ಉಚಿತ ರೀಚಾರ್ಜ್‌ ಪ್ಯಾಕ್‌ ಘೋಷಣೆ ಮಾಡಿದ ವೋಡಾಫೋನ್‌ ಐಡಿಯಾ!

|

ಪ್ರಸ್ತುತ ದೇಶದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚುತ್ತಲೆ ಇದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕೂಡ ಲಾಕ್‌ಡೌನ್‌ ನಂತಹ ಕಟ್ಟುನಿಟ್ಟಿನ ಕ್ರಮ ಕೈ ಗೊಂಡಿದೆ. ಈ ವೇಳೆ ಜನರು ಪರಸ್ಪರ ಸಂಪರ್ಕದಲ್ಲಿರಲು ಟೆಲಿಕಾಂ ಸಂಸ್ಥೆಗಳು ಕೂಡ ತಮ್ಮ ಗ್ರಾಹಕರಿಗೆ ಕಡಿಮೆ ಬೆಲೆಯ ರಿಚಾರ್ಜ್‌ ಅನ್ನು ಪರಿಚಯಿಸಿವೆ. ಕೆಲ ದಿನಗಳ ಹಿಂದೆಯಷ್ಟೇ ಏರ್‌ಟೆಲ್‌ ಕಡಿಮೆ ಆದಾಯ ಹೊಂದಿರುವ ಚಂದಾದಾರರಿಗೆ ಉಚಿತ ರೀಚಾರ್ಜ್‌ ಅನ್ನು ಪರಿಚಯಿಸಿತ್ತು. ಇದೀಗ ವೊಡಾಫೋನ್‌ ಐಡಿಯಾ ಕೂಡ ತನ್ನ ಚಂದಾದಾರರಲ್ಲಿ ಕಡಿಮೆ ಆದಾಯ ಹೊಂದಿರುವ ಗ್ರಾಹಕರಿಗೆ 49 ರೂ.ಗಳ ಉಚಿತ ರೀಚಾರ್ಜ್‌ ಅನ್ನು ಘೋಷಿಸಿದೆ.

ವೋಡಾಫೋನ್‌

ಹೌದು, ವೋಡಾಫೋನ್‌ ಐಡಿಯಾ ತನ್ನ ಚಂದಾದಾರರಲ್ಲಿ ಕಡಿಮೆ ಆದಾಯ ಹೊಂದಿರುವ ಗ್ರಾಹಕರಿಗೆ ವಿಶೇಷ ಕೋವಿಡ್‌ -19 ಪರಿಹಾರ ಕೊಡುಗೆಗಳನ್ನು ಘೋಷಿಸಿದೆ. ಕಡಿಮೆ ಆದಾಯದ ಗ್ರಾಹಕರಿಗೆ ಒಂದು ಬಾರಿ ಕೊಡುಗೆಯಾಗಿ 49 ರೀಚಾರ್ಜ್ ಪ್ಯಾಕ್ ಅನ್ನು ಉಚಿತವಾಗಿ ನೀಡಿದೆ. ಅಲ್ಲದೆ 79 ರೀಚಾರ್ಜ್‌ನ ಹೊಸ ಕಾಂಬೊ ಚೀಟಿಯನ್ನು ಸಹ ಬಿಡುಗಡೆ ಮಾಡಿದೆ. ಹಾಗಾದ್ರೆ ವೋಡಾಫೋನ್‌ ಐಡಿಯಾದ ಈ ಉಡುಗೊರೆಯ ವಿಶೇಷತೆ ಏನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ವಿ(vi) 49ರೂ.ರೀಚಾರ್ಜ್‌ ಪ್ಯಾಕ್‌

ವಿ(vi) 49ರೂ.ರೀಚಾರ್ಜ್‌ ಪ್ಯಾಕ್‌

ಲಾಕ್‌ಡೌನ್‌ನಿಂದಾಗಿ ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿರುವ ಗ್ರಾಹಕರಿಗೆ ಈ ಯೋಜನೆ ಅನ್ವಯವಾಗಲಿದೆ. ವಿ ಒಂದು ಬಾರಿ ಕೊಡುಗೆಯಾಗಿ 49ರೂ.ಗಳ ರೀಚಾರ್ಜ್ ಪ್ಯಾಕ್ ಉಚಿತವಾಗಿ ನೀಡಲಿದೆ. ಈ ಪ್ಲ್ಯಾನ್‌ 38ರೂ. ಟಾಕ್‌ಟೈಮ್, 300ಎಂಬಿ ಡೇಟಾ ಸೌಲಭ್ಯವನ್ನು ಪಡೆದಿದ್ದು, ಒಟ್ಟು 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಸ್ಥಳೀಯ / ರಾಷ್ಟ್ರೀಯ ಕರೆಗಳಿಗೆ ಸೆಕೆಂಡಿಗೆ 0.25 ರೂ. ಶುಲ್ಕವನ್ನು ವಿಧಿಸಲಾಗಿದೆ. ಅಲ್ಲದೆ Vi ಒಂದು ಅಪ್ಲಿಕೇಶನ್ / ವೆಬ್ ರೀಚಾರ್ಜ್ ಎಕ್ಸ್‌ಕ್ಲೂಸಿವ್ ಆಫರ್ ಅನ್ನು ಸಹ ಹೊಂದಿದೆ, ಇದು ಈ ಯೋಜನೆಗೆ ಹೆಚ್ಚುವರಿ 200MB ಅನ್ನು ಸೇರಿಸುತ್ತದೆ.

ವಿ(vi)79ರೂ ಕಾಂಬೊ ರೀಚಾರ್ಜ್ ಪ್ಯಾಕ್‌

ವಿ(vi)79ರೂ ಕಾಂಬೊ ರೀಚಾರ್ಜ್ ಪ್ಯಾಕ್‌

ವೋಡಾಫೊನ್‌ ಐಡಿಯಾದ 79ರೂ.ಗಳ ಕಾಂಬೊ ರೀಚಾರ್ಜ್ ಯೋಜನೆಯು 128ರೂ. ಮೌಲ್ಯದ ಟಾಕ್‌ಟೈಮ್ ಮತ್ತು 200MB ಡೇಟಾದೊಂದಿಗೆ ಬರುತ್ತದೆ. ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಇದಲ್ಲದೆ ವೋಡಾಫೋನ್‌ ಐಡಿಯಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ರೀಚಾರ್ಜ್‌ ಮಾಡಿದರೆ 200MB ಹೆಚ್ಚುವರಿ ಡೇಟಾವನ್ನು ಸಹ Vi ನೀಡುತ್ತಿದೆ.

6 ಕೋಟಿ ಗ್ರಾಹಕರಿಗೆ ಪ್ರಯೋಜನ ಲಭ್ಯ

6 ಕೋಟಿ ಗ್ರಾಹಕರಿಗೆ ಪ್ರಯೋಜನ ಲಭ್ಯ

ಇನ್ನು ಈ ಯೋಜನೆ ಮೂಲಕ ಭಾರತದಲ್ಲಿ ವಿಶೇಷವಾಗಿ ಕಡಿಮೆ ಆದಾಯ ಹೊಂದಿರುವ ಸುಮಾರು 60 ಮಿಲಿಯನ್‌ ಗ್ರಾಹಕರಿಗೆ ಸಹಾಯ ಮಾಡಲು ವಿ ಕಂಪೆನಿ ಉದ್ದೇಶಿಸಿದೆ. ಈ ಮೂಲಕ ಬಳಕೆದಾರರಿಗೆ ನೀಡುತ್ತಿರುವ ಒಟ್ಟು ಲಾಭಗಳು 294 ಕೋಟಿ ರೂ. ಆಗಿದೆ. ಈ ಯೋಜನೆ ಮೂಲಕ ಸೊಂಕಿತ ಬಳಕೆದಾರರು ತಮ್ಮ ಪ್ರೀತಿ ಪಾತ್ರರೊಡನೆ ಸಂಪರ್ಕದಲ್ಲಿರಲು ಹಾಗೂ ದೇಶದಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ.

Most Read Articles
Best Mobiles in India

Read more about:
English summary
Vi says with this offer, it will be providing benefits of up to Rs. 294 crores to its low-income group users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X