Home
ಸುದ್ದಿಜಾಲ

ವಿ ಟೆಲಿಕಾಂ ನಿಂದ ಕಡಿಮೆ ಬೆಲೆಯಲ್ಲಿ ಎರಡು ಹೊಸ ಪ್ರಿಪೇಯ್ಡ್‌ ಪ್ಲ್ಯಾನ್‌ ಲಾಂಚ್‌!

ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಜಿಯೋ ಮತ್ತು ವಿ ಕಳೆದ ತಿಂಗಳಲ್ಲಿ ಹಲವಾರು ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿವೆ. ಇವುಗಳಲ್ಲಿ ಹಲವು ಪ್ರಿಪೇಯ್ಡ್ ಪ್ಲ್ಯಾನ್‌ಗಳು ಅಗ್ಗದ ಬೆಲೆಯಲ್ಲಿ ಬಂದಿವೆ. ಸದ್ಯ ಇದೀಗ ವೊಡಾಫೋನ್ ಐಡಿಯಾ (ವಿ) ಟೆಲಿಕಾಂ ಅಗ್ಗದ ಬೆಲೆಯ ಎರಡು ಪ್ರಿಪೇಯ್ಡ್‌ ಪ್ಲ್ಯಾನ್‌ ಅನ್ನು ಪರಿಚಯಿಸಿದೆ. ಈ ಎರಡು ಯೋಜನೆಗಳು ಡೇಟಾ ಮತ್ತು ಕರೆ ಪ್ರಯೋಜನಗಳನ್ನು ಹೊಂದಿದ್ದು, ಎಸ್‌ಎಂಎಸ್‌ ಪ್ರಯೋಜನ ನೀಡುವುದಿಲ್ಲ ಎನ್ನಲಾಗಿದೆ.

ವೋಡಾಫೋನ್‌

ಹೌದು, ವೋಡಾಫೋನ್‌ ಐಡಿಯಾ 99ರೂ ಮತ್ತು 109 ರೂ. ಗಳ ಎರಡು ಹೊಸ ಪ್ರಿಪೇಯ್ಡ್‌ಪ್ಲ್ಯಾನ್‌ ಪರಿಚಯಿಸಿದೆ. ಈ ಪ್ಲ್ಯಾನ್‌ಗಳಲ್ಲಿ ಡೇಟಾ ಮತ್ತು ಅನಿಯಮಿತ ಕರೆ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಎರಡು ಪ್ಲ್ಯಾನ್‌ಗಳು ನೂರು ರೂ, ಅಸುಪಾಸಿನ ಬೆಲೆ ಹೊಂದಿರುವುದರಿಂದ ಬಜೆಟ್‌ ಗ್ರಾಹಕರನ್ನು ಆಕರ್ಷಿಸಿದೆ. ಹಾಗಾದ್ರೆ ವೋಡಾಫೊನ್‌ ಐಡಿಯಾದ ಈ ಹೊಸ ಪ್ಲ್ಯಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಲಿಕಾಂ

ವಿ ಟೆಲಿಕಾಂ ಪರಿಚಯಿಸಿರುವ 99ರೂ,ಗಳ ಪ್ರಿಪೇಯ್ಡ್ ಪ್ಲ್ಯಾನ್‌ 1GB ಡೇಟಾ ಮತ್ತು 18 ದಿನಗಳವರೆಗೆ ಅನಿಯಮಿತ ಕರೆ ನೀಡುತ್ತದೆ. ಇನ್ನು 109 ರೂ ಯೋಜನೆಯು 20 ದಿನಗಳವರೆಗೆ 1GB ಡೇಟಾ ಮತ್ತು ಅನಿಯಮಿತ ಕರೆ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆಗಳು ಹೊರಹೋಗುವ SMS ಅನ್ನು ನೀಡುವುದಿಲ್ಲ. ಆದಾಗ್ಯೂ, ಈ ಯೋಜನೆಗಳಿಂದ ಒಳಬರುವ ಎಸ್‌ಎಂಎಸ್ ಬಗ್ಗೆ ಏನು ಕೂಡ ಹೇಳಿಲ್ಲ. ಆದ್ದರಿಂದ ಬಳಕೆದಾರರು ಒಟಿಪಿ ಸಂದೇಶಗಳನ್ನು ಸ್ವೀಕರಿಸಬಹುದು ಎನ್ನಲಾಗ್ತಿದೆ.

ಇತ್ತೀಚೆಗೆ

ಇದಲ್ಲದೆ ಇತ್ತೀಚೆಗೆ ಪರಿಚಯಿಸಲಾದ ಕಡಿಮೆ-ಶ್ರೇಣಿಯ ಯೋಜನೆಗಳಲ್ಲಿ ವಿ, 128 ರೂ ಪ್ರಿಪೇಯ್ಡ್ ಪ್ಲಾನ್ ವೋಚರ್‌ ಕೂಡ ಗಮನ ಸೆಳೆದಿದೆ. ಇದು ಕೂಡ ಕರೆ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆಯು ನೆಟ್‌ವರ್ಕ್‌ನಲ್ಲಿ 10 ಸ್ಥಳೀಯ ರಾತ್ರಿ ನಿಮಿಷಗಳನ್ನು ನೀಡುತ್ತದೆ. ಎಲ್ಲಾ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳಿಗೆ ಈ ಯೋಜನೆಯು ಸೆಕೆಂಡಿಗೆ 2.5 ಪೈಸೆ ವಿಧಿಸುತ್ತದೆ. ಇದು ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಪ್ರಯೋಜನಗಳನ್ನು ನೀಡುತ್ತದೆ. ಈ ಪ್ಲ್ಯಾನ್‌ 28 ದಿನಗಳ ಮಾನ್ಯತೆಯನ್ನು ಹೊಂದಿದೆ.

ಟೆಲಿಕಾಂ

ಇನ್ನು Vi ಟೆಲಿಕಾಂ ದೈನಂದಿನ ಡೇಟಾ ಮಿತಿ ಅಥವಾ 447 ರೂ ಬೆಲೆಯ ಬೃಹತ್ ಡೇಟಾ ಯೋಜನೆಯನ್ನು ಸಹ ಪ್ರಾರಂಭಿಸಿದೆ. ಈ ಯೋಜನೆಯು ದೈನಂದಿನ ಡೇಟಾ ಮಿತಿಯನ್ನು ಹೊಂದಿಲ್ಲ. ಅಂದರೆ ಬಳಕೆದಾರರು ಮಿತಿ ಮುಗಿಯುವವರೆಗೆ ಅವರು ಬಯಸಿದಷ್ಟು ಡೇಟಾವನ್ನು ಬಳಸಬಹುದು. ಈ ಯೋಜನೆಯು 60 ದಿನಗಳವರೆಗೆ ದೈನಂದಿನ ಡೇಟಾ ಮಿತಿ ಯೋಜನೆಯಿಲ್ಲದೆ 50GB ಡೇಟಾವನ್ನು ನೀಡುತ್ತದೆ. ಈ ಯೋಜನೆಯು ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಇದು ವಿ ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶವನ್ನು ನೀಡುತ್ತದೆ.

Best Mobiles in India

English summary
Vi introduces new prepaid plan with calling and data benefits under Rs 100, check details.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+