Home
ಸುದ್ದಿಜಾಲ

ವಿಜಯ್ ಸೇಲ್ಸ್‌ನಿಂದ Apple Days Sale ಆಯೋಜನೆ: ಏನೆಲ್ಲಾ ಆಫರ್ಸ್ ನೋಡಿ!

ವಿಜಯ್ ಸೇಲ್ಸ್ (Vijay Sales) ಭಾರತದಲ್ಲಿ ತನ್ನ ಬಹು ನಿರೀಕ್ಷಿತ Apple Days Sale ಅನ್ನು ಆರಂಭಿಸಿದ್ದು, Apple ಅಭಿಮಾನಿಗಳು ಮತ್ತು ತಂತ್ರಜ್ಞಾನ ಪ್ರಿಯರ ಗಮನವನ್ನು ಸೆಳೆಯುತ್ತಿದೆ. ಡಿಸೆಂಬರ್ 28 ರಿಂದ ಆರಂಭವಾಗಿರುವ ಈ ವಿಶೇಷ ಸೇಲ್ ಜನವರಿ 4 ರವರೆಗೆ ನಡೆಯಲಿದ್ದು, ಹೊಸ iPhone 17 ಸರಣಿ, iPhone 16 ಹಾಗೂ ಹಳೆಯ ಜನಪ್ರಿಯ ಮಾದರಿಗಳ ಮೇಲೆ ಗಮನಾರ್ಹ ಬೆಲೆ ಕಡಿತವನ್ನು ನೀಡುತ್ತಿದೆ. ಇದರೊಂದಿಗೆ iPad, MacBook, Apple Watch ಮತ್ತು AirPods ಗಳ ಮೇಲೂ ಆಕರ್ಷಕ ಆಫರ್‌ಗಳು ಲಭ್ಯವಾಗಿವೆ.

ಈ ಸೇಲ್‌ನಲ್ಲಿ iPhone 17 ಖರೀದಿಸುವ ಗ್ರಾಹಕರು ICICI ಸೇರಿದಂತೆ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ₹4,000 ವರೆಗೆ ತಕ್ಷಣದ ರಿಯಾಯಿತಿಯನ್ನು ಪಡೆಯಬಹುದು. ಜೊತೆಗೆ MyVS ಲಾಯಲ್ಟಿ ಪ್ರೋಗ್ರಾಂ ಅಡಿಯಲ್ಲಿ ₹3,000 ಮೌಲ್ಯದ ರಿವಾರ್ಡ್ ಪಾಯಿಂಟ್‌ಗಳ ಪ್ರಯೋಜನವೂ ಸಿಗುತ್ತದೆ. ಇದೇ ರೀತಿಯ ಬ್ಯಾಂಕ್ ಆಫರ್‌ಗಳು iPhone 17 Pro ಮತ್ತು iPhone 17 Pro Max ಮೇಲೂ ಅನ್ವಯವಾಗುತ್ತವೆ. ಈ ಆಫರ್‌ಗಳೊಂದಿಗೆ iPhone 17 Pro ₹1,21,490 ಕ್ಕೆ ಮತ್ತು Pro Max ₹1,34,490 ಪರಿಣಾಮಕಾರಿ ಬೆಲೆಯಲ್ಲಿ ಲಭ್ಯವಿದೆ.

ಇನ್ನು ಮಧ್ಯಮ ಬಜೆಟ್‌ನಲ್ಲಿ Apple ಫೋನ್ ಹುಡುಕುವವರಿಗೆ ಕೂಡ ಈ ಸೇಲ್ ಆಕರ್ಷಕವಾಗಿದೆ. ಗ್ರಾಹಕರುವ iPhone Air ಅನ್ನು ₹4,000 ರಿಯಾಯಿತಿಯೊಂದಿಗೆ ₹90,990 ಕ್ಕೆ ಖರೀದಿಸಬಹುದು. ಹಾಗೆಯೇ, iPhone 16 ಮತ್ತು iPhone 16 Plus ಮಾದರಿಗಳು ಕ್ರಮವಾಗಿ ₹57,990 ಮತ್ತು ₹64,490 ಕ್ಕೆ ಲಭ್ಯವಿದ್ದು, iPhone 16E ಯ ಬೆಲೆ ₹46,990 ಗೆ ಇಳಿಕೆಯಾಗಿದೆ. ವಿಜಯ್ ಸೇಲ್ಸ್ ಪ್ರಕಾರ, ಈ ಎಲ್ಲಾ ಬೆಲೆಗಳಲ್ಲಿ ICICI ಸೇರಿದಂತೆ ಆಯ್ದ ಬ್ಯಾಂಕ್‌ಗಳ ಮೂಲಕ ₹5,000 ವರೆಗೆ ತಕ್ಷಣದ ಡಿಸ್ಕೌಂಟ್ ಸೇರಿದೆ.

ವಿಜಯ್ ಸೇಲ್ಸ್‌ನಿಂದ Apple Days Sale ಆಯೋಜನೆ: ಏನೆಲ್ಲಾ ಆಫರ್ಸ್ ನೋಡಿ!

ಕೇವಲ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲ. ಹೊಸದಾಗಿ ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್ ಖರೀದಿಸಲು ಯೋಚಿಸುತ್ತಿರುವ ಗ್ರಾಹಕರಿಗೂ ಈ ಸೇಲ್ ಕೊಡುಗೆಗಳನ್ನು ಹೊಂದಿದೆ. ಗ್ರಾಹಕರು iPad (2025) ಮಾದರಿಯನ್ನು ₹30,190 ಕ್ಕೆ, iPad Air (M3) ಅನ್ನು ₹51,490 ಕ್ಕೆ ಮತ್ತು iPad Pro (M5) ಅನ್ನು ₹89,990 ಕ್ಕೆ ಪಡೆಯಬಹುದು. ಈ ಬೆಲೆಗಳು ₹3,000 ವರೆಗೆ ತಕ್ಷಣದ ಬ್ಯಾಂಕ್ ರಿಯಾಯಿತಿಯನ್ನು ಒಳಗೊಂಡಿವೆ.

MacBook ಗಳ ಮೇಲೆ ಕೂಡ ದೊಡ್ಡ ಮಟ್ಟದ ಬೆಲೆ ಕಡಿತ ಲಭ್ಯವಿದೆ. MacBook Air (M4) ಅನ್ನು ₹79,990 ಕ್ಕೆ ಖರೀದಿಸಬಹುದಾದರೆ, M2 ಚಿಪ್ ಹೊಂದಿರುವ MacBook Air ₹64,990 ಕ್ಕೆ ದೊರೆಯುತ್ತದೆ. ಇನ್ನು ಹೊಸ M5 ಚಿಪ್‌ಸೆಟ್ ಹೊಂದಿರುವ MacBook Pro ಅನ್ನು ₹5,000 ಫ್ಲಾಟ್ ಬ್ಯಾಂಕ್ ಡಿಸ್ಕೌಂಟ್‌ನೊಂದಿಗೆ ₹1,52,990 ಕ್ಕೆ ಪಡೆಯಬಹುದು. ಇದು ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಆಯ್ಕೆಯಾಗಿದೆ.

ಆಡಿಯೋ ವಿಭಾಗದಲ್ಲಿಯೂ ವಿಜಯ್ ಸೇಲ್ಸ್ ಗ್ರಾಹಕರಿಗೆ ಲಾಭದಾಯಕ ಡೀಲ್‌ಗಳನ್ನು ನೀಡುತ್ತಿದೆ. ಪ್ರಸ್ತುತ ಬಹುಬೇಡಿಕೆಯ ಆಡಿಯೋ ಡಿವೈಸ್‌ಗಳಲ್ಲಿ ಒಂದಾದ AirPods 4 ಅನ್ನು ಈ ಸೇಲ್‌ನ್ಲಿ ₹10,790 ಕ್ಕೆ ಮಾರಾಟ ಮಾಡಲಾಗುತ್ತಿದ್ದು, AirPods Pro (ಮೂರನೇ ತಲೆಮಾರು) ₹2,000 ರಿಯಾಯಿತಿಯೊಂದಿಗೆ ₹21,990 ಕ್ಕೆ ಲಭ್ಯವಿದೆ. ಇದಕ್ಕೆ ಜೊತೆಗೆ Beats ಆಡಿಯೋ ಉತ್ಪನ್ನಗಳ ಮೇಲೂ ವಿಶೇಷ ಆಫರ್‌ಗಳು ಲಭ್ಯವಿವೆ.

ಒಟ್ಟರೆಯಾಗಿ, ವಿಜಯ್ ಸೇಲ್ಸ್ ಆರಂಭಿಸಿರುವ Apple Days Sale ನಲ್ಲಿ ಎಲ್ಲಾ Apple ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಇದು ಸಕಾಲಿಕ ಅವಕಾಶವಾಗಿದೆ. ಸೀಮಿತ ಅವಧಿಯ ಈ Apple Days Sale ತಂತ್ರಜ್ಞಾನ ಪ್ರಿಯರು, ವಿದ್ಯಾರ್ಥಿಗಳು ಮತ್ತು ಹೊಸ ಸಾಧನಗಳಿಗೆ ಅಪ್‌ಗ್ರೇಡ್ ಮಾಡಲು ಬಯಸುವವರು ಈ ಸೇಲ್ ಅನ್ನು ಗಮನಿಸುವುದು ಸೂಕ್ತ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?, Apple ಉತ್ಪನ್ನಗಳ ಮೇಲೆ ವಿಜಯ್ ಸೇಲ್ಸ್ ಒದಗಿಸುತ್ತಿರುವ ಕೊಡುಗೆಗಳು ಉತ್ತಮವಾಗಿವೆಯೇ? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Vijay Sales Apple Days Sale offering significant price cuts on the new iPhone 17 series, iPhone 16 and old popular models. Along with this, attractive offers are also available on iPad, MacBook, Apple Watch and AirPods.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+