ಕೇವಲ ವಾಯ್ಸ್ ಕಾಲ್ ಮಾಡುವ ಗ್ರಾಹಕರಿಗೆ 'ವಿ' ಗ್ಯಾರಂಟಿ ಯೋಜನೆ ಬಿಡುಗಡೆ!
ಭಾರತದ ಪ್ರಮುಖ ಟೆಲಿಕಾಂ ಟೆಲಿಕಾಂ ಕಂಪೆನಿ ವಿ (ವೊಡಾಫೋನ್ ಐಡಿಯಾ) ಸಂಸ್ಥೆಯು ತನ್ನ 2ಜಿ ಹ್ಯಾಂಡ್ ಸೆಟ್ ಗ್ರಾಹಕರಿಗಾಗಿ 'ವಿ ಗ್ಯಾರಂಟಿ' ಎಂಬ ವಿನೂತನ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆ ಅಡಿಯಲ್ಲಿ 12 ತಿಂಗಳ ಅವಧಿಯ ವಾಯ್ಸ್ ಪ್ಯಾಕ್ ಗಳ ಮೇಲೆ 24 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಪ್ರಯೋಜನವನ್ನು ನೀಡಲಾಗುವುದು. ಪ್ರತಿ 199 ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಅನಿಯಮಿತ ವಾಯ್ಸ್ ರೀಚಾರ್ಜ್ ಪ್ಯಾಕ್ ಗೆ 2 ದಿನಗಳ ಹೆಚ್ಚುವರಿ ವ್ಯಾಲಿಡಿಟಿಯನ್ನು ನೀಡಲಾಗುತ್ತದೆ ಎಂದು ತಿಇಸಿದೆ.
ವಿ ಗ್ಯಾರಂಟಿ ಯೋಜನೆಯು ವಾಯ್ಸ್ ಓನ್ಲೀ ಅಥವಾ ಕಡಿಮೆ ಡೇಟಾ ಬಳಕೆಯ ಪ್ರಿಪೇಯ್ಡ್ ಗ್ರಾಹಕರು ಎದುರಿಸುತ್ತಿರುವ ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಅಂದರೆ, ಒಂದೇ ತಿಂಗಳಲ್ಲಿ ಮತ್ತೆ ರೀಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ. ಸಾಂಪ್ರದಾಯಿಕ 28 ದಿನಗಳ ಪ್ಯಾಕ್ ಗಳ ಜೊತೆಗೆ ಗ್ರಾಹಕರು ಒಂದು ತಿಂಗಳಲ್ಲಿ ಎರಡು ಬಾರಿ ರೀಚಾರ್ಜ್ ಮಾಡಬೇಕಾಗುತ್ತದೆ ಅಥವಾ ಕೆಲವೊಮ್ಮೆ ಸೇವೆಯಲ್ಲಿ ವ್ಯತ್ಯಯವನ್ನು ಎದುರಿಸುತ್ತಾರೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಈ ಹೊಸ ಯೋಜನೆಯನ್ನು ಪರಿಚಯಿಸಲಾಗಿದೆ.
ವಿ ಗ್ಯಾರಂಟಿ ಯೋಜನೆ ಬಿಡುಗಡೆ ಆಗಿರುವುದರಿಂದ, ಗ್ರಾಹಕರು ಈಗ ಸಾಮಾನ್ಯ 28 ದಿನಗಳ ಬದಲಿಗೆ 30 ದಿನಗಳ ಸೇವಾ ವ್ಯಾಲಿಡಿಟಿಯನ್ನು ಪಡೆಯುತ್ತಾರೆ. ಇದರಿಂದ ತಿಂಗಳಿಗೆ ಒಂದು ಬಾರಿ ರೀಚಾರ್ಜ್ ಮಾಡಿದರೆ ಸಾಕಾಗುತ್ತದೆ. 28 ದಿನಗಳಿಗಿಂತ ದೀರ್ಘವಾದ ವ್ಯಾಲಿಡಿಟಿಯ ರೀಚಾರ್ಜ್ ಗಳಲ್ಲೂ ಹೆಚ್ಚುವರಿ ಎರಡು ದಿನಗಳು ಒದಗಿಬರುವುದರಿಂದ ರೀಚಾರ್ಜ್ ಚಕ್ರದ ಅಂತರವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಇದರಿಂದ ಹೆಚ್ಚಿನ ಸೌಕರ್ಯ ಮತ್ತು ಉತ್ತಮ ಸೇವೆ ಲಭ್ಯವಾಗುತ್ತದೆ.
ವಿ ಗ್ಯಾರಂಟಿ ಯೋಜನೆಯು 2ಜಿ ಹ್ಯಾಂಡ್ ಸೆಟ್ ಗಳನ್ನು ಬಳಸುವ ಪ್ರಿಪೇಯ್ಡ್ ಗ್ರಾಹಕರಿಗೆ ಮತ್ತು 199 ರೂ. ಮತ್ತು ಅದಕ್ಕಿಂತ ಹೆಚ್ಚಿನ ಅನಿಯಮಿತ ವಾಯ್ಸ್ ರೀಚಾರ್ಜ್ ಪ್ಯಾಕ್ ಗಳಿಗೆ ಅನ್ವಯಿಸುತ್ತದೆ ಎಂದು ವಿ ಕಂಪೆನಿ ತಿಳಿಸಿದೆ.
ವಿ ಗ್ಯಾರಂಟಿ ಯೋಜನೆಯ ಹೆಚ್ಚುವರಿ ವ್ಯಾಲಿಡಿಟಿ ಪ್ರಯೋಜನ ಒದಗಿಸುವ ಕೆಲವು ಪ್ಯಾಕ್ ಗಳ ಪಟ್ಟಿ ಇಲ್ಲಿದೆ:
ಕಳೆದ ವರ್ಷ ಪ್ರಾರಂಭವಾದ 4ಜಿ ಮತ್ತು 5ಜಿ ಗ್ರಾಹಕರಿಗೆ ವಿ ಗ್ಯಾರಂಟಿ ಯೋಜನೆಯು ಇನ್ನೂ ಲಭ್ಯವಿದ್ದು, ಇದು ಒಂದು ವರ್ಷದಲ್ಲಿ ಒಟ್ಟು 130 ಜಿಬಿ ಹೆಚ್ಚುವರಿ ಡೇಟಾವನ್ನು ಗ್ಯಾರಂಟಿಯಾಗಿ ನೀಡುತ್ತದೆ. ಪ್ರತೀ 28 ದಿನಗಳಿಗೆ 10 ಜಿಬಿ ಡೇಟಾವನ್ನು 13 ಸತತ ಚಕ್ರಗಳಿಗೆ ಸ್ವಯಂಚಾಲಿತವಾಗಿ ಕ್ರೆಡಿಟ್ ಮಾಡಲಾಗುತ್ತದೆ. ಇದನ್ನು ಪಡೆಯಲು, ಗ್ರಾಹಕರು 299 ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ದೈನಂದಿನ ಡೇಟಾ ಅನಿಯಮಿತ ಪ್ಲಾನ್ ಗಳನ್ನು ಹಾಕಿಸಿಕೊಂಡಿರಬೇಕು.

ಗ್ರಾಹಕರು *999# USSD ಮೂಲಕ ಅಥವಾ 1212 ಗೆ ಕರೆ ಮಾಡುವ ಮೂಲಕ ವಿ ಗ್ಯಾರಂಟಿ - ಹೆಚ್ಚುವರಿ ವ್ಯಾಲಿಡಿಟಿ ಪ್ರಯೋಜನ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು. ವಿ ಗ್ಯಾರಂಟಿ - ಹೆಚ್ಚುವರಿ ಡೇಟಾ ಆಫರ್ ಅನ್ನು ವಿ ಆಪ್ ಮೂಲಕವೂ ಪಡೆಯಬಹುದು.
ನೆಟ್‌ಫ್ಲಿಕ್ಸ್ ಚಂದಾದಾರಿಕೆ ಸೇರ್ಪಡೆ
ವಿ (ವೊಡಾಫೋನ್ ಐಡಿಯಾ) ಇತ್ತೀಚಿಗಷ್ಟೇ ತನ್ನ ಹೊಸ ʼವಿ ಮ್ಯಾಕ್ಸ್ ಫ್ಯಾಮಿಲಿ ಪ್ಲ್ಯಾನ್ ₹ 871ʼ ಗೆ ಸ್ಥಿರ ಪುನರಾವರ್ತಿತ ಪ್ರಯೋಜನವಾಗಿ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಸೇರ್ಪಡೆ ಮಾಡಿದೆ. ನೆಟ್‌ಫ್ಲಿಕ್ಸ್ ಮೂಲ ಚಂದಾದಾರಿಕೆಯ ಜೊತೆಗೆ, ವಿ ಪೋಸ್ಟ್‌ಪೇಯ್ಡ್ ಬಳಕೆದಾರರು ತಮ್ಮ ಮೊಬೈಲ್ ಅಥವಾ ಟೆಲಿವಿಷನ್‌ನಲ್ಲಿ ಜಾಗತಿಕ ಗುಣಮಟ್ಟದ ಮನರಂಜನೆ ಆನಂದಿಸಲು ಸಾಧ್ಯವಾಗಲಿದೆ.
ಈ ಪ್ಲ್ಯಾನ್‌ನಲ್ಲಿ ಇರುವ ಗ್ರಾಹಕರು ನೆಟ್‌ಫ್ಲಿಕ್ಸ್‌ನಿಂದ ವಿವಿಧ ಪ್ರಕಾರಗಳು ಮತ್ತು ವಿಭಾಗಗಳಲ್ಲಿ ವ್ಯಾಪಿಸಿರುವ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ನೆಟ್‌ಫ್ಲಿಕ್ಸ್ ಜೊತೆಗೆ, ಬಳಕೆದಾರರು ಹೆಚ್ಚುವರಿಯಾಗಿ 18 ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ಕಾರ್ಯಕ್ರಮಗಳನ್ನು ಸಹ ವೀಕ್ಷಿಸಬಹುದು. ಇದು ಸದ್ಯಕ್ಕೆ ಲಭ್ಯವಿರುವ ಅತ್ಯಂತ ಸಮಗ್ರ ಮನರಂಜನೆ ಆಧಾರಿತ ಪೋಸ್ಟ್‌ಪೇಯ್ಡ್ ಯೋಜನೆ ಎಂದು ಕಂಪೆನಿಯು ಹೇಳಿಕೊಂಡಿದೆ.


Click it and Unblock the Notifications








