಾ, ಅನಿಯಮಿತ ಕರೆಗಳು ಮತ್ತು 3000 SMS.
* ಸೆಕೆಂಡರಿ ಸದಸ್ಯರ ಪ್ರಯೋಜನಗಳು: 40GB + 200GB ರೋಲ್‌ಓವರ್ ಡೇಟಾ, ಅನಿಯಮಿತ ಕರೆಗಳು ಮತ್ತು 3000 SMS.
* ಇತರೆ ಪ್ರಯೋಜನಗಳು (ಮೂಲ ಸದಸ್ಯರಿಗೆ):
* Vi Movies & TV (3 ತಿಂಗಳ ZEE5, SonyLIV, JioCinema, Hotstar & ಇತರೆ)
* Amazon Prime (6 ತಿಂಗಳ ಟ್ರಯಲ್, ವಾರ್ಷಿಕ ಆಟೋ-ರಿನಿವಲ್)
* JioCinema (1 ವರ್ಷದ ಮೊಬೈಲ್-ಓನ್ಲಿ ಸಬ್‌ಸ್ಕ್ರಿಪ್ಷನ್)
* SonyLIV (365 ದಿನಗಳ ಮೊಬೈಲ್-ಓನ್ಲಿ ಸಬ್‌ಸ್ಕ್ರಿಪ್ಷನ್)
* EaseMyTrip (1 ವರ್ಷಕ್ಕೆ ರಿಟರ್ನ್ ಫ್ಲೈಟ್‌ಗಳಲ್ಲಿ ಪ್ರತಿ ತಿಂಗಳು ₹750 ರಿಯಾಯಿತಿ)
* Norton Security (1 ವರ್ಷದ ಮೊಬೈಲ್ ಸೆಕ್ಯುರಿಟಿ ಉಚಿತ)
* SwiggyOne (1 ವರ್ಷಕ್ಕೆ 2 ಕೂಪನ್‌ಗಳು, ತ್ರೈಮಾಸಿಕ ಸದಸ್ಯತ್ವ)
* EazyDiner (1 ವರ್ಷಕ್ಕೆ 2 ಕೂಪನ್‌ಗಳು, ತ್ರೈಮಾಸಿಕ ಪ್ರೈಮ್ ಸದಸ್ಯತ್ವ)

Vi ಮ್ಯಾಕ್ಸ್ ಫ್ಯಾಮಿಲಿ 1201:
* ಸದಸ್ಯರು: 1 ಮೂಲ + 3 ಸೆಕೆಂಡರಿ. 5 ಹೆಚ್ಚುವರಿ ಸದಸ್ಯರನ್ನು ಸೇರಿಸಿಕೊಳ್ಳಬಹುದು.
* ಮೂಲ ಸದಸ್ಯರ ಪ್ರಯೋಜನಗಳು: 140GB + ರಾತ್ರಿ ಅನಿಯಮಿತ ಡೇಟಾ (ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆ) + 200GB ರೋಲ್‌ಓವರ್ ಡೇಟಾ, ಅನಿಯಮಿತ ಕರೆಗಳು ಮತ್ತು 3000 SMS.
* ಸೆಕೆಂಡರಿ ಸದಸ್ಯರ ಪ್ರಯೋಜನಗಳು: 40GB + 200GB ರೋಲ್‌ಓವರ್ ಡೇಟಾ, ಅನಿಯಮಿತ ಕರೆಗಳು ಮತ್ತು 3000 SMS.
* ಇತರೆ ಪ್ರಯೋಜನಗಳು (ಮೂಲ ಸದಸ್ಯರಿಗೆ):
* Vi Movies & TV (3 ತಿಂಗಳ ZEE5, SonyLIV, JioCinema, Hotstar & ಇತರೆ)
* Amazon Prime (6 ತಿಂಗಳ ಟ್ರಯಲ್, ವಾರ್ಷಿಕ ಆಟೋ-ರಿನಿವಲ್)
* JioCinema (1 ವರ್ಷದ ಮೊಬೈಲ್-ಓನ್ಲಿ ಸಬ್‌ಸ್ಕ್ರಿಪ್ಷನ್)
* SonyLIV (365 ದಿನಗಳ ಮೊಬೈಲ್-ಓನ್ಲಿ ಸಬ್‌ಸ್ಕ್ರಿಪ್ಷನ್)
* EaseMyTrip (1 ವರ್ಷಕ್ಕೆ ರಿಟರ್ನ್ ಫ್ಲೈಟ್‌ಗಳಲ್ಲಿ ಪ್ರತಿ ತಿಂಗಳು ₹750 ರಿಯಾಯಿತಿ)
* Norton Security (1 ವರ್ಷದ ಮೊಬೈಲ್ ಸೆಕ್ಯುರಿಟಿ ಉಚಿತ)
* SwiggyOne (1 ವರ್ಷಕ್ಕೆ 2 ಕೂಪನ್‌ಗಳು, ತ್ರೈಮಾಸಿಕ ಸದಸ್ಯತ್ವ)
* EazyDiner (1 ವರ್ಷಕ್ಕೆ 2 ಕೂಪನ್‌ಗಳು, ತ್ರೈಮಾಸಿಕ ಪ್ರೈಮ್ ಸದಸ್ಯತ್ವ)

Vi ಆಡ್-ಆನ್ ಫೀಚರ್: ಇನ್ನು ₹299 ಕ್ಕೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿ!

Vi ಮ್ಯಾಕ್ಸ್ ಫ್ಯಾಮಿಲಿ 1401:
* ಸದಸ್ಯರು: 1 ಮೂಲ + 4 ಸೆಕೆಂಡರಿ. 4 ಹೆಚ್ಚುವರಿ ಸದಸ್ಯರನ್ನು ಸೇರಿಸಿಕೊಳ್ಳಬಹುದು.
* ಮೂಲ ಸದಸ್ಯರ ಪ್ರಯೋಜನಗಳು: 140GB + ರಾತ್ರಿ ಅನಿಯಮಿತ ಡೇಟಾ (ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆ) + 200GB ರೋಲ್‌ಓವರ್ ಡೇಟಾ. (SMS ಮತ್ತು ಕರೆಗಳ ಮಾಹಿತಿ ಲಭ್ಯವಿಲ್ಲ)
* ಸೆಕೆಂಡರಿ ಸದಸ್ಯರ ಪ್ರಯೋಜನಗಳು: 40GB + 200GB ರೋಲ್‌ಓವರ್ ಡೇಟಾ, ಅನಿಯಮಿತ ಕರೆಗಳು ಮತ್ತು 3000 SMS.
* ಇತರೆ ಪ್ರಯೋಜನಗಳು (ಮೂಲ ಸದಸ್ಯರಿಗೆ):
* Vi Movies & TV (3 ತಿಂಗಳ ZEE5, SonyLIV, JioCinema, Hotstar & ಇತರೆ)
* Amazon Prime (6 ತಿಂಗಳ ಟ್ರಯಲ್, ವಾರ್ಷಿಕ ಆಟೋ-ರಿನಿವಲ್)
* JioCinema (1 ವರ್ಷದ ಮೊಬೈಲ್-ಓನ್ಲಿ ಸಬ್‌ಸ್ಕ್ರಿಪ್ಷನ್)
* SonyLIV (365 ದಿನಗಳ ಮೊಬೈಲ್-ಓನ್ಲಿ ಸಬ್‌ಸ್ಕ್ರಿಪ್ಷನ್)
* EaseMyTrip (1 ವರ್ಷಕ್ಕೆ ರಿಟರ್ನ್ ಫ್ಲೈಟ್‌ಗಳಲ್ಲಿ ಪ್ರತಿ ತಿಂಗಳು ₹750 ರಿಯಾಯಿತಿ)
* Norton Security (1 ವರ್ಷದ ಮೊಬೈಲ್ ಸೆಕ್ಯುರಿಟಿ ಉಚಿತ)
* SwiggyOne (1 ವರ್ಷಕ್ಕೆ 2 ಕೂಪನ್‌ಗಳು, ತ್ರೈಮಾಸಿಕ ಸದಸ್ಯತ್ವ)
* EazyDiner (1 ವರ್ಷಕ್ಕೆ 2 ಕೂಪನ್‌ಗಳು, ತ್ರೈಮಾಸಿಕ ಪ್ರೈಮ್ ಸದಸ್ಯತ್ವ)

Vi ಸಂಸ್ಥೆಯ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳು ಒಂದೇ ಬಿಲ್ಲಿಂಗ್, ವೈಯಕ್ತಿಕ ಡೇಟಾ ಹಂಚಿಕೆ ಮತ್ತು ಗಣನೀಯ ವೆಚ್ಚ ಉಳಿತಾಯದ ಮೂಲಕ ಪ್ಲಾನ್ ಖಾತೆಯ ನಿರ್ವಹಣೆಯನ್ನು ಸುಲಭಗೊಳಿಸುತ್ತವೆ. ಈ ಹೊಸ ವೈಶಿಷ್ಟ್ಯವು ಭಾರತೀಯ ಕುಟುಂಬಗಳ ಬದಲಾಗುತ್ತಿರುವ ಅಗತ್ಯಗಳಿಗೆ ಪ್ರಾಯೋಗಿಕ ಮತ್ತು ಕಸ್ಟಮೈಸ್ ಮಾಡಿದ ಉತ್ಪನ್ನಗಳನ್ನು ಒದಗಿಸುವ Vi ಸಂಸ್ಥೆಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಈ ಹೊಸ ಆಡ್-ಆನ್ ವೈಶಿಷ್ಟ್ಯವು Vi ಗ್ರಾಹಕರಿಗೆ ತಮ್ಮ ಕುಟುಂಬದ ಸಂಪರ್ಕ ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಆರ್ಥಿಕವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ.

Best Mobiles in India

English summary
This new Vi add-on feature offers 40GB of high-speed data each month to every member who enrolls in the plan. The cost for each new member is only ₹299.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+