Subscribe to Gizbot

ಇನ್ಫೋಸಿಸ್‌ಗೆ ವಂದನಾ ಸಿಕ್ಕಾ ಸಹ ರಾಜಿನಾಮೆ..ಪತಿಯನ್ನು ಹಿಂಬಾಲಿಸಿದ ಪತ್ನಿ!!

Written By:

ಇನ್ಫೋಸಿಸ್‌ಗೆ ವಿಶಾಲ್‌ ಸಿಕ್ಕಾ ರಾಜಿನಾಮೆ ನೀಡಿದ ನಂತರ ವಿಶಾಲ್‌ ಸಿಕ್ಕಾ ಅವರ ಪತ್ನಿ ವಂದನಾ ಸಿಕ್ಕಾ ಸಹ ಇನ್ಫೋಸಿಸ್ನಿಂದ ದೂರ ಸರಿದಿದ್ದಾರೆ.!! ಇನ್ಫೋಸಿಸ್ ಫೌಂಡೇಷನ್ ಯುಎಸ್‌ಎ ವಿಭಾಗದ ಮುಖ್ಯಸ್ಥೆ ಹುದ್ದೆಗೆ ರಾಜೀನಾಮೆ ನೀಡಿ, ರಾಜೀನಾಮೆ ನೀಡಿರುವುದನ್ನು ಟ್ವಿಟರ್‌ನಲ್ಲಿ ಅವರು ಪ್ರಕಟಿಸಿದ್ದಾರೆ.

ವಿಶಾಲ್‌ ಸಿಕ್ಕಾ ಬೆನ್ನಲ್ಲಿಯೇ ಅವರ ಪತ್ನಿಯೂ ಸಹ ಪತಿಯನ್ನು ಹಿಂಬಾಲಿಸಿದ್ದು, ಕಳೆದ ವಾರವಷ್ಟೇ ಇನ್ಫೋಸಿಸ್‌ನ ಸಿಇಒ ಹುದ್ದೆಯನ್ನು ತ್ಯಜಿಸಿದ್ದ ವಿಶಾಲ್‌ ಸಿಕ್ಕಾಗೆ ಬೆಂಬಲ ನೀಡುವ ಸಲುವಾಗಿಯೇ ವಂದನಾ ಸಿಕ್ಕಾ ಅವರು ರಾಜಿನಾಮೆ ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. !!

ಇನ್ಫೋಸಿಸ್‌ಗೆ ವಂದನಾ ಸಿಕ್ಕಾ ಸಹ ರಾಜಿನಾಮೆ..ಪತಿಯನ್ನು ಹಿಂಬಾಲಿಸಿದ ಪತ್ನಿ!!

ಕಳೆದ ಎರಡೂವರೆ ವರ್ಷಗಳ ಕಾಲ ಇನ್ಫೋಸಿಸ್ ಫೌಂಡೇಷನ್ ಯುಎಸ್‌ಎ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿದ್ದ ಅವರು, ''ಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷೆ ಸ್ಥಾನದಿಂದ ಹೊರನಡೆಯಲು ನಿರ್ಧರಿಸಿದ್ದೇನೆ. ಇಷ್ಟು ಅವಧಿ ಜವಾಬ್ದಾರಿಯನ್ನು ನಿಭಾಯಿಸಿರುವುದಕ್ಕೆ ಹೆಮ್ಮೆ ಇದೆ. ನೆರವು ನೀಡಿದ ಎಲ್ಲರಿಗೂ ಧನ್ಯವಾದ,'' ಎಂದು ಹೇಳಿದ್ದಾರೆ.

ಇನ್ಫೋಸಿಸ್‌ಗೆ ವಂದನಾ ಸಿಕ್ಕಾ ಸಹ ರಾಜಿನಾಮೆ..ಪತಿಯನ್ನು ಹಿಂಬಾಲಿಸಿದ ಪತ್ನಿ!!
ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!

ಇನ್ನು ವಿಶಾಲ್‌ ಸಿಕ್ಕಾ ರಾಜಿನಾಮೆ ನಂತರ ಇನ್ಫೋಸಿಸ್ ಮೇಲೆ ಅವರು ಅಸಮದಾನ ಹೊರಹಾಕಿದ್ದು, ಒಬ್ಬ ವ್ಯಕ್ತಿಯ ಘನವಾದ ಪ್ರೀತಿ ಯಾವುದೋ ಒಂದು ಸಂಸ್ಥೆಗೆ ಸೀಮಿತವಾಗಿರುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಇದೊಂದು ತಾತ್ಕಾಲಿಕ ಬಿಡುವು ಎಂಬುದಾಗಿ ಅವರು ಇನ್ಫೋಸಿಸ್ ಸಂಘರ್ಷದ ವಾತಾವರಣದ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.

Read more about:
English summary
She served at the Infosys Foundation for two and a half years.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot