Vi: ಎಷ್ಟಾದ್ರೂ ಮಾತಾಡಿ! 3600 SMS ಫುಲ್ ಫ್ರೀ.. ಎರಡು ಹೊಸ ಪ್ಲಾನ್ ಲಾಂಚ್.. ಕಡಿಮೆ ಬೆಲೆ
ವೊಡಾಫೋನ್ ಐಡಿಯಾ (Vi) ಬಳಕೆದಾರರು ನಿರಾಳ! ಟ್ರಾಯ್ ಆದೇಶಕ್ಕೆ ತಲೆ ಬಾಗಿದ ಟೆಲಿಕಾಂ ಕಂಪನಿಗಳು. ಹೌದು, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಇತ್ತೀಚೆಗೆ ಟೆಲಿಕಾಂ ಕಂಪನಿಗಳಿಗೆ ಕೆಲವು ನಿರ್ದೇಶನ ನೀಡಿದೆ. ಡೇಟಾ ಒಳಗೊಂಡಿರದ, ಆದರೆ ಕರೆ ಮತ್ತು ಎಸ್‌ಎಂಎಸ್ ಸೌಲಭ್ಯ ಒದಗಿಸುವ ಅಗ್ಗದ ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುವಂತೆ ತಾಕೀತು ಮಾಡಿದೆ. 2G ಫೀಚರ್ ಫೋನ್‌ಗಳನ್ನು ಬಳಸುವ ಅಥವಾ ಡೇಟಾ ಅಗತ್ಯವಿಲ್ಲದ ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದು ಈ ಯೋಜನೆಗಳ ಮುಖ್ಯ ಉದ್ದೇಶವಾಗಿದೆ. ಇದಕ್ಕೆ ಎಲ್ಲಾ ಟೆಲಿಕಾಂ ಕಂಪನಿಗಳು ತಲೆ ಬಾಗಿವೆ.
ಹೌದು, ವಿ ಟೆಲಿಕಾಂ (Vodafone Idea) ಸಹ ಎರಡು ಅಗ್ಗದ ಮತ್ತು ದೀರ್ಘ ವ್ಯಾಲಿಡಿಟಿ ಯೋಜನೆಗಳನ್ನು ಪರಿಚಯಿಸಿದೆ. ವೊಡಾಫೋನ್ ಐಡಿಯಾ ಬಳಕೆದಾರರ ಆಧಾರದಲ್ಲಿ ಜಿಯೋ ಮತ್ತು ಏರ್‌ಟೆಲ್‌ಗಿಂತ ಹಿಂದೆ ಇದೆ. ಆದರೆ, ವಿ ಟೆಲಿಕಾಂ ತನ್ನ ಪ್ರಸ್ತುತ ಚಂದಾದಾರರಿಗೆ ಉತ್ತಮ ಪ್ರಯೋಜನಗಳನ್ನು ನೀಡುವ ಮೂಲಕ ತನ್ನತ್ತ ಸೆಳೆಯುತ್ತಿದೆ. ಇತ್ತೀಚೆಗೆ ಎಲ್ಲಾ ಟೆಲಿಕಾಂ ಕಂಪನಿಗಳು ವಾಯ್ಸ್ ಓನ್ಲಿ ಪ್ಲಾನ್‌ಗಳನ್ನು ಪ್ರಾರಂಭಿಸಿವೆ. ಇದೀಗ ವಿ ಟೆಲಿಕಾಂ ಸಹ ದೀರ್ಘಾವಧಿ ವ್ಯಾಲಿಡಿಟಿ ಮತ್ತು ಅನಿಯಮಿತ ಕರೆ ಸೌಲಭ್ಯದ ಯೋಜನೆಗಳನ್ನು ಪರಿಚಯಿಸಿದೆ. ಬನ್ನಿ, ಈ ಎರಡು ಹೊಸ ರಿಚಾರ್ಜ್ ಪ್ಲಾನ್‌ಗಳ ಬೆಲೆ ಮತ್ತು ಪ್ರಯೋಜನಗಳನ್ನು ತಿಳಿಯೋಣ.

ವಿ ಟೆಲಿಕಾಂ ಈ ಎರಡು ಹೊಸ ಯೋಜನೆಗಳನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಪ್ಲಾನ್‌ಗಳ ಬೆಲೆ 1,849 ರೂ. ಮತ್ತು 470 ರೂ. ಆಗಿದೆ. ಈ ಹೊಸ ಯೋಜನೆಗಳು 84 ದಿನಗಳ ವ್ಯಾಲಿಡಿಟಿ ಮತ್ತು 365 ದಿನಗಳ ವ್ಯಾಲಿಡಿಟಿ ಹೊಂದಿವೆ. ಈ ಪ್ಲಾನ್‌ಗಳಲ್ಲಿ ವಿ ಟೆಲಿಕಾಂ ಬಳಕೆದಾರರಿಗೆ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನ್‌ಲಿಮಿಟೆಡ್ ಕರೆ ಮತ್ತು ಎಸ್‌ಎಂಎಸ್ (SMS) ಸೌಲಭ್ಯಗಳ ಪ್ರಯೋಜನ ಪಡೆಯಬಹುದು. ಆದಾಗ್ಯೂ, ಇವು ವಾಯ್ಸ್ ಓನ್ಲಿ ಪ್ಯಾಕ್‌ಗಳಾಗಿವೆ. ಹೀಗಾಗಿ, ಈ ಪ್ಲಾನ್‌ಗಳು ಯಾವುದೇ ಇಂಟರ್ನೆಟ್ ಡೇಟಾ ಸೌಲಭ್ಯಗಳನ್ನು ಒಳಗೊಂಡಿಲ್ಲ.
ವಿ ಟೆಲಿಕಾಂ 470 ರೂ. ಯೋಜನೆ
ನೀವು ಕಡಿಮೆ ದರದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಬಯಸಿದರೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದು 470 ರೂ.ಗಳ ಯೋಜನೆಯಾಗಿದೆ. ಇದು 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ವೊಡಾಫೋನ್ ಐಡಿಯಾದ ಪ್ಲಾನ್, ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನ್‌ಲಿಮಿಟೆಡ್ ಕರೆ ಸೌಲಭ್ಯ ಒದಗಿಸುತ್ತದೆ. ಹೆಚ್ಚುವರಿಯಾಗಿ, ಸಂಪೂರ್ಣ ವ್ಯಾಲಿಡಿಟಿಯಲ್ಲಿ ನೀವು 900 ಎಸ್‌ಎಂಎಸ್‌ಗಳ ಪ್ರಯೋಜನೆ ಪಡೆಯಬಹುದು. ಈ ಯೋಜನೆಯು ಕಡಿಮೆ ಬಜೆಟ್ ಗ್ರಾಹಕರಿಗೆ ತುಂಬಾ ಉಪಯುಕ್ತವಾಗಿದೆ.
ವಿ ಟೆಲಿಕಾಂ 1,849 ರೂ.ನ ರೀಚಾರ್ಜ್ ಪ್ಲಾನ್
ನೀವು ವರ್ಷವಿಡೀ (365) ವ್ಯಾಲಿಡಿಟಿ ಬಯಸಿದರೆ, ವೊಡಾಫೋನ್ ಐಡಿಯಾದ 1,849 ರೂ. ಪ್ಲಾನ್ ಉತ್ತಮ ಆಯ್ಕೆಯಾಗಿದೆ. ನೀವು ಈ ಯೋಜನೆಯಲ್ಲಿ ಎಲ್ಲಾ ನೆಟ್‌ವರ್ಕ್‌ಗಳಲ್ಲಿ 365 ದಿನಗಳವರೆಗೆ ಅನ್‌ಲಿಮಿಟೆಡ್ ಕಾಲ್ ಸೌಲಭ್ಯ ಪಡೆಯಬಹುದು. ಇದಲ್ಲದೆ 365 ದಿನಗಳ ವ್ಯಾಲಿಟಿಡಿಯೊಂದಿಗೆ 3,600 ಎಸ್ಎಂಎಸ್ ಕಳುಹಿಸುವ ಆಯ್ಕೆಯು ಸಹ ನೀಡಲಾಗುತ್ತಿದೆ. ಒಂದು ವರ್ಷದ (ದೀರ್ಘವದಿ) ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಬಯಸುವ ಬಳಕೆದಾರರಿಗೆ ಈ ಯೋಜನೆಯು ತುಂಬಾ ಉಪಯುಕ್ತವಾಗಿದೆ.
ಒಟ್ಟಾರೆ, ಎಲ್ಲ ಟೆಲಿಕಾಂ ಕಂಪನಿಗಳು ಟ್ರಾಯ್ (TRAI) ಸೂಚನೆಗಳನ್ನು ಅನುಸರಿಸುತ್ತಿವೆ. ಈ ಪಟ್ಟಿಗೆ ವೊಡಾಫೋನ್ ಐಡಿಯಾ (Vi) ಸೇರಿಕೊಂಡಿದೆ. ಪ್ರಮುಖವಾಗಿ ಈ ಎರಡು ಹೊಸ ಯೋಜನೆಗಳು 2G ಫೀಚರ್ ಫೋನ್‌ಗಳನ್ನು ಬಳಸುವ ಅಥವಾ ಡೇಟಾ ಬಳಸದ ದ್ವಿತೀಯ ಸಂಖ್ಯೆಯನ್ನು ಹೊಂದಿರುವ ಬಳಕೆದಾರರಿಗೆ ಹೆಚ್ಚು ಪ್ರಯೋಜನಕಾರಿಯಾಗಿವೆ.


Click it and Unblock the Notifications








