Home
ಸುದ್ದಿಜಾಲ

ಜಸ್ಟ್‌ 99 ರೂ.! BSNL, Jioಗೆ Vi ಟಕ್ಕರ್.. 200MB ಡೇಟಾ ಜೊತೆ ಇಷ್ಟೊಂದು ಆಫರ್.. ವ್ಯಾಲಿಡಿಟಿ ಎಷ್ಟು?

ಜಸ್ಟ್‌ 99 ರೂ. ರೀಚಾರ್ಜ್‌ ಪ್ಲಾನ್‌! ಒಂದೇ ರಿಚಾರ್ಜ್‌ನಲ್ಲಿ 200MB ಡೇಟಾ ಸೌಲಭ್ಯದ ಜೊತೆಗೆ, ಇಷ್ಟೊಂದು ಆಫರ್‌ ಲಭ್ಯ. ಹೌದು, ವಿ ಟೆಲಿಕಾಂ (Vi) ದೇಶದ ಟೆಲಿಕಾಂ ವಲಯದಲ್ಲಿ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಎನಿಸಿಕೊಂಡಿದೆ. ಈಗಾಗಲೇ ಹಲವು ರೀಚಾರ್ಜ್‌ ಪ್ಲಾನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಇದೀಗ ಹೊಸ ವರ್ಷದ ಅಂಗವಾಗಿ ವಿ ಟೆಲಿಕಾಂ, ಅಗ್ಗದ ವ್ಯಾಲಿಡಿಟಿ ಪ್ಲಾನ್‌ ಅನ್ನು ಪರಿಚಯಿಸಿದೆ. ಅದುವೇ 99 ರೂ.ನ ರೀಚಾರ್ಜ್‌ (Rs. 99 Prepaid Recharge Plan) ಯೋಜನೆ. ಇದು ಅತ್ಯುತ್ತಮ ವ್ಯಾಲಿಡಿಟಿ ಪ್ಲ್ಯಾನ್‌ ಆಗಿರುವುದರಿಂದ, ಬಳಕೆದಾರರ ಗಮನ ಸೆಳೆದಿದೆ.

ಹೌದು, ವಿ ಟೆಲಿಕಾಂ ಜಿಯೋ ಹಾಗೂ ಏರ್‌ಟೆಲ್‌ ಟೆಲಿಕಾಂಗಳಿಗೆ ಪೈಪೋಟಿ ನೀಡುವಂತಹ ಯೋಜನೆಯನ್ನು ಪರಿಚಯಿಸಿದೆ. ಇದು ಈಗಾಗಲೇ ಅಗ್ಗದ ದರದಲ್ಲಿ ಹಲವು ಯೋಜನೆಗಳ ಆಯ್ಕೆ ನೀಡುತ್ತಿದೆ. ಇವುಗಳಲ್ಲಿ ವಿ 99 ರೂ. ರೀಚಾರ್ಜ್‌ ಯೋಜನೆ ಸಹ ಒಂದಾಗಿದೆ. ಹಾಗಾದ್ರೆ ಬನ್ನಿ, ವಿ ಟೆಲಿಕಾಂನ ಈ 99 ರೂ. ರೀಚಾರ್ಜ್‌ ಯೋಜನೆಯ ಪ್ರಯೋಜನಗಳ ಬಗ್ಗೆ ಹಾಗೂ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಜಸ್ಟ್‌ 99 ರೂ.! BSNL, Jioಗೆ Vi ಟಕ್ಕರ್.. 200MB ಡೇಟಾ.. ವ್ಯಾಲಿಡಿಟಿ ಎಷ್ಟು?

ವಿ ಟೆಲಿಕಾಂ 99 ರೂ.ನ ರೀಚಾರ್ಜ್‌ ಪ್ಲಾನ್

ವಿ ಟೆಲಿಕಾಂನ ಈ ಅಗ್ಗದ ಪ್ರೀಪೇಯ್ಡ್‌ ರೀಚಾರ್ಜ್‌ ಬೆಲೆ 99 ರೂ. ಆಗಿದೆ. ಈ ಯೋಜನೆಯಲ್ಲಿ ಒಟ್ಟು 15 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆಯಬಹುದು. ಈ ಅವಧಿಯಲ್ಲಿ ಗ್ರಾಹಕರಿಗೆ ಒಟ್ಟು 200MB ಡೇಟಾ ಸೌಲಭ್ಯ ಸಹ ಲಭ್ಯ ಇರಲಿದೆ. ಅಲ್ಲದೇ 99 ರೂ ಟಾಕ್‌ಟೈಮ್‌ ಇರುತ್ತದೆ. ಅಂದಹಾಗೆ, ಈ ಯೋಜನೆಯಲ್ಲಿ ಔಟ್‌ ಗೋಯಿಂಗ್ (ಹೊರ ಹೋಗುವ) ಎಸ್‌ಎಂಎಸ್‌ ಸೇವೆ ಲಭ್ಯ ಇರುವುದಿಲ್ಲ.

ವಿ ಟೆಲಿಕಾಂ 349 ರೂ. ರೀಚಾರ್ಜ್‌ ಯೋಜನೆ

ವಿ ಟೆಲಿಕಾಂನ 349 ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ದೊರೆಯಲಿದೆ. ಈ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಇದರ ಜೊತೆಗೆ ಅನ್‌ಲಿಮಿಟೆಡ್ ವಾಯ್ಸ್‌ ಕಾಲ್ ಸೌಲಭ್ಯ ಸಹ ಗ್ರಾಹಕರಿಗೆ ಲಭ್ಯವಿದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗುತ್ತದೆ.

ವಿ ಟೆಲಿಕಾಂ 365 ರೂ. ರೀಚಾರ್ಜ್‌ ಪ್ಲಾನ್

ವಿ ಟೆಲಿಕಾಂನ 365 ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಿದೆ. ಅಂದಹಾಗೆ ಈ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಇದರೊಂದಿಗೆ ಅನ್‌ಲಿಮಿಟೆಡ್ ವಾಯ್ಸ್‌ ಕಾಲ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ಸಿಗಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಇರಲಿದೆ.

ವಿ ಟೆಲಿಕಾಂ 449 ರೂ. ರೀಚಾರ್ಜ್‌ ಯೋಜನೆ

ವಿ ಟೆಲಿಕಾಂ 449 ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 3 GB ಡೇಟಾ ಪ್ರಯೋಜನ ಸಿಗಲಿದೆ. ಇದರ ಜೊತೆಗೆ ಅನಿಯಮಿತ ಧ್ವನಿ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ದೊರೆಯುತ್ತದೆ. ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಜೀ5, ಸೋನಿ ಲೈವ್‌ ಸೇರಿ ಇತರೆ ಓಟಿಟಿ ಪ್ರಯೋಜನ ಸಹ ಲಭ್ಯವಿದೆ.

Best Mobiles in India

English summary
Vi Rs. 99 Prepaid Recharge Plan With Access to 200MB Data: check talktime, validity and data benefits details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+