ಡಿಸ್ಕೌಂಟ್‌ನಲ್ಲಿ ಆಪಲ್ ಐಫೋನ್ ಖರೀದಿಸುವವರಿಗೆ ಇದುವೇ ಬೆಸ್ಟ್ ಟೈಂ!
ಜನಪ್ರಿಯ ಇ-ಕಾಮರ್ಸ್ ರಿಟೇಲರ್ ವಿಜಯ್ ಸೇಲ್ಸ್ ಆಪಲ್ ಡೇಸ್ ಅನ್ನು ಆಯೋಜಿಸಿದೆ. ಇಂದಿನಿಂದ ಅರಂಭವಾಗಿರುವ ಆಪಲ್ ಡೇಸ್ ಸೇಲ್‌ನಲ್ಲಿ ಆಪಲ್ ಐಫೋನ್ ಖರೀದಿಸುವವರಿಗೆ ಬಿಗ್ ಆಫರ್ ನಿಡಲಾಗ್ತಿದೆ. ಇನ್ನು ಈ ಸೇಲ್ ಆಫರ್‌ಗಳು ಅದರ ವಿಜಯ್ ಸೇಲ್ಸ್ ಸ್ಟೋರ್ ಮತ್ತು ವಿಜಯ್ ಸೇಲ್ಸ್ ವೆಬ್‌ಸೈಟ್‌ನಲ್ಲಿ ಮಾನ್ಯವಾಗಿರಲಿದೆ. ವಿಜಯ್ ಸೇಲ್ಸ್ ಆಪಲ್ ಡೇಸ್ ಸೇಲ್‌ನಲ್ಲಿ ಅಪಲ್‌ನ ಐಫೋನ್ 13, ಮ್ಯಾಕ್‌ಬುಕ್ ಏರ್, ಐಪ್ಯಾಡ್ 9th gen ಇವೆಲ್ಲವೂ ಕ್ಯಾಶ್‌ಬ್ಯಾಕ್ ಆಫರ್ ಮತ್ತು ವಿಶೇಷ ಡಿಸ್ಕೌಂಟ್ ಪಡೆದುಕೊಂಡಿವೆ.

ಹೌದು, ಇ-ಕಾಮರ್ಸ್ ರಿ-ಟೇಲರ್ ಸ್ಟೋರ್ ವಿಜಯ್ ಸೇಲ್ಸ್ ಆಪಲ್ ಡೇಸ್ ಸೇಲ್ ನಡೆಸುತ್ತಿದೆ. ಈ ಸೇಲ್‌ನಲ್ಲಿ ಆಪಲ್ ಪ್ರಾಡಕ್ಟ್‌ಗಳಿಗೆ ಬಿಗ್ ಡಿಸ್ಕೌಂಟ್ ನೀಡಲಾಗ್ತಿದೆ. ಆಪಲ್ ಐಫೋನ್ 13 ಅನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಬೇಕೆಂದು ಕೊಂಡವರಿಗೆ ಇದು ಉತ್ತಮ ಸಮಯವಾಗಿದೆ. ಅಲ್ಲದೆ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಎಕ್ಸ್‌ಚೇಂಜ್ ಮಾಡುವ ಮೂಲಕ ಹೆಚ್ಚಿನ ರಿಯಾಯಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ವಿಜಯ್ ಸೇಲ್ಸ್ ಆಪಲ್ ಡೇಸ್ ಸೇಲ್‌ನಲ್ಲಿ ಏನೆಲ್ಲಾ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಿಜಯ್ ಸೇಲ್ಸ್ ಆಪಲ್ ಡೇಸ್ ಐಫೋನ್ 13 ಆಫರ್
ವಿಜಯ್ ಸೇಲ್ಸ್ ಆಪಲ್ ಡೇಸ್‌ನಲ್ಲಿ 79,900ರೂ. ಎಂಆರ್‌ಪಿ ಹೊಂದಿರುವ ಐಫೋನ್ 13 ಅನ್ನು 75,9000 ರೂ.ಗಳಿಗೆ ಖರೀದಿಸಬಹುದಾಗಿದೆ. ಜೊತೆಗೆ HDFC ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 6000ರೂ.ತನಕ ಕ್ಯಾಶ್‌ಬ್ಯಾಕ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದರಿಂದ ನೀವು ಐಫೋನ್ 13 ಅನ್ನು ಕೇವಲ 69,900 ರೂ.ಗಳಿಗೆ ಖರೀದಿಸಬಹುದಾಗಿದೆ. ಆದರೆ ಕ್ಯಾಶ್‌ಬ್ಯಾಕ್ ನಿಮಗೆ ಸಾಮಾನ್ಯವಾಗಿ 90 ದಿನಗಳ ನಂತರ ಕ್ರೆಡಿಟ್ ಆಗಲಿದೆ. ಇನ್ನು ಈ ಎಲ್ಲಾ ಕ್ಯಾಶ್‌ಬ್ಯಾಕ್ ಆಫರ್‌ಗಳು HDFC ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಮಾತ್ರ ಲಭ್ಯವಾಗಲಿದೆ.

ಇನ್ನು ವಿಜಯ್ ಸೇಲ್ಸ್ ನಲ್ಲಿ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೆಚ್ಚಿನ ರಿಯಾಯಿತಿಗಳನ್ನು ಸಹ ಪಡೆಯಬಹುದಾಗಿದೆ. ನಿಮ್ಮ ಎಕ್ಸ್‌ಚೇಂಜ್ ಡಿವೈಸ್ ಕನಿಷ್ಠ 5000 ರೂಪಾಯಿಗಳ ವಿನಿಮಯ ಮೌಲ್ಯವನ್ನು ಹೊಂದಿದ್ದರೆ, ಬಳಕೆದಾರರು ಎಕ್ಸ್‌ಚೇಂಜ್ ಬೋನಸ್ ಮೂಲಕ 3000ರೂ.ಗಳ ಆಫರ್ ಕೂಡ ಪಡೆಯಬಹುದಾಗಿದೆ. ಈ ಮೂಲಕ ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಕ್ಸ್‌ಚೇಂಜ್ ಬೋನಸ್ ಆಫರ್ ಎಲ್ಲವನ್ನು ಸೇರಿಸಿದರೆ ಐಫೋನ್ 13 ನಿಮಗೆ ಕೇವಲ 61,900 ರೂ.ಗೆ ಲಭ್ಯವಾಗಲಿದೆ. ನಿಮ್ಮ ಎಕ್ಸ್‌ಚೇಂಜ್ ಪೋನ್ ಹೆಚ್ಚಿನ ವಿನಿಮಯ ಮೌಲ್ಯವನ್ನು ಹೊಂದಿದ್ದರೆ ಇನ್ನು ಉತ್ತಮ ರಿಯಾಯಿತಿ ಬೋನಸ್ ಅನ್ನು ಪಡೆಯಬಹುದಾಗಿದೆ.

ಇದಲ್ಲದೆ ವಿಜಯ್ ಸೇಲ್ಸ್ ಅಪಲ್ ಡೇಸ್ ಸೇಲ್‌ನಲ್ಲಿ ಐಫೋನ್ 13 ಮಿನಿ 66,400 ರೂ. ಗಳಿಗೆ ಖರೀದಿಸಬಹುದಾಗಿದೆ. ಜೊತೆಗೆ HDFC ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 6000ರೂ. ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಆದರೆ ಐಫೋನ್ 13 ಪ್ರೊ 1,13,900ರೂ.ಗಳಿಂದ ಪ್ರಾರಂಭವಾಗುತ್ತದೆ. ಇದನ್ನು HDFC ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 5000ರೂ. ಕ್ಯಾಶ್‌ಬ್ಯಾಕ್ ಸಿಗಲಿದೆ. ಇನ್ನು ಐಫೋನ್ 13 ಪ್ರೊ ಮ್ಯಾಕ್ಸ್ 1,23,400ರೂ. ಬೆಲೆ ಹೊಂದಿದ್ದು, ಕ್ಯಾಶ್‌ಬ್ಯಾಕ್ ಆಫರ್ ಕೂಡ ದೊರೆಯಲಿದೆ.

ಇನ್ನು ವಿಜಯ್ ಸೇಲ್ಸ್‌ನಲ್ಲಿ ಐಫೋನ್ 11 ಮತ್ತು ಐಫೋನ್ 12ಕೂಡ ಬಿಗ್ ಡಿಸ್ಕೌಂಟ್ ಪಡೆದುಕೊಂಡಿವೆ. ಇದರಲ್ಲಿ ಐಫೋನ್ 11 ನಿಮಗೆ 47,400 ರೂ.ಗಳಿಗೆ ದೊರೆಯಲಿದೆ. ಇದು 4000 ಕ್ಯಾಶ್‌ಬ್ಯಾಕ್ ಆಫರ್ ಕೂಡ ಪಡೆದಿದೆ. ಆದರೆ ಐಫೋನ್ 12 ಕೇವಲ 61,299ರೂ.ಬೆಲೆಗೆ ದೊರೆಯಲಿದೆ. ಜೊತೆಗೆ 5000ರೂ. ಕ್ಯಾಶ್‌ಬ್ಯಾಕ್ ಕೂಡ ನೀಡಲಿದೆ. ಹಾಗೆಯೇ ವಿಜಯ್ ಸೇಲ್ಸ್ ಯಾವುದೇ ಆಪಲ್ ಕೇರ್+ ಅನ್ನು ಯಾವುದೇ ಐಫೋನ್ ಜೊತೆಗೆ ಖರೀದಿಸಿದರೆ 10% ರಿಯಾಯಿತಿಯನ್ನು ನೀಡುತ್ತಿದೆ.

ವಿಶೇಷ ಆಪರ್‌ಗಳು
ಇನ್ನು ಈ ಸೇಲ್‌ನಲ್ಲಿ ಐಪ್ಯಾಡ್ 9th gen ನಿಮಗೆ 29,600ರೂ.ಗಳಿಗೆ ದೊರೆಯಲಿದೆ. ಇದರ ಮೇಲೆ HDFC ಬ್ಯಾಂಕ್ ಕಾರ್ಡ್‌ಗಳಲ್ಲಿ 3000 ರೂ ಕ್ಯಾಶ್‌ಬ್ಯಾಕ್ ಕೂಡ ದೊರೆಯಲಿದೆ. ಹಾಗೆಯೇ 4ನೇ ತಲೆಮಾರಿನ ಐಪ್ಯಾಡ್ ಏರ್ 4000ರೂ ಕ್ಯಾಶ್‌ಬ್ಯಾಕ್‌ನೊಂದಿಗೆ ಕೇವಲ 50,900ರೂ.ಗಳಿಗೆ ಸಿಗಲಿದೆ. ಜೊತೆಗೆ ಐಪ್ಯಾಡ್ ಪ್ರೊ ಮೇಲೂ ಕೂಡ ನಿಮಗೆ 4000ರೂ ಕ್ಯಾಶ್‌ಬ್ಯಾಕ್ ದೊರೆಯಲಿದ್ದು, 67,500ರೂ.ಗಳಿಗೆ ಖರೀದಿಸಬಹುದಾಗಿದೆ. ಇದಲ್ಲದೆ M1 ಚಿಪ್ ಹೊಂದಿರುವ ಮ್ಯಾಕ್‌ಬುಕ್ ಏರ್ ಅನ್ನು HDFC ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 6000ರೂ. ಕ್ಯಾಶ್‌ಬ್ಯಾಕ್ ದೊರೆಯಲಿದ್ದು, ಕೇವಲ 77,610ರೂ.ಗಳಿಗೆ ಖರೀದಿಸಬಹುದಾಗಿದೆ.

ಇನ್ನು ಆಪಲ್ ಕಂಪೆನಿಯ ಮ್ಯಾಕ್‌ಬುಕ್ ಪ್ರೊ ವಿಥ್ M1 ಚಿಪ್ ಅನ್ನು ವಿಜಯ್ ಸೇಲ್ಸ್‌ನಲ್ಲಿ ಖರೀದಿಸಿದರೆ 7000ರೂ.ತನಕ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಇದರಿಂದ ಇದರ ಬೆಲೆ ಕೇವಲ 1,03,610ರೂ.ಗಳಿಗೆ ಇಳಿಕೆಯಾಗಿದೆ. ಇತ್ತೀಚಿನ M1 ಪ್ರೊ ಚಿಪ್‌ನೊಂದಿಗೆ ಬಂದಿರುವ ಹೊಸ ಮ್ಯಾಕ್‌ಬುಕ್ ಪ್ರೊ 10,000 ಕ್ಯಾಶ್‌ಬ್ಯಾಕ್ ಪಡೆದಿದ್ದು, 1,81,200 ರಿಂದ ಪ್ರಾರಂಭವಾಗುತ್ತದೆ. ಇನ್ನು ಯಾವುದೇ ಮ್ಯಾಕ್‌ಬುಕ್‌ನೊಂದಿಗೆ AppleCare+ ಅನ್ನು ಖರೀದಿಸುವವರು ಅದಕ್ಕಾಗಿ ಶೇಕಡಾ 15 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಇದರೊಂದಿಗೆ ವಿಜಯ್ ಸೇಲ್ಸ್ ಆಪಲ್ ಡೇಸ್ ಸೇಲ್‌ನಲ್ಲಿ ಆಪಲ್ ವಾಚ್ ಸೀರೀಸ್ 7 ಕೂಡ ರಿಯಾಯಿತಿ ಪಡೆದಿದೆ. ಇದು ನಿಮಗೆ 39,100ರು.ಗಳಿಗೆ ದೊರೆಯಲಿದ್ದು, 3000ರೂ.ತನಕ ಕ್ಯಾಶ್‌ಬ್ಯಾಕ್ ಆಫರ್ ಪಡೆದಿದೆ. ಆದರೆ ಆಪಲ್ ವಾಚ್ ಎಸ್‌ಇ 27,900ರೂ.ಗಳಿಗೆ ಲಭ್ಯವಾಗಲಿದೆ. ಇದು ಕೂಡ 3000ರೂ.ಗಳ ಕ್ಯಾಶ್‌ಬ್ಯಾಕ್ ಪಡೆದಿದೆ. ಇನ್ನು ಆಪಲ್ ಏರ್ ಪಾಡ್ಸ್ 2ng 12,400ರೂ.ಗಳಿಂದ ರಿಂದ ಪ್ರಾರಂಭವಾದರೆ, ಇತ್ತೀಚಿನ 3 ನೇ ಜನ್ ಏರ್‌ಪಾಡ್‌ಗಳು 17,300ರೂ.ಗಳಿಂದ ರಿಂದ ಪ್ರಾರಂಭವಾಗುತ್ತವೆ. ಈ ಎರಡೂ ಪಾಡ್ಸ್‌ಗಳ ಮೇಲೂ 2000ರೂ.ವರೆಗೆ ಕ್ಯಾಶ್‌ಬ್ಯಾಕ್ ಅಫರ್ ಸಿಗಲಿದೆ. ಇನ್ನು ಏರ್‌ಪಾಡ್ಸ್ ಪ್ರೊ 20 ನಿಮಗೆ 490ರೂ.ಗಳಿಂದ ಆರಂಭವಾಗುತ್ತದೆ. ಇದಲ್ಲದೆ ಏರ್‌ಪಾಡ್ಸ್ ಮ್ಯಾಕ್ಸ್ 59,900ರೂ. MRP ಬದಲಿಗೆ 50,900ರೂ.ಗಳಿಂದ ಪ್ರಾರಂಭವಾಗುತ್ತದೆ. ಇವುಗಳ ಮೇಲೆ ಯಾವುದೇ ಕ್ಯಾಶ್‌ಬ್ಯಾಕ್ ಇರುವುದಿಲ್ಲ.


Click it and Unblock the Notifications








