Home
ಸುದ್ದಿಜಾಲ

ಪ್ರೊಜೆಕ್ಟರ್‌ ಖರೀದಿಸಬೇಕೆ? ವ್ಯೂಸಾನಿಕ್‌ ಪರಿಚಯಿಸಿದೆ ಹೊಸ ಪೋರ್ಟಬಲ್‌ ಪ್ರೊಜೆಕ್ಟರ್‌!

ವ್ಯೂಸಾನಿಕ್ ಕಂಪೆನಿ ತನ್ನ ಗುಣಮಟ್ಟದ ಸ್ಮಾರ್ಟ್‌ ಹೋಮ್‌ ಡಿವೈಸ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ಸ್ಮಾರ್ಟ್‌ಟಿವಿ ಸೇರಿದಂತೆ ಹಲವು ಆಕರ್ಷಕ ಸ್ಮಾರ್ಟ್‌ ಡಿವೈಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸ M1 ಪ್ರೊ ಸ್ಮಾರ್ಟ್ LED ಪೋರ್ಟಬಲ್ ಪ್ರೊಜೆಕ್ಟರ್‌ ಅನ್ನು ಬಿಡುಗಡೆ ಮಾಡಿದೆ. ಇದು ಅಂಗೈ ಗಾತ್ರದ ಪ್ರೊಜೆಕ್ಟರ್‌ ಆಗಿದ್ದು, 1 ಕೆಜಿಗಿಂತ ಕಡಿಮೆ ತೂಕ ಹೊಂದಿದೆ

ಹೌದು, ವ್ಯೂಸಾನಿಕ್‌ ತನ್ನ M ಸರಣಿಯಲ್ಲಿ ಹೊಸ M1 ಪ್ರೊ ಸ್ಮಾರ್ಟ್ LED ಪೋರ್ಟಬಲ್ ಪ್ರೊಜೆಕ್ಟರ್ ಪರಿಚಯಿಸಿದೆ. ಈ ಪ್ರೊಜೆಕ್ಟರ್‌ ಹರ್ಮನ್ ಕಾರ್ಡನ್ ಸ್ಪೀಕರ್‌ಗಳನ್ನು ಹೊಂದಿದ್ದು, 360 ಡಿಗ್ರಿಯಲ್ಲಿ 720p HD ಚಿತ್ರಗಳನ್ನು ನೀಡಲಿದೆ. ಇನ್ನುಳಿದಂತೆ ಪ್ರೊಜೆಕ್ಟರ್‌ನಲ್ಲಿ ಏನೆಲ್ಲಾ ವಿಶೇಷತೆ ನೀಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರೊಜೆಕ್ಟರ್‌ ಖರೀದಿಸಬೇಕೆ? ವ್ಯೂಸಾನಿಕ್‌ ಪರಿಚಯಿಸಿದೆ ಹೊಸ ಪ್ರೊಜೆಕ್ಟರ್‌!

ವ್ಯೂಸಾನಿಕ್‌ M1 ಪ್ರೊ ಪ್ರೊಜೆಕ್ಟರ್ ಫ್ಲೆಕ್ಸಿಬಲ್‌ ಸ್ಮಾರ್ಟ್‌ಸ್ಟ್ಯಾಂಡ್‌ ಹೊಂದಿರುವ ಅತಿ ಹಗುರವಾದ ಪ್ರೊಜೆಕ್ಟರ್‌ ಆಘಿದೆ. ಇದು ಕೇವಲ 950g ತೂಕವನ್ನು ಹೊಂದಿದ್ದು, ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಇದನ್ನು ನೀವು ಸುಲಭವಾಗಿ ಸಾಗಿಸಬಹುದಾಗಿರುವುದರಿಂದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆಗೆದುಕೊಂಡು ಹೋಗಬಹುದು. ಇನ್ನು ಈ ಪ್ರೊಜೆಕ್ಟರ್‌ ಅನ್ನು ನೀವು ಯುಎಸ್‌ಬಿ ಸಿ ಪೋರ್ಟ್‌ ಮೂಲಕ ಚಾರ್ಜ್‌ ಮಾಡಬಹುದಾಗಿದೆ. ಆದರಿಂದ ಬ್ಯಾಟರಿ ಸಾಮರ್ಥ್ಯ ಖಾಲಿಯಾದಗ ಸುಲಭವಾಗಿ ಚಾರ್ಜ್‌ ಮಾಡಬಹುದು.

ಇನ್ನು ಈ ಪ್ರೊಜೆಕ್ಟರ್‌ ಇನ್‌ಬಿಲ್ಟ್‌ ಬ್ಯಾಟರಿ ಮೂಲಕ ಕಾರ್ಯನಿರ್ವಹಿಸಲಿದೆ. ಇದು ದೀರ್ಘಾವಧಿಯ ಕಾರ್ಯನಿರ್ವಹಣೆಗೆ ಅವಕಾಶ ನೀಡಲಿದೆ. ಇದನ್ನು ನೀವು ಪವರ್‌ ಬ್ಯಾಂಕ್‌ ಮೂಲಕ ಕೂಡ ಚಾರ್ಜ್‌ ಮಾಡಲು ಅವಕಾಶ ನೀಡಲಾಗಿದೆ. ಈ ಪ್ರೊಜೆಕ್ಟರ್‌ ವಿದ್ಯಾರ್ಥಿಗಳು, ಕೋಚಿಂಗ್‌ ತೆಗೆದುಕೊಳ್ಳುವವರಿಗೆ ಉಪಯುಕ್ತ ಎನಿಸಲಿದೆ. ಈ ಪ್ರೊಜೆಕ್ಟರ್‌ ಅನ್ನು ಆನ್ ಮಾಡಿದಾಗ, M1 ಪ್ರೊ 2.5 ಮೀಟರ್‌ನಲ್ಲಿ 100-ಇಂಚಿನ ಚಿತ್ರವನ್ನು ಉತ್ಪಾದಿಸಲಿದೆ. ಇದಲ್ಲದೆ ಈ ಪ್ರೊಜೆಕ್ಟರ್‌ 600 LED ಲ್ಯುಮೆನ್‌ಗಳು ಬ್ರೈಟ್‌ನೆಸ್‌ ಅನ್ನು ಕಾಣಬಹುದಾಗಿದೆ. ಜೊತೆಗೆ, ಕಾಂಪ್ಯಾಕ್ಟ್ ಡಿವೈಸ್‌ ಹರ್ಮನ್ ಕಾರ್ಡನ್ ಸ್ಪೀಕರ್‌ಗಳ ಡ್ಯುಯಲ್ ಸೆಟ್‌ಗಳನ್ನು ಕೂಡ ಒಳಗೊಂಡಿದೆ.

ಪ್ರೊಜೆಕ್ಟರ್‌ ಖರೀದಿಸಬೇಕೆ? ವ್ಯೂಸಾನಿಕ್‌ ಪರಿಚಯಿಸಿದೆ ಹೊಸ ಪ್ರೊಜೆಕ್ಟರ್‌!

ಇನ್ನು ಈ ಪ್ರೊಜೆಕ್ಟರ್‌ ಇನ್‌ಬಿಲ್ಟ್‌ ಬ್ಯಾಟರಿ ಮೂಲಕ ಕಾರ್ಯನಿರ್ವಹಿಸಲಿದೆ. ಜೊತೆಗೆ ನಿಮಗೆ ದೀರ್ಘಾವಧಿಯ ಕಾರ್ಯನಿರ್ವಹಣೆಗಾಗಿ ನೀವು ಪವರ್‌ ಬ್ಯಾಂಕ್‌ ಅನ್ನು ಬಳಸಬಹುದು. ಇದು USB-C ಚಾರ್ಜರ್ ಅನ್ನು ಬೆಂಬಲಿಸಲಿದೆ. ಇದಲ್ಲದೆ M1 ಪ್ರೊ ಪ್ರೊಜೆಕ್ಟರ್‌ 360-ಡಿಗ್ರಿ ಪ್ರೊಜೆಕ್ಷನ್ ಅನ್ನು ನೀಡಲಿದೆ. ಇದರಲ್ಲಿ ನೀವು ಆಟೋ ಪವರ್ ಆನ್/ಆಫ್ ಮತ್ತು ಲೆನ್ಸ್ ಕ್ಯಾಪ್‌ ಅನ್ನು ಕಾಣಬಹುದು. ಇದಕ್ಕಾಗಿ ಇದರ ಪೇಟೆಂಟ್ 3-ಇನ್-1 ಸ್ಮಾರ್ಟ್ ಸ್ಟ್ಯಾಂಡ್‌ನೊಂದಿಗೆ ಹೊಂದಿಕೊಳ್ಳಲಿದೆ. ನೀವು ಪ್ರೊಜೆಕ್ಟರ್‌ ಸ್ಟ್ಯಾಂಡ್ ಅನ್ನು ಸ್ವಿವೆಲ್ ಮಾಡುವ ಮೂಲಕ, ಪ್ರೊಜೆಕ್ಟರ್ ಆಟೋ ಮ್ಯಾಟಿಕ್‌ ಆನ್‌ ಆಗುವಂತೆ ಮಾಡಬಹುದು.

ಇದಲ್ಲದೆ ಪ್ರೊಜೆಕ್ಟರ್ ಲೆನ್ಸ್ ಅನ್ನು ಕವರ್ ಮಾಡಲು ಸ್ಟ್ಯಾಂಡ್ ಅನ್ನು ಹಿಂದಕ್ಕೆ ತಿರುಗಿಸಿದರೆ ಸಾಕು ಪ್ರೊಜೆಕ್ಟರ್‌ ಅನ್ನು ಆಪ್‌ ಮಾಡಲಿದೆ. ಮೆಟಲ್ ಸ್ಟ್ಯಾಂಡ್ ಪ್ರೊಟೆಕ್ಷನ್‌ಗಾಗಿ ಕವರ್ ಆಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಕೂಡ ಪಡೆದಿದೆ. ಜೊತೆಗೆ ಈ ಪ್ರೊಜೆಕ್ಟರ್‌ 30,000 ಗಂಟೆಗಳ ನಿರ್ವಹಣೆ-ಮುಕ್ತ LED ಬೆಳಕಿನ ಮೂಲವನ್ನು ನೀಡಲಿದೆ. ಇನ್ನು ಬಳಕೆದಾರರು ಪ್ರೊಜೆಕ್ಟರ್‌ ಅನ್ನು ಸ್ಮಾರ್ಟ್‌ ಟಚ್‌ ಮೂಲಕ ಕೂಡ ಬಳಸಬಹುದು. ಇದರ ಮೇಲಿನ ಸರಳ ಟಚ್‌ಪ್ಯಾಡ್‌ನೊಂದಿಗೆ ವಾಲ್ಯೂಮ್ ಅನ್ನು ಪ್ಲೇ ಮಾಡಬಹುದು, ಸ್ಟಾಪ್‌ ಮಾಡುವ ಅವಕಾಶ ನೀಡಲಿದೆ.

ಪ್ರೊಜೆಕ್ಟರ್‌ ಖರೀದಿಸಬೇಕೆ? ವ್ಯೂಸಾನಿಕ್‌ ಪರಿಚಯಿಸಿದೆ ಹೊಸ ಪ್ರೊಜೆಕ್ಟರ್‌!

ಇದರೊಂದಿಗೆ ಪ್ರೊಜೆಕ್ಟರ್‌ನಲ್ಲಿ ಎಂಬೆಡೆಡ್ ವೈ-ಫೈ ಸಂಪರ್ಕದೊಂದಿಗೆ, ಸ್ಮಾರ್ಟ್ ಡಿವೈಸ್‌ಗಳನ್ನು ಕನೆಕ್ಟ್‌ ಮಾಡಬಹುದಾಗಿದೆ. M1 ಪ್ರೊ ಜೊತೆಗೆ ವಾಯರ್‌ಲೆಸ್ ಆಗಿ, ವಿಷಯವನ್ನು ಪ್ರತಿಬಿಂಬಿಸಲು ಜೋಡಿಸಬಹುದು. ಹಾಗೆಯೆ ಪೋರ್ಟಬಲ್ ಪ್ರೊಜೆಕ್ಟರ್ ಅನ್ನು ಯಾವುದೇ ಪರಿಸ್ಥಿತಿಗೆ ಸೂಕ್ತವಾದ ವಿವಿಧ ಆಡಿಯೊ ಸೆಟ್ಟಿಂಗ್ಸ್‌ಗಳನ್ನು ನೀಡಲಿದೆ. ಇನ್ನು ಬಳಕೆದಾರರು ಬ್ಲೂಟೂತ್ ಹೆಡ್‌ಫೋನ್‌ಗಳನ್ನು ಕೂಡ ಬಳಸುವುದಕ್ಕೆ ಅವಕಾಶ ನೀಡಲಿದೆ. ಇದಲ್ಲದೆ ಬ್ಲೂಟೂತ್ ಸ್ಪೀಕರ್‌ಗಳಾಗಿ ಕೂಡ ಬಳಸಬಹುದಾಗಿದೆ.

ವ್ಯೂ ಸಾನಿಕ್‌ M1 ಪ್ರೊ ಸ್ಮಾರ್ಟ್ LED ಪೋರ್ಟಬಲ್ ಪ್ರೊಜೆಕ್ಟರ್ ಭಾರತದಲ್ಲಿ 99,000ರೂ. ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಈ ಪ್ರೊಜೆಕ್ಟರ್‌ ಭಾರತದಲ್ಲಿ ಯಾವಾಗ ಮಾರಟಕ್ಕೆ ಬರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Best Mobiles in India

English summary
ViewSonic M1 Pro smart LED portable projector launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+