Subscribe to Gizbot

ಇನ್ನು ಮೊಬೈಲ್ ಗೇಮ್‌ಗಳಲ್ಲಿ ವಿರಾಟ್ ಕೋಹ್ಲಿಯದ್ದೇ ಕಾರುಬಾರು

Written By:

ಭಾರತೀಯ ಕ್ರಿಕೆಟ್ ಆಟಗಾರ ವಿರಾಟ್ ಕೋಹ್ಲಿಯನ್ನು ಮುಂದಿನ ಮೂರು ವರ್ಷಗಳಿಗಾಗಿ ಮೊಬೈಲ್ ಗೇಮ್‌ಗಳಲ್ಲಿ ರಾರಾಜಿಸಲಿದ್ದಾರೆ. ಹೆಚ್ಚು ಖ್ಯಾತಿಯ ನಜಾರಾ ಟೆಕ್ನಾಲಜೀಸ್, ಎಂಬ ಮೊಬೈಲ್ ಗೇಮ್ ಡೆವಲಪರ್ ಸಿಎಸ್ಇ (a sister concern of Cornerstone Sport and Entertainment Pvt Ltd) ಜೊತೆ ಒಪ್ಪಂದ ಮಾಡಿಕೊಂಡಿದ್ದು, ವಿರಾಟ್ ಕೋಹ್ಲಿಯ ಮಾರ್ಕೆಟ್ ಗೇಮ್ಸ್‌ಗಳನ್ನು ಅಭಿವೃದ್ಧಿಪಡಿಸಲಿದೆ ಮತ್ತು ಮಾರಾಟ ಮಾಡಲಿದೆ.

ಇನ್ನು ಮೊಬೈಲ್ ಗೇಮ್‌ಗಳಲ್ಲಿ ವಿರಾಟ್ ಕೋಹ್ಲಿಯದ್ದೇ ಕಾರುಬಾರು

ಒಪ್ಪಂದದ ಪ್ರಕಾರ ಮೊಬೈಲ್, ವೆಬ್ ಮತ್ತು ಡಿಟಿಎಚ್‌ ಸೇರಿದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗೇಮ್ ತಯಾರು ಮಾಡುವ ವಿಶೇಷ ಹಕ್ಕುಗಳನ್ನು ನಜಾರಾ ಪಡೆದುಕೊಂಡಿದೆ .

ಮಿಲಿಯಗಟ್ಟಲೆ ಜನರು ಸ್ಮಾರ್ಟ್‌ಫೋನ್‌ನಲ್ಲಿ ಆಟಗಳನ್ನು ಆಡುತ್ತಿದ್ದಾರೆ.ಇನ್ನು ವಿರಾಟ್ ಕೋಹ್ಲಿಯನ್ನೇ ಹೋಲುವ ಎನಿಮೇಶನ್ ಪಾತ್ರಗಳು ಆಟದ ಮಜವನ್ನು ಹೆಚ್ಚಿಸುವುದು ಖಂಡಿತ. ಅದೂ ಅಲ್ಲದೆ ತಮ್ಮ ಅಭಿಮಾನಿಗಳಿಗೆ ಶುಭಾಶಯ ತಿಳಿಸಲು ಇದೊಂದು ಸುವರ್ಣವಕಾಶವಾಗಿದೆ ಎಂದು ಸ್ವತಃ ಕೋಹ್ಲಿಯೇ ತಿಳಿಸಿದ್ದಾರೆ.

ಇನ್ನು ಮೊಬೈಲ್ ಗೇಮ್‌ಗಳಲ್ಲಿ ವಿರಾಟ್ ಕೋಹ್ಲಿಯದ್ದೇ ಕಾರುಬಾರು

ವಿರಾಟ್ ಕೋಹ್ಲಿಯನ್ನು ಆಧರಿಸಿದ 3 ರಿಂದ 5 ಗೇಮ್‌ಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ನಜಾರಾ ಟೆಕ್ನೋಲಜಿ ಕಾರ್ಯೋನ್ಮುಖಗೊಂಡಿದೆ. ಜಾಹೀರಾತು, ಪ್ರಾಯೋಜಕಗಳು ಮತ್ತು ಅಪ್ಲಿಕೇಶನ್ ಖರೀದಿಯಂತಹ ಮಾಡೆಲ್‌ಗಳ ಮೂಲಕ ಆದಾಯ ಬರಲಿದ್ದು ಬಳಕೆದಾರರು ಉಚಿತವಾಗಿ ಈ ಆಟಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

English summary
This article tells about A mobile game developer will distribute and market games around Indian cricketer Virat Kohli for the next three years.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot