VI ನಿಂದ 948 ರೂ.ಗಳ ಹೊಸ ಪೋಸ್ಟ್‌ಪೇಯ್ಡ್‌ ಫ್ಯಾಮಿಲಿ ಪ್ಲ್ಯಾನ್‌ ಲಾಂಚ್‌!

|

ವೊಡಾಫೋನ್ ಐಡಿಯಾ ಟೆಲಿಕಾಂ ಈಗಾಗಲೇ ತನ್ನ ಗ್ರಾಹಕರಿಗೆ ಹಲವು ಆಕರ್ಷಕ ಡೇಟಾ ಪ್ಲ್ಯಾನ್‌ಗಳನ್ನ ಪರಿಚಯಿಸಿದೆ. ಜಿಯೋ , ಏರ್‌ಟೆಲ್‌ ಟೆಲಿಕಾಂಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಆಕರ್ಷಕ ಪ್ಲ್ಯಾನ್‌ಗಳನ್ನ ಪರಿಚಯಿಸ ಸೈ ಎನಿಸಿಕೊಂಡಿದೆ. ಸದ್ಯ ಇದೀಗ VI ಸಂಸ್ಥೆಯು ಹೊಸ ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಪ್ಲ್ಯಾನ್‌ ಅನ್ನು ಪರಿಚಯಿಸಿದೆ. ಇದು ಪ್ರಾಥಮಿಕ ಬಳಕೆದಾರರಿಗೆ "ಅನಿಯಮಿತ" ಹೈ-ಸ್ಪೀಡ್ ಡೇಟಾ ಪ್ರಯೋಜನಗಳನ್ನು ನೀಡಲಿದೆ. ಎಂಟರ್‌ಟೈನ್‌ಮೆಂಟ್ ಪ್ಲಸ್ 699 ಎಫ್ ಎಂದು ಕರೆಯಲ್ಪಡುವ ಈ ಹೊಸ ವಿ ಪೋಸ್ಟ್‌ಪೇಯ್ಡ್ ಕುಟುಂಬ ಯೋಜನೆ ಎರಡು ಸಂಪರ್ಕಗಳಿಗೆ 948 ರೂ. ಬೆಲೆಯನ್ನು ಹೊಂದಿದೆ.

ವೊಡಾಫೋನ್ ಐಡಿಯಾ

ಹೌದು, ವೊಡಾಫೋನ್ ಐಡಿಯಾ 948 ರೂ ಗಳ ಹೊಸ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ ಅನ್ನು ಪರಿಚಯಿಸಿದೆ. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಐದು ಜನ ಸದಸ್ಯರನ್ನು ಫ್ಯಾಮಿಲಿ ಪ್ಲ್ಯಾನ್‌ಗೆ ಸೇರಿಸಿಕೊಳ್ಳಬಹುದಾಗಿದೆ. ಇನ್ನು ಪ್ರತಿ ಹೊಸ ಸಂಪರ್ಕಕ್ಕೆ 249 ಹೆಚ್ಚುವರಿ ರೂ ಶುಲ್ಕ ಬೀಳಲಿದೆ. ಹಾಗೇ ನೋಡಿದ್ರೆ ವಿನ 948 ಪ್ಲ್ಯಾನ್‌ ಮೂಲಭೂತವಾಗಿ ಜುಲೈನಲ್ಲಿ ಪ್ರಾರಂಭಿಸಿದ 699 ಪೋಸ್ಟ್‌ಪೇಯ್ಡ್ ಯೋಜನೆ ಆಗಿದೆ. ಇನ್ನುಳಿದಂತೆ ಈ ಪ್ಲ್ಯಾನ್‌ ವಿಶೇಷತೆ ಏಣು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೊಡಾಫೋನ್ ಐಡಿಯಾ

ವೊಡಾಫೋನ್ ಐಡಿಯಾ ಪರಿಚಯಿಸಿರುವ ಹೊಸ ಫ್ಯಾಮಿಲಿ ಪೋಸ್ಟ್‌ ಪೇಯ್ಡ್‌ ಪ್ಲ್ಯಾನ್‌ ಅನ್ನು ವಿ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿಲ್ಲ. ಆದರೆ ಲಭ್ಯ ಮಾಹಿತಿಯಂತೆ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಡಾಕ್ಯುಮೆಂಟ್ ರೂ. 948 ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಪ್ಲ್ಯಾನ್‌ ಪ್ರಸ್ತುತ 2020 ರ ಡಿಸೆಂಬರ್ 3 ರಿಂದ ಉತ್ತರ ಪ್ರದೇಶ ಪೂರ್ವ ವಲಯಕ್ಕೆ ಸೀಮಿತವಾಗಿದೆ. ಈ ಯೋಜನೆಯು ಪ್ರಾಥಮಿಕ ಸಂಪರ್ಕಕ್ಕೆ ಅನಿಯಮಿತ ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ, ಆದರೆ ಎರಡನೇ ಸಂಪರ್ಕಕ್ಕಾಗಿ 30GB ಡೇಟಾ ಶೇರ್‌ ಶೇರ್‌ ಮಾಡಬಹುದಾಗಿದೆ. ಇದು ದ್ವಿತೀಯ ಸಂಪರ್ಕಗಳಿಗಾಗಿ 30GB ಡೇಟಾ ರೋಲ್‌ಓವರ್ ಅನ್ನು ಸಹ ತರುತ್ತದೆ.

ಪೋಸ್ಟ್‌ಪೇಯ್ಡ್

ಇನ್ನು ವಾಯ್ಸ್‌ ಕಾಲ್‌ ಪ್ರಯೋಜನಗಳಲ್ಲಿ ರೂ. 948 ಪೋಸ್ಟ್‌ಪೇಯ್ಡ್ ಕುಟುಂಬ ಯೋಜನೆ ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳನ್ನು ನೀಡಲಿದೆ. ಪ್ರಾಥಮಿಕ ಮತ್ತು ದ್ವಿತೀಯಕ ಸಂಪರ್ಕಗಳಿಗೆ ತಿಂಗಳಿಗೆ 100 ಎಸ್‌ಎಂಎಸ್ ಸಹ ಇದೆ. ಇದರ ವಾಣಿಜ್ಯ ಬಳಕೆಯ ನೀತಿಯ ಪ್ರಕಾರ, 150GB ಯನ್ನು ಮೀರಿದ "ಅನಿಯಮಿತ" ಡೇಟಾ ಮತ್ತು ಧ್ವನಿ ಪ್ರಯೋಜನಗಳನ್ನು ಹೊಂದಿರುವ ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ ವ್ಯಕ್ತಿಗಳು ಡೇಟಾ ಬಳಕೆ ಮತ್ತು ಬಿಲ್ ಸರ್ಕಲ್‌ನಲ್ಲಿ 50 ನಿಮಿಷಗಳಿಗಿಂತ ಕಡಿಮೆ (ಒಳಬರುವ ಕರೆಗಳನ್ನು ಒಳಗೊಂಡಂತೆ) ಧ್ವನಿ ಬಳಕೆ ಎಂದು ವಿ ಡಾಕ್ಯುಮೆಂಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದರರ್ಥ ಡೇಟಾ ಮತ್ತು ಧ್ವನಿ ಕರೆ ಪ್ರಯೋಜನಗಳು ತಾಂತ್ರಿಕವಾಗಿ ಅನಿಯಮಿತವಾಗಿರುವುದಿಲ್ಲ, ಆದರೆ ಮಿತಿಗಳು ಎಲ್ಲಾ ಭಾರತೀಯ ಟೆಲ್ಕೋಗಳಲ್ಲಿ ಸಾಮಾನ್ಯವಾಗಿದೆ.

ಪೋಸ್ಟ್‌ಪೇಯ್ಡ್

ಇದಲ್ಲದೆ ರೂ. 948 ಪೋಸ್ಟ್‌ಪೇಯ್ಡ್ ಕುಟುಂಬ ಯೋಜನೆ ಪ್ರಾಥಮಿಕ ಮತ್ತು ದ್ವಿತೀಯಕ ಸಂಪರ್ಕಗಳಿಗೆ ವಾರ್ಷಿಕ ವಿ ಚಲನಚಿತ್ರಗಳು ಮತ್ತು ಟಿವಿ ಪ್ರವೇಶವನ್ನು ಉಚಿತವಾಗಿ ನೀಡಲಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ವಾರ್ಷಿಕ ಆಧಾರದ ಮೇಲೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ZEE 5 ಪ್ರೀಮಿಯಂ ಅನ್ನು ಪಡೆಯಲು ಅರ್ಹರಾಗಿದ್ದಾರೆ. ಇದಲ್ಲದೆ, ನೀವು ಐದು ಸದಸ್ಯರನ್ನು ರೂ. 948 ಪೋಸ್ಟ್ ಪೇಯ್ಡ್ ಕುಟುಂಬ ಯೋಜನೆಗೆ ತರಬಹುದಾಗಿದ್ದು, ಪ್ರತಿ ಸದಸ್ಯರಿಗೆ 249 ರೂ. ಆಗಲಿದೆ.

Most Read Articles
Best Mobiles in India

English summary
The new postpaid family plan will be limited to Uttar Pradesh East circle initially.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X