ಐಪಿಎಲ್ 2020: ವಿ ಟೆಲಿಕಾಂನಿಂದ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಲಾಂಚ್‌!

|

ವಿ ಟೆಲಿಕಾಂ ಭಾರತದ ಅಗ್ರ ಮೂರು ಟೆಲಿಕಾಂಗಳಲ್ಲಿ ಒಂದೆನಿಸಿಕೊಂಡಿದೆ. ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂಗಳ ಪ್ರಬಲ ಸ್ಪರ್ಧೆಯ ನಡುವೆಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬರುತ್ತಿದೆ. ಇನ್ನು ತನ್ನ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ಶುರುವಾಗಿರುವುದರಿಂದ ಡಿಸ್ನಿ+ ಹಾಟ್‌ಸ್ಟಾರ್ ಗೆ ಪ್ರವೇಶ ನೀಡುವ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಈ ಪ್ರಿಪೇಯ್ಡ್‌ ಪ್ಲಾನ್‌ಗಳು 499ರೂ. ಮತ್ತು 1,066ರೂ. ಬೆಲೆಯನ್ನು ಹೊಂದಿವೆ.

ಐಪಿಎಲ್‌ 2022

ಹೌದು, ಐಪಿಎಲ್‌ 2022 ಪ್ರಾರಂಭವಾಗ್ತಿದ್ದ ಹಾಗೇ ಟೆಲಿಕಾಂ ಕಂಪೆನಿಗಳು ಹೊಸ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಿವೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಐಪಿಎಲ್‌ ವೀಕ್ಷಿಸುವುದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಪ್ಲಾನ್‌ಗಳು ಮಹತ್ವ ಪಡೆದುಕೊಂಡಿವೆ. ಸದ್ಯ ವಿ ಟೆಲಿಕಾಂ ಪರಿಚಯಿಸಿರುವ ಎರಡು ಪ್ರಿಪೇಯ್ಡ್‌ ಪ್ಲಾನ್‌ಗಳು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ ಒಂದು ವರ್ಷದ ಚಂದಾದಾರಿಕೆಯೊಂದಿಗೆ ಬರುತ್ತವೆ. ಹಾಗಾದ್ರೆ ಈ ಎರಡು ಪ್ಲಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿ ಟೆಲಿಕಾಂ 499ರೂ.ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂ 499ರೂ.ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂನ 499ರೂ. ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಅವಧಿಯಲ್ಲಿ ದೈನಂದಿನ 2GB ಡೇಟಾವನ್ನು ನೀಡುತ್ತದೆ. ಅಲ್ಲದೆ ಬಳಕೆದಾರರು ಅನಿಯಮಿತ ಧ್ವನಿ ಕರೆಗಳು ಹಾಗೂ ದಿನಕ್ಕೆ 100 SMS ಪ್ರಯೋಜನ ಪಡೆಯಲಿದ್ದಾರೆ. ಇನ್ನು ಈ ಯೋಜನೆಯು ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡಲಿದೆ.

ವಿ ಟೆಲಿಕಾಂ 1,066ರೂ. ಪ್ರಿಪೇಯ್ಡ್ ಪ್ಲಾನ್‌

ವಿ ಟೆಲಿಕಾಂ 1,066ರೂ. ಪ್ರಿಪೇಯ್ಡ್ ಪ್ಲಾನ್‌

ವಿ ಟೆಲಿಕಾಂನ 1,066ರೂ. ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದು ದಿನನಿತ್ಯ 2GB ಡೇಟಾ ಹಾಗೂ ಅನಿಯಮಿತ ಧ್ವನಿ ಕರೆ ಪ್ರಯೋಜನ ನೀಡಲಿದೆ. ಇದಲ್ಲದೆ ದಿನನಿತ್ಯ 100 SMS ಸೌಲಭ್ಯ ಕೂಡ ಲಭ್ಯವಿದೆ. ಈ ಪ್ಲಾನ್‌ನಲ್ಲಿ ಕೂಡ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ದೊರೆಯಲಿದೆ.

ವಿ ಟೆಲಿಕಾಂ 601 ಪ್ರಿಪೇಯ್ಡ್‌ ಪ್ಲಾನ್

ವಿ ಟೆಲಿಕಾಂ 601 ಪ್ರಿಪೇಯ್ಡ್‌ ಪ್ಲಾನ್

ಈ ಪ್ಲಾನ್‌ ದೈನಂದಿನ 3GB ಡೇಟಾ ಪ್ರಯೋಜನ ನೀಡಲಿದ್ದು, 28 ​​ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರೊಂದಿಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಸೌಲಭ್ಯ ಕೂಡ ಲಭ್ಯವಾಗಲಿದೆ. ಜೊತೆಗೆ ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

ಟೆಲಿಕಾಂ

ಸದ್ಯ ವಿ ಟೆಲಿಕಾಂ ಹೊಸದಾಗಿ ಪರಿಚಯಿಸಿರುವ ಎರಡೂ ಪ್ರಿಪೇಯ್ಡ್‌ ಪ್ಲಾನ್‌ಗಳು IPL ಪಂದ್ಯಾವಳಿಯನ್ನು ವೀಕ್ಷಿಸಲು ಬಳಕೆದಾರರಿಗೆ ಅವಕಾಶ ನೀಡುತ್ತವೆ. ಜೊತೆಗೆ ಇತರ ಲೈವ್ ಕ್ರೀಡಾ ಪಂದ್ಯಗಳಿಗೆ ಪ್ರವೇಶದೊಂದಿಗೆ ಇಂಗ್ಲಿಷ್ ಪ್ರೀಮಿಯರ್ ಲೀಗ್, ಹಾಗೆಯೇ ಇತರ ಹಾಟ್‌ಸ್ಟಾರ್ ವಿಶೇಷತೆಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಿದೆ. ಈ ಎರಡೂ ಯೋಜನೆಗಳು ಪ್ರಸ್ತುತ Vi ಅಪ್ಲಿಕೇಶನ್ ಮತ್ತು Vi ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಜಿಯೋ

ಇನ್ನು ವಿ ಟೆಲಿಕಾಂಗಿಂತ ಮೊದಲು ಜಿಯೋ ಕೂಡ ಐಪಿಎಲ್‌ಗೆ ವಿಶೇಷವಾಗಿ 279ರೂ. ಬೆಲೆಯ ಕ್ರಿಕೆಟ್ ಆಡ್-ಆನ್ ಪ್ರಿಪೇಯ್ಡ್ ಪ್ಲಾನ್‌ ಪರಿಚಯಿಸಿದೆ. ಈ ಪ್ಲಾನ್‌ ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡಲಿದೆ. ಇದು ಒಟ್ಟು 15GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ಅಲ್ಲದೆ ನೀವು ಈ ಯೋಜನೆಯನ್ನು ಖರೀದಿಸಿದರೆ, ಈಗಾಗಲೇ ನಿಮ್ಮ ಅಸ್ತಿತ್ವದಲ್ಲಿರುವ ಪ್ರಿಪೇಯ್ಡ್ ಯೋಜನೆ ಅವಧಿ ಮುಗಿಯುವವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಇನ್ನು ಈ ಈ ಕ್ರಿಕೆಟ್ ಪ್ರಿಪೇಯ್ಡ್ ಪ್ಲಾನ್‌ ಎಲ್ಲರಿಗೂ ಲಭ್ಯವಿಲ್ಲ, ಬದಲಿಗೆ ಕೆಲವೇ ಕೆಲ ಆಯ್ದ ಬಳಕೆದಾರರಿಗೆ ಇದು ಲಭ್ಯವಿದೆ. ಕೆಲವು ಆಯ್ದ ಮಂದಿಗಳ ಲಿಸ್ಟ್‌ನಲ್ಲಿ ನೀವು ಕೂಡ ಸೇರಿದ್ದರೆ MyJio ಅಪ್ಲಿಕೇಶನ್‌ನಲ್ಲಿ ಈ ಪ್ಲಾನ್‌ ನಿಮಗೆ ಲಭ್ಯವಾಗಲಿದೆ.

Best Mobiles in India

English summary
Vi has introduced two new prepaid plans that come with Disney+ Hotstar Mobile Subscription

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X