'ವೀಡಿಯೋ ಗೇಮ್‌' ಆಡುವುದು ಇದಕ್ಕಾಗಿ ಒಳ್ಳೆಯದು ಎನ್ನುತ್ತಿದ್ದಾರೆ ವಿಜ್ಞಾನಿಗಳು!!

|

ಪೀಟರ್ ರೂಬಿನ್, WIRED ಹಿರಿಯ ಪ್ರೊಡ್ಯೂಸರ್. ಇವರು ಡಾಕ್ಟರ್ ಗಳನ್ನು, ಅಧ್ಯಯನಕಾರರನ್ನು ಮತ್ತು ಗೇಮ್ ಪರವಾಗಿ ಕೆಲವು ಸ್ಕಿಲ್ ಗಳನ್ನು ಟೆಸ್ಟ್ ಮಾಡಲು ಮುಂದಾದರು. ವೀಡಿಯೋ ಗೇಮ್ ನಮ್ಮ ಆರೋಗ್ಯದ ಮೇಲೆ ಏನು ಪರಿಣಾಮ ಮಾಡುತ್ತದೆ ಎಂಬುದನ್ನು ಪರೀಕ್ಷೆಗೆ ಒಡ್ಡಲು ನಿರ್ಧರಿಸಿದರು. ಈ ರೀತಿಯ ಪರೀಕ್ಷೆಗೆ ಒಡ್ಡಿದಾಗ ಅವರು ಹೊರತಂದ ಫಲಿತಾಂಶ ಮಾತ್ರ ಆಶ್ಚರ್ಯಕರವಾಗಿದೆ ಮತ್ತು ಭವಿಷ್ಯದಲ್ಲಿ ವೀಡಿಯೋ ಗೇಮ್ ಗಳ ನಮ್ಮನ್ನ ಎಲ್ಲಿಗೆ ಕೊಂಡೊಯ್ಯಬಹುದು ಎಂಬ ತರ್ಕಕ್ಕೆ ಒಡ್ಡುತ್ತಿದೆ.

ಹೌದು, ನಮ್ಮ ಮೆದುಳಿಗೆ ವೀಡಿಯೋ ಗೇಮ್ ಗಳು ಸಹಾಯ ಮಾಡುವುದಕ್ಕೆ ಸಾಧ್ಯವಿದೆಯೇ ಎಂಬ ಪ್ರಶ್ನೆಗೆ ಸೂಕ್ತ ಉತ್ತರವನ್ನು ನೀಡಲು ವಿಜ್ಞಾನಿಗಳು ಒದ್ದಾಡುತ್ತಿದ್ದಾರೆ. ಇದೀಗ ಈ ಪ್ರಶ್ನೆಗೆ ಉತ್ತರ ದೊರೆತಿದ್ದು, ಅಂತಹದ್ದೊಂದು ಅತ್ಯುತ್ತಮ ಸಂಶೋಧನೆಯನ್ನು ಸಂಶೋಧಕರು ಪ್ರಸ್ತುತ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೆಲವು ವೈದ್ಯಕೀಯ ಚಿಕಿತ್ಸೆಗಳಿಗೆ ವೀಡಿಯೋ ಗೇಮ್ ಗಳು ಡಿಜಿಟಲ್ ಮೆಡಿಸಿನ್ ಆಗಿ ಬಳಕೆಯಾದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಅಧ್ಯಯನ ನಡೆಸಿರುವ ವಿಜ್ಞಾನಿಗಳು ಹೇಳಿದ್ದಾರೆ.

'ವೀಡಿಯೋ ಗೇಮ್‌' ಆಡುವುದು ಇದಕ್ಕಾಗಿ ಒಳ್ಳೆಯದು ಎನ್ನುತ್ತಿದ್ದಾರೆ ವಿಜ್ಞಾನಿಗಳು!!

ವೀಡಿಯೋ ಗೇಮ್ ಗಳು ಮೆದುಳಿನ ಮೇಲೆ, ಕಣ್ಣುಗಳ ಮೇಲೆ ಹಾಗೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಮಾಡುವ ಪರಿಣಾಮಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಒಂದೇ ಸ್ಥಿತಿಯಲ್ಲಿ ಘಂಟೆಗಳ ಕಾಲ ಕುಳಿತುಕೊಳ್ಳುವುದರಿಂದಾಗಿ ದೈಹಿಕ ಆರೋಗ್ಯ ಹದಗೆಡುತ್ತದೆ ಎಂಬುದು ಒಂದು ವಾದವಾದರೆ, ಕೆಲವರು ವೀಡಿಯೋ ಗೇಮ್ ಗಳು ಮೆದುಳಿನ ಚಿಕಿತ್ಸೆಗೆ ಅಥವಾ ಮೆದುಳಿಗೆ ಟ್ರೈನಿಂಗ್ ನೀಡುವುದಕ್ಕೆ ಅನುಕೂಲಕಾರಿ ಎಂದು ಹೇಳುತ್ತಿದೆ. ಅಂತಹದೊಂದು ಪರೀಕ್ಷೆ ಈ ಕೆಳಗಿನಂತಿದೆ.

ಈಗ ವೀಡಿಯೋ ಗೇಮ್‌ಗಳೇ ಔಷಧಿಗಳು!

ಈಗ ವೀಡಿಯೋ ಗೇಮ್‌ಗಳೇ ಔಷಧಿಗಳು!

ಇಂದೆಂಥ ಹುಚ್ಚು ಹೇಳಿಕೆ ಎಂದು ನೀವು ಅಂದುಕೊಳ್ಳುತ್ತಿರಬಹುದು. ಹೌದು ಅಧ್ಯಯನಕಾರರು ವೀಡಿಯೋ ಗೇಮ್ ಗಳನ್ನು ಬಳಸಿ ನಿಮ್ಮ ದೈನಂದಿನ ಚಟುವಟಿಕೆಗೆ ಮೆದುಳನ್ನು ಚುರುಕುಗೊಳಿಸಲು ವೀಡಿಯೋ ಗೇಮ್ ಗಳನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಕೆಲವು ಮೆದುಳಿನ ಔಷಧಿಗಳಿಗೆ ಅರ್ಥಾತ್ ಚಿಕಿತ್ಸೆಗಳಿಗೆ ಮುಂದಿನ ದಿನಗಳಲ್ಲಿ ಇದನ್ನು ಬಳಕೆ ಮಾಡುವ ಸಾಧ್ಯತೆ ಇದೆ.

ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಗುಣ!

ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಗುಣ!

ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳಾದ ADHD, ಆಟಿಸಂ, ಡಿಪ್ರೆಷನ್,ಅಲ್ಜಿಮರ್ ಕಾಯಿಲೆ ಹಾಗೂ ಇತ್ಯಾದಿಗಳಿಗೆ ಪರಿಹಾರವಾಗಿ ವೀಡಿಯೋ ಗೇಮ್ ಗಳನ್ನು ಬಳಕೆ ಮಾಡುವುದಕ್ಕೆ ಹೇಗೆ ಸಾಧ್ಯ ಎಂಬುದರ ಬಗ್ಗೆ ಸಂಶೋಧನೆ ನಡೆಯುತ್ತಿದೆ. ವೀಡಿಯೋ ಗೇಮ್ ನಮ್ಮ ಆರೋಗ್ಯದ ಮೇಲೆ ಏನು ಪರಿಣಾಮ ಮಾಡುತ್ತದೆ ಎಂಬುದನ್ನು ಪರೀಕ್ಷೆಗೆ ಒಳಗಾದ ವ್ಯಕ್ತಿ ಹೊರತಂದ ಫಲಿತಾಂಶ ಮಾತ್ರ ಆಶ್ಚರ್ಯಕರವಾಗಿದೆ ಮತ್ತು ಭವಿಷ್ಯದಲ್ಲಿ ವೀಡಿಯೋ ಗೇಮ್ ಗಳ ನಮ್ಮನ್ನ ಎಲ್ಲಿಗೆ ಕೊಂಡೊಯ್ಯಬಹುದು ಎಂಬ ತರ್ಕಕ್ಕೆ ಒಡ್ಡುತ್ತಿದೆ.

ಕೆಮಿಕಲ್ ರಹಿತ ಚಿಕಿತ್ಸೆ

ಕೆಮಿಕಲ್ ರಹಿತ ಚಿಕಿತ್ಸೆ

ಯಾವುದೇ ಕೆಮಿಕಲ್ ಗಳು ಇಲ್ಲದೆ ಮೆದುಳಿಗೆ ಸಂಬಂಧಿಸಿದ ಕಾಯಿಲೆಯನ್ನು ಗುಣಪಡಿಸುವುದಕ್ಕೆ ಮಾರ್ಗಗಳನ್ನು ಕಂಡುಹಿಡಿಯಲಾಗುತ್ತಿದೆ.ಪ್ರತಿಯೊಂದು ರೋಗಿಗೂ ಕೂಡ ಕಾಯಿಲೆ ರೂಪ ಬೇರೆ ರೀತಿಯಲ್ಲಿ ಇರುತ್ತದೆ. ಯಾವುದು ಯಾರಿಗೆ ಸೂಕ್ತ ಮತ್ತು ಹೇಗೆ ಸೂಕ್ತ ಎಂಬ ಬಗ್ಗೆ ಅಧ್ಯಯನಗಳು ನಡೆಯುತ್ತಿದೆ. ಈ ಡಿಜಿಟಲ್ ಮೆಡಿಸಿನ್ ನರವ್ಯೂಹಕ್ಕೆ ಸಹಕರಿಸಿ ಮೆದುಳಿನ ಸಮಸ್ಯೆಗೆ ಪರಿಹಾರ ನೀಡುವ ಬಗ್ಗೆ ಈಗ ಅಧ್ಯಯನ ನಡೆಯುತ್ತಿದೆ.

ಡಿಜಿಟಲ್ ಮೆಡಿಸಿನ್ ಬಳಕೆ

ಡಿಜಿಟಲ್ ಮೆಡಿಸಿನ್ ಬಳಕೆ

ರೋಗಿಗಳು ತಾವು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದನ್ನೇ ಮರೆತು ಬಿಡಬೇಕು ಮತ್ತು ಅವರ ಕಾಯಿಲೆ ಅವರಿಗೆ ಗೊತ್ತಿಲ್ಲದೆ ಗುಣವಾಗುವಂತೆ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ಅಧ್ಯಯನಕಾರರು. ಚಿಕಿತ್ಸೆಯಲ್ಲಿ ತೊಡಗಿಕೊಳ್ಳುವುದಕ್ಕೆ ರೋಗಿಗಳು ಅನುಕೂಲಕರವಾದ ವಾತಾವರಣ ಲಭ್ಯವಾಗುವಂತೆ ಮಾಡಿ ಅವರನ್ನು ಚಿಕಿತ್ಸೆಯಲ್ಲಿ ಅವರಿಗೆ ಗೊತ್ತಿಲ್ಲದೆ ತೊಡಗಿಸಿ ಸಮಸ್ಯೆ ಪರಿಹಾರ ಮಾಡುವುದಕ್ಕೆ ವೀಡಿಯೋ ಗೇಮ್ ಗಳಿಂದ ಸಾಧ್ಯವಿದೆ ಎನ್ನಲಾಗುತ್ತಿದೆ.

 ತನಗೇ ಗೊತ್ತಿಲ್ಲದೇ ರೋಗದಿಂದ ಮುಕ್ತ

ತನಗೇ ಗೊತ್ತಿಲ್ಲದೇ ರೋಗದಿಂದ ಮುಕ್ತ

ಗೇಮ್ ಗಳು ಆಕರ್ಷಕವಾಗಿರುತ್ತದೆ. ಅದರಲ್ಲಿ ಸಂತೋಷವಿರುತ್ತದೆ, ರಿವಾರ್ಡ್ ಗಳಿರುತ್ತದೆ, ತಲ್ಲೀನತೆ ಇರುತ್ತದೆ. ಒಟ್ಟಾರೆ ರೋಗಿ ತನಗೇ ಗೊತ್ತಿಲ್ಲದೇ ರೋಗದಿಂದ ಮುಕ್ತವಾಗಿ ಮೆದುಳಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾನೆ. ಹಾಗಾದ್ರೆ ವೀಡಿಯೋ ಗೇಮ್ ಗಳು ಮೆಡಿಸಿನ್ ಗಳಾಗಿ ಕಾರ್ಯನಿರ್ವಹಿಸುವುದು ಬಹುಶ್ಯಃ ಮುಂದಿನ ದಿನಗಳಲ್ಲಿ ಪಕ್ಕಾ ಅನ್ನಿಸುತ್ತಿದೆ. ಹಾಗಾಗಿ, ವಿಡಿಯೋ ಗೇಮ್ ಕೂಡ ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರಲು ಸಾಧ್ಯವಿದೆ.

Best Mobiles in India

English summary
It's true that some studies have shown certain video games can improve hand–eye coordination, problem-solving skills, and the mind's ability to process information. But .to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X