ಪುಲ್ವಾಮ ಉಗ್ರನಿಂದ 'ವರ್ಚುವಲ್ ಸಿಮ್' ಬಳಕೆ!..ಅಷ್ಟಕ್ಕೂ ಏನಿದು 'ವರ್ಚುವಲ್ ಸಿಮ್'?
ಇದೇ ಫೆ.14ರಂದು ಸಿಆರ್‌ಪಿಎಫ್ ಯೋಧರು ಸಾಗುತ್ತಿದ್ದ ವಾಹನದ ಮೇಲೆ ನಡೆದ ಆತ್ಮಾಹುತಿ ದಾಳಿಯಿಂದ 40 ಯೋಧರು ಹುತಾತ್ಮರಾಗಿದ್ದ ಘಟನೆಯಲ್ಲಿ ಭಯೋತ್ಪಾದಕರು ತಮ್ಮ ಕುಕೃತ್ಯ ನಡೆಸಲು ವರ್ಚುವಲ್ ಸಿಮ್ ಬಳಸಿ ಯಶಸ್ವಿಯಾಗಿದ್ದರು ಎಂದು ತಿಳಿದುಬಂದಿದೆ. ಭಯೋತ್ಪಾದಕರು ತಮ್ಮ ಕುಕೃತ್ಯ ನಡೆಸಲು ವರ್ಚುವಲ್ ಸಿಮ್ ಬಳಸಿ ಯಶಸ್ವಿಯಾಗಿದ್ದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಹೌದು, ಭಯೋತ್ಪಾದನಾ ದಾಳಿ ನಡೆದ ಸ್ಥಳ ಸ್ಥಳದಲ್ಲಿ ಜಮ್ಮು ಕಾಶ್ಮೀರ ಪೊಲೀಸರು, ರಾಷ್ಟ್ರೀಯ ತನಿಖಾದಳ (ಎನ್‌ಐಎ) ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಸಿಆರ್‌ಪಿಎಫ್ ಮೇಲೆ ದಾಳಿ ನಡೆಸಿದ್ದ ಆತ್ಮಾಹುತಿ ದಾಳಿಕೋರ ವರ್ಚುವಲ್ ಸಿಮ್ ಬಳಸಿ ಉಗ್ರರೊಂದಿಗೆ ಸಂಪರ್ಕದಲ್ಲಿರುವುದು ಖಚಿತಪಟ್ಟಿದೆ. ಹಾಗಾಗಿ, ಭಾರತವೀಗ ಈ ಬಗ್ಗೆ ವಿಸ್ತೃತ ಮಾಹಿತಿ ನೀಡುವಂತೆ ಅಮೆರಿಕಕ್ಕೆ ಭಾರತ ಮನವಿ ಸಲ್ಲಿಸಿದೆ.

ಪುಲ್ವಾಮಾ ದಾಳಿ ನಡೆಸಿದ ವರ್ಚುವಲ್ ಸಿಮ್ ತಂತ್ರಜ್ಞಾನ ಬಳಸಿ ನಿರಂತರ ಸಂಭಾಷಣೆ ನಡೆಸಿದ್ದನು. ವರ್ಚುವಲ್ ಸಿಮ್ ಸೇವೆಯನ್ನು ಅಮೆರಿಕ ಒದಗಿಸುತ್ತದೆ. ಹಾಗಾಗಿ, ಈ ಬಗ್ಗೆ ವಿಸ್ತೃತ ಮಾಹಿತಿ ನೀಡುವಂತೆ ಕೋರಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹಾಗಾದರೆ, ಏನಿದು .ವರ್ಚುವಲ್ ಸಿಮ್ ತಂತ್ರಜ್ಞಾನ?, ಈ ತಂತ್ರಜ್ಞಾನ ಬಳಕೆ ಮಾಡಿದರೆ ಏನು ತೊಂದರೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಏನಿದು ವರ್ಚುವಲ್ ಸಿಮ್!
ಮೊದಲೇ ತಿಳಿಸಿದಂತೆ, ಈ ವರ್ಚುವಲ್ ಸಿಮ್ ಸೇವೆಯನ್ನು ಅಮೆರಿಕ ( ಖಾಸಾಗಿ ಕಂಪೆನಿಗಳು ಕೂಡ) ಒದಗಿಸುತ್ತದೆ. ಈ ವರ್ಚುವಲ್ ಸಿಮ್ ತಂತ್ರಜ್ಞಾನದಲ್ಲಿ ಬಳಕೆದಾರರಿಗೆ ಬೇಕಾದ ದೂರವಾಣಿ ಸಂಖ್ಯೆಯನ್ನು ಕಂಪ್ಯೂಟರ್ ಸೃಷ್ಟಿಸುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಇದರ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ಹಣ ಪಾವತಿಸಿದರೆ ಯಾರೂ ಬೇಕಾದರೂ ತಮಗೆ ಬೇಕಾದ ವ್ಯಕ್ತಿಗಳ ಜತೆ ಸಂಭಾಷಣೆ ನಡೆಸಬಹುದಾಗಿದೆ.

ವರ್ಚುವಲ್ ಸಿಮ್ ಸಂಪರ್ಕ ಹೇಗೆ?
ವರ್ಚುವಲ್ ಸಿಮ್ ಸೇವೆ ನೀಡುವ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡರೆ, ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆಪ್, ಫೇಸ್‌ಬುಕ್, ಟೆಲಿಗ್ರಾಂ ಹಾಗೂ ಟ್ವಿಟರ್ ಜೊತೆ ಸಂಪರ್ಕ ಕಲ್ಪಿಸಬೇಕು. ಯಾವುದಾದರೂ ಜಾಲತಾಣಕ್ಕೆ ಸಂಪರ್ಕ ಹೊಂದಿದ ಬಳಿಕ ಪ್ರಮಾಣೀಕರಣ ಸಂಖ್ಯೆ ನಮೂದಾಗುತ್ತದೆ. ಇದಾದ ನಂತರ ಸ್ಮಾರ್ಟ್‌ಫೋನ್ ಮೂಲಕವೇ ನಂಬರ್ ಇಲ್ಲದೇ ಸಂಭಾಷಣೆ ನಡೆಸಬಹುದು.

ಉಗ್ರರಿಂದ ವರ್ಚುವಲ್ ಸಿಮ್ ಬಳಕೆ
ಭಯೋತ್ಪಾದಕರು ತಮ್ಮ ಕುಕೃತ್ಯ ನಡೆಸಲು ವರ್ಚುವಲ್ ಸಿಮ್ ಬಳಸಿ ಯಶಸ್ವಿಯಾಗಿರುವುದನ್ನು ತನಿಖಾಧಿಕಾರಿಗಳು ಈಗಾಗಲೇ ಪತ್ತೆಹಚ್ಚಿದ್ದಾರೆ. ಮೇಲೆ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿದ ಜೆಇಎಂ ದಾಳಿಕೋರ ‘ವರ್ಚುವಲ್ ಸಿಮ್' ಬಳಸಿದ್ದು ದೃಢಪಟ್ಟಿದೆ. ಈ ತಂತ್ರಜ್ಞಾನದ ಮೂಲಕ ಅವರು ಸಂವಹನ ನಡೆಸಿರುವುದರಿಂದ ಭಾರತದ ಗುಪ್ತಚರ ತಂಡದ ಅಧಿಕಾರಿಗಳ ಕೈಗೆ ಸಿಗಂದಂತೆ ಯಶಸ್ವಿ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುಪ್ತಚರ ಇಲಾಖೆಗೆ ತಿಳಿಯಲಿಲ್ಲ ಏಕೆ?
ದಾಳಿಗೆ ಸಂಚು ರೂಪಿಸಲು ಉಗ್ರರು ಬಳಸಿದ ‘ವರ್ಚುವಲ್ ಸಿಮ್' ಅನ್ನು ಅಮೆರಿಕಾದಿಂದ ನಿರ್ವಹಣೆ ಮಾಡಲಾಗುತ್ತದೆ. ‘ವರ್ಚುವಲ್ ಸಿಮ್' ಮೇಲೆ ಭಾರತ ಸರ್ಕಾರ ಮತ್ತು ಭಾರತದ ಯಾವುದೇ ಖಾಸಾಗಿ ಕಂಪೆನಿಗೂ ನಿಯಂತ್ರಣ ಇಲ್ಲದೇ ಇರುವುದರಿಂದ ಇದು ಭಾರತೀಯ ತನಿಖಾ ಅಧಿಕಾರಿಗಳ ಕೈಗೆ ಸಿಗದೇ ನಡೆದಿದೆ. ಭಾರತದಲ್ಲಿ ತಜ್ಞರು ಇವುಗಳ ಮೇಲೆ ಕಣ್ಣಿಡಬಹುದಾದೂ ಸಹ ಅದು ಅಷ್ಟು ಸುಲಭವಲ್ಲ ಎನ್ನುತ್ತವೆ ವರದಿಗಳು.

ಮುಂಬಯಿ ದಾಳಿ ವೇಳೆಯಲ್ಲೂ ಬಳಕೆ!
ಇಂಥ ಸಿಮ್ ಕಾರ್ಡ್‌ಗಳನ್ನು 2008ರ ಮುಂಬಯಿ ದಾಳಿ ವೇಳೆಯಲ್ಲೂ ಬಳಸಲಾಗಿದ್ದು, ಈ ತಂತ್ರಜ್ಞಾನಕ್ಕಾಗಿ ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿ ಜಾವೇದ್ ಎಂಬಾತ ಅಮೆರಿಕದ ಕಾಲ್‌ಫೋನಿಕ್ಸ್ ಕಂಪನಿಗೆ 15,000 ರೂ. ಪಾವತಿಸಿದ್ದ ಎನ್ನಲಾಗಿದೆ. ಭಾರತೀಯ ತನಿಖಾಧಿಕಾರಿಗಳು ಹೆಚ್ಚಿನ ತನಿಖೆಗೆ ಅಮೆರಿಕದ ಮೊರೆ ಹೋಗಲು ತೀರ್ಮಾನಿಸಿದ್ದಾರೆ. ಇಂಟರ್‌ನೆಟ್ ಪ್ರೊಟೊಕಾಲ್ ಮಾಹಿತಿ ನೀಡಿ ಎಂದು ಭಾರತ ಸರ್ಕಾರ ಅಮೆರಿಕವನ್ನು ಕೋರಿದೆ.

ಅಪ್‌ಡೇಟ್ ಆದ ನಂತರ ಸ್ಮಾರ್ಟ್‌ಫೋನ್ ಸ್ಲೋ ಆಗುವುದು ಏಕೆ?
ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ಗಳನ್ನು ಪದೇ ಪದೇ ಅಪ್‌ಡೇಟ್ ಮಾಡುವುದು ಮೊಬೈಲ್ ಬಳಕೆದಾರರ ಅತ್ಯಂತ ಬಹುಮುಖ್ಯ ಕಾರ್ಯಗಳಲ್ಲಿ ಒಂದು. ಕನಿಷ್ಟ ತಿಂಗಳಿಗೊಮ್ಮೆಯಾದರೂ ಸ್ಮಾರ್ಟ್‌ಫೋನ್ ಅನ್ನು ಅಪ್‌ಡೇಟ್ ಮಾಡುವುದರಿಂದ ಬಳಕೆದಾರರಿಗೆ ಹೊಸಹೊಸ ಸೇವೆಗಳ ಜೊತೆಯಲ್ಲಿಯೇ ಸುರಕ್ಷತೆಯೂ ದೊರೆಯುವುದರಿಂದ ಇದು ಅತ್ಯಗತ್ಯ ಕಾರ್ಯ ಕೂಡ ಹೌದು.
ಹೀಗೇ ಯಾವಾಗಲೂ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳುವುದೇನೋ ಉತ್ತಮವೇ. ಆದರೆ, ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡಿಕೊಳ್ಳವುದರಿಂದಲೇ ಅದರಿಂದಲೇ ಸಮಸ್ಯೆಯನ್ನು ಎದುರಿಸಿದರೆ.?! ಹೌದು, ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡಿಕೊಂಡ ನಂತರ ನಾವು ಮಾಡುವ ಸಣ್ಣ ತಪ್ಪುಗಳು ಸ್ಮಾರ್ಟ್‌ಫೋನ್‌ಗಳು ನಿಧಾನವಾಗುವಂತೆ ಮಾಡುತ್ತವೆ.
ಸ್ಮಾರ್ಟ್‌ಫೋನ್ ಅಪ್‌ಡೇಟ್ ಮೂಲಕ ಹೊಸಹೊಸ ಸೇವೆಗಳ ಜೊತೆಯಲ್ಲಿಯೇ ಸುರಕ್ಷತೆ ಸಿಕ್ಕಿದರೂ ತೊಂದರೆ ಕೂಡ ಎದುರಾಗಲು ಹಲವು ಕಾರಣಗಳಿವೆ. ಹಾಗಾದರೆ, ಸ್ಮಾರ್ಟ್‌ಪೋನ್ ಅಪ್‌ಡೇಟ್ ಮಾಡುವ ಮುನ್ನ ನಾವು ಅನುಸರಿಸಬೇಕಾದ ಕಾರ್ಯಗಳು ಮತ್ತು ಅಪ್‌ಡೇಟ್ ನಂತರ ಮಾಡಬೇಕಾದ ಕಾರ್ಯಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಕ್ಲೀನ್ ಇನ್‌ಸ್ಟಾಲ್ ಮಾಡಿ
ಎಲ್ಲಾ ಮೊಬೈಲ್ ಕಂಪೆನಿಗಳು ಒಂದೆ ಕ್ಲಿಕ್‌ನಲ್ಲಿ ಹೊಸ ಆಪರೇಟಿಂಗ್ ಸಿಸ್ಟಂಗೆ ಅಪ್‌ಗ್ರೇಡ್ ಮಾಡಲು ಸೂಚಿಸುತ್ತವೆ. ಹಾಗಾಗಿ, ಮೊಬೈಲ್ ಅಪ್‌ಡೇಟ್ ಮಾಡುವ ಮುನ್ನ ನಿಮ್ಮೆಲ್ಲಾ ಮೊಬೈಲ್ ಡೇಟಾ ಖಾಲಿ ಮಾಡಿ ಅಪ್‌ಡೇಟ್ ಮಾಡಿ. ಮೊಬೈಲ್ ಅನ್ನು ಹಾಗೆಯೇ ಅಪ್‌ಡೇಟ್ ಮಾಡಿದರೆ ಒಎಸ್ ಕ್ರಾಶ್ ಆಗುವ ಸಂಭವ ಹೆಚ್ಚಿರುತ್ತದೆ.

ಮೆಮೊರಿ ಬಗ್ಗೆ ಗಮನವಿರಲಿ
16GB, 32GB ಆಂತರಿಕ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಇಂದು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ, ಹೆಚ್ಚು ಸ್ಟೋರೇಜ್‌ನಿಂದಾಗಿ ಸ್ಮಾರ್ಟ್‌ಫೋನ್‌ಗಳು ನಿಧಾನವಾಗುತ್ತವೆ. ಹಾಗಾಗಿ, ನಿಮ್ಮ ಪೋನ್ ಆಂತರಿಕ ಮೆಮೊರಿ ಇರುವ ಅರ್ಧಕ್ಕಿಂತ ಕಡಿಮೆ ಸ್ಟೋರೇಜ್ ಬಳಕೆಯಲ್ಲಿರಲಿ.

ಆನ್‌ಲೈನ್ ಸೇವೆ ಬಳಸಿಕೊಳ್ಳಿ.
ಯಾವುದೇ ಡಾಕ್ಯುಮೆಂಟ್ ಮತ್ತು ಇನ್ನಿತರ ಫೈಲ್‌ಗಳನ್ನು ಗೂಗಲ್ ಡ್ರೈವ್‌ನಂತಹ ಆನ್‌ಲೈನ್ ಸ್ಟೋರೇಜ್‌ನಲ್ಲಿ ಸೇವ್ ಮಾಡಿಕೊಳ್ಳಬಹುದು.ಇನ್ನು ಫೋಟೊಗಳು ಹೆಚ್ಚಿದ್ದಷ್ಟು ಫೋನ್ ನಿಧಾನವಾಗುವ ಸಾಧ್ಯತೆ ಇದ್ದು, ಫೋಟೊ ಲೈಬ್ರೆರಿಯನ್ನು ಗೂಗಲ್ ಫೋಟೊಸ್‌ನಂಥ ತಾಣಗಳಿಗೆ ಮೂವ್ ಮಾಡುವ ಮೂಲಕ ಮೆಮೊರಿ ಸಾಮರ್ಥ್ಯ ಹೆಚ್ಚಿಸಬಹುದು.

ಕಡಿಮೆ ಆಪ್‌ಗಳನ್ನು ಬಳಸಿ.
ಒಂದೇ ಸಾರಿ ಹಲವು ಆಪ್‌ಗಳನ್ನು ಬಳಕೆ ಮಾಡಬಹುದಾದ ಶಕ್ತಿ ಸ್ಮಾರ್ಟ್‌ಫೋನ್‌ಗಳಿಗಿದ್ದರೂ ಸಹ, ಒಮ್ಮೆಲೆ ಹೆಚ್ಚು ಆಪ್‌ಗಳನ್ನು ಬಳಕೆ ಮಾಡುವುದು ಫೋನ್ ಸ್ಲೋ ಆಗಲು ಕಾರಣವಾಗಿರುತ್ತದೆ. ಹಾಗಾಗಿ, ಒಂದೇ ಸಾರಿ ಹಲವು ಆಪ್‌ಗಳನ್ನು ಬಳಕೆ ಮಾಡದಿರುವುದು ಒಳ್ಳೆಯದು. ಮತ್ತು ಯಾವಾಗಲೂ ಆಪ್‌ಗಳು ಬ್ಯಾಕ್ ರನ್ ಆಗುವುದನ್ನು ತಪ್ಪಿಸಿ.

ಕ್ಲೀನಿಂಗ್ ಅಪ್ ಮಾಡಿ
ದೀರ್ಘ ಅವಧಿಯಲ್ಲಿ ಕೆಲವು ಅನವಶ್ಯಕ ಫೈಲ್‌ಗಳು ಫೋನ್ ಮೆಮೊರಿಯಲ್ಲಿ ಸಂಗ್ರಹಗೊಂಡು ಮೊಬೈಲ್‌ನ ವೇಗ ಕುಂಠಿತವಾಗುತ್ತದೆ. ಹಾಗಾಗಿ, ಫೋನ್‌ನಲ್ಲಿರುವ ಅನವಶ್ಯಕ ಫೈಲ್‌ಗಳನ್ನು ಡಿಲೀಟ್ ಮಾಡಿ. ಪೋನ್ ಸೆಟ್ಟಿಂಗ್ಸ್ ತೆರೆದು ಫೋನ್ ರಿಸೆಟ್ ಮಾಡಿದರೆ ಅನವಶ್ಯಕ ಫೈಲ್‌ಗಳು ಡಿಲೀಟ್ ಆಗಲಿವೆ. ಇದಕ್ಕೆ ಮುನ್ನ ಉಪಯುಕ್ತ ಡೇಟಾವನ್ನು ಸೇವ್ ಮಾಡಿಕೊಳ್ಳಿ.


Click it and Unblock the Notifications








