ಇನ್‌ಫೋಸಿಸ್ ಮುಖ್ಯ ಕಾರ್ಯನಿವಾಹಕ ಅಧಿಕಾರಿಯಾಗಿ ವಿಶಾಲ್ ಸಿಕ್ಕಾ

Written By:

ಸ್ಯಾಪ್‌ನ ಹಿಂದಿನ ಸಿಟಿಒ ಆಗಿರುವ, ವಿಶಾಲ್ ಸಿಕ್ಕಾರನ್ನು ಇನ್‌ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆ ಮಾಡಿದೆ. ಬೋರ್ಡ್‌ನ ಪೂರ್ಣ ಅವಧಿಯ ನಿರ್ದೇಶಕರಾಗಿ ಸಿಕ್ಕಾರ ಆಯ್ಕೆಯಾಗಿದ್ದು ಜೂನ್ 14, 2014 ರಿಂದ ಇವರು ಆಡಳಿತವನ್ನು ವಹಿಸಲಿದ್ದಾರೆ. ಇವರು ಆಗಸ್ಟ್‌ವರೆಗೆ ಹಂಗಾಮಿಯಾಗಿ ಕೆಲಸ ಮಾಡಲಿದ್ದಾರೆ.

ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ನಾರಾಯಣ್ ಮೂರ್ತಿ ಮತ್ತು ಅವರ ಮಗ ರೋಹನ್ ಮೂರ್ತಿ ಅಕ್ಟೋಬರ್‌ನಲ್ಲಿ ಕಂಪೆನಿಯನ್ನು ತೊರೆಯಲಿದ್ದು, ತಮ್ಮ ನಾಲ್ಕು ವರ್ಷಗಳ ಸುದೀರ್ಘ ಆಡಳಿತಕ್ಕೆ ವಿರಾಮವನ್ನು ಮೂರ್ತಿ ಘೋಷಿಸಲಿದ್ದಾರೆ.

ಇನ್‌ಫೋಸಿಸ್ ಮುಖ್ಯ ಗೌರವ ಅಧ್ಯಕ್ಷರಾಗಿ ನಾರಾಯಣ್ ಮೂರ್ತಿ

ವಿಶಾಲ್ ಸಿಕ್ಕಾ, ಇಲ್ಲಿಯವೆರೆಗೆ ಸ್ಯಾಪ್‌ನ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು. ಸ್ಯಾಪ್‌ನ ಮುಖ್ಯವಾದ ಎಲ್ಲಾ ಕೆಲಸ ಕಾರ್ಯಗಳನ್ನು ಖುದ್ದು ವಿಶಾಲ್ ಅವರೇ ಮಾಡುತ್ತಿದ್ದು ಕಂಪೆನಿಯ ಏಳಿಗೆಗಾಗಿ ಬಹುವಾಗಿ ಶ್ರಮಿಸಿದ್ದರು. ವಿಶಾಲ್ ಅವರು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪಿಎಚ್‌ಡಿಯನ್ನು ಗಳಿಸಿದ್ದು ಪ್ರತಿಭಾವಂತರು ಎಂದೆನಿಸಿಕೊಂಡಿದ್ದಾರೆ.

ಬೋರ್ಡ್ ಯುಬಿ ಪ್ರವೀಣ್ ರಾವ್ ಅನ್ನು ಅಧ್ಯಕ್ಷರು ಮತ್ತು ಪೂರ್ಣ ಅವಧಿಯ ನಿರ್ದೇಶಕರಾಗಿ ನೇಮಿಸಿದ್ದು, ಇವರು ಜೂನ್ 14 ರಿಂದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಮೂರ್ತಿಯವರು ಕಂಪೆನಿಗೆ ಮಾಡಿದ ಸೇವೆಯನ್ನು ಗಮನಿಸಿಕೊಂಡು ಅವರನ್ನು ಗೌರವ ಅಧ್ಯಕ್ಷರಾಗಿ ನೇಮಕ ಮಾಡಲಾಗುತ್ತಿದೆ. ಮೂರ್ತಿಯವರಿಗೆ ಈ ಸೇವೆಯ ಆರಂಭವು 11, 2014 ರಿಂದ ಪ್ರಾರಂಭವಾಗಲಿದೆ. ಜವಬ್ದಾರಿಗಳ ಸರಿಯಾದ ನಿಭಾಯಿಸುವಿಕೆಯನ್ನು ವಿಶಾಲ್ ಅವರು ಕೈಗೆತ್ತಿಕೊಳ್ಳುವವರೆಗೂ ಮೂರ್ತಿಯವರು ಅಕ್ಟೋಬರ್‌ವರೆಗೆ ಅಧಿಕಾರಾವಧಿಯಲ್ಲಿರುತ್ತಾರೆ.

ತಂತ್ರಜ್ಞಾನ ಕ್ಷೇತ್ರದಲ್ಲೇ ಒಂದು ಅದ್ಭುತ ಸಾಧನೆಯನ್ನು ಮಾಡಿದ ಇನ್‌ಫೋಸಿಸ್ ಎಂಬ ಬೃಹತ್ ಕಂಪೆನಿಯ ಜವಬ್ದಾರಿಯನ್ನು ನಿರ್ವಹಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಇಲ್ಲಿ ನಡೆಯುವ ಪ್ರತಿಯೊಂದು ಸಮಸ್ಯೆಗಳನ್ನು ನಾನೇ ಖುದ್ದಾಗಿ ಗಮನಕ್ಕೆ ತಂದುಕೊಂಡು ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತೇನೆ ಎಂದು ವಿಶಾಲ್ ತಿಳಿಸಿದ್ದಾರೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot