ವಿ ಟೆಲಿಕಾಂನಿಂದ 82ರೂ. ಬೆಲೆಯ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಲಾಂಚ್‌! ಏನೆಲ್ಲಾ ಪ್ರಯೋಜನ!

|

ವೋಡಾಫೋನ್‌ ಐಡಿಯಾ ಟೆಲಿಕಾಂ ದೇಶದ ಅಗ್ರ ಮೂರು ಟೆಲಿಕಾಂ ಕಂಪೆನಿಗಳಲ್ಲಿ ಒಂದೆನಿಸಿಕೊಂಡಿದೆ. ಏರ್‌ಟೆಲ್‌ ಮತ್ತು ಜಿಯೋ ಟೆಲಿಕಾಂಗಳ ಜೊತೆಗೆ ಪೈಪೋಟಿ ನಡೆಸುತ್ತಿರುವ ವಿ ಟೆಲಿಕಾಂ ಹೊಸ ಹೊಸ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಅಗ್ಗದ ಬೆಲೆಯಲ್ಲಿ ಅಧಿಕ ಡೇಟಾ ನೀಡುವ ಹಲವು ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ನೀಡುತ್ತಿದೆ. ಸದ್ಯ ಇದೀಗ ವಿ ಟೆಲಿಕಾಂ 82ರೂ. ಬೆಲೆಯ ಹೊಸ ಪ್ರಿಪೇಯ್ಡ್ ಆಡ್-ಆನ್ ಪ್ಯಾಕ್ ಅನ್ನು ಲಾಂಚ್‌ ಮಾಡಿದೆ.

ವಿ ಟೆಲಿಕಾಂ

ಹೌದು, ವಿ ಟೆಲಿಕಾಂ 82ರೂ. ಬೆಲೆಯ ಹೊಸ ಪ್ರಿಪೇಯ್ಡ್ ಆಡ್-ಆನ್ ಪ್ಲಾನ್‌ ಬಿಡುಗಡೆ ಮಾಡಿದೆ. ಈ ಪ್ಲಾನ್‌ 28 ದಿನಗಳ ಮಾನ್ಯತೆಹೊಂದಿರುವ ಸೋನಿಲೈವ್‌ ಪ್ರೀಮಿಯಂ ಮೊಬೈಲ್-ಒನ್ಲಿ ಚಂದಾದಾರಿಕೆ ಯನ್ನು ನೀಡಲಿದೆ. ಸೋನಿಲೈವ್‌ ಜೊತೆಗೆ ವಿ ಟೆಲಿಕಾಂ ಪಾಲುದಾರಿಕೆಯನ್ನು ಹೊಂದಿರುವುದರಿಂದ ಈ ಪ್ಲಾನ್‌ ಪರಿಚಯಿಸಲಾಗಿದೆ. ಇನ್ನು ಈ ಪ್ಲಾನ್‌ ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ OTT ವಿಷಯದ ಹೊಸ ಪಟ್ಟಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಪ್ರಿಪೇಯ್ಡ್‌ ಪ್ಲಾನ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿ ಟೆಲಿಕಾಂ 82ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂ 82ರೂ. ಪ್ರಿಪೇಯ್ಡ್‌ ಪ್ಲಾನ್‌ ಸೋನಿಲೈವ್‌ ಪ್ರೀಮಿಯಂ ಮೊಬೈಲ್‌ ಓನ್ಲಿ ಚಂದಾದಾರಿಕೆ ನೀಡಲಿದೆ. ಇನ್ನು ವಿ ಟೆಲಿಕಾಂ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ವಿ ಮೂವೀಸ್‌ ಮತ್ತು ಟಿವಿ ​​ಚಂದಾದಾರಿಕೆಯನ್ನು ಸಹ ನೀಡಲಿದೆ. ಜೊತೆಗೆ ಇತರ OTT ಅಪ್ಲಿಕೇಶನ್‌ಗಳಿಂದ ಪ್ರೀಮಿಯಂ ವಿಷಯ ಸೇರಿದಂತೆ 450 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳಿಗೆ ಪ್ರವೇಶವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇನ್ನು 82ರೂ.ಗಳ ವಿ ಪ್ರಿಪೇಯ್ಡ್ ಆಡ್-ಆನ್ ಪ್ಯಾಕ್ UEFA ಚಾಂಪಿಯನ್ಸ್ ಲೀಗ್, WWE, ಬುಂಡೆಸ್ಲಿಗಾ ಮತ್ತು UFC ನಂತಹ ವಿವಿಧ ಕ್ರೀಡಾ ಸ್ಟ್ರೀಮ್‌ಗಳಿಗೆ ಪ್ರವೇಶವನ್ನು ನೀಡಲಿದೆ.

ಸೋನಿಲೈವ್‌

ಇನ್ನು ಈ ಪ್ಲಾನ್‌ನಲ್ಲಿ ಲಭ್ಯವಾಗುವ ಸೋನಿಲೈವ್‌ ಚಂದಾದಾರಿಕೆ ಪ್ರಯೋಜನ ಕೇವಲ ಮೊಬೈಲ್ ಡಿವೈಸ್‌ಗಳಿಗೆ ಮಾತ್ರ ಸೀಮಿತವಾಗಿದೆ. ಅಂದರೆ ನೀವು ನಿಮ್ಮ ಟಿವಿಯಲ್ಲಿ ಸೋನಿಲೈವ್‌ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಇದಲ್ಲದೆ ಈ ಪ್ಲಾನ್‌ನಲ್ಲಿ 14 ದಿನಗಳ ಮಾನ್ಯತೆಯೊಂದಿಗೆ ಲಭ್ಯವಿರುವ 4GB ಡೇಟಾ ಪ್ರಯೋಜನ ಸಿಗಲಿದೆ. ಸೋನಿ ಲೈವ್‌ ಮಾತ್ರವಲ್ಲ ಇತರೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ನೀಡುವ ಹಲವು ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಕೂಡ ವಿ ಟೆಲಿಕಾಂ ನೀಡುತ್ತಿದೆ.

ವಿ ಟೆಲಿಕಾಂನ 601ರೂ. ಪ್ರೀಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂನ 601ರೂ. ಪ್ರೀಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಹೆಚ್ಚುವರಿಯಾಗಿ 16GB ಡೇಟಾ ಸೌಲಭ್ಯ ಸಿಗಲಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಓಟಿಟಿಯ ಒಂದು ವರ್ಷದ ಚಂದಾದಾರಿಕೆಯ ಪ್ರಯೋಜನ ಲಭ್ಯ ಮಾಡಿದೆ. ಹಾಗೆಯೇ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.

ವಿ ಟೆಲಿಕಾಂನ 3099ರೂ. ಪ್ರೀಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂನ 3099ರೂ. ಪ್ರೀಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯಲಿದೆ.

Most Read Articles
Best Mobiles in India

English summary
Vi Rs. 82 prepaid add-on pack Launched with SonyLIV Premium subscription for 28 days

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X