ವ್ಯೂವ್‌ಸೋನಿಕ್‌ನಿಂದ ಮೂರು ಹೊಸ ಪ್ರೊಜೆಕ್ಟರ್‌ ಬಿಡುಗಡೆ

|

ಕೇವಲ ಸಿನಿಮಾ ಮಂದಿರ ಹಾಗೂ ಇತರೆ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಬಳಸಲ್ಪಡುತ್ತಿದ್ದ ಪ್ರೊಜೆಕ್ಟರ್‌ ತಂತ್ರಜ್ಞಾನ ಇಂದು ಬಹುತೇಕ ಎಲ್ಲಾ ಕಡೆಗಳಲ್ಲೂ ಬಳಸುತ್ತಿದ್ದಾರೆ. ಪರದೆಯ ಮೇಲೆ ಚಿತ್ರಗಳನ್ನ ಮೂಡುವಂತೆ ಮಾಡಬಲ್ಲ ಪ್ರೊಜೆಕ್ಟರ್‌ಗಳು ಇಂದು ಶೈಕ್ಷಣಿಕ, ರಾಜಕೀಯ, ಕಾನೂನು, ಸಾಮಾಜಿಕ ಎಲ್ಲಾ ವಲಯಗಳಲ್ಲ ರಂಗಗಳಲ್ಲೂ ಅವಶ್ಯಕತೆಗೆ ತಕ್ಕಂತೆ ಬಳಕೆಯಾಗುತ್ತಿದೆ. ಅದರಲ್ಲೂ ಶಿಕ್ಷಣ ರಂಗದಲ್ಲಿ ಪ್ರೊಜೆಕ್ಟರ್‌ ಮೂಲಕವೇ ಶಿಕ್ಷಣ ನೀಡುವಷ್ಟರ ಮಟ್ಟಿಗೆ ಇಂದು ಟೆಕ್ನಾಲಜಿ ಮುಂದುವರೆದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಪ್ರೊಜೆಕ್ಟರ್‌ಗಳಿಗೆ ಉತ್ತಮ ಬೇಡಿಕೆ ಇದ್ದು, ಈಗಾಗ್ಲೇ ಹಲವು ಕಂಪೆನಿಗಳ ಪ್ರೊಜೆಕ್ಟರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳಲ್ಲಿ ವ್ಯೂವ್‌ಸೋನಿಕ್‌ ಕಂಪೆನಿ ಕೂಡ ಒಂದಾಗಿದೆ.

ಹೌದು

ಹೌದು, ಅಮೇರಿಕಾದ ಪ್ರಸಿದ್ಧ ವಿಶ್ಯುಯಲ್‌ ಟೆಕ್ನಾಲಜಿ ತಯಾರಕ ಕಂಪೆನಿಯಾದ ವ್ಯೂವ್‌ಸೋನಿಕ್ ಈಗಾಗ್ಲೆ ಹಲವಾರು ಪ್ರೊಜೆಕ್ಟರ್‌ಗಳನ್ನ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಇದೀಗ ಭಾರತದಲ್ಲಿ ಹೊಸ ಮಾದರಿಯ ಸೋನಿಕ್ X 100-4k, M2, ಮತ್ತು LS 860WU ಎಂಬ ಮೂರು ಲೈಟ್‌ ಫ್ರೀ ಪ್ರೊಜೆಕ್ಟರ್‌ಗಳನ್ನು ಬಿಡುಗಡೆ ಮಾಡಿದೆ. ಈ ಪ್ರೊಜೆಕ್ಟರ್‌ಗಳು LED ಟೆಕ್ನಾಲಜಿಯನ್ನ ಹೊಂದಿರುವ ಪ್ರೊಜೆಕ್ಟರ್‌ ಆಗಿದ್ದು ಸದ್ಯ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಪ್ರೊಜೆಕ್ಟರ್‌ ಹೇಗಿದೆ ಅನ್ನೊದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ

ವ್ಯೂವ್‌ ಪ್ರೊಜೆಕ್ಟರ್‌

ವ್ಯೂವ್‌ ಪ್ರೊಜೆಕ್ಟರ್‌

ಪ್ರೊಜೆಕ್ಟರ್‌ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ವ್ಯೂವ್‌ ಸೋನಿಕ್‌ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ವ್ಯೂವ್‌ ಸೋನಿಕ್ X 100-4 ಕೆ, M2, ಮತ್ತು LS 860WU ಅನ್ನು ಬಿಡುಗಡೆ ಮಾಡಿದೆ. ಈ ಪ್ರೊಜೆಕ್ಟರ್‌ಗಳ ಮುಖ್ಯ ಲಕ್ಷಣ ಅಂದರೆ ಇವು ಯಾವುದೇ ಮಾದರಿಯ ಲೈಟ್‌ಗಳನ್ನ ಹೊಂದಿರುವುದಿಲ್ಲ. ಇದು LED ಟೆಕ್ನಾಲಜಿಯ ಮೂಲಕವೇ ಗೋಡೆ ಅಥವಾ ಪರದೆಯ ಮೇಲೆ ತನ್ನ ಪ್ರದರ್ಶನವನ್ನ ನೀಡಲಿದೆ. ಅಂದರೆ ಇದು ಲ್ಯಾಂಪ್ಸ್‌ ಫ್ರೀ ಪ್ರೊಜೆಕ್ಟರ್‌ ಆಗಿದೆ.

ವ್ಯೂವ್‌ಸೋನಿಕ್‌ X100-4K

ವ್ಯೂವ್‌ಸೋನಿಕ್‌ X100-4K

ಇನ್ನು ವ್ಯೂವ್‌ಸೋನಿಕ್‌ ಪರಿಚಯಿಸಿರುವ ಹೊಸ ಪ್ರೊಜೆಕ್ಟರ್‌ಗಳಲ್ಲಿ ವ್ಯೂವ್‌ಸೋನಿಕ್‌ x100-4k ಪ್ರಮುಖ ಪ್ರೊಜೆಕ್ಟರ್‌ ಆಗಿದೆ. ಈ ಪ್ರೊಜೆಕ್ಟರ್‌ 3840x2160 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರುವ ಎಲ್ಇಡಿ ಪ್ರೊಜೆಕ್ಟರ್ ಆಗಿದೆ . ಇದು ಎಚ್‌ಡಿಆರ್ ವೀಡಿಯೊಗೆ ಬೆಂಬಲ ನೀಡುತ್ತದೆ. ಅಲ್ಲದೆ ಈ ಪ್ರೊಜೆಕ್ಟರ್ 2,900 ಲ್ಯುಮೆನ್ಸ್‌ ಬ್ರೈಟ್‌ನೆಶ್‌ ರೇಟಿಂಗ್ ಹೊಂದಿದೆ. ಇದರಿಂದಾಗಿ ಪ್ರೊಜೆಕ್ಟರ್‌ ಮೂಲಕ ಹೇಳಬಯಸುವ ವಿಚಾರ ಪರದೆ ಮೇಲೆ ಸ್ಪಷ್ಟವಾಗಿ ಮೂಡಿಬರಲಿದೆ.

ವ್ಯೂವ್‌ಸೋನಿಕ್‌ X100-4K ವಿಶೇಷ

ವ್ಯೂವ್‌ಸೋನಿಕ್‌ X100-4K ವಿಶೇಷ

ಈ ಪ್ರೊಜೆಕ್ಟರ್‌ ತನ್ನದೇ ಆದ ಸ್ಮಾರ್ಟ್ ಪ್ಲಾಟ್‌ಫಾರ್ಮ್‌ನೊಂದಿಗೆ ವೈ-ಫೈ ಸಂಪರ್ಕವನ್ನು ಬೆಂಬಲಿಸಲಿದೆ ಅಲ್ಲದೆ ಗೂಗಲ್ ಅಸಿಸ್ಟೆಂಟ್ ಮತ್ತು ಅಮೆಜಾನ್ ಅಲೆಕ್ಸಾ ವಾಯ್ಸ್‌ ಅಸಿಸ್ಟೆಂಟ್‌ಗೆ ಬೆಂಬಲಿಸಲಿದೆ. ಜೊತೆಗೆ ಈ ಪ್ರೊಜೆಕ್ಟರ್ 300 ಇಂಚಿನ ಪರದೆಯ ಮೇಲೂ ವಿಷಯವನ್ನ ಪ್ರೊಜೆಕ್ಟ್‌ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಈ ಪ್ರೊಜೆಕ್ಟರ್‌ಗೆ ಪ್ರತ್ಯೇಕ ಆಡಿಯೊ ಸಿಸ್ಟಮ್ ಅಗತ್ಯವಿಲ್ಲ. ಇದು ಡೈರೆಕ್ಟ್‌ ಆಡಿಯೊ ಔಟ್‌ಪುಟ್‌ ಗಾಗಿ ಹರ್ಮನ್ ಕಾರ್ಡನ್ ಇಂಟರ್‌ಬಿಲ್ಟ್‌ ಸ್ಪೀಕರ್‌ಗಳನ್ನು ಹೊಂದಿದೆ.

ಇತರೆ

ಇತರೆ

ಇನ್ನು ಭಾರತದಲ್ಲಿ X100-4k ಪ್ರೊಜೆಕ್ಟರ್‌ ಜೊತೆಗೆ ವ್ಯೂವ್‌ಸೋನಿಕ್ ಕಂಪೆನಿ LS860WU ಇನ್ಸಸ್ಟಾಲೇಶನ್‌ ಪ್ರೊಜೆಕ್ಟರ್ ಮತ್ತು M2 ಪೋರ್ಟಬಲ್ ಪ್ರೊಜೆಕ್ಟರ್ ಅನ್ನು ಸಹ ಲಾಂಚ್‌ ಮಾಡಿದೆ. ಇದರಲ್ಲಿ LS860WU ಪ್ರೊಜೆಕ್ಟರ್‌1920x1200 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನ ಹೊಂದಿದ್ದು, 5,000 ಲ್ಯುಮೆನ್ಸ್‌ ಬ್ರೈಟ್‌ನೇಶ್‌ ರೇಟಿಂಗ್‌ ಅನ್ನು ಹೊಂದಿದೆ. ಇದಲ್ಲದೆ M2 ಕಾಂಪ್ಯಾಕ್ಟ್ ಪ್ರೊಜೆಕ್ಟರ್ ಪ್ರಯಾಣ ಮಾಡುವಾಗಲೂ ಪರದೆಯ ಮೇಲೆ ವಿಷಯವನ್ನ ಪ್ರಸ್ತುತಿ ಪಡಿಸುವ ಸಾಮರ್ಥ್ಯ ಹೊಂದಿದ್ದು, 1,200 ಲುಮೆನ್ಸ್‌ ಬ್ರೈಟ್‌ನೆಶ್‌ ರೇಟ್ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸದ್ಯ ಭಾರತದಲ್ಲಿ ಬಿಡುಗಡೆಯಾಗಿರುವ ಮೂರು ವ್ಯೂವ್‌ಸೋನಿಕ್‌ನ ಮೂರು ಪ್ರೊಜೆಕ್ಟರ್‌ಗಳಲ್ಲಿ LS860WU ಪ್ರೊಜೆಕ್ಟರ್‌ ಬೆಲೆ 3,50,000.ರೂ,ಆಗಿದೆ. ಇನ್ನು
ವ್ಯೂವ್‌ಸೋನಿಕ್‌ M2 ಪ್ರೊಜೆಕ್ಟರ್‌ ಬೆಲೆ 98,000.ರೂ ಆಗಿದ್ದು, ವ್ಯೂವ್‌ಸೋನಿಕ್‌ X100-4K ಬೆಲೆ 3,85,000 ರೂ ಆಗಿದ್ದು ಜೂನ್‌ 2020 ರಿಂದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

Best Mobiles in India

English summary
The projectors use LED technology, with up to 4K resolution.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X