Home
ಸುದ್ದಿಜಾಲ

ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳಿಂದ 'ವಿರಾಟ್ ಕೊಹ್ಲಿ' ವೆಬ್‌ಸೈಟ್ ಹ್ಯಾಕ್!..ಪೋಸ್ಟ್ ವೈರಲ್!!

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಏಷ್ಯಾಕಪ್ ಫೈನಲ್‌ನಲ್ಲಿ ಬಾಂಗ್ಲಾದೇಶ ಮುಗ್ಗರಿಸಿದ ನಂತರ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ವೆಬ್‌ಸೈಟ್ ಹ್ಯಾಕ್ ಮಾಡಿದ್ದಾರೆ. ಸೈಬರ್ ಸೆಕ್ಯುರಿಟಿ ಮತ್ತು ಇಂಟೆಲಿಜೆನ್ಸ್ ಎಂದು ಕರೆಯಲ್ಪಡುವ ಬಾಂಗ್ಲಾದೇಶದ ಹ್ಯಾಕಿಂಗ್ ಗುಂಪೊಂದು ಇಂತಹ ಕೆಲಸವನ್ನು ಮಾಡಿದೆ.

ಏಷ್ಯಾಕಪ್ ಫೈನಲ್‌ನಲ್ಲಿ ಅಂಪೈರ್‌ನಿಂದ ಅನ್ಯಾಯವಾಗಿದ್ದು ಅದರ ವಿರುದ್ಧ ಪ್ರತಿಭಟನೆ ನಡೆಸಲು ಈ ಹ್ಯಾಕ್ ಮಾಡಲಾಗಿದೆ ಎಂದು ಸೈಬರ್ ಸೆಕ್ಯುರಿಟಿ ಮತ್ತು ಇಂಟೆಲಿಜೆನ್ಸ್ ಗುಂಪು ಹೇಳಿಕೊಂಡಿದೆ. ವಿರಾಟ್ ಕೊಹ್ಲಿ ಅಫಿಷಿಯಲ್ ವೆಬ್‌ಸೈಟ್‌ ಹ್ಯಾಕ್ ಮಾಡಿದ ನಂತರ ಅದರಲ್ಲಿ ಪೋಸ್ಟ್ ಮಾಡಿರುವ ಬಾಂಗ್ಲಾ ಹ್ಯಾಕರ್ಸ್ ವಿಶ್ವ ಕ್ರಿಕೆಟ್ ಮಂಡಳಿ ಮೇಲೆ ಕಿಡಿಕಾರಿದ್ದಾರೆ.

ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳಿಂದ 'ವಿರಾಟ್ ಕೊಹ್ಲಿ' ವೆಬ್‌ಸೈಟ್ ಹ್ಯಾಕ್!

'ಪ್ರೀತಿಯ ಐಸಿಸಿ, ಕ್ರಿಕೆಟ್ ಅನ್ನು ಜೆಂಟಲ್ ಮ್ಯಾನ್ ಆಟ ಎಂದು ಕರೆಯುವುದಿಲ್ಲವೇ?, ಪ್ರತಿ ತಂಡಕ್ಕೆ ನ್ಯಾಯೋಚಿತ ಹಕ್ಕುಗಳು ಇರಬಾರದೇ?, ದಯವಿಟ್ಟು ಅದು ಹೇಗೆ ಔಟ್ ಎಂದು ವಿವರಿಸಿ,? ನೀವು ಪ್ರಪಂಚದಾದ್ಯಂತ ಅಧಿಕೃತವಾಗಿ ಕ್ಷಮೆಯಾಚಿಸಿ ಅಂಪೈರ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಪ್ರತಿ ಬಾರಿ ಹ್ಯಾಕ್ ಎದುರಿಸಲು ಸಿದ್ಧರಾಗಿರಿ' ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಭಾರತೀಯರನ್ನು ದೂಷಿಸದ ಬಾಂಗ್ಲಾ ಹ್ಯಾಕರ್ಸ್‌ಗಳು, ನಮ್ಮ ಭಾರತೀಯ ಅಣ್ಣ ತಂಗಿಯರೇ, ನಾವು ನಿಮಗೆ ಅಗೌರವ ತೋರಿಸಲುವ ಉದ್ದೇಶವನ್ನು ಹೊಂದಿಲ್ಲ.ದಯವಿಟ್ಟು ಈ ಬಗ್ಗೆ ಯೋಚಿಸಿ, ನಿಮ್ಮ ತಂಡಕ್ಕೆ ಅನ್ಯಾಯವಾದರೆ ಆ ಕ್ಷಣ ಹೇಗಿರಿತ್ತದೆ ಹೇಳಿ. ಎಲ್ಲ ದೇಶಗಳ ತಲ್ಲಾ ತಂಡಗಳನ್ನು ಸಮನಾಗಿ ಕಾಣಬೇಕು ಎಂದು ಅದೇ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳಿಂದ 'ವಿರಾಟ್ ಕೊಹ್ಲಿ' ವೆಬ್‌ಸೈಟ್ ಹ್ಯಾಕ್!

ಇನ್ನು ಇತ್ತೀಚಿಗೆ ದುಬೈನಲ್ಲಿ ನಡೆದಿದ್ದ ಏಷ್ಯಾಕಪ್ ಫೈನಲ್ ಹಣಾಹಣಿಯಲ್ಲಿ ಬಾಂಗ್ಲಾದೇಶ 222 ರನ್ ಗಳಿಗೆ ಆಲೌಟ್ ಆದ ನಂತರ ಭಾರತ ಅದನ್ನು ಹಿಂದಿಕ್ಕಿ ಗೆಲುವಿನ ನಗೆ ಬೀರಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಾಂಗ್ಲಾ ಬಲಗೈ ಬ್ಯಾಟ್ಸ್ ಮನ್ ಹಾಗೂ ಪ್ರಾರಂಭಿಕ ಆಟಗಾರನಾಗಿರುವ ಲಿಟನ್ ದಾಸ್ ಅವರು ಶತಕವನ್ನು ಸಿಡಿಸಿ ಗಮನ ಸೆಳೆದಿದರು.

ಬಾಂಗ್ಲಾ ಪರವಾಗಿ ಲಿಟನ್ ದಾಸ್ 12 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 121 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡುತ್ತಿದ್ದರು, ಆದರೆ, ಭಾರತ ತಂಡದ ವಿಕೆಟ್ ಕೀಪರ್ ಹಾಗೂ ಸೂಪರ್ ಕ್ಯಾಪ್ಟನ್ ಮಹೇಂದ್ರಸಿಂಗ್ ಧೋನಿ ಹೊಡೆದ ಲೈಟನಿಂಗ್ ಸ್ಟಂಪಿಂಗ್‌ಗೆ ಅವರು ಬಲಿಯಾಗಿದ್ದರು. ಇದನ್ನು ಮೂರನೇ ಅಂಪೈರ್ ಕೂಡ ಪುರಸ್ಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

ಒಂದು ಇನ್​ಸ್ಟಾಗ್ರಾಮ್ ಪೋಸ್ಟ್‌ಗೆ 'ವಿರಾಟ್ ಕೊಹ್ಲಿ' ಪಡೆಯುವ ಹಣ ಕೇಳಿ ತಲೆತಿರುಗಿ ಬೀಳ್ತೀರಾ!!

ಒಂದು ಇನ್​ಸ್ಟಾಗ್ರಾಮ್ ಪೋಸ್ಟ್‌ಗೆ 'ವಿರಾಟ್ ಕೊಹ್ಲಿ' ಪಡೆಯುವ ಹಣ ಕೇಳಿ ತಲೆತಿರುಗಿ ಬೀಳ್ತೀರಾ!!

ವಿಶ್ವ ಕ್ರಿಕೆಟ್‌ನಲ್ಲಿ ಪ್ರಜ್ವಲಿಸುತ್ತಿರುವ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಸಾಮಾಜಿಕ ಜಾಲತಾಣಗಳಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ ವಿವಿಧ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕೋಟ್ಯಂತರ ರೂ. ಹಣಗಳಿಸುತ್ತಿರುವ ವಿರಾಟ್ ಕೊಹ್ಲಿ ಇನ್​ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದಲೂ ಕೋಟಿ ಕೋಟಿ ಹಣಗಳಿಸುತ್ತಿದ್ದಾರೆ.

ಹೌದು, ಇನ್​ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್ ಮೂಲಕ ಹಣ ಗಳಿಸುತ್ತಿರುವ ವಿಶ್ವದ ಟಾಪ್ 20 ತಾರೆಯರಲ್ಲಿ ಸ್ಥಾನ ಪಡೆಸಿರುವ ಕೊಹ್ಲಿ ಅವರು ಅವರು ವಿಶ್ವದಲ್ಲಿ 17ನೇ ಸ್ಥಾನ ಪಡೆದಿದ್ದರೆ, ಕ್ರೀಡಾಪಟುಗಳ ಪೈಕಿ 9ನೇ ಸ್ಥಾನ ಅಲಂಕರಿಸಿದ್ದಾರೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಮತ್ತು ಏಷ್ಯಾದ ಏಕೈಕ ಸೆಲೆಬ್ರಿಟಿಯಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ.

ಇನ್​ಸ್ಟಾಗ್ರಾಮ್‌ನಲ್ಲಿ 2.32 ಕೋಟಿ ಹಿಂಬಾಲಕರನ್ನು ಹೊಂದಿರುವ ಕೊಹ್ಲಿ, ಪ್ರತಿ ಪ್ರಾಯೋಜಿತ ಪೋಸ್ಟ್​ಗೆ 82.47 ಲಕ್ಷ ರೂ. (1.20 ಲಕ್ಷ ಡಾಲರ್) ಪಡೆಯುತ್ತಿದ್ದಾರೆ ಎಂದು ಈ ವರದಿ ತಿಳಿಸಿದೆ. ಹಾಗಾದರೆ, ಇನ್​ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಹೆಚ್ಚು ಹಣ ಗಳಿಸುತ್ತಿರುವ ಟಾಪ್ 10 ತಾರೆಗಳು ಯಾರಿದ್ದಾರೆ ಎಂಬುದನ್ನು ಮುಂದೆ ನೋಡಿ.

ಪ್ರಾಯೋಜಿತ ಪೋಸ್ಟ್​ಗಳಿಗಷ್ಟೇ ಅನ್ವಯ! ಸೆ

ಪ್ರಾಯೋಜಿತ ಪೋಸ್ಟ್​ಗಳಿಗಷ್ಟೇ ಅನ್ವಯ! ಸೆ

ಲೆಬ್ರಿಟಿಗಳು ಇನ್​ಸ್ಟಾಗ್ರಾಮ್ಂದ ಎಲ್ಲ ಪೋಸ್ಟ್​ಗಳಿಗೂ ಹಣ ಸಂಪಾದಿಸುವುದಿಲ್ಲ. ಇದು ಪ್ರಾಯೋಜಿತ ಪೋಸ್ಟ್​ಗಳಿಗೆ ಮಾತ್ರ ಅನ್ವಯಿಸುತ್ತದೆ. ಯಾವ ಉತ್ಪನ್ನ ಅಥವಾ ಬ್ರಾಂಡ್ ಬಗ್ಗೆ ಪೋಸ್ಟ್ ಮಾಡುತ್ತಾರೋ ಆ ಕಂಪನಿಯಿಂದ ಸೆಲೆಬ್ರಿಟಿಗೆ ಹಣ ಸಂದಾಯವಾಗುತ್ತದೆ. ಇದೊಂದು ಆಧುನಿಕ ಮಾರ್ಕೆಟಿಂಗ್ ಆಗಿದೆ.

ಟಾಪ್ 10: ಕೆಂಡಾಲ್ ಜೆನ್ನರ್

ಟಾಪ್ 10: ಕೆಂಡಾಲ್ ಜೆನ್ನರ್

ಅಮೆರಿಕಾದ ರಿಯಾಲಿಟಿ ಟಿವಿ ತಾರೆ ಕೆಂಡಾಲ್ ಜೆನ್ನರ್ ಅವರು ಇನ್​ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದಾರೆ. ಇವರು ಒಂದು ಇನ್​ಸ್ಟಾಗ್ರಾಮ್ ಪೋಸ್ಟ್‌ಗೆ 3.4 ಕೋಟಿ ( 5 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.

ಟಾಪ್ 9: ಲಿಯೋನೆಲ್ ಮೆಸ್ಸಿ

ಟಾಪ್ 9: ಲಿಯೋನೆಲ್ ಮೆಸ್ಸಿ

ಅರ್ಜೆಂಟಿನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರು ಇನ್​ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದಾರೆ. ಇವರು ಒಂದು ಇನ್​ಸ್ಟಾಗ್ರಾಮ್ ಪೋಸ್ಟ್‌ಗೆ 3.4 ಕೋಟಿ ( 5 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.

ಟಾಪ್ 8: ನೇಮರ್

ಟಾಪ್ 8: ನೇಮರ್

ಬ್ರೆಜಿಲ್‌ನ ಫುಟ್‌ಬಾಲ್ ತಾರೆ ನೇಮರ್ ಇನ್​ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಎಂಟನೇ ಸ್ಥಾನ ಪಡೆದಿದ್ದಾರೆ. ಇವರು ಒಂದು ಇನ್​ಸ್ಟಾಗ್ರಾಮ್ ಪೋಸ್ಟ್‌ಗೆ 4.1 ಕೋಟಿ ( 6 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.

ಟಾಪ್ 7: ಜಸ್ಟಿನ್ ಬೈಬರ್

ಟಾಪ್ 7: ಜಸ್ಟಿನ್ ಬೈಬರ್

ವಿಶ್ವದಾಧ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕೆನಡಿಯನ್ ಸಿಂಗರ್ 'ಜಸ್ಟಿನ್ ಬೈಬರ್' ಇನ್​ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಇವರು ಒಂದು ಪೋಸ್ಟ್‌ಗೆ 4.3 ಕೋಟಿ ( 6.3 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.

ಟಾಪ್ 6: ಡ್ವೇಯ್ನ್ ಜಾನ್ಸನ್

ಟಾಪ್ 6: ಡ್ವೇಯ್ನ್ ಜಾನ್ಸನ್

'ದಿ ರಾಕ್' 'ದಿ ರಾಕ್" ಹೆಸರಿನ ಮೂಲಕ WWE ತಾರೆಯಾಗಿ ಮಿಂಚಿ, ಫಾಸ್ಟ್ ಅಂಡ್ ಫ್ಯೂರಿಯಸ್‌ನಲ್ಲಿ ವಿಶ್ವವದ ಮನೆಮಾತದ ಡ್ವೇಯ್ನ್ ಜಾನ್ಸನ್ 'ದಿ ರಾಕ್" ಅವರು ಇನ್​ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಇವರು ಒಂದು ಪೋಸ್ಟ್‌ಗೆ 4.4 ಕೋಟಿ ( 6.5 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.

ಟಾಪ್ 5: ಬೆಯಾನ್ಸ್ ನೋಲ್ಸ್

ಟಾಪ್ 5: ಬೆಯಾನ್ಸ್ ನೋಲ್ಸ್

ಅಮೆರಿಕಾದ ಸಿಂಗರ್ ಮತ್ತು ಸಾಂಗ್ ರೈಟರ್ ಆಗಿರುವ ಬೆಯಾನ್ಸ್ ನೋಲ್ಸ್ ಅವರು ಇನ್​ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇವರು ಒಂದು ಪೋಸ್ಟ್‌ಗೆ 4.8 ಕೋಟಿ ( 7 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.

ಟಾಪ್ 4: ಕಿಮ್ ಕರ್ದಾಶಿಯನ್

ಟಾಪ್ 4: ಕಿಮ್ ಕರ್ದಾಶಿಯನ್

ಅಮೆರಿಕಾದ ಟಿವಿ ಲೋಕದ ತಾರೆ ಎಂದೇ ಹೆಸರಾಗಿರುವ ಕಿಮ್ ಕರ್ದಾಶಿಯನ್ ಅವರು ಇನ್​ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು ಒಂದು ಪೋಸ್ಟ್‌ಗೆ 4.9 ಕೋಟಿ ( 7.2 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.

ಟಾಪ್ 3: ಕ್ರಿಶ್ಚಿಯಾನೊ ರೊನಾಲ್ಡೊ

ಟಾಪ್ 3: ಕ್ರಿಶ್ಚಿಯಾನೊ ರೊನಾಲ್ಡೊ

ಕ್ರೀಡಾಪಟುಗಳ ಪೈಕಿ ಪೋರ್ಚುಗಲ್ ಫುಟ್​ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟಾರೆ 3ನೇ ಸ್ಥಾನದಲ್ಲಿರುವ ರೊನಾಲ್ಡೊ ಒಂದು ಪೋಸ್ಟ್‌ಗೆ ಅಂದಾಜು 5 ಕೋಟಿ ( 7.5 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.

ಟಾಪ್ 2: ಸೆಲೆನಾ ಗೊಮೆಜ್

ಟಾಪ್ 2: ಸೆಲೆನಾ ಗೊಮೆಜ್

ಅಮೆರಿಕಾದ ಸಂಗೀತಗಾರ್ತಿ ಸೆಲೆನಾ ಗೊಮೆಜ್ ಅವರು ಇನ್​ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಒಂದು ಪೋಸ್ಟ್‌ಗೆ 5.5 ಕೋಟಿ (8 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.

ಟಾಪ್ 1 : ಕೈಲಿ ಜೆನ್ನರ್

ಟಾಪ್ 1 : ಕೈಲಿ ಜೆನ್ನರ್

ಇನ್​ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಅಮೆರಿಕದ ರೂಪದರ್ಶಿ ಕೈಲಿ ಜೆನ್ನರ್ ಅಗ್ರಸ್ಥಾನದಲ್ಲಿದ್ದಾರೆ. 11 ಕೋಟಿ ಹಿಂಬಾಲಕರನ್ನು ಹೊಂದಿರುವ ಅವರು, ಪ್ರತಿ ಪೋಸ್ಟ್​ಗೆ 6.87 ಕೋಟಿ ರೂ. (10 ಲಕ್ಷ ಡಾಲರ್) ಪಡೆಯುತ್ತಾರೆ.

Best Mobiles in India

English summary
Virat Kohli website hacked by Bangladeshi fans protesting against 'cheating' in Asia Cup 2018 final. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+