ವಿ ಟೆಲಿಕಾಂನಿಂದ ಅನ್‌ಲಿಮಿಟೆಡ್ ಹೈ-ಸ್ಪೀಡ್ ನೈಟ್ ಡೇಟಾ ಆಫರ್‌ ಲಾಂಚ್‌!

|

ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಲೇ ಬಂದಿವೆ. ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಿವೆ. ಇವುಗಳ ಪೈಕಿ ವಿ ಟೆಲಿಕಾಂ ಸಹ ಹಲವು ರೀಚಾರ್ಜ್ ಆಯ್ಕೆಗಳನ್ನು ತನ್ನ ಚಂದಾದಾರರಿಗೆ ಒದಗಿಸಿದೆ. ಇವುಗಳಲ್ಲಿ ಅಗ್ಗದ ಬೆಲೆಯ ಪ್ಲ್ಯಾನ್‌ಗಳೊಂದಿಗೆ ದುಬಾರಿ ಬೆಲೆಯ ಪ್ಲ್ಯಾನ್‌ಗಳು ಸೇರಿವೆ. ಸದ್ಯ ಇದೀಗ ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ ರಾತ್ರಿಯಲ್ಲಿ ಅನಿಯಮಿತ ಹೈ-ಸ್ಪೀಡ್ ಡೇಟಾವನ್ನು ಪರಿಚಯಿಸಿದೆ.

ಟೆಲಿಕಾಂ

ಹೌದು, ವಿ ಟೆಲಿಕಾಂ ತನ್ನ ಗ್ರಾಹಕರಿಗೆ ರಾತ್ರಿಯಲ್ಲಿ ಅನಿಯಮಿತ ಹೈ ಸ್ಪೀಡ್‌ ಡೇಟಾವನ್ನು ಪರಿಚಯಿಸಿದೆ. ದೈನಂದಿನ ವಿ ಡೇಟಾ ಪ್ಲ್ಯಾನ್‌ ಪ್ಯಾಕ್‌ಗಳೊಂದಿಗೆ ರೀಚಾರ್ಜ್ ಮಾಡುವ ಗ್ರಾಹಕರು ರೂ. 249 ಪ್ಲ್ಯಾನ್‌ ರೀಚಾರ್ಜ್‌ ಮಾಡಿಸಿದರೆ ಹೆಚ್ಚಿನ ಡೇಟಾವನ್ನು ರಾತ್ರಿ ವೇಳೆ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಇದಕ್ಕಿಂತ ಹೆಚ್ಚಿನವರು ಅನಿಯಮಿತ ಡೇಟಾವನ್ನು ಬೆಳಿಗ್ಗೆ 12 ರಿಂದ ಬೆಳಿಗ್ಗೆ 6 ರವರೆಗೆ ಹೆಚ್ಚಿನ ವೇಗದಲ್ಲಿ ಬಳಸಲು ಸಾಧ್ಯವಾಗುತ್ತದೆ. ಬಳಕೆದಾರರು ವೆಬ್ ಬ್ರೌಸ್ ಮಾಡುವುದರ ಜೊತೆಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಂಗ್ ಮಾಡುವುದರೊಂದಿಗೆ ರಾತ್ರಿಯ ಸಮಯದಲ್ಲಿ ಹೆಚ್ಚಿನ ಡೇಟಾವನ್ನು ಬಳಸಬಹುದಾಗಿದೆ. ಹಾಗಾದ್ರೆ ಯಾವ ಪ್ಲ್ಯಾನ್‌ನಲ್ಲಿ ಈ ಡೇಟಾ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಲಿಕಾಂ

ವಿ ಟೆಲಿಕಾಂ ತನ್ನ ಪ್ರಿಪೇಯ್ಡ್ ಬಳಕೆದಾರರು ಬೆಳಿಗ್ಗೆ 12 ರಿಂದ ಬೆಳಿಗ್ಗೆ 6 ರವರೆಗೆ ಅನಿಯಮಿತ ಹೈಸ್ಪೀಡ್ ಡೇಟಾವನ್ನು ಆನಂದಿಸಲು ಸಾಧ್ಯವಾಗುವ ಪ್ಲ್ಯಾನ್‌ ಅನ್ನು ಪರಿಚಯಿಸಿದೆ. ಇದಕ್ಕಾಗಿ Vi ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರು ರೂ. 249 ಅಥವಾ ಅದಕ್ಕಿಂತ ಹೆಚ್ಚಿನ ಪ್ಲ್ಯಾನ್‌ ರೀಚಾರ್ಜ್‌ ಮಾಡಿಸಿದರೆ ಈ ಪ್ರಯೋಜನವನ್ನು ಆನಂದಿಸಲು ಸಾಧ್ಯವಾಗುತ್ತದೆ. ಕನಿಷ್ಠ ರೀಚಾರ್ಜ್ ಮೌಲ್ಯದ ಹೊರತಾಗಿ, ಈ ಲಾಭದೊಂದಿಗೆ ಬೇರೆ ಯಾವುದೇ ನಿರ್ಬಂಧಗಳಿಲ್ಲ. ಗ್ರಾಹಕರು ತಮ್ಮ ಪ್ರಿಪೇಯ್ಡ್ ರೀಚಾರ್ಜ್‌ನೊಂದಿಗೆ ವಾರಾಂತ್ಯದ ಡೇಟಾ ರೋಲ್‌ಓವರ್ ಪ್ರಯೋಜನವನ್ನು ಸಹ ಪಡೆಯುತ್ತಾರೆ. ಇದು ವಿ ಗ್ರಾಹಕರಿಗೆ ಶನಿವಾರ ಮತ್ತು ಭಾನುವಾರದಂದು ಸೋಮವಾರದಿಂದ ಶುಕ್ರವಾರದವರೆಗೆ ಸಂಗ್ರಹವಾದ ಡೇಟಾವನ್ನು ಬಳಸಲು ಅನುವು ಮಾಡಿಕೊಡುತ್ತದೆ.

ವೆಬ್

ಸದ್ಯ ಇತ್ತೀಚಿನ ದಿನಗಳಲ್ಲಿ ಜನರು ಮನೆಯಲ್ಲಿಯೇ ಇರುವುದರಿಂದ, ವೆಬ್ ಬ್ರೌಸ್ ಮಾಡುವಾಗ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಷಯವನ್ನು ನೋಡುವಾಗ ಡೇಟಾ ಬಳಕೆ ಹೆಚ್ಚಾಗಿದೆ. ಅಲ್ಲದೆ ಕಂಪನಿಯ ಪ್ರಕಾರ, "ಯುವ ಗ್ರಾಹಕ ವಿಭಾಗಗಳ ಬಳಕೆಯ ಮಾದರಿಗಳು ರಾತ್ರಿಯಲ್ಲಿ ಹೆಚ್ಚಿನ ದತ್ತಾಂಶ ಬಳಕೆಯನ್ನು ಸೂಚಿಸಿರುವುದರಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ, ಈ ಮೂಲಕ ಹೊಸ ಬಳಕೆದಾರರನ್ನು ನಮ್ಮ ನೆಟ್‌ವರ್ಕ್‌ಗೆ ಆಕರ್ಷಿಸುವ ಗುರಿಯನ್ನು ಹೊಂದಿದೆ" ಎಂದು ವಿ ಹೇಳಿದೆ. ಇದಲ್ಲದೆ ಓಕ್ಲಾ ಅವರ ಮಾಹಿತಿಯ ಪ್ರಕಾರ, ವಿ ಟೆಲಿಕಾಂ ಕ್ಯೂ 320 ಗಾಗಿ ಕ್ರಮವಾಗಿ 13.74Mbps ಮತ್ತು 6.19Mbps ವೇಗದಲ್ಲಿ 4G ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಹೊಂದಿದೆ.

Best Mobiles in India

English summary
Vi Introduced Unlimited High-Speed Night Data Launched for its prepaid users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X