ಸದ್ಯದಲ್ಲೇ ವಾಟ್ಸಾಪ್ ವೆಬ್‌ನಲ್ಲಿ ವೀಡಿಯೊ ಮತ್ತು ವಾಯ್ಸ್‌ ಕಾಲ್‌ ಫೀಚರ್ಸ್‌ ಲಭ್ಯ!

|

ಜನಪ್ರಿಯ ಇನ್ಸ್‌ಟಂಟ್‌ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಹೊಸ ಸೇವಾ ನಿಯಮದ ವಿವಾದದ ನಡುವೆ ವಾಟ್ಸಾಪ್‌ ತನ್ನ ವೆಬ್‌ ಆವೃತ್ತಿಯಲ್ಲಿ ಕಾಲ್‌ ಮತ್ತು ವೀಡಿಯೊ ಕಾಲ್‌ ಬಟನ್ ಫೀಚರ್ಸ್‌ ಅನ್ನು ಕೆಲವು ವೆಬ್ ಬಳಕೆದಾರರಿಗೆ ಪರಿಚಯಿಸಿದೆ ಎಂದು ಹೇಳಲಾಗಿದೆ. ಗಿಲ್ಲೆರ್ಮೊ ಟೊಮೊಯೊಸ್ ಹೆಸರಿನ ಟ್ವಿಟರ್ ಬಳಕೆದಾರರು ಇತ್ತೀಚಿನ ವಾಟ್ಸಾಪ್ ಫೀಚರ್ಸ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಅಪ್ಲಿಕೇಶನ್‌ನ ವೆಬ್ ಆವೃತ್ತಿಯಲ್ಲಿ ಕಾಣಿಸಿಕೊಂಡಿರುವ ಬೀಟಾವರ್ಷನ್‌ನಲ್ಲಿ ಧ್ವನಿ ಮತ್ತು ವೀಡಿಯೊ ಕರೆ ಗುಂಡಿಗಳನ್ನು ಪರಿಚಯಿಸಿದೆ. ಈ ಫೀಚರ್ಸ್‌ ಸದ್ಯ ಅರ್ಜೆಂಟೀನಾದಲ್ಲಿ ಲಭ್ಯವಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಕೆಲವು ಬಳಕೆದಾರರು ವಾಟ್ಸಾಪ್ ಡೆಸ್ಕ್‌ಟಾಪ್‌ನಲ್ಲಿನ ಚಾಟ್ ಹೆಡರ್‌ನಲ್ಲಿ ಬೀಟಾ ವಾಯ್ಸ್ ಮತ್ತು ವಿಡಿಯೋ ಕರೆಗಳನ್ನು ಗುರುತಿಸಿದ್ದಾರೆ ಎಂದು ವರದಿ ಮಾಡಿದೆ. ಹಾಗಾದ್ರೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ವೆಬ್‌ನಲ್ಲಿಯೂ ವಿಡಿಯೋ ಮತ್ತು ವಾಯ್ಸ್‌ ಕಾಲ್‌ ಬೆಂಬಲ ಇದ್ದರೆ ಎಷ್ಟು ಚೆಂದ ಎಂದು ಅಂದುಕೊಂಡಿದ್ದವಾಟ್ಸಾಪ್‌ ಬಳಕೆದಾರರಿಗೆ ಇದು ಸಾಕಷ್ಟು ಉಪಯುಕ್ತವಾಗಲಿದೆ. ಇನ್ನು ವಾಟ್ಸಾಪ್‌ ವೆಬ್‌ನಲ್ಲಿ ವಾಯ್ಸ್‌ ಕಾಲ್‌ ಮತ್ತು ವಿಡಿಯೋ ಕಾಲ್‌ ಫೀಚರ್ಸ್‌ ಹೇಗಿರಲಿದೆ ಎನ್ನುವ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ವಾಟ್ಸಾಪ್‌ ಸಂಸ್ಥೆ ಆನ್‌ಲೈನ್‌ನಲ್ಲಿ ಹಂಚಿಕೊಂಡಿದೆ. ಇದರಂತೆ ವಾಟ್ಸಾಪ್‌ ಕಾಲ್‌ ಮಾಡಲು ಸ್ಮಾರ್ಟ್‌ಫೋನ್‌ ಬಳಸುವ ಬದಲು ನಿಮ್ಮ ಕಂಪ್ಯೂಟರ್‌, ಲ್ಯಾಪ್‌ಟಾಪ್‌ನ ವಿಶಾಲ ಪರದೆಯನ್ನು ಬಳಸಬಹುದಾಗಿದೆ.

ವಾಟ್ಸಾಪ್

ವಾಟ್ಸಾಪ್ ಪ್ರಸ್ತುತ ತನ್ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮಾತ್ರ ವಾಯ್ಸ್‌ ಮತ್ತು ವೀಡಿಯೊ ಕರೆಗಳನ್ನು ಬೆಂಬಲಿಸುತ್ತದೆ. ಜೊತೆಗೆ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮಾಡಬಹುದಾದ ಎಲ್ಲ ಪ್ರಮುಖ ಕೆಲಸಗಳನ್ನು ಮಾಡಲು ವಾಟ್ಸಾಪ್ ವೆಬ್‌ನಲ್ಲಿಯೂ ಸಹ ಅವಕಾಶ ನೀಡುತ್ತದೆ. ಆದರೆ ವೆಬ್‌ ಆವೃತ್ತಿಯಲ್ಲಿ ಇಲ್ಲಿಯವರೆಗೆ ವಾಯ್ಸ್‌ ಮತ್ತು ವೀಡಿಯೊ ಕರೆ ಮಾಡುವುದಕ್ಕೆ ಅವಕಾಶ ನೀಡಿಲ್ಲ. ಅಲ್ಲದೆ ಹೊಸ ಸಂಪರ್ಕಗಳನ್ನು ಸೇರಿಸುವಂತಹ ಫೀಚರ್ಸ್‌ಗಳನ್ನ ಸಹ ನೀಡಿಲ್ಲ. ಸದ್ಯ ವಾಟ್ಸಾಪ್ ವೆಬ್‌ನಲ್ಲಿ ಕರೆಯನ್ನು ಮಾಡುವುದಕ್ಕೆ ಅವಕಾಶ ನೀಡುವ ಫೀಚರ್ಸ್‌ ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ವೆಬ್‌ನಲ್ಲಿ ಒಳಬರುವ ಕರೆ ಇದ್ದಾಗ ಹೊಸ ಪಾಪ್-ಅಪ್ ವಿಂಡೋ ಪರದೆಯ ಮೇಲೆ ಕಾಣಿಸುತ್ತದೆ. ವಾಟ್ಸಾಪ್ ವೆಬ್‌ನಿಂದಲೇ ಕರೆಯನ್ನು ಸ್ವೀಕರಿಸಲು ಅಥವಾ ನಿರಾಕರಿಸಲು ನೀವು ಆಯ್ಕೆ ಮಾಡುವ ಅವಕಾಶವನ್ನು ಸಹ ನೀಡಿದೆ ಎನ್ನಲಾಗಿದೆ. ಅಲ್ಲದೆ ನೀವು ವಾಟ್ಸಾಪ್ ವೆಬ್‌ನಲ್ಲಿ ಕರೆ ಮಾಡಿದಾಗ ಸಣ್ಣ ವಿಂಡೋ ಕರೆ ಕೊನೆಗೊಳಿಸಲು, ವೀಡಿಯೊಗೆ ಬದಲಾಯಿಸಲು, ಮೈಕ್ರೊಫೋನ್ ಆಫ್ ಮಾಡಲು ಮತ್ತು ಮೆನು ಬಟನ್ ಕ್ರಿಯೆಗಳೊಂದಿಗೆ ಪಾಪ್-ಅಪ್ ಆಗುತ್ತದೆ. ಜೊತೆಗೆ ಈ ಅಪ್‌ಡೇಟ್‌ನಲ್ಲಿ ಗ್ರೂಪ್‌ ವಾಯ್ಸ್‌ ಮತ್ತು ವೀಡಿಯೊ ಕರೆಗಳನ್ನು ಸಹ ಬೆಂಬಲಿಸಲಾಗುತ್ತದೆ ಎಂದು ವಾಟ್ಸಾಪ್‌ನ ಮೂಲಗಳು ಖಚಿತಪಡಿಸಿವೆ.

Best Mobiles in India

English summary
video and voice call feature now available oN whatsapp web.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X