Home
ಸುದ್ದಿಜಾಲ

VI; ತನ್ನ ಯೋಜನೆಗಳಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ ನೀಡಲು ಮುಂದಾದ ವಿಐ ! ಏನೆಲ್ಲಾ ಪ್ರಯೋಜನಗಳು ಸಿಗಲಿವೆ ?

ಓಟಿಟಿ ಪ್ಲಾಟ್‌ಫಾರ್ಮ್‌ಗಳ ಕಡೆ ಜನರು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿ ವಾಲುತ್ತಿದ್ದು, ಅದರಂತೆ ಟೆಲಿಕಾಂ ಸಂಸ್ಥೆಗಳು ಸಹ ಈ ಬಗ್ಗೆ ಹೆಚ್ಚು ಗಮನ ಹರಿಸಿವೆ, ತಮ್ಮ ವಿಶೇಷ ರೀಚಾರ್ಜ್‌ ಪ್ಲ್ಯಾನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿವೆ. ಇದೀಗ ವೊಡಾಫೋನ್ ಐಡಿಯಾ (Vodafone Idea) ನೆಟ್‌ಫ್ಲಿಕ್ಸ್‌ ಜೊತೆ ಪಾಲುದಾರಿಗೆ ಹೊಂದಿರುವ ಅಂಶ ಬೆಳಕಿಗೆ ಬಂದಿದೆ. ಹಾಗಿದ್ರೆ ಬನ್ನಿ ಈ ಪಾಲುದಾರಿಕೆಯಿಂದ ಗ್ರಾಹಕರಿಗೆ ಏನೆಲ್ಲಾ ಅನುಕೂಲತೆಗಳಿವೆ, ಯಾವೆಲ್ಲಾ ಕೊಡುಗೆಗಳು ಸಿಗಲಿವೆ ಎಂಬುದನ್ನು ತಿಳಿಯೋಣ.

ವಿಐ (VI) ಎಂದು ಕರೆಯಲ್ಪಡುವ ವೊಡಾಫೋನ್ ಐಡಿಯಾ ನೆಟ್‌ಫ್ಲಿಕ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿರುವುದಾಗಿ ಘೋಷಿಸಿದೆ. ಈ ಪಾಲುದಾರಿಕೆಯ ಭಾಗವಾಗಿ ವಿಐ ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ ಪೇಯ್ಡ್ ಯೋಜನೆಗಳಿಗೆ ನೆಟ್‌ಫ್ಲಿಕ್ಸ್ (Netflix) ಚಂದಾದಾರಿಕೆ ತರಲು ಯೋಜನೆ ರೂಪಿಸುತ್ತಿದೆ. ವೊಡಾಫೋನ್ ಐಡಿಯಾ ನೆಟ್‌ಫ್ಲಿಕ್ಸ್ ( Vodafone Idea Netflix) ಚಂದಾದಾರಿಕೆಯೊಂದಿಗೆ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಘೋಷಿಸಿದ್ದು, ಕಂಪನಿಯು ಶೀಘ್ರದಲ್ಲೇ ತನ್ನ ಪೋಸ್ಟ್‌ ಪೇಯ್ಡ್ ಯೋಜನೆಗಳಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ ತರಲಿದೆ ಎಂದು ತಿಳಿಸಿದೆ.

VI: ತನ್ನ ಯೋಜನೆಗಳಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ ನೀಡಲು ಮುಂದಾದ ವಿಐ !

ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ವೊಡಾಫೋನ್ ಐಡಿಯಾ ರೂ 998 ಪ್ರಿಪೇಯ್ಡ್ ಯೋಜನೆ:

ಈ ಯೋಜನೆ ಪಡೆಯಲು 998 ರೂ. ವೆಚ್ಚವಾಗುತ್ತದೆ ಮತ್ತು ಇದರ ಅವಧಿ 70 ದಿನಗಳಾಗಿದೆ. ಈ ಯೋಜನೆಯಲ್ಲಿ ದಿನಕ್ಕೆ 1.5GB ಡೇ ನೀಡುಲಿದ್ದು, ಒಟ್ಟಾರೆ 105GB ಡೇಟಾವನ್ನು ಸಿಗಲಿದೆ. ಇದರ ಜೊತೆಗೆ ಅನಿಯಮಿತ ಡೆಟಾ ಜೊತೆಗೆ ದಿನಕ್ಕೆ 100 SMS ನೀಡಲಿದೆ. ಈ ಯೋಜನೆಯು ಟಿವಿ ಅಥವಾ ಮೊಬೈಲ್‌ನಲ್ಲಿ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆಯನ್ನು ಸಹ ನೀಡುತ್ತದೆ. ಈ ಪ್ಲಾನ್ ಮುಂಬೈ ಮತ್ತು ಗುಜಾರಾತ್‌ ವಲಯಗಳಲ್ಲಿ 1,099 ರೂ, ಗಳಲ್ಲಿ ಲಭ್ಯವಿದೆ.

ನೆಟ್‌ಫ್ಲಿಕ್ಸ್ ಚಂದಾದಾರಿಕೆ ಜೊತೆಗೆ ವಿಡಾಫೋನ್ ಐಡಿಯಾದ 1399 ರೂ. ಪ್ರಿಪೇಯ್ಡ್ ಪ್ಲಾನ್:

ಈ ಯೋಜನೆಯನ್ನು ಪಡೆಯಲು 1399 ರೂ. ವೆಚ್ಚವಾಗುತ್ತದೆ ಮತ್ತು ಇದು 84 ದಿನಗಳ ಮಾನ್ಯತೆ ಪಡೆದಿರಲಿದೆ. ಈ ಯೋಜನೆಯಲ್ಲಿ ದಿನಕ್ಕೆ 2.5GB ಡೇಟಾ ಪಡೆಯಬಹುದು. ಈ ಯೋಜನೆಯ ಒಟ್ಟು ಅವಧಿಯಲ್ಲಿ 210GB ಡೇಟಾವನ್ನು ನೀಡುತ್ತದೆ. ಇದರ ಜೊತೆಗೆ ಇದು ಅನಿಯಮಿತ ಡೇಟಾದೊಂದಿಗೆ ದಿನಕ್ಕೆ 100 SMS ಅನ್ನು ನೀಡಲಿದೆ. ಈ ಯೋಜನೆಯು ಟಿವಿ ಅಥವಾ ಮೊಬೈಲ್‌ನಲ್ಲಿ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆ ನೀಡುತ್ತದೆ.

ಇನ್ನೂ ಹೆಚ್ಚಾಗಿ 84 ದಿನಗಳ ವ್ಯಾಲಿಡಿಟಿ ಪ್ಲಾನ್ ಪಡೆಯುವ ಚಂದಾದಾರರು ಡೇಟಾ ಡಿಲೈಟ್, ನೈಟ್ ಬಿಂಜ್ ಮತ್ತು ವೀಕೆಂಡ್ ಡೇಟಾ ರೋಲ್ ಓವರ್ ಅನ್ನು ಒಳಗೊಂಡಿರುವ ಪ್ರಮುಖ ಹೀರೋ ಪ್ರೊಪೋಷನ್ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂದು ವಿಐ ತಿಳಿಸಿದೆ.

ಡೇಟಾ ವಿನ್ಯಾಸವು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪ್ರತೀ ತಿಂಗಳು 2GB ವರೆಗಿನ ಬ್ಯಾಕಪ್ ಡೇಟಾವನ್ನು ನೀಡಲಿದೆ. ಇದನ್ನು ವಿಐ ಆಪ್‌ ಮೂಲಕ ಅಥವಾ 121249 ಗೆ ಕರೆ ಮಾಡುವ ಮೂಲಕ ಕ್ಲೈಮ್ ಮಾಡಿಕೊಳ್ಳಬಹುದಾಗಿದೆ. ಮತ್ತೊಂದೆಡೆ, ಬಿಂಗೆ ಆಲ್‌ ನೈಟ್ (Binge All Night) ವೈಶಿಷ್ಟ್ಯವು ಯಾವುದೇ ಹೆಚ್ಚುವರಿ ವೆಚ್ಚವನ್ನು ಪಾವತಿಸದೆ ಡೇಟಾ ಪ್ಯಾಕ್‌ನಿಂದ ಯಾವುದೇ ಪ್ಯಾಕ್ ಕಡಿತವಿಲ್ಲದೆ 12AM ನಿಂದ 6AM ವರೆಗೆ ಸರ್ಫ್, ಸ್ಟ್ರೀಮ್ ಮಾಡಲು ಮತ್ತು ಕಂಟೆಂಟ್‌ಗಳನ್ನು ಹಂಚಿಕೊಳ್ಳಲು ಚಂದಾದಾರರಿಗೆ ಅನುಮತಿಸುತ್ತದೆ.

ಪ್ರತ್ಯೇಕವಾಗಿ ವೊಡಾಫೋನ್ ಐಡಿಯಾ ತನ್ನ 75 ರೂ. ಮೌಲ್ಯದ ಪ್ಯಾಕ್‌ನೊಂದಿಗೆ 25 ಪರ್ಸೆಂಟ್ ಹೆಚ್ಚುವರಿ ಡೇಟಾ ನೀಡುತ್ತಿದೆ. ಸರಳವಾಗಿ ಹೇಳುವುದಾದರೆ, ಈ ಆಫರ್ ಲಭ್ಯವಿರುವ ಸಮಯಕ್ಕೆ ಈ ಯೋಜನೆಯು 6GB ಡೇಟಾ ಬದಲಿಗೆ 7.5GB ಡೇಟಾವನ್ನು ನೀಡುತ್ತದೆ. ಇದು 7 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಆದಾಗ್ಯೂ, ಇದು ಯಾವುದೇ ಧ್ವನಿ ಕರೆ ಪ್ರಯೋಜನಗಳನ್ನು ಅಥವಾ ಹೊರಹೋಗುವ SMS ಅನ್ನು ನೀಡುವುದಿಲ್ಲ.

Best Mobiles in India

English summary
Vodafone Idea, known as VI, has announced a partnership with Netflix. As part of this partnership, Vi plans to bring Netflix subscriptions to its prepaid and postpaid plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+