ಒಂದು ವರ್ಷ 'ಸ್ಮಾರ್ಟ್‌ಫೋನ್' ಬಿಟ್ಟಿದ್ದರೆ 72 ಲಕ್ಷ ಕೊಡ್ತಾರಂತೆ!!..ಚಾಲೆಂಜ್ ಮಾಡ್ತೀರಾ?

|

ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ಬಿಟ್ಟಿರಲು ಸಾಧ್ಯವೇ ಎಂದು ಕೇಳಿದಾಕ್ಷಣವೇ ಆಗುವುದಿಲ್ಲ ಎಂಬ ಉತ್ತರ ತಟ್ಟನೆ ಬಂದುಬಿಡುತ್ತದೆ. ಆದರೆ, ಒಂದು ವರ್ಷದ ವರೆಗೂ ಸ್ಮಾರ್ಟ್‌ಫೋನ್ ಬಳಸದೇ ಇದ್ದರೆ 72 ಲಕ್ಷ ನೀಡುತ್ತೇವೆ ಎಂದರೆ ನೀವು ಏನು ಮಾಡುತ್ತೀರಾ?. ಹೌದು, ಖಾಸಾಗಿ ಕಂಪೆನಿಯೊಂದು ಇಂತಹದೊಂದು ಚಾಲೆಂಜ್ ಅನ್ನು ಸ್ಮಾರ್ಟ್‌ಫೋನ್ ಪ್ರಿಯರ ಮುಂದಿಟ್ಟಿದೆ.

ಕೋಕಾ ಕೋಲಾ ಕಂಪನಿ ಒಡೆತನದ 'ವಿಟಮಿನ್ ವಾಟರ್' ಸಂಸ್ಥೆ ಈ ರೀತಿಯ ಸ್ಪರ್ಧೆಯೊಂದನ್ನು ಆಯೋಜಿಸುವ ಮೂಲಕ ಗಮನಸೆಳೆದಿದೆ. ಒಂದು ವರ್ಷ ಸತತವಾಗಿ ಸ್ಮಾರ್ಟ್‌ಫೋನ್ ಅನ್ನು ಬಳಸದೇ ಇದ್ದರೆ, 72 ಲಕ್ಷ ರೂ.ಗಳನ್ನು ಗೆಲ್ಲಬಹುದಾದ ಹಾಗೂ ಆರು ತಿಂಗಳು ಸ್ಮಾರ್ಟ್‌ಫೋನ್ ಅನ್ನು ಬಳಸದೇ ಇದ್ದರೆ, 7 ಲಕ್ಷ ರೂ.ಗಳನ್ನು ಗೆಲ್ಲಬಹುದಾದ ಅವಕಾಶ ನೀಡಲಾಗಿದೆ.

ಒಂದು ವರ್ಷ 'ಫೋನ್' ಬಿಟ್ಟಿದ್ದರೆ 72 ಲಕ್ಷ ಕೊಡ್ತಾರಂತೆ!!..ಚಾಲೆಂಜ್ ಮಾಡ್ತೀರಾ?

ಈ ಚಾಲೆಂಜ್‌ನ ಮತ್ತೊಂದು ವಿಶೇಷವೆಂದರೆ, ನೀವು ಸ್ಮಾರ್ಟ್‌ಫೋನ್ ಬಳಸದೇ ಮಾತ್ರ ಇರಬೇಕು. ಬದಲಾಗಿ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳನ್ನು ಉಪಯೋಗಿಸಬಹುದಾಗಿದೆ. ಹಾಗಾದರೆ, 'ವಿಟಮಿನ್ ವಾಟರ್' ಆಯೋಜಿಸಿರುವ ಈ ವಿಶೇಷ ಚಾಲೆಂಜ್ ಏನು?,ಚಾಲೆಂಜ್‌ನಲ್ಲಿ ಭಾಗವಹಿಸಿ 72 ಲಕ್ಷ ಗೆಲ್ಲುವುದು ಹೇಗೆ ಎಂಬ ಮಾಹಿತಿಯನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಸ್ಮಾರ್ಟ್‌ಫೋನ್ ಬಿಟ್ಟಿರುವ ಚಾಲೆಂಜ್!

ಸ್ಮಾರ್ಟ್‌ಫೋನ್ ಬಿಟ್ಟಿರುವ ಚಾಲೆಂಜ್!

ಮೊದಲೇ ಹೇಳಿದಂತೆ ಒಂದು ವರ್ಷ ಸ್ಮಾರ್ಟ್‌ಫೋನ್ ಅನ್ನು ಬಳಸದೇ ಬಿಟ್ಟಿರುವ ಚಾಲೆಂಜ್ ಇದಾಗಿದೆ. ಈ ಚಾಲೆಂಜ್‌ನಲ್ಲಿ ಗೆದ್ದ ಅಭ್ಯರ್ಥಿಗೆ 72 ಲಕ್ಷ ರೂ.ಗಳನ್ನು ಕೋಕಾ ಕೋಲಾ ಕಂಪನಿ ಒಡೆತನದ 'ವಿಟಮಿನ್ ವಾಟರ್' ಸಂಸ್ಥೆ ಪಾವತಿಸಲಿದೆ. ಆರು ತಿಂಗಳು ಸ್ಮಾರ್ಟ್‌ಫೋನ್ ಅನ್ನು ಬಳಸದೇ ಇದ್ದರೆ, 7 ಲಕ್ಷ ರೂ.ಗಳನ್ನು ಗೆಲ್ಲಬಹುದಾದ ಅವಕಾಶದ ಆಯ್ಕೆಯೂ ಸಹ ಇದೆ.

ಫೋನಿನಲ್ಲಿ ನೀವು ಮಾತನಾಡಬಹುದು!

ಫೋನಿನಲ್ಲಿ ನೀವು ಮಾತನಾಡಬಹುದು!

ಸ್ಮಾರ್ಟ್‌ಫೋನ್ ಅನ್ನು ಬಿಟ್ಟಿದ್ದರೆ ಕರೆ ಮಾಡುವ ಹಾಗಿಲ್ಲ ಎಂದು ನೀವು ತಿಳಿದಿದ್ದರೆ ಅದು ತಪ್ಪು. ಏಕೆಂದರೆ, ನೀವು ಸಂವಹನಕ್ಕಾಗಿ ಕರೆಗಳನ್ನು ಮಾಡಬಹುದಾಗಿದೆ. ಕರೆಗಳನ್ನು ಮಾಡಲು ಕಂಪನಿಯೇ ಸ್ಪರ್ಧಿಗೆ 1996 ರ ಕಾಲದ ಒಂದು ಮೊಬೈಲ್ ಅನ್ನು ನೀಡುತ್ತದೆ. ಇಲ್ಲಿ ಚಾಲೆಂಜ್ ಎಂದರೆ, ಕೇವಲ ಸ್ಮಾರ್ಟ್‌ಫೋನ್ ಬಳಕೆಯನ್ನು ಬಿಟ್ಟಿರುವುದು ಮಾತ್ರ ಎಂದು ತಿಳಿಸಲಾಗಿದೆ.

ಲ್ಯಾಪ್‌ಟಾಪ್ ಸಹ ಬಳಸಬಹುದು!

ಲ್ಯಾಪ್‌ಟಾಪ್ ಸಹ ಬಳಸಬಹುದು!

ನೀವು ಬಹುಮಾನದ ಹಣವನ್ನು ಗೆಲ್ಲ ಬಯಸಿದರೆ ಯಾವುದೇ ಸ್ಮಾರ್ಟ್‌ಫೋನ್ ಅಥವಾ ಸ್ಮಾರ್ಟ್‌ಫೋನ್ ರೀತಿಯದ್ದೇ ಆದ ಟ್ಯಾಬ್ಲೆಟ್ ಅನ್ನು ಬಳಸುವಂತಿಲ್ಲ ಅಷ್ಟೇ. ಹಾಗಂತ, ನಿಮ್ಮ ಡಿಜಿಟಲ್ ಕೆಲಸ ಕಾರ್ಯಗಳನ್ನು ನಡೆಸಲು ನೀವು ಲಾಪ್‌ಟಾಪ್, ಡೆಸ್ಕ್‌ಟಾಪ್ ಕಂಪ್ಯೂಟರ್, ಗೂಗಲ್ ಹೋಮ್ ಅಥವಾ ಅಮೆಜಾನ್ ಅಲೆಕ್ಸಾದ ಸ್ಮಾರ್ಟ್ ಸಾಧನಗಳನ್ನು ಬಳಸಬಹುದು.

ಆಯೋಜಕರು ಹೇಳಿದ್ದೇನು?

ಆಯೋಜಕರು ಹೇಳಿದ್ದೇನು?

ಯಾವಾಗಲೂ ಸ್ಮಾರ್ಟ್‌ಫೋನ್ ಅನ್ನು ಸ್ಕ್ರೋಲ್ ಮಾಡುತ್ತಿರುವುದು ನಿಜಕ್ಕೂ ಬೇಸರದ ಕೆಲಸ. ಹಾಗಾಗಿ, ಒಂದು ವರ್ಷಗಳ ಕಾಲ ಸ್ಮಾರ್ಟ್‌ಪೋನ್ ಅನ್ನು ಬಳಸದೇ ಇರುವ ಚಾಲೆಂಜ್ ಅನ್ನು ನಾವು ನೀಡಿದ್ದೇವೆ. ಈ ಸಮಯದಲ್ಲಿ ಅವರು ಏನಾದರೂ ಅತ್ಯುತ್ತಮವಾದುದ್ದನ್ನು ಮಾಡಬೇಕು ಎಂಬುದು ನಮ್ಮ ಆಸೆ ಎಂದು 'ವಿಟಮಿನ್ ವಾಟರ್' ಮುಖ್ಯಸ್ಥರು ಹೇಳಿದ್ದಾರೆ.

ಚಾಲೆಂಜ್ ತೆಗೆದುಕೊಳ್ಳುವುದು ಹೇಗೆ?

ಚಾಲೆಂಜ್ ತೆಗೆದುಕೊಳ್ಳುವುದು ಹೇಗೆ?

ಈ ಚಾಲೆಂಜ್ ತೆಗೆದುಕೊಳ್ಳಲು ನೀವು ಅರ್ಜಿಯನ್ನೇನು ಸಲ್ಲಿಸಬೇಕಿಲ್ಲ. ಬದಲಾಗಿ, #nophoneforayear ಮತ್ತು #contest ಹ್ಯಾಶ್‌ಟ್ಯಾಗ್ ಬಳಸಿ, ಅದನ್ನು ಟ್ವಿಟರ್ ಅಥವಾ ಇನ್‌ಸ್ಟಾಗ್ರಾಂ ಮೂಲಕ ಪೋಸ್ಟ್ ಮಾಡಬೇಕು. ಆ ಪೋಸ್ಟ್‌ನಲ್ಲಿ ಸ್ಮಾರ್ಟ್‌ಫೋನ್‌ನಿಂದ ದೂರವಿರುವಷ್ಟು ಕಾಲ ನೀವು ಯಾವುದರಲ್ಲಿ ಮಗ್ನರಾಗಿರುತ್ತೀರಾ ಎಂಬುದನ್ನು ಬರೆಯಬೇಕು. ಆ ಬರಹದಲ್ಲಿ ನಿಮ್ಮ ಗುರಿ, ಆಯ್ಕೆ ಅತ್ಯುತ್ತಮವಾಗಿದ್ದರೆ ನೀವು ಕೂಡ ಆಯ್ಕೆಯಾಗಬಹುದು.

ಜನವರಿ 8, 2019 ಕೊನೆಯ ದಿನ!

ಜನವರಿ 8, 2019 ಕೊನೆಯ ದಿನ!

ಈ ಸ್ಪರ್ಧೆಗೆ ಪ್ರವೇಶ ಪಡೆಯಲು ಜನವರಿ 8, 2019 ಕೊನೆಯ ದಿನಾಂಕ. ಜೊತೆಗೆ ನೀವು 18 ವರ್ಷ ಮೇಲ್ಪಟ್ಟವರಾಗಿರಬೇಕು. ಆ ಸಮಯದ ಒಳಗಾಗಿ, ನೀವು #nophoneforayear ಮತ್ತು #contest ಹ್ಯಾಶ್‌ಟ್ಯಾಗ್ ಬಳಸಿ, ಸ್ಮಾರ್ಟ್‌ಫೋನ್‌ನಿಂದ ದೂರವಿರುವಷ್ಟು ಕಾಲ ನೀವು ಮತ್ತೆ ಯಾವುದರಲ್ಲಿ ಮಗ್ನರಾಗಿರುತ್ತೀರ ಎಂದು ಬರೆದು, ಅದನ್ನು ಟ್ವಿಟರ್ ಅಥವಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಬೇಕು.

ಸುಳ್ಳು ಹೇಳುವಂತಿಲ್ಲ!

ಸುಳ್ಳು ಹೇಳುವಂತಿಲ್ಲ!

ಒಂದೊಮ್ಮೆ ನೀವು ಈ ಸ್ಪರ್ಧೆಗೆ ಆಯ್ಕೆಯಾದರೆ, ಒಂದು ವರ್ಷ ಸ್ಮಾರ್ಟ್‌ಫೋನ್ ಬಿಟ್ಟು ಬಹುಮಾನದ ಹಣವನ್ನು ಪಡೆಯುವ ಮುನ್ನ ನೀವು ಸುಳ್ಳು-ಪರೀಕ್ಷಕ ಪರೀಕ್ಷೆಗೆ ಒಳಪಡಬೇಕಾಗುತ್ತದೆ ಎಂದು ವಿಟಮಿನ್ ವಾಟರ್' ಸಂಸ್ಥೆ ತಿಳಿಸಿದೆ. ಮಂಪರು ಪರೀಕ್ಷೆಯ ರೂಪದಲ್ಲೇ ಈ ಪರೀಕ್ಷೆ ನಡೆಯುವ ಸಾಧ್ಯತೆ ಇರಲಿದೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಕಂಪೆನಿ ನೀಡಿಲ್ಲ.

Best Mobiles in India

English summary
Vitaminwater-- a Coca-Cola company-- is running a contest, the only thing the contestants will have to do is not use a smartphone. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X