ಆನ್‌ಲೈನ್‌ ಗೇಮ್‌ ವ್ಯಸನ: ಮಕ್ಕಳ ಗಂಭಿರತೆಯ ಅರಿವು ಪೋಷಕರಿಗಿಲ್ಲವಂತೆ!

|

ಇತ್ತೀಚಿಗೆ ವಿಡಿಯೋ ಗೇಮ್‌ಗಳ ವ್ಯಸನ ಅಂಟಿಸಿಕೊಂಡವರು ಮನೋವೈದ್ಯರ ಸಲಹೆಯನ್ನು ಪಡೆಯುವ ಪ್ರಕ್ರಿಯೆಯು ಇಂದು ಸಾಮಾನ್ಯ ಎನಿಸಿದೆ. ಆದರೆ, ಬಹುತೇಕ ಪೋಷಕರಿಗೆ ತಮ್ಮ ಮಕ್ಕಳು ಕ್ರಮೇಣ ವಿಡಿಯೋಗೇಮ್ ಗೀಳಿಗೆ ಒಳಗಾಗುತ್ತಿರುವ ವಿಚಾರದ ಗಂಭಿರತೆಯ ಅರಿವಿಲ್ಲ ಎಂದು ಮಾನಸಿಕ ತಜ್ಞರು ಹೇಳಿದ್ದಾರೆ. ಸ್ಮಾರ್ಟ್‌ಫೋನ್‌ಗಳು ಈಗ ಎಲ್ಲವನ್ನು ಆಕ್ರಮಿಸಿಕೊಂಡಿರುವುದು ನಿಜವಾದರೂ, ವಿಡಿಯೋ ಗೇಮ್ ಮತ್ತು ಆನ್‌ಲೈನ್ ಗೇಮ್‌ಗಳು ಮಾತ್ರ ಯುವಕರಲ್ಲಿ ಹೆಚ್ಚು ಗೀಳು/ಚಟವಾಗಿ ಬದಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಿಡಿಯೋ ಗೇಮ್

ಹೌದು, ಯುವಕರಲ್ಲಿ ವಿಡಿಯೋ ಗೇಮ್ ಸಾಕಷ್ಟು ದುಷ್ಪರಿಣಾಮಗಳನ್ನು ಉಂಟು ಮಾಡುತ್ತಿರುವುದನ್ನು ಮನೋತಜ್ಞರು ಗುರುತಿಸಿದ್ದು, ಯುವಕರ ಮನಸ್ಸು ಸದಾಕಾಲ ಆಟದಲ್ಲಿ ಮಗ್ನವಾಗಿ ಇರುವುದರಿಂದ ಚಂಚಲತೆ ಮೂಡಿಬಂದು ಅಧ್ಯಯನ ಮತ್ತು ಇತರ ಚಟುವಟಿಕೆಗಳ ಕುರಿತು ಅವರ ಆಸಕ್ತಿ ಕಡಿಮೆಯಾಗಿರುವುದರಿಂದ ಅಪಾರ ಹಾನಿ ಉಂಟಾಗುತ್ತದೆ. ಗೇಮ್‌ಗಾಗಿ ಗಂಟೆಗಟ್ಟಲೇ ಸ್ಕ್ರೀನ್ ನೋಡುವುದರಿಂದ ನಿದ್ರಾಹಾನಿ ಉಂಟಾಗಿ ಅದು ನಂತರ ದಿನಗಳಲ್ಲಿ ಇತರ ದೈಹಿಕ ಮತ್ತು ಮಾನಸಿಕ ಸಮಸ್ಸೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ವಿಡಿಯೋಗೇಮ್‌

ಹಲವು ಅಧ್ಯಯನಗಳ ಪ್ರಕಾರ, ಇಂದಿನ ಯುವಕರು ಅಪಾರ ಮೊತ್ತದ ಹಣವನ್ನು ವಿಡಿಯೋಗೇಮ್‌ಗಳಿಗೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅದರಲ್ಲಿರುವ ಅಡಿಕ್ಷನ್ ಗುಣವಾಗಿರುತ್ತದೆ. ಏಕೆಂದರೆ, ಹಲವು ವಿಡಿಯೋಗೇಮ್‌ಗಳು ಉಚಿತ ಎಂದು ಬಿಡುಗಡೆಯಾಗುತ್ತವೆ. ಆರಂಭದಲ್ಲಿ ಉಚಿತವಾಗಿ ಸಿಗುವ ಇಂತಹ ಆಟಗಳನ್ನು ಆಡುವ ಯುವಕರು ಕ್ರಮೇಣ ಅದರಲ್ಲಿರುವ ಮತ್ತು ಹೊಸ ಹೊಸ ಫೀಚರ್‌ಗಳನ್ನು ಹಣಕೊಟ್ಟು ಖರೀದಿಸಬೇಕಾಗುತ್ತದೆ. ಈಗಾಗಲೇ ಗೇಮ್‌ಗೆ ಅಡಿಕ್ಷನ್ ಆಗಿರುವ ಆ ವ್ಯಕ್ತಿ ಹಣಪಾವತಿಗೆ ಮಾನಸಿಕವಾಗಿ ಸಿದ್ಧನಾಗುತ್ತಾನೆ.

ಗೇಮ್ ಅಡಿಕ್ಷನ್

ಇದೇ ರೀತಿಯಲ್ಲಿ ನಾವು ಯುವಕನೋರ್ವನ ವಿಡಿಯೋ ಗೇಮ್ ಅಡಿಕ್ಷನ್ ಅನ್ನು ಸಾಮಾನ್ಯವಾಗಿ ಗುರುತಿಸಬಹುದು. ಆದರೆ, ಆತ ವಿಡಿಯೋ ಗೇಮ್‌ಗಳಿಗೆ ಎಷ್ಟು ಅಡಿಕ್ಟ್ ಆಗಿದ್ದಾನೆ ಎಂಬುದನ್ನು ಮಾತ್ರ ತಿಳಿಯಲು ಆತನ ಜೊತೆ ನಾವು ಸಮಾಲೋಚನೆ ನಡೆಸಬೇಕಾಗುತ್ತದೆ. ಮನಸ್ಸು ಸದಾಕಾಲ ಆಟದಲ್ಲಿ ಮಗ್ನವಾಗಿ ಇರುವುದರಿಂದ ಆತನ ಮನದಲ್ಲಿ ಚಂಚಲತೆ ಮೂಡಿರುತ್ತದೆ. ಇಂತಹ ಸಮಸ್ಯೆಯನ್ನು ಪೋಷಕರು ನಿವಾರಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಇದು ಕೂಡ ಒಂದು ದೊಡ್ಡ ಸಮಸ್ಯೆ ಎಂದು ಮಾನಸಿಕ ತಜ್ಞರೋರ್ವರು ಹೇಳಿದ್ದಾರೆ.

ವ್ಯಸನ

ಧೂಮಪಾನ, ಮದ್ಯಪಾನ, ಮಾದಕವಸ್ತುಗಳು ಮಾನವರಲ್ಲಿ ಸೃಷ್ಟಿಸುವ ವ್ಯಸನದ ಕುರಿತು ಅದಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಇದೀಗ ಇದೇ ರೀತಿಯಲ್ಲಿ ವಿಡಿಯೋ ಗೇಮ್ ಮತ್ತು ಆನ್‌ಲೈನ್ ಗೇಮ್‌ಗಳು ಸಹ ಅಧ್ಯಯನಕ್ಕೆ ಒಳಪಡುತ್ತಿವೆ ಎಂದು ಹೇಳಬಹುದು.ಇತ್ತೀಚಿಗೆ ವಿಡಿಯೋ ಗೇಮ್ ಮತ್ತು ಆನ್‌ಲೈನ್ ಗೇಮ್‌ಗಳು ಮಾದಕವಸ್ತುಗಳಷ್ಟೇ ವ್ಯಸನವಾಗಿ ಬದಲಾಗುತ್ತಿದೆ ಎಂದು ಹಲವು ಮನೋ ವೈಜ್ಞಾನಿಕ ಅಧ್ಯಯನಗಳು ಪುರಾವೆ ಸಹಿತ ಋಜುವಾತು ಮಾಡಿರುವುದರಿಂದ ನಿಮ್ಮ ಮಕ್ಕಳ ಮೇಲೆ ನೀವು ಸಾಕಷ್ಟು ನಿಗಾವಹಿಸಲೇಬೇಕಿದೆ.

Best Mobiles in India

English summary
Video game addiction also known as gaming disorder or internet gaming disorder is generally defined as problematic, compulsive use of video and/or internet. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X