ಐಫೋನ್‌ 13 ಖರೀದಿ ಮಾಡೋರಿಗೆ ವೋಡಾಫೋನ್‌ ಐಡಿಯಾದಿಂದ ಬಿಗ್‌ ಆಫರ್‌!

|

ವಿ ಟೆಲಿಕಾಂ ಪ್ರಸ್ತುತ ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಮತ್ತು ಏರ್‌ಟೆಲ್‌ ಜೊತೆಗೆ ಪೈಪೋಟಿ ನಡೆಸುತ್ತಿದೆ. ಇದೇ ಕಾರಣಕ್ಕೆ ಗ್ರಾಹಕರಿಗೆ ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ವಿ ಟೆಲಿಕಾಂ ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಬಿಗ್‌ ಆಫರ್‌ ನೀಡಿದೆ. ಐಫೋನ್ 13 ಖರೀದಿ ಮಾಡುವ ತನ್ನ ಪೋಸ್ಟ್‌ಪೇಯ್ಡ್‌ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ಆಫರ್‌ ನೀಡುವುದಾಗಿ ಹೇಳಿದೆ. ಜೊತೆಗೆ ವಿ ಟೆಲಿಕಾಂ ಕೆಲವು ಪ್ರಿ-ಆರ್ಡರ್ ಆಫರ್‌ಗಳನ್ನು ಅನಾವರಣಗೊಳಿಸಿದೆ.

ವೋಡಾಫೋನ್‌ ಐಡಿಯಾ

ಹೌದು, ವೋಡಾಫೋನ್‌ ಐಡಿಯಾ ತನ್ನ ಪೋಸ್ಟ್‌ಪೇಯ್ಡ್‌ ಗ್ರಾಹಕರು ಐಫೋನ್‌ 13 ಖರೀದಿಸಿದರೆ ಕ್ಯಾಶ್‌ಬ್ಯಾಕ್‌ ನೀಡುವುದಾಗಿ ಹೇಳಿದೆ. ಈ ಆಫರ್‌ನೊಂದಿಗೆ ವಿ ಟೆಲಿಕಾಂನ ಪೋಸ್ಟ್‌ಪೇಯ್ಡ್ ಯೋಜನೆಗಳಾದ 1099ರೂ,ಗಳ Redx ಪ್ಯಾಕ್, 1,699ರೂ,ಗಳ Redx ಫ್ಯಾಮಿಲಿ ಪ್ಯಾಕ್, ಮತ್ತು 2,299ರೂ,ಗಳ Redx ಫ್ಯಾಮಿಲಿ ಪ್ಲಾನ್ ಗಳೊಂದಿಗೆ ಕೆಲವು ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ವಿ ಟೆಲಿಕಾಂ ಬಳಕೆದಾರರಿಗೆ ಐಪೋನ್‌ ಖರೀದಿಸಿದಾಗ ಸಿಗುವ ಆಫರ್‌ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಲಿಕಾಂ

ವಿ ಟೆಲಿಕಾಂ ಬಳಸುವ ಪೋಸ್ಟ್‌ಪೆಯ್ಡ್ ಗ್ರಾಹಕರು ಐಫೋನ್ ಅನ್ನು ಫ್ರೀ ಆರ್ಡರ್ ಮಾಡಿದರೆ, ಭಾರತದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡದ ದಿನವೇ ಐಫೋನ್‌ ನಿಮ್ಮ ಕೈ ಸೇರಲಿದೆ ಎಂದು ಹೇಳಿದೆ. ಇದಲ್ಲದೆ ವೋಡಾಫೋನ್‌ ಐಡಿಯಾದ ರೆಡ್ಎಕ್ಸ್ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಂಡರೆ ಐಫೋನ್‌ ಖರೀದಿಸಿದ ನಂತರ ಮೊದಲ ತಿಂಗಳ ಬಾಡಿಗೆ ಮೊತ್ತದ ಮೇಲೆ "100% ಕ್ಯಾಶ್‌ಬ್ಯಾಕ್" ಸಿಗಲಿದೆ. ವಿ ಟೆಲಿಕಾಂ ಈ ಕ್ಯಾಶ್‌ಬ್ಯಾಕ್ ಅನ್ನು ಬಿಲ್‌ ರೂಪದಲ್ಲಿ ರಿಯಾಯಿತಿಯಾಗಿ ಆರು ತಿಂಗಳಲ್ಲಿ ನೀಡಲಾಗುವುದು ಎಂದು ಉಲ್ಲೇಖಿಸಿದೆ.

ಟೆಲಿಕಾಂ

ಇದಲ್ಲದೆ ವಿ ಟೆಲಿಕಾಂ ಗ್ರಾಹಕರು ಹೆಚ್ಚುವರಿಯಾಗಿ REDX ಪ್ಲಾನ್‌ನಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್‌ಸ್ಟಾರ್, ಇಂಟರ್‌ನ್ಯಾಷನಲ್ ರೋಮಿಂಗ್ ಮತ್ತು ಏರ್‌ಪೋರ್ಟ್ ಲೌಂಜ್ ಆಕ್ಸೆಸ್, ಪ್ರೀಮಿಯಂ ಗ್ರಾಹಕ ಸೇವೆ ಮತ್ತು ಹೆಚ್ಚಿನ ರೀತಿಯ ಪ್ರಯಾಣದ ಸಂದರ್ಭಗಳಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ, ಐಫೋನ್ 13 ಅನ್ನು ಖರೀದಿಸಲು ಬಯಸುವ ಪ್ರಿಪೇಯ್ಡ್ ವಿ ಟೆಲಿಕಾಂ ಬಳಕೆದಾರರು 299ರೂ ಪ್ರಿಪೇಯ್ಡ್ ಪ್ಲಾನ್ ರೀಚಾರ್ಜ್ ಮೇಲೆ ಡಬಲ್ ಡೇಟಾ ಪ್ರಯೋಜನಗಳನ್ನು ಪಡೆಯಬಹುದು. ಈ ಆಫರ್‌ನೊಂದಿಗೆ ವಿಕೆಂಡ್‌ ರೋಲ್‌ಓವರ್‌ ಪ್ರಯೋಜನವನ್ನು ಸಹ ಪಡೆಯಬಹುದು.

ಐಫೋನ್

ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೊ, ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಸೇರಿದಂತೆ ಎಲ್ಲಾ ಐಫೋನ್‌ ಖರೀದಿ ಮೇಲೂ ವಿ ಟೆಲಿಕಾಂನ ಆಫರ್‌ ಅನ್ವಯವಾಗಲಿದೆ. ಗ್ರಾಹಕರು ಇಂದಿನಿಂದ myvi.com, Vi ಆಪ್ ಮತ್ತು ದೇಶಾದ್ಯಂತ 270+ ರಿಟೇಲರ್ ಸ್ಟೋರ್‌ಗಳ ಮೂಲಕ ಐಫೋನ್‌ಗಳನ್ನು ಫ್ರೀ ಆರ್ಡರ್ ಮಾಡಬಹುದು. ವೋಡಾಫೋನ್‌ ಐಡಿಯಾ ವೆಬ್‌ಸೈಟ್‌ನಿಂದ ಫ್ರೀ ಆರ್ಡರ್‌ ಬುಕ್ ಮಾಡುವವರೆಲ್ಲರೂ ಸೆಪ್ಟೆಂಬರ್ 25 ರಿಂದ ಶಿಪ್ಪಿಂಗ್ ಆದ ಕೂಡಲೇ ಐಫೋನ್‌ ಪಡೆಯಬಹುದಾಗಿದೆ.

Best Mobiles in India

English summary
The prepaid Vi users who are planning to buy the iPhone 13 will also be able to avail double data benefits on the recharge of Rs 299 prepaid plan.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X