ವೊಡಾಫೋನ್-ಐಡಿಯಾ ದಿಂದ ಮಹಿಳೆಯರ ಸುರಕ್ಷತೆಗಾಗಿ ಹೊಸ ಆಪ್ಲಿಕೇಶನ್‌ ಲಾಂಚ್‌!

|

ಟೆಲಿಕಾಂ ವಲಯದಲ್ಲಿ ಮತ್ತೆ ಪುಟಿದೆಳುವ ಸಲುವಾಗಿ, ಮಾರುಕಟ್ಟೆಯಲ್ಲಿರುವ ಪೈಪೋಟಿಯ ನಡುವೆ ಮತ್ತೆ ಗ್ರಾಹಕರನ್ನ ಆಕರ್ಷಿಸುವ ಸಲುವಾಗಿ ಪ್ರತಿಷ್ಠಿತ ವೊಡಾಫೋನ್ - ಐಡಿಯಾ ಟೆಲಿಕಾಂ ಸಂಸ್ಥೆಯು ಇತ್ತೀಚಿಗಷ್ಟೇ ತನ್ನ ಬ್ರ್ಯಾಂಡ್‌ ಹೆಸರು ಹಾಗೂ ಲೋಗೋ ಬದಲಾವಣೆಯನ್ನು ಘೋಷಣೆ ಮಾಡಿಕೊಂಡಿತ್ತು. ತನ್ನ ಲೋಗೋ ಮತ್ತು ಬ್ರಾಂಡ್ ಎರಡನ್ನೂ ಬದಲಾಯಿಸಿ, ನೂತನ ಅವತಾರದಲ್ಲಿ ಅನಾವರಣ ಮಾಡಿ 'Vi' ಹೆಸರಿನಲ್ಲಿ ಗುರುತಿಸಿಕೊಂಡಿದೆ. ಸದ್ಯ ಇದೀಗ VI (ವೊಡಾಫೋನ್-ಐಡಿಯಾ) ನಾಸ್ಕಾಮ್ ಫೌಂಡೇಶನ್‌ನೊಂದಿಗೆ ಕೈಜೋಡಿಸಿ MyAmbar ಎಂಬ ಹೊಸ ಆಪ್ ಅನ್ನು ಬಿಡುಗಡೆ ಮಾಡಿದೆ.

MyAmbar

ಹೌದು, ಇತ್ತೀಚಿಗಷ್ಟೇ ಹಲವು ಹೊಸತುಗಳಿಗೆ ಕಾರಣವಾಗಿರುವ VI ಇದೀಗ ದೇಶದ ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ವಿಶೇಷ ಆಪ್‌ ಒಂದನ್ನ ಪರಿಚಯಿಸಿದೆ. ಇದಕ್ಕೆ MyAmbar ಎಂದು ಹೆಸರಿಸಲಾಗಿದ್ದು, ಇದು ಮಹಿಳೆಯರ ಸುರಕ್ಷತೆಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಅಪ್ಲಿಕೇಶನ್ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ. ಅಲ್ಲದೆ ಎಲ್ಲಾ ಸಹಾಯವಾಣಿ ಸಂಖ್ಯೆಗಳಿಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಇನ್ನುಳಿದಂತೆ MyAmbar ಆಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೊಡಾಫೋನ್‌-ಐಡಿಯಾ

ವೊಡಾಫೋನ್‌-ಐಡಿಯಾ MyAmbar ಆಪ್‌ ಅನ್ನು ಮಹಿಳೆಯರ ಸುರಕ್ಷತೆಗಾಗಿ ಪರಿಚಯಿಸಿದೆ. ಈ ಅಪ್ಲಿಕೇಶನ್ ಮಹಿಳೆಯರಿಗೆ ಲಿಂಗ ಆಧಾರಿತ ಹಿಂಸಾಚಾರದ ಬಗ್ಗೆ ತಿಳುವಳಿಕೆ ನೀಡುತ್ತದೆ ಮತ್ತು ಅವರಿಗೆ ಬೆಂಬಲವನ್ನು ನೀಡುತ್ತದೆ. ಅಲ್ಲದೆ ಒಂದೇ ವೇದಿಕೆಯಲ್ಲಿ ಮಾಹಿತಿ ಮತ್ತು ಸಂಬಂಧಿತ ಬೆಂಬಲವನ್ನು ನೀಡುವ ಮೂಲಕ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡಲು ಮೈಅಂಬಾರ್ ಅಪ್ಲಿಕೇಶನ್ ಅನ್ನು ರೂಪಿಸಲಾಗಿದೆ. ಮಹಿಳೆಯರು ವಾಸ ಮಾಡುವ ಸುತ್ತಲಿನ ದುರುಪಯೋಗದ ಅಂಶಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಗುರುತಿಸಲು ಮತ್ತು ವೈದ್ಯಕೀಯ, ಕಾನೂನು ಮತ್ತು ಪರಿಶೀಲಿಸಿದ ಮಾಹಿತಿಗೆ ಪ್ರವೇಶವನ್ನು ಪಡೆಯಲು ಅಪ್ಲಿಕೇಶನ್ ಅವರಿಗೆ ಸಹಾಯ ಮಾಡಲಿದೆ ಎನ್ನಲಾಗಿದೆ. ಅಲ್ಲದೆ ತಮಗೆ ಅಗತ್ಯ ಎನಿಸುವ ಹಾಗೂ ತುರ್ತು ಸಂದರ್ಭದಲ್ಲಿ ಕರೆ ಮಾಡಬಹುದಾದ ಕಂಟ್ಯಾಕ್ಟ್‌ಗಳನ್ನ ಸೇರಿಸುವುದಕ್ಕೆ ಇದರಲ್ಲಿ ಅವಕಾಶವಿದೆ.

MyAmbar ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವುದು ಮತ್ತು ಬಳಸುವುದು ಹೇಗೆ?

MyAmbar ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವುದು ಮತ್ತು ಬಳಸುವುದು ಹೇಗೆ?

ಹಂತ 1: ನೀವು ಗೂಗಲ್ ಪ್ಲೇ ಸ್ಟೋರ್ ಮೂಲಕ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಹಂತ 2: ನಂತರ, ನೀವು ಭಾಷೆಯನ್ನು ಆರಿಸಬೇಕಾಗುತ್ತದೆ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
ಹಂತ 3: ಈಗ ನೀವು ನಮೂದಿಸದ ನಂಬರ್‌ಗೆ ಒಟಿಪಿ ಬರಲಿದೆ. ನಂತರ ನೀವು ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಆ ಒಟಿಪಿಯನ್ನು ನಮೂದಿಸಬೇಕು.
ಹಂತ 4: ಇದೀಗ ನಿಮ್ಮ ಹೆಸರು, ವಯಸ್ಸು ಮತ್ತು ಶಿಕ್ಷಣದ ವಿವರಗಳನ್ನು ನೀವು ನಮೂದಿಸಬೇಕು ಮತ್ತು ಪಾಸ್‌ವರ್ಡ್ ಅನ್ನು ಹೊಂದಿಸಬೇಕು.

MyAmbar

ಹೀಗೆ ನೀವು MyAmbar ಅಪ್ಲಿಕೇಶನ್‌ ಅನ್ನು ಸುಲಭವಾಗಿ ಬಳಸಬಹುದಾಗಿದೆ. ಇನ್ನು ಈ ಅಪ್ಲಿಕೇಶನ್‌ ಬಳಕೆದಾರರಿಗೆ ಅವರ ದೈಹಿಕ ಮತ್ತು ಭಾವನಾತ್ಮಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸ್ವಯಂ-ಅಪಾಯದ ಮೌಲ್ಯಮಾಪನದೊಂದಿಗೆ ಬರುತ್ತದೆ. ಇದು ಯಾವುದೇ ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ಮಹಿಳೆಯರಿಗೆ ಸಹಾಯ ಮಾಡುವ ಮಾರ್ಗದರ್ಶಿಯನ್ನು ಸಹ ಹೊಂದಿದೆ. ಇದಲ್ಲದೆ, ಅಪ್ಲಿಕೇಶನ್ ಸಹಾಯವಾಣಿ ಸಂಖ್ಯೆ ಮತ್ತು ಎಸ್‌ಒಎಸ್ ಬಟನ್‌ನೊಂದಿಗೆ ಬರುತ್ತದೆ. ಇದಲ್ಲದೆ, ಹೆಚ್ಚಿನ ಫೀಚರ್ಸ್‌ಗಳು ಆಫ್‌ಲೈನ್‌ನಲ್ಲಿ ಲಭ್ಯವಿರುವುದರಿಂದ 2G ನೆಟ್‌ವರ್ಕ್‌ಗಳಲ್ಲಿ ಈ ಅಪ್ಲಿಕೇಶನ್ ಅನ್ನು ಬಳಸಲು ಕಂಪನಿಯು ನಿಮಗೆ ಅವಕಾಶವನ್ನು ಸಹ ನೀಡಿದೆ.

Best Mobiles in India

Read more about:
English summary
Vi (Vodafone-Idea) has joined hands with the NASSCOM Foundation to launch a new app called MyAmbar.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X