ವಿ ಟೆಲಿಕಾಂನ ಈ ಪ್ಲ್ಯಾನ್‌ನಲ್ಲಿ ನಿಮಗೆ ಅನ್‌ಲಿಮಿಟೆಡ್‌ ಡೇಟಾ ದೊರೆಯಲಿದೆ!

|

ಪ್ರಸ್ತುತ ದೇಶದಲ್ಲಿ ಖಾಸಗಿ ಟೆಲಿಕಾಂಗಳು ದರ್ಭಾರ್‌ ನಡೆಸುತ್ತಿವೆ. ಕಡಿಮೆ ಬೆಲೆಯಲ್ಲಿ ಅಧಿಕ ಡೇಟಾ, ಅನಿಯಮಿತ ಕರೆ ಸೌಲಭ್ಯಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿವೆ. ಆ ಪೈಕಿ ವಿ ಟೆಲಿಕಾಂ ಸಹ ಹಲವು ರೀಚಾರ್ಜ್ ಆಯ್ಕೆಗಳನ್ನು ತನ್ನ ಚಂದಾದಾರರಿಗೆ ಒದಗಿಸಿದ್ದು, ಅವುಗಳಲ್ಲಿ ಅಗ್ಗದ ಬೆಲೆಯ ಪ್ಲ್ಯಾನ್‌ಗಳೊಂದಿಗೆ ದುಬಾರಿ ಬೆಲೆಯ ಪ್ಲ್ಯಾನ್‌ಗಳು ಸೇರಿವೆ. ಸದ್ಯ ಇದೀಗ ವಿ ಟೆಲಿಕಾಂ ಹೊಸದಾಗಿ 267 ರೂ, ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸಿದೆ. ಇದು ಟೆಲಿಕಾಂ ಆಪರೇಟರ್‌ನ ಮತ್ತೊಂದು ಡೇಟಾ ಬಲ್ಕ್ ಪ್ಯಾಕ್ ಆಗಿದೆ.

ವೊಡಾಫೋನ್‌ಐಡಿಯಾ

ಹೌದು, ವೊಡಾಫೋನ್‌ಐಡಿಯಾ ಹೊಸದಾಗಿ 267 ರೂ, ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ ಪರಿಚಯಿಸಿದೆ. ಈ ಪ್ಲ್ಯಾನ್‌ನಲ್ಲಿ ನ್ಯಾಯಯುತ ಬಳಕೆಯ ನೀತಿ (ಎಫ್‌ಯುಪಿ) ನಿರ್ಬಂಧಗಳಿಲ್ಲದೆ ಗ್ರಾಹಕರು ಒಟ್ಟು 25 GB ಡೇಟಾವನ್ನು ಪಡೆಯುತ್ತಾರೆ. ಅಂದರೆ ಡೇಟಾದ ಮೇಲೆ ಯಾವುದೇ ಮಿತಿಯಿಲ್ಲ ಮತ್ತು ನೀವು ಒಂದು ದಿನದಲ್ಲಿ ನಿಮಗೆ ಬೇಕಾದಷ್ಟು ಡೇಟಾವನ್ನು ಬಳಸಬಹುದು. ಹಾಗಾದ್ರೆ 267ರೂ, ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳು ಏನೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಿ 267 ರೂ ಪ್ರೀಪೇಯ್ಡ್ ಪ್ಲ್ಯಾನ್‌

ವಿ 267 ರೂ ಪ್ರೀಪೇಯ್ಡ್ ಪ್ಲ್ಯಾನ್‌

ವಿ 267 ರೂ ಪ್ರೀಪೇಯ್ಡ್ ಯೋಜನೆಯಲ್ಲಿ 25GB ಡೇಟಾವನ್ನು ಹೊರತುಪಡಿಸಿ ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ನೀಡುತ್ತಿದೆ. ಈ ರೀಚಾರ್ಜ್‌ ಪ್ಯಾಕ್ 30 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಸಂದೇಶಗಳನ್ನು ಸಹ ಒಳಗೊಂಡಿದೆ. ಬಳಕೆದಾರರು ವಿ ಮೂವೀಸ್ ಮತ್ತು ಟಿವಿ ಅಪ್ಲಿಕೇಶನ್‌ಗೆ ಪ್ರವೇಶವನ್ನು ಪಡೆಯುತ್ತಾರೆ. ಇದು ಎಲ್ಲಾ ವಲಯಗಳಲ್ಲಿ ಲಭ್ಯವಿದೆ, ಈ ಪ್ರಿಪೇಯ್ಡ್ ಯೋಜನೆಯನ್ನು ಗೂಗಲ್ ಪೇ ಅಥವಾ ಪೇಟಿಎಂ ಮೂಲಕವೂ ಖರೀದಿಸಬಹುದು.

ವಿ 267 ರೂ ಪ್ಲ್ಯಾನ್‌ vs ಜಿಯೋ 247ರೂ ಪ್ಲ್ಯಾನ್‌

ವಿ 267 ರೂ ಪ್ಲ್ಯಾನ್‌ vs ಜಿಯೋ 247ರೂ ಪ್ಲ್ಯಾನ್‌

ರಿಲಯನ್ಸ್ ಜಿಯೋ ಇತ್ತೀಚೆಗೆ 247 ರೂ ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸಿದೆ, ಇದು ದೈನಂದಿನ ಡೇಟಾ ಮಿತಿಯನ್ನು ಹೊಂದಿಲ್ಲ. Vi ನ ರೂ 267 ಪ್ರಿಪೇಯ್ಡ್ ಪ್ಯಾಕ್‌ನಂತೆಯೇ, ಇದು ಸಹ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 ಎಸ್‌ಎಂಎಸ್ ಮತ್ತು ಒಟ್ಟು 25 ಜಿಬಿ ಡೇಟಾವನ್ನು ನೀಡುತ್ತದೆ. ಕಂಪನಿಯ ಅಪ್ಲಿಕೇಶನ್‌ಗಳಾದ ಜಿಯೋಟಿವಿ, ಜಿಯೋ ಸಿನೆಮಾ ಮತ್ತು ಹೆಚ್ಚಿನವುಗಳಿಗೆ ಗ್ರಾಹಕರು ಉಚಿತ ಪ್ರವೇಶವನ್ನು ಪಡೆಯುತ್ತಾರೆ. ನೀವು ಅದನ್ನು ಖರೀದಿಸಿದ ನಂತರ ಅದು 30 ದಿನಗಳವರೆಗೆ ಮಾನ್ಯವಾಗಿ ಉಳಿಯುತ್ತದೆ.

ವಿ 267 ರೂ ಯೋಜನೆ vs ಏರ್‌ಟೆಲ್ 299ರೂ ಯೋಜನೆ

ವಿ 267 ರೂ ಯೋಜನೆ vs ಏರ್‌ಟೆಲ್ 299ರೂ ಯೋಜನೆ

ಎರಡು ಟೆಲಿಕಾಂ ಆಪರೇಟರ್‌ಗಳಿಗಿಂತ ಏರ್‌ಟೆಲ್ ಹೆಚ್ಚು ದುಬಾರಿ ಯೋಜನೆಯನ್ನು ನೀಡುತ್ತಿದೆ. ಏರ್‌ಟೆಲ್‌ನಿಂದ 299 ರೂ.ಗಳ ಯೋಜನೆಯು ಯಾವುದೇ ಡೇಟಾ ಮಿತಿ ನಿರ್ಬಂಧಗಳನ್ನು ಹೊಂದಿಲ್ಲ. ಜಿಯೋ ಮತ್ತು ವಿ ಅವರ ಪ್ರಿಪೇಯ್ಡ್ ಯೋಜನೆಗೆ ಹೋಲಿಸಿದರೆ ಈ ಯೋಜನೆಯೊಂದಿಗೆ ನೀವು 5GB ಹೆಚ್ಚುವರಿ ಪ್ರಯೋಜನ ಪಡೆಯುತ್ತಿರಿ. ಈ ಏರ್‌ಟೆಲ್ ಯೋಜನೆಯಲ್ಲಿ ಒಟ್ಟು 30GB ಡೇಟಾ, ಅನಿಯಮಿತ ಧ್ವನಿ ಕರೆ ಪ್ರಯೋಜನಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ಸೇರಿವೆ. ಇದು 30 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ.

Most Read Articles
Best Mobiles in India

English summary
Vi has launched a new Rs 267 prepaid recharge plan, which comes with no daily data limit.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X