ವಯಸ್ಸಾದಾಗ ಕಾಣಿಸುವಂತೆ ಮಾಡುವ ಮೊಬೈಲ್ ಆಪ್ ವೈರಲ್!

|

ವಯಸ್ಸಾದಾಗ ತಾವು ಹೇಗೆ ಕಾಣಿಸುತ್ತೇವೆ ಎಂಬುದನ್ನು ನಾವೇ ನೋಡೊಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ''ಫೇಸ್‌ಆಪ್" ಎಂಬ ಒಂದು ಆಪ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರ ಫಲವಾಗಿ #FaceApp ಎಂಬ ಹ್ಯಾಶ್‌ಟ್ಯಾಗ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೆಲೆಬ್ರಿಟಿಗಳು ಜತೆಗೆ ಜನ ಸಾಮಾನ್ಯರು ಕೂಡ ಸೆಲೆಬ್ರಿಟಿಗಳು ಜತೆಗೆ ಜನ ಸಾಮಾನ್ಯರು ಕೂಡ ತಾವು ವಯಸ್ಸಾದಾಗ ಹೇಗೆ ಕಾಣಿಸುತ್ತೇವೆ ಎಂಬುದನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ವಯಸ್ಸಾದಾಗ ಕಾಣಿಸುವಂತೆ ಮಾಡುವ ಮೊಬೈಲ್ ಆಪ್ ವೈರಲ್!

ಹೌದು, ವಯಸ್ಸಾದಾಗ ತಾವು ಹೇಗೆ ಕಾಣಿಸುತ್ತೇವೆ ಎಂಬುದನ್ನು ನೈಜತೆಗೆ ಹತ್ತಿರವಾಗಿಯೂ ಕಾಣಿಸುತ್ತಿರುವುದರಿಂದ ಈ ಆಪ್ ವೈರಲ್ ಆಗಿದೆ. ವಿಭಿನ್ನ ಫಿಲ್ಟರ್‌ಗಳು ಹಾಗೂ ವೈಶಿಷ್ಟ್ಯಗಳನ್ನು ಬಳಸಿ ಮುಖಕ್ಕೆ ನೈಜ ಬದಲಾವಣೆ ನೀಡುವ ಒಂದು ಮೊಬೈಲ್ ಅಪ್ಲಿಕೇಶನ್ ನಮ್ಮ ಮುಖವನ್ನು 60 ವರ್ಷಗಳ ಬಳಿಕ ಹೇಗಿರುತ್ತದೆ ಎಂದು ಅಂದಾಜು ಚಿತ್ರವನ್ನು ಪಡೆಯಬಹುದಾಗಿದೆ. ಇದು ಟ್ವಿಟರ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ಜಾಗತಿಕವಾಗಿ ವೈರಲ್ ಆಗುತ್ತಿದೆ.

ಫೇಸ್‌ಆಪ್ ಎನ್ನುವುದು ವಿವಿಧ ಫಿಲ್ಟರ್‌ಗಳು ಮತ್ತು ವೈಶಿಷ್ಟ್ಯಗಳನ್ನು ಬಳಸಿಕೊಂಡು ಮುಖಗಳ ನೈಜ ರೂಪಾಂತರಗಳನ್ನು ರಚಿಸಲು ವಿನ್ಯಾಸಗೊಳಿಸಲಾದ ಮೊಬೈಲ್ ಅಪ್ಲಿಕೇಶನ್‌ ಆಗಿದ್ದು, ಇದರ ಮೊದಲ ಆವೃತ್ತಿಯು 2017 ರಲ್ಲಿ ಬಿಡುಗಡೆಯಾಯಿತು. ಉಚಿತ ಆವೃತ್ತಿಯು ಇದೀಗ ವೈರಲ್‌ ಆಗುತ್ತಿರುವಂತಹ ಫಿಲ್ಟರ್‌ಗಳ ಸೀಮಿತ ಆಯ್ಕೆಯನ್ನು ನೀಡುತ್ತದೆ. ಈ ಆಪ್ ಮೂಲಕವೇ ಫೋಟೋ ತೆಗೆಯಬಹುದು ಅಥವಾ ನಿಮ್ಮದೇ ಕ್ಯಾಮೆರಾದಲ್ಲಿ ಫೋಟೋ ತೆಗೆದು ಆಪ್‌ನಲ್ಲೇ ತಿದ್ದುಪಡಿ ಮಾಡಬಹುದಾಗಿದೆ.

ಅನೇಕ ಬಳಕೆದಾರರು ತಮ್ಮ ನೆಚ್ಚಿನ ಸೆಲೆಬ್ರಿಟಿಗಳು ಮತ್ತು ಕ್ರೀಡಾಪಟುಗಳ ಫೋಟೋಗಳನ್ನು ಫಿಲ್ಟರ್‌ನೊಂದಿಗೆ ಪೋಸ್ಟ್ ಮಾಡುತ್ತಿದ್ದರೆ, ಕೆಲವು ಸೆಲೆಬ್ರಿಟಿಗಳು ಮತ್ತು ಪ್ರಭಾವಶಾಲಿಗಳು ಸಹ ಬ್ಯಾಂಡ್‌ವ್ಯಾಗನ್ ಮೇಲೆ ಹಾರಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಬಳಕೆದಾರರು ರಚಿಸಿದ ಕೊಲಾಜ್ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ, ಫೇಸ್‌ಆಪ್ ಮೊಬೈಲ್ ಆಪ್ ಮತ್ತು #FaceApp ಹ್ಯಾಶ್‌ಟ್ಯಾಗ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ನೀವು ಕೂಡ ವಯಸ್ಸಾದಾಗ ತಾವು ಹೇಗೆ ಕಾಣಿಸುತ್ತೇವೆ ಎಂಬುದನ್ನು ತಿಳಿಯಬೇಕೆಂದರೆ ಈ ಫೇಸ್‌ಆಪ್ ಆನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಆದರೆ, ಈ ಆ್ಯಪ್ ಬಳಸುವುದಕ್ಕೆ ನೀವು ಪರ್ಮಿಶನ್ ನೀಡಬೇಕಾದಾಗ ಎಚ್ಚರಿಕೆ ವಹಿಸುವುದು ಸೂಕ್ತ. ಯಾಕೆಂದರೆ ನಿಮ್ಮ ವೈಯಕ್ತಿಕ ಗ್ಯಾಲರಿಗೆ ಇದು ಪ್ರವೇಶಾವಕಾಶ ಯಾಚಿಸುತ್ತದೆ. ಹಾಗಾಘಿ, ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳುವ ಮೊದಲು ಅದರ ಪ್ರೈವೆಸಿ ಕುರಿತಾದ ನೀತಿಯನ್ನು ಒಮ್ಮೆ ಓದಿಕೊಳ್ಳುವುದು ಸೂಕ್ತ.

Best Mobiles in India

Read more about:
English summary
FaceApp is a mobile application designed to create realistic transformations of faces using various filters and features, the first version of which was released in 2017. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X