ದೀಪಾವಳಿ ಆಫರ್: ವಿವೋ ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ದರ ಕಡಿತ
ದೀಪಾವಳಿ ಸಂಭ್ರಮ ಶುರುವಾಗಿದ್ದು ಈಗಾಗಲೇ ಖ್ಯಾತ ಬ್ರಾಂಡ್ ಗಳು ತಮ್ಮ ಸ್ಮಾರ್ಟ್ ಫೋನ್ ಬೆಲೆಯನ್ನು ಸಾಕಷ್ಟು ಕಡಿತಗೊಳಿಸಿದ್ದು, ಸ್ಯಾಮ್ ಸಂಗ್, ಒನ್ ಪ್ಲಸ್, ಶಿಯೋಮಿ ಕಂಪನಿಗಳು ಬೆಲೆ ಕಡಿತ ಘೊಷಣೆ ಮಾಡಿದೆ. ಇದೇ ಮಾದರಿಯಲ್ಲಿ ವಿವೋ ಸಹ ತನ್ನ ಸ್ಮಾರ್ಟ್ ಫೋನ್ ಗ್ರಾಹಕರಿಗೆ ಭರ್ಜರಿ ಆಫರ್ ವೊಂದನ್ನು ನೀಡಲು ಮುಂದಾಗಿದೆ.

ಚೀನಾ ಮೂಲದ ವಿವೋ ಕಂಪನಿ ತನ್ನ ಗ್ರಾಹಕರಿಗೆ ಮೂರು ದಿನಗಳ ದೀಪಾವಳಿ ಆಫರ್ ನೀಡಿದ್ದು, ಫ್ಲಿಪ್ ಕಾರ್ಟಿನಲ್ಲಿ ಇದು ಲಭ್ಯವಿದ್ದು, ಡಿಸ್ಕೌಂಟ್, ಕ್ಯಾಷ್ ಬ್ಯಾಕ್, ಎಕ್ಸ್ ಚೇಂಜ್ ಆಫರ್ ಅನ್ನು ನೀಡಿದ್ದು, ಇದರೊಂದಿಗೆ ಜಿರೋ ಕಾಸ್ಟ್ ಇಎಂಐ ಆಯ್ಕೆಯನ್ನು ನೀಡಲು ಮುಂದಾಗಿದೆ.
ವಿವೋ ತನ್ನ ಸ್ಮಾರ್ಟ್ ಫೋನ್ ಗಳಾದ ವಿವೋ V7+, ವಿವೋ V5 + ಮತ್ತು ವಿವೋ V5s ಸ್ಮಾರ್ಟ್ ಫೋನ್ ಗಳ ಮೇಲೆ ಆಫರ್ ದೊರೆಯುತ್ತಿದೆ.
ವಿವೋ V7+ ರೂ.19990ಕ್ಕೆ ದೊರೆಯುತ್ತಿದ್ದು, ಇದರ ಬೆಲೆ ರೂ.21990 ಆಗಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ಎಕ್ಸ್ ಚೇಂಜ್ ಮೇಲೆ ರೂ. 2000ದ ವರೆಗೂ ಕಡಿತವನ್ನು ಪಡೆಯುವ ಅವಕಾಶವು ಇದೆ. ಇಲ್ಲದೇ ವಿವೋ V5+ ಸ್ಮಾರ್ಟ್ ಫೋನ್ ಎಕ್ಸ್ ಚೇಂಜ್ ಮೇಲೆ ರೂ. 5000ರ ವರೆಗೂ ಕಡಿತವನ್ನು ಕಾಣಬಹುದಾಗಿದೆ.
ಇದಲ್ಲದೇ ವಿವೋ V5s ಸ್ಮಾರ್ಟ್ ಫೋನ್ ಮೇಲೆ ರೂ. 3000 ಡಿಸ್ಕೌಂಟ್ ನೀಡಲಾಗುತ್ತಿದ್ದು, ಅಲ್ಲದೇ ಫ್ಲಿಪ್ ಕಾರ್ಟ್ ಎಕ್ಸ್ ಚೇಂಜ್ ಆಫರ್ ನೀಡಲು ಮುಂದಾಗಿದೆ. ಸದ್ಯ ಈ ಫೋನ್ ಬೆಲೆ ರೂ. 14,990 ಆಗಿದೆ.
ಜೊತೆಗೆ ನೋ ಕಾಸ್ಟ್ ಇಎಂಐ ಸಹ ಲಭ್ಯವಿದ್ದು, ಪ್ರತಿ ತಿಂಗಳು ರೂ.1500ರಿಂದ ಶುರುವಾಗಲಿದೆ. ಅಲ್ಲದೇ ವಿವಿಧ ಕಾರ್ಡ್ ದಾರರಿಗೆ ವಿವಿಧ ಆಫರ್ ಗಳು ಲಭ್ಯವಿದೆ. ಇದಲ್ಲದೇ ಬೇರೆ ಮಾಡಲ್ ಗಳ ಮೇಲೆಯೂ ಕಡಿತವನ್ನು ಕಾಣಬಹುದಾಗಿದೆ.


Click it and Unblock the Notifications








