ವಿ ಟೆಲಿಕಾಂನಿಂದ ಹೊಸ ರೆಡ್‌ಎಕ್ಸ್ ಫ್ಯಾಮಿಲಿ ಪ್ಲ್ಯಾನ್ ಲಾಂಚ್! ಆಫರ್ ಏನು?
ಪ್ರಸ್ತುತ ದೇಶದ ಟೆಲಿಕಾಂ ವಲಯದಲ್ಲಿ ವೊಡಾಫೋನ್ ಐಡಿಯಾ ಏರ್‌ಟೆಲ್ ಮತ್ತು ಜಿಯೋ ಟೆಲಿಕಾಂಗಳ ಜತೆ ಸ್ಫರ್ದೆ ನಡೆಸುತ್ತಿದೆ. ತನ್ನ ಗ್ರಾಹಕರಿಗೆ ಹಲವು ಆಕರ್ಷಕ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅಗ್ಗದ ಬೆಲೆಯಲ್ಲಿ ಅಧಿಕ ಡೇಟಾ ಮತ್ತು ಅನಿಯಮಿತ ಕರೆ ಪ್ರಯೋಜನಗಳನ್ನು ನೀಡುತ್ತಾ ಬಂದಿದೆ. ಇದೀಗ ವಿ ಟೆಲಿಕಾಂ ರೆಡ್ ಎಕ್ಸ್ ಫ್ಯಾಮಿಲಿ ಪ್ಲಾನ್ ಎಂಬ ಹೊಸ ಮಲ್ಟಿ ಕನೆಕ್ಷನ್ ಆಫರ್ ಅನ್ನು ಪರಿಚಯಿಸಿದ್ದು, ಎರಡು ಆಯ್ಕೆಗಳು ಕೂಡ ತಿಂಗಳಿಗೆ 1,699ರೂ ಮತ್ತು 2,299ರೂ. ಬೆಲೆ ಹೊಂದಿವೆ.

ಹೌದು, ವಿ ಟೆಲಿಕಾಂ ಹೊಸ ಮಲ್ಟಿ ಕನೆಕ್ಷನ್ ಆಫರ್ ಅನ್ನು ಪರಿಚಯಿಸಿದೆ. ಈ ಆಫರ್‌ನಲ್ಲಿ ಅನಿಯಮಿತ ಕರೆಗಳು ಮತ್ತು ಡೇಟಾ ಪ್ರಯೋಜನಗಳು ದೊರೆಯಲಿವೆ. ಇದರಲ್ಲಿ 1,699ರೂ, ಯೋಜನೆ ರೆಡ್‌ಎಕ್ಸ್ ಪೋಸ್ಟ್‌ಪೇಯ್ಡ್ ಯೋಜನೆಯು ಮೂರು ಸದಸ್ಯರ ಸಂಪರ್ಕದ ಲಾಭದೊಂದಿಗೆ ಬರುತ್ತದೆ. ಆದರೆ 2,299 ರೆಡ್‌ಎಕ್ಸ್ ಪೋಸ್ಟ್‌ಪೇಯ್ಡ್ ಯೋಜನೆ ಐದು ಸದಸ್ಯರ ಸಂಪರ್ಕವನ್ನು ನೀಡುತ್ತದೆ. ಹಾಗಾದ್ರೆ ಈ ಹೊಸ ಮಲ್ಟಿ ಕನೆಕ್ಷನ್ ಆಫರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿ ಟೆಲಿಕಾಂ ಹೊಸದಾಗಿ ರೆಡ್‌ಎಕ್ಸ್ ಫ್ಯಾಮಿಲಿ ಪ್ಲ್ಯಾನ್ ಪರಿಚಯಿಸಿದೆ. ಇದರಲ್ಲಿ ಎರಡು ಪ್ಲ್ಯಾನ್‌ಗಳಿದ್ದು, ತಿಂಗಳಿಗೆ 1,699ರೂ ಮತ್ತು 2,299ರೂ, ಆಯ್ಕೆಯಲ್ಲಿ ಬರಲಿವೆ. ಇದರಲ್ಲಿ 1,699ರೂ, ರೆಡ್‌ಎಕ್ಸ್ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಮೂರು ಸದಸ್ಯರ ಸಂಪರ್ಕದ ಲಾಭದೊಂದಿಗೆ ಬರುತ್ತದೆ. ಆದರೆ 2,299 ರೆಡ್‌ಎಕ್ಸ್ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಐದು ಸದಸ್ಯರ ಸಂಪರ್ಕವನ್ನು ನೀಡುತ್ತದೆ. ರೆಡ್ ಎಕ್ಸ್ ಫ್ಯಾಮಿಲಿ ಪ್ಲ್ಯಾನ್ ಆಫರ್‌ನೊಂದಿಗೆ 1,099ರೂ ರೆಡ್‌ಎಕ್ಸ್ ಪೋಸ್ಟ್‌ಪೇಯ್ಡ್ ಯೋಜನೆ ಅನಿಯಮಿತ ಡೇಟಾ ಮತ್ತು ಕರೆಗಳನ್ನು ಸಹ ನೀಡುತ್ತದೆ, ಆದರೆ ಇದು ಸಿಂಗಲ್ ಕನೆಕ್ಟ್ ಅನ್ನು ಮಾತ್ರ ಅನುಮತಿಸುತ್ತದೆ.

ಇನ್ನು ಹೊಸ ವಿ 1,699ರೂ ರೆಡ್‌ಎಕ್ಸ್ ಫ್ಯಾಮಿಲಿ ಪ್ಲ್ಯಾನ್ ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರಾಷ್ಟ್ರೀಯ ರೋಮಿಂಗ್ ಕರೆಗಳನ್ನು ನೀಡುತ್ತದೆ. ಇದು ಅನಿಯಮಿತ ಡೇಟಾ ಪ್ರಯೋಜನಗಳನ್ನು ಮತ್ತು ತಿಂಗಳಿಗೆ 3,000 SMS ಸಂದೇಶಗಳನ್ನು ತರುತ್ತದೆ. ಹೆಚ್ಚುವರಿ ಪ್ರಯೋಜನಗಳಲ್ಲಿ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ, ಒಂದು ವರ್ಷದ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ, ವಿ ಮೂವಿಗಳು ಮತ್ತು ಟಿವಿ ವಿಐಪಿಗೆ ಪ್ರವೇಶ, ಅಂತರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿಲ್ದಾಣದ ಲಾಂಜ್‌ಗಳಿಗೆ ಪ್ರವೇಶ (ವರ್ಷಕ್ಕೆ ನಾಲ್ಕು ಬಾರಿ) ಸೌಲಭ್ಯವನ್ನು ನೀಡಲಿದೆ.

ಅಲ್ಲದೆ ವಿ ಟೆಲಿಕಾಂನ 2,299ರೂ, ರೆಡ್‌ಎಕ್ಸ್ ಫ್ಯಾಮಿಲಿ ಪ್ಲ್ಯಾನ್ ಕೂಡ ಒಂದೇ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಇದು ಒಟ್ಟು ಐದು ಸದಸ್ಯರ ಸಂಪರ್ಕಗಳಿಗೆ ಅವಕಾಶ ನೀಡುತ್ತದೆ. ಈ ಪೋಸ್ಟ್‌ಪೇಯ್ಡ್ ರೆಡ್‌ಎಕ್ಸ್ ಯೋಜನೆಗಳಿಗಾಗಿ, ವಿ ಆರು ತಿಂಗಳ ಲಾಕ್-ಇನ್ ಅವಧಿಯನ್ನು ತಂದಿದೆ. ಇದರರ್ಥ ಬಳಕೆದಾರರು ಕನಿಷ್ಟ ಆರು ತಿಂಗಳ ಕಾಲ ಈ ಯೋಜನೆಗಳಿಗೆ ಚಂದಾದಾರರಾಗಿರಬೇಕು ಮತ್ತು ಲಾಕ್-ಇನ್ ಅವಧಿ ಮುಗಿಯುವ ಮೊದಲು ಅವರು ಹೊರಡಲು ಯೋಜಿಸಿದರೆ, ಬಳಕೆದಾರರು ನಿರ್ಗಮನ ಶುಲ್ಕವನ್ನು 3,000ರೂ ನಿಗಧಿಪಡಿಸಲಾಗಿದೆ. ಈ ಹೊಸ ಯೋಜನೆಗಳು ಕಂಪನಿ ಸೈಟ್ ನಲ್ಲಿ ಲೈವ್ ಆಗಿರುತ್ತವೆ.

ಇನ್ನು ವೊಡಾಫೋನ್ ಐಡಿಯಾ 799ರೂ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಕೂಡ ಹೊಂದಿದೆ. ಹಾಗೆಯೇ 699ರೂ,ಗಳ ಫ್ಯಾಮಿಲಿ ಪ್ಲ್ಯಾನ್ ಕೂಡ ಹೊಂದಿದೆ. ಈ ಯೋಜನೆಯು ಎರಡು ಸದಸ್ಯರ ಸಂಪರ್ಕಗಳನ್ನು ನೀಡುತ್ತದೆ. ವೊಡಾಫೋನ್ ಐಡಿಯಾ ತನ್ನ ಹೊಸ ಬಳಕೆದಾರರಿಗೆ 149ರೂ ಬೆಲೆಯ ಆಡ್-ಆನ್ಫ್ಲ್ಯಾನ್ ಸಹ ಪರಿಚಯಿಸಿದೆ.


Click it and Unblock the Notifications



