Home
ಸುದ್ದಿಜಾಲ

61 ರೂ.ಗೆ 2GB ಡೇಟಾ ಜೊತೆಗೆ ₹25,000 ಫೋನ್ ವಿಮೆ: Vi ಆಫರ್‌ಗೆ ಟೆಲಿಕಾಂ ಶೇಕ್!

ಭಾರತದಲ್ಲಿ ಪ್ರಿಪೇಯ್ಡ್ ಮೊಬೈಲ್ ಬಳಕೆದಾರರಿಗೆ ಹೊಸ ರೀತಿಯಾದ ಮತ್ತು ಐತಿಹಾಸಿಕವಾದ ಕೊಡುಗೆಯೊಂದನ್ನು ವೊಡಾಫೋನ್ ಐಡಿಯಾ (Vi) ಪರಿಚಯಿಸಿದೆ.! ಜಿಯೋ, ಏರ್‌ಟೆಲ್ ಕಂಪೆನಿಗಳು ಸಹ ಒದಗಿಸದಂತಹ ರೀಚಾರ್ಜ್ ಪ್ಲ್ಯಾನ್‌ಗಳ ಲಾಭವನ್ನು ಇದೀಗ ವೊಡಾಫೋನ್ ಐಡಿಯಾ ಗ್ರಾಹಕರು ಪಡೆಯಲಿದ್ದು, ತಿಂಗಳಿಗೆ ಕೇವಲ 61 ರೂ. ಪಾವತಿಸಿ 2GB ಡೇಟಾ ಮತ್ತು ಫೋನ್ ಮೇಲೆ 25,000 ವರೆಗೆ ವಿಮಾ ಭದ್ರತಾ ಪರಿಹಾರವನ್ನು ಪಡೆಯಬಹುದು.!

ಹೌದು, ಆಯ್ದ ರೀಚಾರ್ಜ್ ಪ್ಲ್ಯಾನ್‌ಗಳೊಂದಿಗೆ ಮೊಬೈಲ್ ಕಳವು ಮತ್ತು ನಷ್ಟ ವಿಮೆಯನ್ನು ಒದಗಿಸುವ ಮೂಲಕ, ದಿನನಿತ್ಯ ಸ್ಮಾರ್ಟ್‌ಫೋನ್ ಮೇಲೆ ಅವಲಂಬಿತವಾಗಿರುವ ಗ್ರಾಹಕರ ಚಿಂತೆ ಕಡಿಮೆ ಮಾಡುವ ಉದ್ದೇಶವನ್ನು ವೊಡಾಫೋನ್ ಐಡಿಯಾ ಹೊಂದಿದೆ. ಇದಕ್ಕಾಗಿ, ಪ್ರಸ್ತುತ ಮೂರು ಪ್ರಿಪೇಯ್ಡ್ ಪ್ಯಾಕ್‌ಗಳಲ್ಲಿ Vi ಮೊಬೈಲ್ ಕಳವು ಮತ್ತು ನಷ್ಟ ವಿಮೆಯನ್ನು ಪ್ರಕಟಿಸಿದ್ದು, ಗ್ರಾಹಕರು ಡೇಟಾ ಜೊತೆಗೆ ತಮ್ಮ ಫೋನಿನ ಸುರಕ್ಷತೆಯನ್ನು ಸಹ ಹೊಂದಲಿದ್ದಾರೆ.

ವೊಡಾಫೋನ್ ಐಡಿಯಾ ಸ್ಪಷ್ಟಪಡಿಸಿರುವಂತೆ, ಗ್ರಾಹಕರು ಈ ಯೋಜನೆಗಾಗಿ ವಿಮೆಯನ್ನು ಪ್ರತ್ಯೇಕವಾಗಿ ಖರೀದಿಸುವ ಅಗತ್ಯ ಇಲ್ಲ. Vi ಪ್ರಿಪೇಯ್ಡ್ ರೀಚಾರ್ಜ್ ಮಾಡಿದರೆ ಸಾಕು, ಅದರ ಜೊತೆಗೆ ಮೊಬೈಲ್ ಡೇಟಾ ಪ್ರಯೋಜನಗಳೊಂದಿಗೆ ವಿಮಾ ರಕ್ಷಣೆ ಸ್ವಯಂಚಾಲಿತವಾಗಿ ಸಕ್ರಿಯವಾಗುತ್ತದೆ. ಇದರಿಂದ ಹೆಚ್ಚುವರಿ ಪ್ರಕ್ರಿಯೆಗಳು, ಕಾಗದದ ಕೆಲಸ ಮತ್ತು ತೊಂದರೆಗಳು ಕಡಿಮೆಯಾಗುತ್ತವೆ. ಪ್ಯಾಕ್‌ಗೆ ಅನುಗುಣವಾಗಿ ವಿಮೆಯ ಅವಧಿ ಬದಲಾಗುತ್ತದೆ ಎಂಬುದನ್ನು ಕಂಪನಿ ಹೇಳಿದೆ.

ಪ್ರಸ್ತುತ 61 ರೂ., 201 ರೂ. ಮತ್ತು 251 ರೂ. ಡೇಟಾ ಪ್ಯಾಕ್ ಯೋಜನೆಗಳಲ್ಲಿ ಈ ಕೊಡುಗೆ ಲಭ್ಯವಿರಲಿದೆ. 61 ರೂ. ರೀಚಾರ್ಜ್‌ನಲ್ಲಿ 2GB ಡೇಟಾ ಸಿಗುತ್ತಿದ್ದು, ಡೇಟಾ ಮಾನ್ಯತೆ 15 ದಿನಗಳಾದರೂ ವಿಮಾ ರಕ್ಷಣೆ 30 ದಿನಗಳ ಕಾಲ ಸಿಗಲಿದೆ,. ರೂ. 201 ಮತ್ತು ರೂ. 251 ಪ್ಯಾಕ್‌ಗಳಲ್ಲಿ ತಲಾ 10GB ಡೇಟಾ ಲಭ್ಯವಿದ್ದು, ಈ ಎರಡೂ ಪ್ಯಾಕ್‌ಗಳಲ್ಲಿ ಡೇಟಾ ಮತ್ತು ವಿಮೆ ಎರಡಕ್ಕೂ 30 ದಿನಗಳ ಮಾನ್ಯತೆ ಇದೆ. ಇವು ಹೆಚ್ಚು ಡೇಟಾ ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿವೆ.

61 ರೂ.ಗೆ 2GB ಡೇಟಾ ಜೊತೆಗೆ ₹25,000 ಫೋನ್ ವಿಮೆ: Vi ಆಫರ್‌ಗೆ ಟೆಲಿಕಾಂ ಶೇಕ್!

ಇನ್ನು ಈ ಕೊಡುಗೆಯು ವಿಮೆ ಆಂಡ್ರಾಯ್ಡ್ ಮತ್ತು ಐಫೋನ್ ಎರಡಕ್ಕೂ ಅನ್ವಯವಾಗುತ್ತದೆ. ಫೋನ್ ಹಾನಿ, ಕಳ್ಳತನ ಅಥವಾ ಸಂಪೂರ್ಣ ನಷ್ಟದ ಸಂದರ್ಭದಲ್ಲೂ ರಕ್ಷಣೆ ನೀಡುತ್ತದೆ. ಕ್ಲೈಮ್‌ಗಳನ್ನು ಡಿಜಿಟಲ್ ಆಗಿ ನಿರ್ವಹಿಸಲಾಗುತ್ತದೆ ಎಂದು Vi ಹೇಳಿದೆ. ಕಡಿಮೆ ದರದಲ್ಲೇ ಹೆಚ್ಚುವರಿ ಭದ್ರತೆ ಸಿಗುತ್ತಿರುವುದರಿಂದ ಈ ಪ್ಯಾಕ್‌ಗಳು ಬಳಕೆದಾರರ ಗಮನ ಸೆಳೆಯುತ್ತಿವೆ. 25,000 ರೂ. ವರೆಗೆ ವಿಮಾ ಕವರ್ ಮತ್ತು ದಾಖಲೆಗಳನ್ನು ಕಡಿತಗೊಳಿಸುವ ನಿರ್ಧಾರವು ಗಮನಾರ್ಹ ಅಂಶವಾಗಿದೆ.

ಸ್ಮಾರ್ಟ್‌ಫೋನ್ ಬೆಲೆಗಳು ಏರಿಕೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಫೋನ್ ಕಳೆದುಕೊಂಡರೆ ಅಥವಾ ಕಳ್ಳತನವಾದರೆ ಆಗುವ ಆರ್ಥಿಕ ಹೊರೆ ದೊಡ್ಡದಾಗುತ್ತದೆ. ಮಧ್ಯಮ ದರ್ಜೆಯ ಸ್ಮಾರ್ಟ್‌ಫೋನ್‌ಗಳನ್ನು ಬದಲಾಯಿಸಲು ಸಾಮಾನ್ಯವಾಗಿ ರೂ. 20,000 ರಿಂದ ರೂ. 25,000 ವರೆಗೆ ಖರ್ಚಾಗುತ್ತದೆ. Vi ನೀಡುತ್ತಿರುವ ವಿಮೆಯ ಗರಿಷ್ಠ ಮೊತ್ತವೂ ಇದೇ ಮಟ್ಟದಲ್ಲಿರುವುದರಿಂದ, ಇದು ವಾಸ್ತವಿಕ ಅಗತ್ಯಕ್ಕೆ ಹೊಂದಿಕೊಳ್ಳುವ ರಕ್ಷಣೆಯಾಗಬಹುದು.

ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಮೊಬೈಲ್ ಕಳವು ಮತ್ತು ನಷ್ಟದ ಅಪಾಯವೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲೇ Vi ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಸರಳ ಮತ್ತು ಸುಲಭವಾದ ವಿಮಾ ಆಯ್ಕೆಯನ್ನು ನೀಡುತ್ತಿದೆ ಎಂದು ಹೇಳಬಹುದು ಕಡಿಮೆ ದರದ ರೀಚಾರ್ಜ್‌ನಲ್ಲೇ ಡೇಟಾ ಜೊತೆಗೆ ಫೋನ್ ಭದ್ರತೆ ಸಿಗುವುದು, ಭವಿಷ್ಯದಲ್ಲಿ ಇಂತಹ ಬಂಡಲ್ ಆಫರ್‌ಗಳಿಗೆ ಹೆಚ್ಚಿನ ಬೇಡಿಕೆ ಮೂಡುವ ಸಾಧ್ಯತೆಯನ್ನು ಸೂಚಿಸುತ್ತದೆ. ಏನಂತಿರಾ?

Best Mobiles in India

English summary
Vodafone Idea (Vi) has launched a new prepaid add-on priced at just ₹61, offering users 2GB high-speed data along with mobile phone insurance coverage of up to ₹25,000. This unique benefit makes Vi the only telecom operator in India to provide phone insurance with such an affordable recharge plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+