Home
ಸುದ್ದಿಜಾಲ

ಶಬರಿಮಲೆ ಮಾರ್ಗದಲ್ಲಿ ಪ್ರಯಾಣಿಸುವ VI ಗ್ರಾಹಕರಿಗೆ ಹಲವು ಸೌಲಭ್ಯಗಳು!

ಶಬರಿಮಲೆಯಲ್ಲಿ ತನ್ನ ಅತಿದೊಡ್ಡ ವಾರ್ಷಿಕ ತೀರ್ಥಯಾತ್ರೆಗೆ ಕೇರಳವು ಸನ್ನದ್ಧವಾಗುತ್ತಿದ್ದಂತೆ, ರಾಜ್ಯದ ಪೊಲೀಸ್‌ ಇಲಾಖೆ ಮತ್ತು ಕೇರಳದ ಅತಿದೊಡ್ಡ ದೂರಸಂಪರ್ಕ ಸೇವಾ ಸಂಸ್ಥೆಯಾಗಿರುವ ವಿ (VI-೦vodafone idea) ಅಡೆತಡೆರಹಿತ ಸುರಕ್ಷಿತ ತೀರ್ಥಯಾತ್ರೆ ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಪರಸ್ಪರ ಕೈಜೋಡಿಸಿವೆ. ಇದರ ಫಲವಾಗಿ, ಯಾತ್ರಿಕರು ಮಾರ್ಗದಲ್ಲಿ ಪರಸ್ಪರ ಸಂಪರ್ಕದಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ವಿ ತನ್ನ ಸಂಪರ್ಕ ಮೂಲಸೌಲಭ್ಯಗಳನ್ನು ಸನ್ನಿಧಾನಂ, ಪಂಪಾ ಮತ್ತು ನಿಲಕ್ಕಲ್‌ನಾದ್ಯಂತ ಬಲಪಡಿಸಿದೆ. ಇದು ಎಲ್‌900, ಎಲ್‌1800, ಎಲ್‌2100, ಎಲ್‌2300, ಎಲ್‌2500 ಸ್ಪೆಕ್ಟ್ರಮ್ ಬ್ಯಾಂಡ್‌ಗಳಲ್ಲಿ 70 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್ ನಿಯೋಜಿಸಿದೆ. ಜೊತೆಗೆ, ಮಕ್ಕಳಿಗೆ ಕ್ಯುಆರ್‌-ಕೋಡೆಡ್ ಸುರಕ್ಷತಾ ಮಣಿಕಟ್ಟಿನ ಬ್ಯಾಂಡ್‌ಗಳನ್ನು ಒದಗಿಸುತ್ತಿದೆ.

ಸುಗಮ ಸಂಪರ್ಕ ಖಚಿತಪಡಿಸಿಕೊಳ್ಳಲು ವಿ ಸಂಸ್ಥೆ ತೀರ್ಥಯಾತ್ರೆಯ ದಟ್ಟಣೆಯ ಸಮಯದಲ್ಲಿಯೂ ಸಹ ಬಲವಾದ ಡೇಟಾ ಮತ್ತು ಧ್ವನಿ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಭಾರಿ ಪ್ರಮಾಣದ ಮಿಮೊ (ಎಂಐಎಂಒ) ತಂತ್ರಜ್ಞಾನದೊಂದಿಗೆ ಸುಧಾರಿತ ಎಫ್‌ಡಿಡಿ ಮತ್ತು ಟಿಡಿಡಿ ಲೇಯರ್ಸ್‌ಗಳನ್ನು ನಿಯೋಜಿಸಿದೆ.ಗಣಪತಿ ಕೋವಿಲ್, ನಡಪ್ಪಂತಲ್, ಆಡಳಿತ ಕಚೇರಿಗಳು, ಪಂಪಾ-ಸನ್ನಿಧಾನಂ ಚಾರಣ ಮಾರ್ಗ ಮತ್ತು ನಿಲಕ್ಕಲ್ ಪಾರ್ಕಿಂಗ್ ಮತ್ತು ಬಸ್ ನಿಲ್ದಾಣದಲ್ಲಿ ಮೊಬೈಲ್‌ ಸಂಪರ್ಕ ಸೇವೆಯನ್ನು ಗಣನೀಯವಾಗಿ ಬಲಪಡಿಸಲಾಗಿದೆ, ಭಕ್ತರು ತಮ್ಮ ಕುಟುಂಬದ ಸದಸ್ಯರ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಲು, ಮಾಹಿತಿಯನ್ನು ಪಡೆಯಲು ಮತ್ತು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಯಾವುದೇ ಅಡೆತಡೆಯಿಲ್ಲದೆ ಹಂಚಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ ಎಂದು ಕಂಪೆನಿ ತಿಳಿಸಿದೆ.

ಶಬರಿಮಲೆ ಮಾರ್ಗದಲ್ಲಿ ಪ್ರಯಾಣಿಸುವ VI ಗ್ರಾಹಕರಿಗೆ ಹಲವು ಸೌಲಭ್ಯಗಳು!

ವಿ ಸುರಕ್ಷಾ: ಮಕ್ಕಳ ರಕ್ಷಣೆಗೆ ಕ್ಯುಆರ್‌-ಕೋಡೆಡ್ ಸುರಕ್ಷತಾ ಮಣಿಕಟ್ಟು
ಕಳೆದ ವರ್ಷದ ವಿ ಸುರಕ್ಷಾ ಉಪಕ್ರಮಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿ ಮತ್ತೊಮ್ಮೆ ಕೇರಳ ಪೊಲೀಸ್‌ ಇಲಾಖೆಯ ಜೊತೆ ಪಾಲುದಾರಿಕೆ ಮಾಡಿಕೊಂಡು ಮಕ್ಕಳಿಗೆ ಕ್ಯುಆರ್‌-ಕೋಡೆಡ್ ಸುರಕ್ಷತಾ ಮಣಿಕಟ್ಟಿನ ಬ್ಯಾಂಡ್‌ಗಳನ್ನು ಒದಗಿಸುತ್ತಿದೆ. ಪ್ರತಿಯೊಂದು ಮಣಿಕಟ್ಟಿನ ಬ್ಯಾಂಡ್ ಅನ್ನು ಪೋಷಕರ ಮೊಬೈಲ್‌ ಜೊತೆಗೆ ಸಂಪರ್ಕ ಕಲ್ಪಿಸಲಾಗಿದ್ದು, ಕಳೆದುಹೋದ ಮಕ್ಕಳನ್ನು ಅವರ ಕುಟುಂಬಗಳೊಂದಿಗೆ ತ್ವರಿತವಾಗಿ ಮತ್ತೆ ಸೇರಿಸಲು ಇದು ಪೊಲೀಸರಿಗೆ ನೆರವಾಗಲಿದೆ.ಈ ವರ್ಷ ವಿ ಸರಳೀಕೃತ ಪೂರ್ವ-ನೋಂದಣಿ ಪ್ರಕ್ರಿಯೆ ಪರಿಚಯಿಸಿದೆ. ಕುಟುಂಬಗಳು ಬೇಸ್ ಕ್ಯಾಂಪ್ ತಲುಪುವ ಮೊದಲೇ ನೋಂದಾಯಿಸಿಕೊಳ್ಳಲು ಮತ್ತು ಪಂಬಾ ಬೇಸ್ ಕ್ಯಾಂಪ್‌ನಲ್ಲಿರುವ ಯಾವುದೇ ವಿ ಸುರಕ್ಷಾ ಕಿಯೋಸ್ಕ್‌ಗಳಿಂದ ಸುರಕ್ಷತಾ ಬ್ಯಾಂಡ್‌ಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ:

ಪಾಲಕರು / ಪೋಷಕರು www.visuraksha.online ಗೆ ಲಾಗಿನ್ ಆಗುವ ಮೂಲಕ ಅಥವಾ ಕೇರಳದಾದ್ಯಂತ ಯಾವುದೇ ವಿ ಸ್ಟೋರ್ ಅಥವಾ ವಿ ಮಿನಿ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ತಮ್ಮ ಮಕ್ಕಳನ್ನು ವಿ ಸುರಕ್ಷಾ ರಿಸ್ಟ್ ಬ್ಯಾಂಡ್‌ಗಾಗಿ ಮೊದಲೇ ನೋಂದಾಯಿಸಿಕೊಳ್ಳಬಹುದು ಮತ್ತು ಶಬರಿಮಲೆ ತೀರ್ಥಯಾತ್ರೆಯನ್ನು ಕೈಗೊಳ್ಳುವ ಮೊದಲು ಡಿಜಿಟಲ್ ನೋಂದಣಿ ಐಡಿ ಪಡೆದುಕೊಳ್ಳಬಹುದು.

ಶಬರಿಮಲೆ ಮಾರ್ಗದಲ್ಲಿ ಪ್ರಯಾಣಿಸುವ VI ಗ್ರಾಹಕರಿಗೆ ಹಲವು ಸೌಲಭ್ಯಗಳು!

ತೀರ್ಥಯಾತ್ರೆಯ ಸಮಯದಲ್ಲಿ, ಪೋಷಕರು ಪಂಬಾ ಬೇಸ್ ಕ್ಯಾಂಪ್‌ನಲ್ಲಿರುವ ಯಾವುದೇ ವಿ ಸುರಕ್ಷಾ ಕಿಯೋಸ್ಕ್‌ಗಳಲ್ಲಿ ಡಿಜಿಟಲ್ ನೋಂದಣಿ ಐಡಿಯನ್ನು ತೋರಿಸಬಹುದು ಮತ್ತು ಈಗಾಗಲೇ ಅವರ ಮೊಬೈಲ್‌ ಸಂಖ್ಯೆಯೊಂದಿಗೆ ಸಂಪರ್ಕ ಕಲ್ಪಿಸಿದ ಕ್ಯುಆರ್-ಕೋಡೆಡ್ ರಿಸ್ಟ್‌ಬ್ಯಾಂಡ್‌ಗಳನ್ನು ಪಡೆದುಕೊಳ್ಳಬಹುದುಈ ಸೌಲಭ್ಯವು ಉಚಿತವಾಗಿದೆ ಮತ್ತು ಎಲ್ಲಾ ಯಾತ್ರಿಕರಿಗೆ ಲಭ್ಯ ಇರಲಿದೆ.

ಈ ಸೌಲಭ್ಯವು ಕೇರಳದಾದ್ಯಂತದ ಎಲ್ಲಾ 25 ವಿ ಸ್ಟೋರ್‌ಗಳು ಮತ್ತು 103 ವಿ ಮಿನಿ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ, ಪಂಬಾದಲ್ಲಿ 3 ವಿ ಸುರಕ್ಷಾ ಕಿಯೋಸ್ಕ್‌ಗಳನ್ನು ವರ್ಚುವಲ್ ಕ್ಯೂ ಕಿಯೋಸ್ಕ್‌ಗಳ ಪಕ್ಕದಲ್ಲಿಯೇ ಸ್ಥಾಪಿಸಲಾಗಿದೆ.ಕಳೆದ ವರ್ಷ, ವಿ 20,000 ಕ್ಕೂ ಹೆಚ್ಚು ವಿ ಸುರಕ್ಷಾ ಮಣಿಕಟ್ಟಿನ ಬ್ಯಾಂಡ್‌ಗಳನ್ನು ವಿತರಿಸಿತ್ತು. ಇದು ಯಾತ್ರೆಯ ಸಮಯದಲ್ಲಿ ಕಾಣೆಯಾದ 150ಕ್ಕೂ ಹೆಚ್ಚು ಮಕ್ಕಳನ್ನು ಅವರ ಕುಟುಂಬಗಳ ಜೊತೆಗೆ ಮತ್ತೆ ಸೇರಿಸಲು ಕೇರಳ ಪೊಲೀಸರಿಗೆ ಸಹಾಯ ಮಾಡಿತ್ತು ಎಂದು ಕಂಪೆನಿಯು ಹೇಳಿಕೊಂಡಿದೆ. .

ಹಲವಾರು ವರ್ಷಗಳಿಂದ, ಕೇರಳ ಪೊಲೀಸರು ಮಕ್ಕಳ ಯಾತ್ರಿಕರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದ್ದಾರೆ. ಕಳೆದ ವರ್ಷ ಒಟ್ಟು ಯಾತ್ರಿಕರಲ್ಲಿ ಶೇಕಡ 10 ರಿಂದ 15ರಷ್ಟು ಮಕ್ಕಳು ಇದ್ದರು. ಪ್ರತಿ ಬಾರಿಯೂ ಕೇರಳ ಪೊಲೀಸರಿಗೆ ಕಾಣೆಯಾದ ಮಕ್ಕಳ ನೂರಾರು ಪ್ರಕರಣಗಳ ದೂರು ದಾಖಲಾಗುತ್ತವೆ. ವಿ ಸುರಕ್ಷಾ ಕ್ಯೂಆರ್ ಕೋಡ್ ಬ್ಯಾಂಡ್‌ಗಳು ಬೇರ್ಪಟ್ಟ ಮಕ್ಕಳನ್ನು ಪತ್ತೆಹಚ್ಚುವಲ್ಲಿ ಗಮನಾರ್ಹವಾಗಿ ಸಹಾಯವಾಗಿವೆ. ಹಾಗಾಗಿ, ನೀವು ಕೂಡ ಶಬರಿಮಲೆಗೆ ಪ್ರಯಾಣಿಸುತ್ತಿದ್ದರೆ, ಈ ಸೇವೆಯನ್ನು ಬಳಸಿಕೊಳ್ಳಬಹುದು.

Best Mobiles in India

English summary
Vi has upgraded its network on the Sabarimala route and opened pre-registration for Vi Suraksha wristbands, offering improved connectivity and added safety for children during the pilgrimage. check here for more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+