ವಿ ಟೆಲಿಕಾಂನಲ್ಲಿ ಸ್ಟ್ರೀಮಿಂಗ್ ಪ್ರಯೋಜನ ಪಡೆಯಲು ಈ ಪ್ಲಾನ್‌ಗಳು ಸೂಕ್ತ!
ಪ್ರಸ್ತುತ ದಿನಗಳಲ್ಲಿ ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಅಗ್ಗದ ಬೆಲೆಯಲ್ಲಿ ಅಧಿಕ ಡೇಟಾ ಪ್ರಯೋಜನಗಳನ್ನು ಪರಿಚಯಿಸಿ ಗ್ರಾಹಕರನ್ನು ತಮ್ಮತ್ತ ಸೆಳೆದಿವೆ. ಈ ಪೈಕಿ ವೋಡಾಫೋನ್ ಐಡಿಯಾ ಟೆಲಿಕಾಂ ಕೂಡ ಅಧಿಕ ಡೇಟಾ, ಅನಿಯಮಿತ ಕರೆ ಪ್ರಯೋಜನಗಳನ್ನು ಒಳಗೊಂಡ ಹಲವು ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ತನ್ನ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಒಟಿಟಿ ಪ್ಲಾರ್ಟ್‌ಫಾರ್ಮ್‌ಗಳ ಚದಾದಾರಿಕೆಯನ್ನು ಉಚಿತವಾಗಿ ನೀಡುತ್ತಿದೆ.

ಹೌದು, ವಿ ಟೆಲಿಕಾಂ ನ ಕೆಲವು ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಸ್ಟ್ರೀಮಿಂಗ್ ಪ್ರಯೋಜನಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇವುಗಳಲ್ಲಿ ವಿ ಟೆಲಿಕಾಂ 399ರೂ ಮತ್ತು 599ರೂ, ಪ್ಲಾನ್‌ಗಳಲ್ಲಿ ಸ್ಟ್ರೀಮಿಂಗ್ ಪ್ರಯೋಜನಗಳನ್ನು ಸಹ ನೀಡುತ್ತಿದೆ. ಈ ಪ್ಲಾನ್‌ಗಳು 1.5GB ದೈನಂದಿನ ಡೇಟಾ ಪ್ರಯೋಜನವನ್ನು ಸಹ ಪಡೆದುಕೊಂಡಿವೆ. ಇನ್ನು ಈ ಪ್ಲಾನ್‌ಗಳನ್ನು ಬಳಸುವ ಬಳಕೆದಾರರು ಜೀ 5 ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಹಾಗಾದ್ರೆ ವಿ ಟೆಲಿಕಾಂನ ಪ್ಲಾನ್‌ಗಳಲ್ಲಿ ಯಾವೆಲ್ಲಾ ಸ್ಟ್ರೀಮಿಂಗ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿ ಟೆಲಿಕಾಂನ 399ರೂ, ಮತ್ತು 599ರೂ, ಬೆಲೆಯ ಪ್ರಿಪೇಯ್ಡ್ ಪ್ಲಾನ್‌ಗಳು ಕ್ರಮವಾಗಿ 56 ದಿನಗಳು ಮತ್ತು 84 ದಿನಗಳ ಮಾನ್ಯತೆಯನ್ನು ಹೊಂದಿವೆ. ಇನ್ನು ಈ ಪ್ಲಾನ್‌ಗಳಲ್ಲಿ ಗ್ರಾಹಕರು ಜೀ 5 ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು. ಅಲ್ಲದೆ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಪ್ರಯೋಜನನವನ್ನು ಸಹ ಪಡೆದುಕೊಳ್ಳಬಬಹುದಾಗಿದೆ. ಇದಲ್ಲಿ ವಿ ಟೆಲಿಕಾಂನ 355ರೂ ಬೆಲೆಯ ಡೇಟಾ ಪ್ಲಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ 50 ಜಿಬಿ ಡೇಟಾದೊಂದಿಗೆ ಜೀ5 ಪ್ರೀಮಿಯಂ ಸ್ಟ್ರೀಮಿಂಗ್ ಪ್ರಯೋಜನವನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಇದಲ್ಲದೆ ವಿ ಟೆಲಿಕಾಂನ 595 ಪ್ರಿಪೇಯ್ಡ್ ಪ್ಲಾನ್ ಕೂಡ ಸ್ಟ್ರೀಮಿಂಗ್ ಸೇವೆಗಳಿಗೆ ಪ್ರವೇಶವನ್ನು ನೀಡಲಿದೆ. ಇದರಲ್ಲಿ ಜೀ-5 ಪ್ರೀಮಿಯಂಗೆ 1-ವರ್ಷದ ಪ್ರವೇಶವನ್ನು ನೀಡಲಿದೆ. ಈ ಪ್ಲಾನ್ 2GB ದೈನಂದಿನ ಡೇಟಾ, ಅನ್‌ಲಿಮಿಟೆಡ್ ಕಾಲ್ ಮತ್ತು ಡೈಲಿ 100SMS ಪ್ರಯೋಜನವನ್ನು ನೀಡುತ್ತದೆ. ಅಲ್ಲದೆ ಈ ಪ್ಲಾನ್‌ನಲ್ಲಿ ವಿಕೆಂಡ್ ರೋಲ್‌ಓವರ್ ಡೇಟಾ ಪ್ರಯೋಜನವನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇದು 56 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಇದೇ ಕಾರಣಕ್ಕೆ ಹೆಚ್ಚಿನ ಸ್ಟ್ರೀಮಿಂಗ್ ಪ್ರಯೋಜನಗಳನ್ನು ಪಡೆದುಕೊಳ್ಳಲು ಬಯಸುವ ಬಳಕೆದಾರರಿಗೆ ಈ ಪ್ಲಾನ್ ಸೂಕ್ತವಾಗಿದೆ.

ಇನ್ನು ಕೆಲ ದಿನಗಳ ಹಿಂದೆಯಷ್ಟೇ ಡಿಸ್ನಿ+ ಹಾಟ್ ಸ್ಟಾರ್ ತನ್ನ ಚಂದಾದಾರಿಕೆ ಪ್ಲಾನ್‌ಗಳನ್ನು ಪರಿಷ್ಟರಿಸಿದೆ. ಇದೇ ಕಾರಣಕ್ಕೆ ವಿ ಟೆಲಿಕಾಂ ಕೂಡ ತನ್ನ ಪ್ಲಾನ್‌ಗಳಲ್ಲಿ ಪರಿಷ್ಕರಣೆ ಮಾಡಿದೆ. ಸದ್ಯ ವಿ ಟೆಲಿಕಾಂ ಡಿಸ್ನಿ + ಹಾಟ್‌ಸ್ಟಾರ್ ಸ್ಟ್ರೀಮಿಂಗ್ ಸೇವೆ ನೀಡುವ ಪ್ಲಾನ್‌ಗಳು ಇದೀಗ 501 ರೂ. 701ರೂ. ಮತ್ತು 901ರೂ ಬೆಲೆಯನ್ನು ಹೊಂದಿವೆ. ಈ ಪ್ಲಾನ್‌ಗಳು ಕೇವಲ ಸ್ಟ್ರೀಮಿಂಗ್ ಸೇವೆ ಮಾತ್ರವಲ್ಲದೆ 100GB ಡೇಟಾವನ್ನು 28 ದಿನಗಳವರೆಗೆ, 200GB ಡೇಟಾವನ್ನು 56 ದಿನಗಳವರೆಗೆ ಮತ್ತು 300GB ಡೇಟಾವನ್ನು 84 ದಿನಗಳವರೆಗೆ ನೀಡುತ್ತವೆ. ಅಲ್ಲದೆ ಈ ಎಲ್ಲಾ ಯೋಜನೆಗಳು ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಗಳನ್ನು ಟೆಲಿಕಾಂ-ನಿರ್ದಿಷ್ಟ ಪ್ರಯೋಜನಗಳೊಂದಿಗೆ ನೀಡುತ್ತವೆ.

ಇವುಗಳ ನಡುವೆ ವಿ ಟೆಲಿಕಾಂ 601 ರೂ. ಪ್ಲಾನ್‌ನಲ್ಲಿ 75 ಜಿಬಿ ಡೇಟಾವನ್ನು 56 ದಿನಗಳ ವ್ಯಾಲಿಡಿಟಿಗೆ ನೀಡುತ್ತಿದೆ. ಪ್ರಿಪೇಯ್ಡ್‌ಪ್ಲಾನ್‌ಗಳನ್ನ ಈಗಾಗಲೇ ಅಪ್ಡೇಟ್ ಮಾಡಲಾಗಿದೆ ಆದರೂ ಟೆಲಿಕಾಂ ಕಂಪೆನಿಗಳು 2GB ದೈನಂದಿನ ಡೇಟಾ ಪ್ಲಾನ್‌ಗಳನ್ನು ನೀಡುವುದನ್ನು ಮುಂದುವರಿಸಿವೆ. ಇನ್ನು ಈ ಸ್ಟ್ರೀಮಿಂಗ್ ಪ್ರಯೋಜನ ನೀಡುವ ಪ್ಲಾನ್‌ಗಳನ್ನು ನೀವು ಹುಡುಕುತ್ತಿದ್ದರೆ ಈ ಎಲ್ಲಾ ಪ್ಲಾನ್‌ಗಳನ್ನು ಸೂಕ್ತವಾಗಿವೆ.


Click it and Unblock the Notifications








